ನಾಯಕ ಸ್ಥಾನ ಕೊಟ್ರೆ ತಗೊಳ್ಳಿ, ಮತ್ತೆ ನೀವೇ ಸಿಎಂ ಆಗಿ; ಸಿದ್ದರಾಮಯ್ಯಗೆ ದೊರೆಸ್ವಾಮಿ ಸಲಹೆ

ಕೆಲಸಕ್ಕೆ ಬಾರದವರನ್ನು, ಅಯೋಗ್ಯರನ್ನು ತಂದು ಶಾಸಕರನ್ನ ಮಾಡ್ತೀರಿ. ಅವರು ಏನ್ಮಾಡಿದ್ರು? ಓಡಿ ಹೋದರು. ಮಳೆ ಬಂದಾಗ‌ ಕಪ್ಪೆ ಸೇರಿ ಕೆಲವೊಂದಿಷ್ಟು ಓಡಿ ಹೋಗ್ತಾವೆ. ಹಾಗೆನೇ ಇವರು ತಂತಮ್ಮ ರಕ್ಷಣೆಗಾಗಿ ಓಡಿ ಹೋದರು ಎಂದು ಕಿಡಿಕಾರಿದರು. 

Latha CG | news18-kannada
Updated:September 22, 2019, 4:35 PM IST
ನಾಯಕ ಸ್ಥಾನ ಕೊಟ್ರೆ ತಗೊಳ್ಳಿ, ಮತ್ತೆ ನೀವೇ ಸಿಎಂ ಆಗಿ; ಸಿದ್ದರಾಮಯ್ಯಗೆ ದೊರೆಸ್ವಾಮಿ ಸಲಹೆ
ಸಿದ್ದರಾಮಯ್ಯ-ದೊರೆಸ್ವಾಮಿ
  • Share this:
ಬೆಂಗಳೂರು(ಸೆ.22): ಸಿದ್ದರಾಮಯ್ಯ ಮತ್ತೆ ನೀವೇ ಮುಖ್ಯಮಂತ್ರಿ ಆಗಿ. ಬಿಜೆಪಿಯವರಿಗೆ ಮುಸ್ಲಿಮರು, ಕ್ರಿಶ್ಚಿಯನ್ನರು ಬೇಡ. ನಿಮಗೆ ಬಿಜೆಯವರು ಬೇಡ. ದೇಶದಲ್ಲಿ ನಾಯಕರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನೀವೇ ನಾಯಕರಾಗಬೇಕು. ಉಪಚುನಾವಣೆಯಲ್ಲಿ  14 ಸ್ಥಾನ ಗೆಲ್ಲಬೇಕು, ಗೆಲ್ತೀರಾ? ನಾಯಕ ಸ್ಥಾನ ಕೊಟ್ಟರೆ ತೆಗೆದುಕೊಳ್ಳಿ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್​.ದೊರೆಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ.

'ಸಿದ್ದರಾಮಯ್ಯ ಆಡಳಿತ ಅಂತರಂಗ ಬಹಿರಂಗ ವರ್ತಮಾನ ಇತಿಹಾಸ' ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ದೊರೆಸ್ವಾಮಿ ಮಾತನಾಡಿದರು. ರಾಜ್ಯದಲ್ಲಿ ಬದಲಾವಣೆ ತರಬೇಕಿದೆ. ಆದರೆ ಈಗ ನೆರೆ ಇದೆ. ಬಿಜೆಪಿ ಈ ಬಗ್ಗೆ ಗಮನ ಹರಿಸಲೇ ಇಲ್ಲ. ಮೋದಿಯವರು ಬಾಯೇ ಬಿಡಲಿಲ್ಲ. ಪ್ರಧಾನಿಯಾಗಿ ಕರ್ನಾಟಕವನ್ನು ಯಾಕೆ ನಿರ್ಲಕ್ಷ್ಯ ಮಾಡಿದ್ದೀರಾ ಅಂತಾ ಅಂತ ಮೋದಿಯವರನ್ನು ಕೇಳಬೇಕು ಎಂದು ಕಿಡಿಕಾರಿದರು.

ಮತ್ತೆ  6 ತಿಂಗಳಲ್ಲಿ ಚುನಾವಣೆ

ಸಿಎಂ ಯಡಿಯೂರಪ್ಪ ಕೂಡ ಎಲ್ಲ ಪಕ್ಷಗಳ ಮುಖಂಡರ ಸಭೆ ಕರೆದು ಚರ್ಚೆ ಮಾಡಬೇಕು. ಸಭೆ ಕರೆಯುವ ಔದಾರ್ಯವನ್ನು ಯಡಿಯೂರಪ್ಪ ಮಾಡಬೇಕಿತ್ತು. ಆದರೆ ಮಾಡಲಿಲ್ಲ. ಇಲ್ಲಿ‌ ಏನಾದರೂ ಆದರೆ ಮೋದಿಗೆ ನಿದ್ದೆ ಬರಬಾರದು. ಆರು ತಿಂಗಳಲ್ಲಿ ರಾಜ್ಯದಲ್ಲಿ ಮತ್ತೆ ಚುನಾವಣೆ ಬರುತ್ತೆ ಎಂದು ದೊರೆಸ್ವಾಮಿ ಭವಿಷ್ಯ ನುಡಿದರು.

Howdy Modi!: ಅಮೆರಿಕಕ್ಕೆ ಆಗಮಿಸಿದ ಪ್ರಧಾನಿಗೆ ಭವ್ಯ ಸ್ವಾಗತ: ಹೊಸ ಇತಿಹಾಸ ಬರೆಯಲಿದೆ ಮೋದಿ-ಟ್ರಂಪ್ ಭೇಟಿ

ಮೋದಿ ಒಕ್ಕಲಿಗರನ್ನು ಮುಗಿಸುವ ಕೆಲಸ ಮಾಡ್ತಿದಾರೆ

ಮೋದಿಯವರು ದೇಶವನ್ನು ಒಡೆಯುವ ಕೆಲಸ ಮೋದಿ ಮಾಡುತ್ತಿದ್ದಾರೆ. ಒಕ್ಕಲಿಗರನ್ನು ಟಾರ್ಗೆಟ್ ಮಾಡೋ ಕೆಲಸ ನಡೆಯುತ್ತಿದೆ. ಒಕ್ಕಲಿಗರನ್ನು ಮುಗಿಸಿದರೆ ದೇಶ ನಮ್ಮದೇ ಅಂತಾ ಮೋದಿ ಅನ್ಕೊಂಡಿದ್ದಾರೆ. ಲಿಂಗಾಯತರನ್ನು ಒಡೆದು,  ಒಕ್ಕಲಿಗರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಡಿಕೆಶಿಗೋಸ್ಕರ ಹೋರಾಟದಲ್ಲಿ ಎಲ್ಲ‌ ಒಕ್ಕಲಿಗರೂ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಬೇಕಿತ್ತು. ಯಾರು ಪ್ರಜಾಪ್ರಭುತ್ವದ ಕೂಗು ಎತ್ತುತ್ತಾರೋ ಅವರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಕಾಶ್ಮೀರದಲ್ಲೂ ಇದೆ ಆಗುತ್ತಿದೆ. ಮಾತಾನಾಡಿದರೆ ದೇಶದ್ರೋಹ ಕೇಸ್ ಹಾಕ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮೈತ್ರಿ ಮಾಡಿಕೊಳ್ಳುವಾಗ ಎಚ್ಚರಿಕೆ

ಅಹಿಂದವನ್ನು ಸಿದ್ದರಾಮಯ್ಯ ನೀವು ಗಟ್ಟಿ ಮಾಡಿದ್ದೀರಿ. ಹಿಂದುಳಿದವರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದೀರಿ. ಉತ್ತಮ‌ ಕೆಲಸ ಅದು ಎಂದು ಶ್ಲಾಘಿಸಿದರು. ಮುಂದಿನ ಬಾರಿ ಮೈತ್ರಿ ಮಾಡಿಕೊಳ್ಳಬೇಕಾದರೆ ನೋಡಿ ಒಪ್ಪಂದ ಮಾಡಿಕೊಳ್ಳಿ. ಗೋವಾದಲ್ಲಿ ಮೈತ್ರಿ ಒಂದು ತರ ಆದರೆ, ಇಲ್ಲೊಂದು ರೀತಿನೇ ಆಯ್ತು. ಕೆಲಸಕ್ಕೆ ಬಾರದವರನ್ನು, ಅಯೋಗ್ಯರನ್ನು ತಂದು ಶಾಸಕರನ್ನ ಮಾಡ್ತೀರಿ. ಅವರು ಏನ್ಮಾಡಿದ್ರು? ಓಡಿ ಹೋದರು. ಮಳೆ ಬಂದಾಗ‌ ಕಪ್ಪೆ ಸೇರಿ ಕೆಲವೊಂದಿಷ್ಟು ಓಡಿ ಹೋಗ್ತಾವೆ. ಹಾಗೆನೇ ಇವರು ತಂತಮ್ಮ ರಕ್ಷಣೆಗಾಗಿ ಓಡಿ ಹೋದರು ಎಂದು ಕಿಡಿಕಾರಿದರು. 

ಎದುರಾಳಿ ಯಾರೇ ಆಗಲಿ ಯೋಚನೆ ಮಾಡಲ್ಲ, ಸ್ಪರ್ಧೆಗೆ ಸಿದ್ಧ; ರಮೇಶ್​ ಜಾರಕಿಹೊಳಿ ವಿರುದ್ಧ ತೊಡೆತಟ್ಟಿದ​ ಲಖನ್​ ಜಾರಕಿಹೊಳಿ

ಮಾಜಿ ಸ್ಪೀಕರ್​​ ರಮೇಶ್​ಕುಮಾರ್​ ಪರ ಬ್ಯಾಟಿಂಗ್​

ಗಂಡಸ್ಥನದ ಕೆಲಸ ಮಾಡಿದ್ದೀರಿ ರಮೇಶ್​ ಕುಮಾರ್, ಕೋರ್ಟ್ ಏನಾದ್ರೂ ಮಾಡಲಿ, ಏನಾದರೂ ಹೇಳಲಿ.‌ ನೀವು ಮಾತ್ರ ಒಳ್ಳೆಯ ಕೆಲಸ ಮಾಡಿದ್ದೀರಿ. ಬಳ್ಳಾರಿ ಜನಾರ್ದನರೆಡ್ಡಿ ಬನ್ನಿ ನೋಡ್ಕೊತ್ತೀನಿ ಅಂತಾ ಅಂದು ಹೇಳಿದಾಗ ನೀವು ಜನರನ್ನು ಕರ್ಕೊಂಡು ಹೋಗಿ ಒಳ್ಳೆಯ ಪಾಠ ಕಲಿಸಿದ್ದೀರಾ ಎಂದು ರಮೇಶ್​ ಕುಮಾರ್ ಪರ ಬ್ಯಾಟಿಂಗ್  ಮಾಡಿದರು.

ಕನ್ನಡ ಶಾಲೆಯಲ್ಲಿ ಉತ್ತಮ ಇಂಗ್ಲೀಷ್​​​ ಅನ್ನೇ ಕಲಿಸಿ. ಸ್ಪೋಕನ್ ಇಂಗ್ಲೀಷ್ ಬೇಡ. ಉತ್ತಮ‌ ಇಂಗ್ಲೀಷ್ ಕಲಿಸಿ. ಆದರೆ ಕನ್ನಡಕ್ಕೆ ಮೊದಲ ಆದ್ಯತೆ ಇರಲಿ. ಸಿದ್ದರಾಮಯ್ಯನವರೇ‌ ನಿಮ್ಮಿಂದ ಇನ್ನೂ ಒಳ್ಳೆಯ ಕೆಲಸಗಳಾಗಲಿ ಎಂದು ಆಶಿಸಿದರು.

First published:September 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading