ಬೆಂಗಳೂರು (ಡಿ.11): ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಊಟ ಬರ್ತಡೇ ಪಾರ್ಟಿ (Birthday Party) ಎಂದು ಓಡಾಡುತ್ತಲೇ ಇರ್ತಾರೆ. ಹೀಗೆ ತಮ್ಮ ಮನೆಯ ಬಳಿ ಬರ್ತಿದ್ದ ವೇಳೆ ದಂಪತಿಗೆ (Couple) ಪೊಲೀಸರೇ ಕಿರುಕುಳ ನೀಡಿರುವ ಘಟನೆ ನಡೆದಿದೆ. ಇಲ್ಲ ಸಲ್ಲದ ರೂಲ್ಸ್ ಹೇಳಿ ದಂಪತಿ ಬಳಿ 1000 ರೂಪಾಯಿ ಹಣ ಪೀಕಿದ್ದಾರೆ. ಕಿರುಕುಳದ (Harassing) ಬಗ್ಗೆ ಆರೋಪಿಸಿರುವ ವ್ಯಕ್ತಿಯು, ತನ್ನ ಪತ್ನಿಯೊಂದಿಗೆ ಬರ್ತಡೇ ಪಾರ್ಟಿ ಮುಗಿಸಿ ಮನೆಗೆ ಬರುವಾಗ ಪೊಲೀಸರು ಕಿರುಕುಳ ನೀಡಿದ್ದಾರೆನ್ನುವ ವಿಡಿಯೋವನ್ನು ಟ್ವಿಟರ್ನಲ್ಲಿ (Twitter) ಶೇರ್ ಮಾಡಿದ್ದಾರೆ.
ಇಬ್ಬರು ಕಾನ್ಸ್ಟೇಬಲ್ಗಳನ್ನು ಅಮಾನತು
ಕಾರ್ತಿಕ್ ಎಂಬುವರು ಪೊಲೀಸರಿಂದ ತಮಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾರೆ. ತಮಗೆ ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸ್ ಇಲಾಖೆ, ಆರೋಪಕ್ಕೊಳಗಾದ ಇಬ್ಬರು ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಲಾಗಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಎಂದು ತಿಳಿಸಿದೆ.
ಏನಿದು ಪ್ರಕರಣ?
ಕಾರ್ತಿಕ್ ಟ್ವೀಟ್ ಕಳೆದ ರಾತ್ರಿ (ಡಿ.10) ನನ್ನ ಹೆಂಡತಿ ಮತ್ತು ನಾನು ಎದುರಿಸಿದ ಆಘಾತಕಾರಿ ಘಟನೆಯನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ. ಆಗ ಮಧ್ಯರಾತ್ರಿ ಸುಮಾರು 12:30 ಆಗಿತ್ತು. ನಾನು ಮತ್ತು ನನ್ನ ಹೆಂಡತಿ ಸ್ನೇಹಿತನ ಬರ್ತಡೇ ಪಾರ್ಟಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದೆವು ಎಂದು ಕಾರ್ತಿಕ್ ಬರೆದಿದ್ದಾರೆ.
I would like to share a traumatic incident my wife and I encountered the night before. It was around 12:30 midnight. My wife and I were walking back home after attending a friend’s cake-cutting ceremony (We live in a society behind Manyata Tech park). (1/15)
— Karthik Patri (@Karthik_Patri) December 9, 2022
ತಾವು ತಮ್ಮ ಅಪಾರ್ಟಮೆಂಟ್ನ ಪ್ರವೇಶ ದ್ವಾರದಿಂದ ಕೆಲವೇ ಮೀಟರುಗಳ ಅಂತರದಲ್ಲಿರುವಾಗ ಅಲ್ಲಿಗೆ ಬಂದ ಪೊಲೀಸ್ ಗಸ್ತು ವಾಹನವೊಂದು ನಮ್ಮ ಬಳಿ ನಿಂತಿತು. ಅದರಿಂದ ಇಳಿದ ಪೊಲೀಸ್ ಯುನಿಫಾರ್ಮ್ನಲ್ಲಿದ್ದ ಇಬ್ಬರು ನಮಗೆ ನಮ್ಮ ಐಡಿ ಕಾರ್ಡ್ ತೋರಿಸುವಂತೆ ಕೇಳಿದರು. ಆಗ ನಮಗೆ ಆಶ್ಚರ್ಯವಾಯಿತು. ಸಾಮಾನ್ಯ ದಿನವೊಂದರಲ್ಲಿ ರಸ್ತೆಯಲ್ಲಿ ಹೋಗುತ್ತಿರುವ ಪ್ರೌಢ ವಯಸ್ಕ ದಂಪತಿಯು ತಮ್ಮ ಐಡಿ ಕಾರ್ಡ್ ತೋರಿಸುವ ಅಗತ್ಯವಾದರೂ ಏನು? ಪೊಲೀಸರು ಪಿಂಕ್ ಹೊಯ್ಸಳ ವಾಹನದಲ್ಲಿ ಬಂದಿದ್ದರು. ಆಧಾರ್ ಕಾರ್ಡ್ ತೋರಿಸಿದ ನಂತರ ಅವರು ನಮ್ಮ ಫೋನ್ಗಳನ್ನು ಕಿತ್ತುಕೊಂಡರು ಮತ್ತು ವೈಯಕ್ತಿಕ ಮಾಹಿತಿಗಳನ್ನು ಕೇಳಲಾರಂಭಿಸಿದರು ಎಂದು ಕಾರ್ತಿಕ್ ಹೇಳಿಕೊಂಡಿದ್ದಾರೆ.
11ರ ಬಳಿಕ ಸುತ್ತಾಡುವಂತಿಲ್ಲ ಎಂದ್ರು ಪೊಲೀಸರು
ರಾತ್ರಿ 11 ರ ನಂತರ ರಸ್ತೆಯಲ್ಲಿ ಸುತ್ತಾಡದಂತೆ ಓರ್ವ ಪೊಲೀಸ್ ಈ ಸಂದರ್ಭದಲ್ಲಿ ಸೂಚಿಸಿದ್ದಾರೆ. ಇಂಥ ಒಂದು ನಿಯಮ ಇದೆ ಎಂಬುದನ್ನು ನಂಬಲು ಕಷ್ಟವಾಗಿತ್ತು. ಸುಮ್ಮನೆ ರಾತ್ರಿ ಏಕೆ ಗಲಾಟೆ ಎಂದು ಸುಮ್ಮನಾಗಿದ್ದೆವು. ಅದರಲ್ಲೂ ಫೋನ್ಗಳನ್ನು ಬೇರೆ ಸೀಜ್ ಮಾಡಿದ್ದರಿಂದ ನಾವು ಸುಮ್ಮನಾದೆವು ಎಂದು ಕಾರ್ತಿಕ್ ಹೇಳಿಕೊಂಡಿದ್ದಾರೆ.
1000 ರೂಪಾಯಿ ಹಣ ಪಡೆದ್ರು
ಪೊಲೀಸರು 3 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಕೇಳಿದ್ದಾರೆ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡುವಂತೆ ಗೋಗರೆದರೂ ಅವರು ಬಿಡಲಿಲ್ಲ. ಕೊನೆಗೆ ಕನಿಷ್ಠ ಮೊತ್ತವನ್ನಾದರೂ ಪಾವತಿಸುವಂತೆ ಪೊಲೀಸರು ಹೇಳಿದ್ದಾರೆ. ಕೊನೆಗೆ 1000 ರೂಪಾಯಿ ಕೊಡಲು ಒಪ್ಪಿದಾಗ ಅದರಲ್ಲೊಬ್ಬ ಪೊಲೀಸ್ ಕಾನ್ಸ್ಟೇಬಲ್ ತಮ್ಮ ಪೇಟಿಎಂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸಿಕೊಂಡು 1000 ರೂಪಾಯಿ ಪಡೆದುಕೊಂಡಿದ್ದಾರೆ ಎಂದು ಕಾರ್ತಿಕ್ ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ