Railway Project: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಮತ್ತೆ ಜೀವಂತ, ವನ್ಯಜೀವಿ ಮಂಡಳಿ ನಿಲುವೇನು?

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಜಿಲ್ಲೆಗಳ ಜನರ ಬಹುನಿರೀಕ್ಷಿತ ಯೋಜನೆಯಾಗಿರುವ ಅಂಕೋಲಾ-ಹುಬ್ಬಳಿ ರೈಲ್ವೇ ಮಾರ್ಗಕ್ಕಾಗಿ ಕಳೆದ ನಾಲ್ಕು ದಶಕದಿಂದ ನಿರಂತರವಾಗಿ ನಡೆಯುತ್ತಾ ಬಂದಿದ್ದ ಹೋರಾಟ, ಇದೀಗ ತಾರ್ಕಿಕ ಅಂತ್ಯ ಕಾಣುವ ಲಕ್ಷಣಗಳು ಗೋಚರಿಸುತ್ತಿದೆ‌.

ಅಂಕೋಲಾ-ಹುಬ್ಬಳ್ಳಿ ರೈಲು ಯೋಜನೆ ಯಾವಾಗ?

ಅಂಕೋಲಾ-ಹುಬ್ಬಳ್ಳಿ ರೈಲು ಯೋಜನೆ ಯಾವಾಗ?

  • Share this:
ಉತ್ತರ ಕನ್ನಡ: ಜಿಲ್ಲೆಯ ಜನರ ಕನಸಿನ ಯೋಜನೆಯಾದ (Dream Project) ಅಂಕೋಲಾ ಹುಬ್ಬಳ್ಳಿ ರೈಲ್ವೇ ಮಾರ್ಗ ಯೋಜನೆಯ  (Ankola Hubli Railway Line Project) ಅನುಷ್ಠಾನಕ್ಕಾಗಿ ಕಳೆದ ನಾಲ್ಕು ದಶಕದಿಂದ ನ್ಯಾಯಾಲಯದಲ್ಲಿ (Court) ಹೋರಾಟ (Fight) ನಡೆಯುತ್ತಿತ್ತು. ಈ ಕುರಿತ ಅಂತಿಮ ತೀರ್ಪಿಗಾಗಿ (Last Judgment) ಎದುರು ನೋಡುತ್ತಿದ್ದ ಯೋಜನಾ ಪರ ಹೋರಾಟಗಾರರು (Fighters) ಹಾಗೂ ಕರಾವಳಿ ಜನರಿಗೆ (Coastal people) ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ (National Wildlife Board) ಹೈಕೋರ್ಟ್ (High Court) ನೀಡಿದ ಆದೇಶ (Order) ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ.

ಏನಿದು ಹಗ್ಗ ಜಗ್ಗಾಟ? ಯೋಜನೆಗೆ ಯಾರ ಅಡ್ಡಗಾಲು?

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಜಿಲ್ಲೆಗಳ ಜನರ ಬಹುನಿರೀಕ್ಷಿತ ಯೋಜನೆಯಾಗಿರುವ ಅಂಕೋಲಾ-ಹುಬ್ಬಳಿ ರೈಲ್ವೇ ಮಾರ್ಗಕ್ಕಾಗಿ ಕಳೆದ ನಾಲ್ಕು ದಶಕದಿಂದ ನಿರಂತರವಾಗಿ ನಡೆಯುತ್ತಾ ಬಂದಿದ್ದ ಹೋರಾಟ, ಇದೀಗ ತಾರ್ಕಿಕ ಅಂತ್ಯ ಕಾಣುವ ಲಕ್ಷಣಗಳು ಗೋಚರಿಸುತ್ತಿದೆ‌. ಯೋಜನೆಯ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಲು ಪರಿಸರ ಹಾಗೂ ವನ್ಯಜೀವಿ ತಜ್ಞರನ್ನೊಳಗೊಂಡ ಸಮಿತಿ 10ವಾರಗಳೊಳಗೆ ಕೆಲಸ ಪೂರ್ಣಗೊಳಿಸಿ ರಾಷ್ಟ್ರೀಯ ವನ್ಯ ಜೀವಿ ಮಂಡಳಿ ವರದಿ ಸಲ್ಲಿಸಬೇಕಿದ್ದು, ಆ ವರದಿಯ ಆಧಾರದಲ್ಲಿ ರಾಷ್ಟ್ಮ್ರೀಯ ವನ್ಯಜೀವಿ ಮಂಡಳಿ ನಿರ್ಧಾರ ಕೈಗೊಂಡು ಮುಂದಿನ ವಿಚಾರಣೆ ವೇಳೆ ಹೈ ಕೋರ್ಟ್‌ಗೆ ಸಲ್ಲಿಸಬೇಕಿದೆ.

ಯೋಜನೆಯಿಂದ ವನ್ಯಜೀವಿಗೆ ತೊಂದರೆಯಾಗೋ ಆತಂಕ

ಅಂದಹಾಗೆ, ಹುಬ್ಬಳ್ಳಿ- ಅಂಕೋಲಾ ರೈಲ್ವೇ ಮಾರ್ಗದ ಯೋಜನೆಯಿಂದ ಅಪರೂಪದ ವನ್ಯಜೀವಿಗಳಿಗೆ ತೊಂದರೆಯಾಗಲಿದೆ ಎಂದು ವೃಕ್ಷ ಫೌಂಡೇಶನ್ ಹಾಗೂ ಕೆಲವು ಪರಿಸರವಾದಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. 2020ರ ಮಾ. 20ರಂದು ರಾಜ್ಯ ವನ್ಯಜೀವಿ ಮಂಡಳಿ ಕೈಗೊಂಡಿರುವ ನಿರ್ಣಯ ಆಧರಿಸಿ ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗ ಯೋಜನೆ ಸಂಬಂಧ ಮುಂದಿನ ಕ್ರಮ ಜರುಗಿಸಬಾರದು ಎಂದು ಸರಕಾರಕ್ಕೆ ಸೂಚಿಸಿ ಜೂ.18ರಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿತ್ತು. ನಂತರ ಅರಣ್ಯ ಹಾಗೂ ವನ್ಯಜೀವಿಗಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಸಮೀಕ್ಷೆ ನಡೆಸುವಂತೆ 2021ರ ಡಿ.1ರಂದು ಹೈಕೋರ್ಟ್ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಆದೇಶಿಸಿತ್ತು.

ಇದನ್ನೂ ಓದಿ: Mining: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಗಾಮಿಲ್ಲದೇ ನಡೆಯುತ್ತಿದೆ ಮಣ್ಣು-ಕಲ್ಲು ಗಣಿಗಾರಿಕೆ!

10 ವಾರದೊಳಗೆ ವರದಿ ಸಲ್ಲಿಸಲು ಸೂಚನೆ

ಆದ್ರೆ ಈವರೆಗೆ ಸಮೀಕ್ಷೆ ಪೂರ್ಣಗೊಳಿಸದೆ ಕೇಂದ್ರ ಸರಕಾರ ಸಮಯಾವಕಾಶವನ್ನು ಪಡೆಯುತ್ತಲೇ ಬಂದಿದೆ. ಈ ಕಾರಣದಿಂದ ಯೋಜನೆಯ ಸಾಧಕ - ಬಾಧಕಗಳ ಕುರಿತು ಅಧ್ಯಯನ ನಡೆಸಲು ರಚಿಸಲಾಗಿರುವ ಪರಿಸರ ಹಾಗೂ ವನ್ಯಜೀವಿ ತಜ್ಞರ ಸಮಿತಿ 10 ವಾರದೊಳಗೆ ತನ್ನ ಕೆಲಸ ಪೂರ್ಣಗೊಳಿಸಿ, ಎನ್‌ಡಬ್ಲ್ಯೂಬಿಗೆ ವರದಿ ಸಲ್ಲಿಸಬೇಕಿದೆ ಎಂದು ನ್ಯಾಯಪೀಠ ಆದೇಶಿಸಿದೆ.

ತಜ್ಞರ ವರದಿ ಮೇಲೆ ನಿರ್ಧಾರ

ಪರಿಸರ ಮತ್ತು ವನ್ಯಜೀವಿಗಳ ಮೇಲೆ ಉಂಟಾಗುವ ಪರಿಣಾಮ ಕುರಿತು ತಜ್ಞರ ಸಮಿತಿ ನೀಡುವ ವರದಿ ಆಧರಿಸಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರ್ಧಾರ ಕೈಗೊಳ್ಳಬೇಕಿದೆ. ಮುಂದಿನ ವಿಚಾರಣೆ ವೇಳೆ ಇದನ್ನು ಕೋರ್ಟ್‌ಗೆ ಸಲ್ಲಿಸಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ..

ವಿಭಾಗೀಯ ಪೀಠದ ಮುಂದೆ ವಿಚಾರಣೆ

ಅಂಕೋಲಾ ಹಾಗೂ ಹುಬ್ಬಳ್ಳಿ ನಡುವೆ 164.44 ಕಿ.ಮೀ. ಉದ್ದದ ಬ್ರಾಡ್‌ಗೇಜ್ ರೈಲು ಮಾರ್ಗ ಯೋಜನೆ ಪ್ರಶ್ನಿಸಿ ಪ್ರಾಜೆಕ್ಟ್ ವೃಕ್ಷ ಫೌಂಡೇಷನ್ ಹಾಗೂ ಮತ್ತಿತರರು ಪಿಐಎಲ್ ಸಲ್ಲಿಸಿದ್ದರು. ಈ ಪಿಐಎಲ್ ಸಿಜೆ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್ . ಕಿಣಗಿ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಕೂಡಾ ಬಂದಿತ್ತು.

ಪರಿಸರದ ಮೇಲೆ ಉಂಟಾಗುವ ಪರಿಣಾಮದ ಅಧ್ಯಯನ

ಕೇಂದ್ರ ಸರಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ. ನರಗುಂದ್ , " ರೈಲು ಮಾರ್ಗ ಯೋಜನೆಯ ಸಾಧಕ - ಬಾಧಕಗಳ ಕುರಿತು ಅಧ್ಯಯನ ನಡೆಸಲು ಪರಿಸರ ಸಚಿವಾಲಯ ತಜ್ಞರ ಸಮಿತಿಯನ್ನು ರಚಿಸಿದೆ. ಆ ಸಮಿತಿಯು ಯೋಜನೆಯನ್ನು ಪರಿಶೀಲಿಸಲಿದ್ದು , ಯೋಜನೆ ಸಂಬಂಧದ ನಾನಾ ವರದಿಗಳು ಹಾಗೂ ಪರಿಸರ ಮತ್ತು ವನ್ಯಜೀವಿಗಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲಿದೆ.

ಪ್ರವಾಸೋದ್ಯಮಕ್ಕೆ ಸಹಾಯ

ಅಲ್ಲದೇ, ಸಾರ್ವಜನಿಕರು ಹಾಗೂ ಸರಕಾರೇತರ ಸಂಸ್ಥೆಗಳ ಅಹವಾಲುಗಳನ್ನೂ ಆಲಿಸಿ, ಅಂತಿಮ ವರದಿ ನೀಡಲಿದೆ . ಅದನ್ನು ಆಧರಿಸಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರ್ಧಾರ ಕೈಗೊಳ್ಳಲಿದೆ. ಪ್ರಸ್ತುತ ನ್ಯಾಯಾಲಯ 10 ವಾರಗಳ ಕಾಲ ವಿಚಾರಣೆಯನ್ನು ಮುಂದೂಡಿದ್ದು, ನ್ಯಾಯಾಲಯದ‌ ಮುಂದಿನ ತೀರ್ಪು ಯೋಜನೆ ಪರವಾಗಿ, ಕರಾವಳಿ ಜನರ ಪರವಾಗಿ ಬರಲಿದೆ.‌ ಇದರಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೇ, ಕರಾವಳಿಯ ಜಿಲ್ಲೆಗಳಲ್ಲಿ ಉದ್ಯಮ, ಪ್ರವಾಸೋದ್ಯಮ ಹಾಗೂ ರಕ್ಷಣಾ ಕ್ಷೇತ್ರಕ್ಕೂ ಇದು ಸಹಾಯಕವಾಗಲಿದೆ ಅಂತಾರೆ  ಹೋರಾಟಗಾರರು.

ಇದನ್ನೂ ಓದಿ: Bridge: ಸೇತುವೆ ನಿರ್ಮಾಣವಾದ್ರೂ ತಪ್ಪಿಲ್ಲ ಜನರ ಸಂಕಷ್ಟ, ಮಳೆಗಾಲದಲ್ಲಿ ಇಲ್ಲಿನ ಜೀವನ ಕಷ್ಟ ಕಷ್ಟ!

ಎಲ್ಲವೂ ಅಂದುಕೊಂಡಂತೆ ಆದಲ್ಲಿ ರೈಲು ಪರ ಹೋರಾಟಗಾರರ ನಾಲ್ಕು ದಶಕದ ಹೋರಾಟಕ್ಕೆ ಜಯ  ಸಿಕ್ಕಂತಾಗಲಿದೆ. ಅಲ್ಲದೇ, ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕ ಭಾಗದ ಸಂಪರ್ಕಕೊಂಡಿ ಇನ್ನಷ್ಟು ಗಟ್ಟಿಯಾಗಲಿದೆ. ಈ ಕಾರಣದಿಂದ ಶೀಘ್ರದಲ್ಲಿ ಯೋಜನೆಗೆ ಗ್ರೀನ್ ಸಿಗ್ನಲ್ ದೊರೆಯಲಿ ಅನ್ನೋದು ಜನರ ಅಭಿಪ್ರಾಯ.
Published by:Annappa Achari
First published: