• Home
 • »
 • News
 • »
 • state
 • »
 • Hubballi Murder: ಸುಪಾರಿ ಕೊಟ್ಟು ಮಗನನ್ನೇ ಕೊಂದ ಕೇಸ್​; ಅಖಿಲ್ ಜೈನ್ ಶವ ಪತ್ತೆ! ಸಿಕ್ಕಿದ್ದೆಲ್ಲಿ?

Hubballi Murder: ಸುಪಾರಿ ಕೊಟ್ಟು ಮಗನನ್ನೇ ಕೊಂದ ಕೇಸ್​; ಅಖಿಲ್ ಜೈನ್ ಶವ ಪತ್ತೆ! ಸಿಕ್ಕಿದ್ದೆಲ್ಲಿ?

ಕೊಲೆಗೀಡಾದ ಉದ್ಯಮಿ ಪುತ್ರ

ಕೊಲೆಗೀಡಾದ ಉದ್ಯಮಿ ಪುತ್ರ

ಇದೀಗ ಯುವಕ ಅಖಿಲ್ ಜೈನ್ ಶವ ಪತ್ತೆಯಾಗಿದ್ದು, ಕಲಘಟಗಿ ತಾಲೂಕಿನ ದೇವಿಕೊಪ್ಪದ ಬಳಿ ಮೃತದೇಹ ಸಿಕ್ಕಿದೆ. ನಿರ್ಮಾಣ ಹಂತದ ಮನೆಯ ಹಿಂಭಾಗದಲ್ಲಿ ದುಷ್ಕರ್ಮಿಗಳು ಮೃತದೇಹವನ್ನು ಹೂತು ಹಾಕಿದ್ದರು. 

 • News18 Kannada
 • 2-MIN READ
 • Last Updated :
 • Karnataka, India
 • Share this:

ಹುಬ್ಬಳ್ಳಿ (ಡಿ.06):  ತಂದೆಯಿಂದಲೇ‌ ಮಗನ ಕೊಲೆಗೆ (Son Murder) ಸುಪಾರಿ ಪ್ರಕರಣ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಇದೀಗ ಯುವಕ ಅಖಿಲ್ ಜೈನ್ (Akhil Jain)  ಶವ ಪತ್ತೆಯಾಗಿದೆ. ಕಲಘಟಗಿ ತಾಲೂಕಿನ ದೇವಿಕೊಪ್ಪದ ಬಳಿ ಮೃತದೇಹ (Dead Body) ಸಿಕ್ಕಿದೆ. ನಿರ್ಮಾಣ ಹಂತದ ಮನೆಯ ಹಿಂಭಾಗದಲ್ಲಿ ದುಷ್ಕರ್ಮಿಗಳು ಮೃತದೇಹವನ್ನು ಹೂತು ಹಾಕಿದ್ದಾರೆ. 


ಮಗನ ಕೊಲೆಗೆ 10 ಲಕ್ಷ ಸುಪಾರಿ ನೀಡಿದ್ದ ತಂದೆ


ಉದ್ಯಮಿ ಭರತ ಜೈನ್ @ಮಹಾಜನಶೆಟ್ರು ಅವರಿಂದ ಕೊಲೆಗೆ ಸುಪಾರಿ ಆರೋಪ ಕೇಳಿಬಂದಿದೆ. ಹಳೇ ಹುಬ್ಬಳ್ಳಿಯ ಮೂವರಿಗೆ ಸುಫಾರಿ ನೀಡಿದ್ದನೆಂಬ ಮಾಹಿತಿ ಹೊರಬಿದ್ದಿತ್ತು. 10 ಲಕ್ಷ ಸುಪಾರಿ ನೀಡಿ ಸ್ವಂತ ಮಗನನ್ನ ತಂದಯೇ ಕೊಲೆ ಮಾಡಿಸಿದ್ದಾರೆ. ಬಳಿಕ ಮಗ ಕಾಣೆಯಾಗಿದ್ದಾನೆಂದು ಸಹೋದರನಿಂದ ದೂರು ದಾಖಲಿಸಿದ್ದರು.


ಕೊಲೆಗೀಡಾದ ಉದ್ಯಮಿ ಪುತ್ರ


48 ಗಂಟೆಗಳ ನಂತರ ಅಖಿಲ್ ಶವ ಪತ್ತೆ


ಭರತ ಜೈನ್ ಮೇಲೆ ಪೊಲೀಸರಿಗೆ ಅನುಮಾನವಿದ್ದು, ಭರತ್ ಜೈನ್ ವಿಚಾರಣೆ ಮಾಡಿದಾಗ ಅಸಲಿಯತ್ತು ಬಹಿರಂಗವಾಗಿದೆ. 48 ಗಂಟೆಗಳ ನಂತರ ಅಖಿಲ್ ಜೈನ್ ಶವ ಸಿಕ್ಕಿದೆ. ಆರೋಪಿಗಳ ತೀವ್ರ ವಿಚಾರಣೆಯ ನಂತರ ಶವ ಹೂತಿಟ್ಟಿರೋದು ಗೊತ್ತಾಗಿದೆ. ಸ್ಥಳದ ಮಾಹಿತಿ ತಿಳಿದು ಬಂದ ಪೊಲೀಸರು,
ಉಪ ವಿಭಾಗಾಧಿಕಾರಿ ಸಮ್ಮುಖದಲ್ಲಿ ಶವ ಹೊರ ತೆಗೆಸಿದ್ದಾರೆ. ಪ್ರಮುಖ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ


ಬಾಗಲಕೋಟೆ : ಇತ್ತೀಚೆಗೆ ರಾಜ್ಯ ರಾಜಧಾನಿಯಲ್ಲಿ ಅನೇಕ ಅಪರಾಧ ಕೃತ್ಯಗಳು (Crime) ವರದಿಯಾಗುತ್ತಿವೆ. ಸದ್ಯ ಕೆಪಿ ಅಗ್ರಹಾರ ಬಳಿ ನಡೆದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ ಸದ್ದು ಮಾಡುತ್ತಿದೆ. ಈ ಕೊಲೆಯ (Murder) ದೃಶ್ಯಗಳು ಸಿಸಿಟಿಯಲ್ಲಿ (CCTV) ಸೆರೆಯಾಗಿವೆ. ಕಳೆದ ಶನಿವಾರ ಈ ಪ್ರಕರಣ ನಡೆದಿದ್ದು, ಬರೋಬ್ಬರಿ ಆರು ಮಂದಿ ಸೇರಿ ಅಪರಿಚಿತ ವ್ಯಕ್ತಿಯನ್ನು ಕೊಲೆಗೈದಿದ್ದರು. ಅದರಲ್ಲೂ ಈ ಹತ್ಯೆ ಪ್ರಕರಣದಲ್ಲಿ ಮೂವರು ಮಹಿಳೆಯರೂ ಭಾಗಿಯಾಗಿರುವುದು ಮತ್ತಷ್ಟು ಆಘಾತಕಾರಿ ಅಂಶವಾಗಿದೆ. ಇನ್ನು ಈ ಪ್ರಕರಣದ ಭಯಾನಕತೆ ಅದೆಷ್ಟರ ಮಟ್ಟಿಗೆ ಇತ್ತೆಂದರೆ ಕೊಲೆಗಾರರು ಇಪ್ಪತ್ತು ಬಾರಿ ಕಲ್ಲು ಎತ್ತಿ ಹಾಕಿ ಕುಕೃತ್ಯ ಎಸಗಿದ್ದಾರೆ.


ಮೂರು ವಿಶೇಷ ತಂಡಗಳ ಕಾರ್ಯಾಚರಣೆ


ಹೌದು ಬೆಂಗಳೂರಿನ ಕೆ ಪಿ ಅಗ್ರಹಾರ ಐದನೇ ಕ್ರಾಸ್​ನಲ್ಲಿ ಕಳೆದ ಶನಿವಾರ ನಡೆದ ಈ ಹತ್ಯೆಯ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದನ್ನು ಕಂಡು ಪೊಲೀಸರೇ ತಬ್ಬಿಬ್ಬಾಗಿದ್ದಾರೆ. ಸದ್ಯ ಮೃತ ವ್ಯಕ್ತಿ ಯಾರೆಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಾದಾಮಿ ಮೂಲದ 26 ವರ್ಷದ ಬಾಳಪ್ಪ ಜಮಖಂಡಿ ಎಂಬವರೇ ಕೊಲೆಗೀಡಾದ ವ್ಯಕ್ತಿ. ಮೊದಲಿಗೆ ಮಹಿಳೆಯೊಬ್ಬರು ಬಾಳಪ್ಪ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದರು. ಬಳಿಕ ಕೆಲವರು ಬಾಳಪ್ಪ ಜಮಖಂಡಿಯನ್ನು ಹಿಡಿದಿದ್ದರು. ಅಷ್ಟರಲ್ಲಿ ಉಳಿದವರು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು. ಸದ್ಯ ಕೊಲೆ ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳ ಕಾರ್ಯಾಚರಣೆ ಆರಂಭಿಸಿದ್ದಾರೆ.


ಇದನ್ನೂ ಓದಿ: Vande Bharat Express Train: ಮತ್ತೊಂದು ವಂದೇ ಭಾರತ್ ರೈಲು ಸಂಚಾರ ಶುರು


ಮೃತ ವ್ಯಕ್ತಿಯ ಗುರುತು ಪತ್ತೆ 


ಇನ್ನು ಮೊಬೈಲ್ ಸುಳಿವಿನ ಮೇರೆಗೆ ಪೊಲೀಸರು ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ. ಶನಿವಾರ ರಾತ್ರಿ ಕೆ. ಪಿ ಅಗ್ರಹಾರಕ್ಕೆ ಬಂದಿದ್ದ ಬಾಳಪ್ಪ ಜಮಖಂಡಿ, ಆರೋಪಿಗಳ ಭೇಟಿಗೂ ಮುನ್ನ ಇನ್ನಿಬ್ಬರು ವ್ಯಕ್ತಿಗಳ ಭೇಟಿಯಾಗಿದ್ದ. ಸಿಗರೇಟ್ ಸೇದಿ, ಮೊಬೈಲ್ ಚಾರ್ಜ್​ಗೆ ಹಾಕಿ ಅವರೇನೊ ಅಲ್ಲಿಗೆ ಕರೀತಾ ಇದ್ದಾರೆ ಹೋಗಿ ಬರ್ತಿನಿ ಅಂದಿದ್ದ. ಐದನೇ ಕ್ರಾಸ್ ಮೆಡಿಕಲ್ ಸ್ಟೋರ್ ಬಳಿ ಇದ್ದಾಗ ಅಲ್ಲಿಗೆ ಆರು ಜನ ಬಂದಿದ್ದಾರೆ. ಈ ಮೂವರು ಮಹಿಳೆಯರು ಮೂವರು ಪುರುಷರು ಬಾಳಪ್ಪ ಜಮಖಂಡಿ ಜೊತೆ ಗಲಾಟೆ ಮಾಡಿ ಬಳಿಕ ಬಳಿಕ ಬಾಳಪ್ಪನ ಹಿಡಿದುಕೊಂಡು ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದಾರೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು