• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramaiah: ಫೀನಿಕ್ಸ್​​ನಂತೆ ಗೆದ್ದು ಬಂದಿದ್ದು ಹೇಗೆ? ಜೆಡಿಎಸ್​ನಿಂದ ಬಂದು ಕಾಂಗ್ರೆಸ್​​ನ ಶಕ್ತಿ ಆಗಿದ್ದೇಗೆ?

Siddaramaiah: ಫೀನಿಕ್ಸ್​​ನಂತೆ ಗೆದ್ದು ಬಂದಿದ್ದು ಹೇಗೆ? ಜೆಡಿಎಸ್​ನಿಂದ ಬಂದು ಕಾಂಗ್ರೆಸ್​​ನ ಶಕ್ತಿ ಆಗಿದ್ದೇಗೆ?

ಸಿದ್ದರಾಮಯ್ಯ, ನೂತನ ಸಿಎಂ

ಸಿದ್ದರಾಮಯ್ಯ, ನೂತನ ಸಿಎಂ

Siddaramaiah: ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಕೆಲಸ ಮಾಡಿದ ಅನುಭವವು ಅವರಿಗೆ ದೆಹಲಿ ನಾಯಕರ ವಿಶ್ವಾಸವನ್ನು ಗಳಿಸಲು ಸಹಾಯ ಮಾಡಿತು ಮತ್ತು ಅವರು CLP ನಾಯಕ ಮತ್ತು ಸಮನ್ವಯ ಸಮಿತಿಯ ಮುಖ್ಯಸ್ಥರ ಹುದ್ದೆಯನ್ನು ಪಡೆದರು.

  • Trending Desk
  • 5-MIN READ
  • Last Updated :
  • Karnataka, India
  • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ (Karnataka Election Results 2023) ಕಾಂಗ್ರೆಸ್ ಬಹುಮತಗಳಿಂದ ಪುನಃ ಅಧಿಕಾರದ ಗದ್ದುಗೆ ಏರಿದ್ದು, ಪಕ್ಷದ ಹಿರಿಯ ಮುತ್ಸದ್ದಿ, ರಾಜಕೀಯ ಚತುರ ಸಿದ್ಧರಾಮಯ್ಯ (Siddaramaiah) ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸಿದ್ಧರಾಮಯ್ಯನವರ ಆಯ್ಕೆಯ ಮೂಲಕ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಕಾಂಗ್ರೆಸ್  (Congress) ತೆರೆಎಳೆದಿದ್ದು, ಮಾಸ್ ಲೀಡರ್ ಎಂದೇ ಕರೆಯಿಸಿಕೊಂಡಿರುವ ಸಿದ್ಧರಾಮಯ್ಯ ತಮ್ಮ ಪರಿಶ್ರಮ ಹಾಗೂ ಯಶಸ್ಸಿನಿಂದಲೇ ಪುನಃ ರಾಜ್ಯವನ್ನಾಳುವ ಚುಕ್ಕಾಣಿ ಹಿಡಿದುಕೊಂಡಿದ್ದಾರೆ.


ರಾಜಕೀಯ ಗುರುವಾದ ಎಚ್‌ಡಿ ದೇವೇಗೌಡರಂತಹ ಮಹಾನ್ ಮುಖಂಡನಿಗೆ ಸವಾಲು ಹಾಕಿ 2006 ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಸಿದ್ಧರಾಮಯ್ಯ ತಮ್ಮ 17 ವರ್ಷಗಳ ರಾಜಕೀಯ ವೃತ್ತಿಜೀವನದಲ್ಲಿ ಗುರುತಿಸಿಕೊಂಡಿದ್ದಾರೆ.


ಹೊಸ ನಂಬಿಕೆ ಜೊತೆ  ಬಂದಿದ್ದು ಸಿದ್ದರಾಮಯ್ಯ


ಹೊರಗಿನಿಂದ ಬಂದು ಪಕ್ಷಕ್ಕೆ ಸೇರಿಕೊಂಡಿದ್ದರೂ ಅವರು ಏನೇ ಮಾಡಿದರೂ ಸರಿಯಾದುದನ್ನೇ ಮಾಡುತ್ತಾರೆ ಎಂಬ ನಂಬಿಕೆಯನ್ನು ತಮ್ಮೊಂದಿಗೆ ತಂದವರು.


ತಮ್ಮ ಶತ್ರುಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಕಲೆಗಾರ ಬಹುಶಃ ಸಿದ್ಧರಾಮಯ್ಯನವರಿಗೆ ಮಾತ್ರ ಒಲಿದಿರುವ ವಿದ್ಯೆಯಾಗಿರಬಹುದು ಎಂಬುದು ಅವರ ರಾಜಕೀಯ ಹಿತಶತ್ರುಗಳ ಮಾತಾಗಿದೆ.


how siddaramaiah become mass leader in karnataka politics stg mrq
ಸಿದ್ದರಾಮಯ್ಯ, ಸಿಎಂ


ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಕುಸಿದಾಗ ಕೂಡ ಅದನ್ನು ಅಧಿಕಾರ ಮರಳಿ ಪಡೆಯುವ ದಾಳವಾಗಿ ಬಳಸಿಕೊಂಡರು. ಈ ಎರಡೂ ಪಕ್ಷಗಳು ಒಂದಾಗಿದ್ದಾಗ ಕೂಡ ಪಟ್ಟಭದ್ರ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡಿದ್ದವು. ಎರಡೂ ಪಕ್ಷಗಳ ಮೈತ್ರಿಯು ಅಧಿಕಾರ ಸಂಪಾದಿಸಿಕೊಳ್ಳುವ ತಮ್ಮ ಪಥದಲ್ಲಿ ಅಪಾಯ ಹಾಗೂ ತೊಂದರೆಯಾಗಿ ಕಾಂಗ್ರೆಸ್ ಗಮನಿಸಿಕೊಂಡಿತ್ತು.


ಗುರಿಯನ್ನು ಸಾಧಿಸುವ ಪಣ ತೊಟ್ಟ ಸಿದ್ದರಾಮಯ್ಯ


ಜೆಡಿಎಸ್ ಸರಕಾರವನ್ನು ತಮ್ಮ ಗುರಿಗಳ ಹಾದಿಯಲ್ಲಿ ಕಗ್ಗಂಟು ಎಂಬುದಾಗಿ ಸ್ವತಃ ತೀರ್ಮಾನಿಸಿದ ಸಿದ್ಧರಾಮಯ್ಯ ತಮ್ಮ ಕರ್ತವ್ಯನಿಷ್ಣುತೆ ಬದ್ಧತೆಗಳನ್ನೆಲ್ಲಾ ಬದಿಗಿಟ್ಟು ತಮ್ಮ ಗುರಿಯನ್ನು ಸಾಧಿಸುವ ಪಣ ತೊಟ್ಟರು.


ಸಿದ್ಧರಾಮಯ್ಯನವರ ಯಶಸ್ಸಿಗೆ ಅವರು ಪ್ರಸ್ತುತಪಡಿಸಿರುವ ಪ್ಯಾಕೇಜ್‌ಗಳು ಕಾರಣ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಜನಸಾಮಾನ್ಯರ ಮನಸ್ಸನ್ನು ಅರಿತ ನಾಯಕ ಎಂಬ ಜನಾಭಿಪ್ರಾಯವನ್ನು ಸಂಗ್ರಹಿಸುವಲ್ಲಿ ಸಿದ್ಧರಾಮಯ್ಯ ಮೇಲುಗೈ ಸಾಧಿಸಿದ್ದಾರೆ.


ಹಳ್ಳಿಗಳ ಹಬ್ಬಗಳಲ್ಲಿ ಜನಪದ ಹಾಡುಗಳನ್ನು ಪ್ರಸ್ತುತಪಡಿಸುವುದು, ರೈತರಿಗೆ ಆರ್ಥಿಕ ಪ್ಯಾಕೇಜ್‌ಗಳ ಭರವಸೆ, ರಾಜ್ಯಾದ್ಯಂತ ನಡೆಸಿದ ಪ್ರವಾಸ ಹೀಗೆ ಮೈಸೂರಿನವರು ಹೆಚ್ಚಿನ ನಾಯಕತ್ವ ಗುಣಗಳ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು ಎಂದು ತೋರಿಸಿದ್ದಾರೆ.


ಜನಸಾಮಾನ್ಯರ ವಿಶ್ವಾಸ ಗಳಿಸಿಕೊಂಡ ಸಿದ್ದರಾಮಯ್ಯ


ಮಾತಿನಲ್ಲಿಯೇ ಮರುಳು ಮಾಡುವ ಮರಳುಗಾರ ಎಂಬ ಹಿರಿಮೆಯನ್ನು ಗಳಿಸಿಕೊಂಡಿರುವ ಸಿದ್ಧರಾಮಯ್ಯ ಜನಸಾಮಾನ್ಯರ ಭಾಷೆಗಳ ಮೂಲಕವೇ ಅವರಿಗೆ ಆಪ್ತರಾದವರು.


how siddaramaiah become mass leader in karnataka politics stg mrq
ಸಿದ್ದರಾಮಯ್ಯ, ಸಿಎಂ


ಅವರ ಮಾತಿನ ವೈಖರಿಯಿಂದಲೇ ಪ್ರಭಾವಿತರಾದ ಜನತೆ, ಕಾಂಗ್ರೆಸ್ ಎಂದರೆ ಸಿದ್ಧರಾಮಯ್ಯ ಎನ್ನುವಷ್ಟರ ಮಟ್ಟಿಗೆ ಅವರನ್ನು ಪಕ್ಷದ ಮುಖಂಡ ಎಂಬುದಾಗಿ ಬಿಂಬಿಸಿದೆ.


ಅವರು 2013 ರಲ್ಲಿ ಶಾಸಕಾಂಗ ಪಕ್ಷದಲ್ಲಿ ಹೆಚ್ಚಿನ ಬೆಂಬಲವನ್ನು ಗಳಿಸಿದರು, ಹತ್ತು ವರ್ಷಗಳ ನಂತರವೂ ಪಕ್ಷದಲ್ಲಿ ತಮಗಿದ್ದ ಇಮೇಜ್ ಅನ್ನು ಹಾಗೆಯೇ ಕಾಯ್ದಿರಿಸಿಕೊಂಡಿದ್ದಾರೆ ಹಾಗೂ ಇಂದಿಗೂ ಪಕ್ಷದ ಮುಂದಿನ ನಾಯಕರ ಆಯ್ಕೆ ಬಂದಾಗ ಸಿದ್ಧರಾಮಯ್ಯ ಎಂಬ ಹೆಸರೇ ಮುನ್ನಲೆಗೆ ಬರುವಂತೆ ತಮ್ಮ ವರ್ಚಸ್ಸನ್ನು ಇರಿಸಿಕೊಂಡಿದ್ದಾರೆ.


ಎರಡನೇ ಅವಧಿಗೆ ತಮ್ಮ ಪಕ್ಷವನ್ನು ಗೆಲ್ಲಲು ವಿಫಲವಾದಾಗ ಸಿದ್ಧರಾಮಯ್ಯನವರಿಗೆ ಬಿದ್ದ ಹೊಡೆತ ಅಷ್ಟಿಷ್ಟಲ್ಲ ತಮ್ಮ ತವರು ಕ್ಷೇತ್ರದಲ್ಲೇ ಹೀನಾಯವಾಗಿ ಸೋತರು ಅಂತೆಯೇ ಪಕ್ಷವನ್ನು ಮುನ್ನಡೆಸುವ ವರ್ಚಸ್ಸನ್ನು ಕಳೆದುಕೊಂಡಿದ್ದಾರೆ ಎಂದೇ ಅವರ ವಿರೋಧಿಗಳು ಬಣ್ಣಿಸಿದರು.


ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಕೆಲಸ ಮಾಡಿದ ಅನುಭವವು ಅವರಿಗೆ ದೆಹಲಿ ನಾಯಕರ ವಿಶ್ವಾಸವನ್ನು ಗಳಿಸಲು ಸಹಾಯ ಮಾಡಿತು ಮತ್ತು ಅವರು CLP ನಾಯಕ ಮತ್ತು ಸಮನ್ವಯ ಸಮಿತಿಯ ಮುಖ್ಯಸ್ಥರ ಹುದ್ದೆಯನ್ನು ಪಡೆದರು.


ಸಿದ್ಧರಾಮಯ್ಯ ಹೈಕಮಾಂಡ್ ಮೆಚ್ಚುಗೆಗೆ ಪಾತ್ರರಾದದ್ದು ಹೇಗೆ?


ಮೊದಲ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ತಮ್ಮನ್ನು ಕಡೆಗಣಿಸಿದ ನಂತರ ಅಸಮಾಧಾನಗೊಂಡಿದ್ದ ಹಿರಿಯ ನಾಯಕರನ್ನು ಸಮಾಧಾನಪಡಿಸುವಲ್ಲಿ ಮತ್ತು ನಂತರ ಕ್ಷುಲ್ಲಕ ವಿಚಾರಕ್ಕೆ ಖ್ಯಾತ ಬೆಳಗಾವಿ ಸಹೋದರರ ಬಂಡಾಯವನ್ನು ಶಮನಗೊಳಿಸುವಲ್ಲಿ ಸಿದ್ದರಾಮಯ್ಯ ಅವರು ಪ್ರಮುಖ ಪಾತ್ರ ವಹಿಸಿದರು. ಇದೆಲ್ಲವೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ನ ವಿಶ್ವಾಸ ಗಳಿಸಲು ಸಹಾಯ ಮಾಡಿದೆ.


ವರ್ಷಗಳಲ್ಲೇ ಸಿದ್ಧರಾಮಯ್ಯ ಪ್ಯಾನ್-ಇಂಡಿಯಾ ಸ್ಥಾನಮಾನವನ್ನು ಗಳಿಸಿದ್ದಾರೆ ಅಂತೆಯೇ ಪಕ್ಷದ ಸರ್ವತೋಮುಖ ಅಭಿವೃದ್ಧಿ ಹಾಗೂ ಎಸ್‌ಸಿ ಮತ್ತು ಎಸ್‌ಟಿಗಳು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಂಬಂಧಿಸಿದ ಏನಾದರೂ ಚರ್ಚಿಸುವ ವಿಷಯವಿದ್ದರೆ ಯಾವುದಾದರೂ ಕ್ರಮ ತೆಗೆದುಕೊಳ್ಳುವ ವಿಷಯವಿದ್ದರೂ ರಾಹುಲ್ ಗಾಂಧಿ ಮೊದಲು ಸಿದ್ಧರಾಮಯ್ಯನವರಲ್ಲಿ ವಿಚಾರ ವಿಮರ್ಶೆ ಮಾಡುತ್ತಾರೆ ಹಾಗೂ ಅವರನ್ನು ಸಂಪರ್ಕಿಸಿಯೇ ನಂತರದ ಕ್ರಮಗಳನ್ನು ಕೈಗೊಳ್ಳುತ್ತಾರೆ.


kodi mutt shri predicted about the new congress government mrq
ಸಿದ್ದರಾಮಯ್ಯ, ಸಿಎಂ


ಇತ್ತೀಚೆಗೆ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾದ ಪ್ರತಿಷ್ಠಿತ ಬಳ್ಳಾರಿ ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲಲು ಅವರು ಸಕ್ರಿಯ ಪಾತ್ರ ವಹಿಸಿದ್ದಾರೆ.


ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಿದ್ಧರಾಮಯ್ಯ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ ಮತ್ತು ಬಿಜೆಪಿ ಅವರನ್ನು ದೊಡ್ಡ ಚಾಲೆಂಜ್ ಎಂದು ಪರಿಗಣಿಸುತ್ತದೆ.


ಹಳ್ಳಿಗಾಡಿನ ಯುವಕ ಕಾಂಗ್ರೆಸ್ ಪಕ್ಷದಲ್ಲಿ ಮಿಂಚಿದ್ದು ಹೇಗೆ?


ಮೈಸೂರು ಜಿಲ್ಲೆಯ ಗ್ರಾಮೀಣ ವಲಯದಲ್ಲಿ ಆಗಸ್ಟ್ 3, 1947 ರಂದು ಜನಿಸಿದ ಸಿದ್ಧರಾಮಯ್ಯ ಕೃಷಿ ಕುಟುಂಬದಿಂದ ಬಂದವರು. ಮೈಸೂರು ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವಿ ಗಳಿಸಿದರು ಹಾಗೂ ಎಲ್‌ಎಲ್‌ಬಿ ಪದವಿ ಪಡೆದ ಪ್ರತಿಭಾವಂತರಾಗಿದ್ದಾರೆ. ಸಿದ್ದರಾಮಯ್ಯನವರು ಕಾಲೇಜು ದಿನಗಳಲ್ಲಿ ತಮ್ಮ ವಾಕ್ಚಾತುರ್ಯ ಮತ್ತು ಚಾಣಾಕ್ಷತನದಿಂದಾಗಿ ಪ್ರಸಿದ್ಧರಾಗಿದ್ದರು.


ಮೈಸೂರಿನಲ್ಲಿ ವಕೀಲರೊಬ್ಬರ ಬಳಿ ಜೂನಿಯರ್ ಆಗಿ ಕೆಲಸ ಮಾಡುತ್ತಿದ್ದ ಸಿದ್ಧರಾಮಯ್ಯನವರನ್ನು ವಕೀಲ ನಂಜುಡ ಸ್ವಾಮಿಯವರು, ಮೈಸೂರು ತಾಲೂಕಿಗೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದರು.


ಸಿದ್ಧರಾಮಯ್ಯ ಬಾಧ್ಯತೆ ವಹಿಸಿ ಯಶಸ್ವಿಯಾದರು. ನಂತರ, ಅವರು ಭಾರತೀಯ ಲೋಕದಳದ ಟಿಕೆಟ್‌ನಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದರು ಮತ್ತು 1983 ರಲ್ಲಿ 7 ನೇ ಕರ್ನಾಟಕ ವಿಧಾನಸಭೆಗೆ ಪ್ರವೇಶಿಸಿದರು.


ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಸಿದ್ಧರಾಮಯ್ಯ ತಮ್ಮ ಗೆಲುವಿನಿಂದ ಎಲ್ಲರನ್ನು ಅಚ್ಚರಿಗೊಳಿಸಿದರು ಮತ್ತು ಕರ್ನಾಟಕದ ಮೈಸೂರು ಪ್ರಾಂತ್ಯದಲ್ಲಿ ಸಂಚಲನ ಮೂಡಿಸಿದರು.


ಜನತಾ ಪಕ್ಷವನ್ನು ಸೇರಿಕೊಂಡ ಸಿದ್ಧರಾಮಯ್ಯ ಕನ್ನಡವನ್ನು ಅಧಿಕೃತ ಭಾಷೆಯಾಗಿ ಅನುಷ್ಠಾನಗೊಳಿಸುವ ಮೇಲ್ವಿಚಾರಣೆಗಾಗಿ ರಚಿಸಲಾದ ಕನ್ನಡ ಕಣ್ಗಾವಲು ಸಮಿತಿಯ ಮೊದಲ ಅಧ್ಯಕ್ಷರಾದರು.


ಸಿದ್ದರಾಮಯ್ಯ ಅವರು 1985 ರಲ್ಲಿ ಮರು ಆಯ್ಕೆಯಾದರು ಮತ್ತು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಸಚಿವಾಲಯದ ಉಸ್ತುವಾರಿ ವಹಿಸಿಕೊಂಡರು.


ಅವರ ರಾಜಕೀಯ ಜೀವನವು 1990 ರ ದಶಕದಲ್ಲಿ ಅತ್ಯಂತ ಹೆಸರುವಾಸಿಯಾಗಿ ಮಾರ್ಪಟ್ಟಿತು ಮತ್ತು ಅವರು ಅನೇಕ ಚುನಾವಣಾ ಸೋಲುಗಳನ್ನು ನಿಭಾಯಿಸುವಾಗ ಆಗಾಗ್ಗೆ ಪಕ್ಷದಿಂದ ಪಕ್ಷಕ್ಕೆ ಬದಲಾಯಿಸಿಕೊಳ್ಳುತ್ತಿದ್ದರು.


karnataka next cm, karnataka cm race, karnataka new cm, siddaramaiah vs dk shivakumar, kannada news, karnataka news, ಕರ್ನಾಟಕ ಸಿಎಂ, ಕರ್ನಾಟಕ ನೂತನ ಸಿಎಂ, ಕರ್ನಾಟಕ ಹೊಸ ಸಿಎಂ, ಕರ್ನಾಟಕ ಮುಂದಿನ ಸಿಎಂ ಯಾರು, ಸಿದ್ದರಾಮಯ್ಯ ವರ್ಸಸ್ ಡಿಕೆ ಶಿವಕುಮಾರ್
ಸಿದ್ದರಾಮಯ್ಯ, ಸಿಎಂ


ರಾಜಕೀಯ ವೃತ್ತಿಜೀವನದ ಒಳನೋಟ


ಅವರು ಜನತಾ ದಳ ಸರ್ಕಾರದಲ್ಲಿ ಹಣಕಾಸು ಸಚಿವಾಲಯದ ನೇತೃತ್ವ ವಹಿಸಿದ್ದರು, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು ಮತ್ತು 1996 ರಲ್ಲಿ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡರು.


ಸಿದ್ದರಾಮಯ್ಯ ಅವರು ಎಚ್‌ಡಿ ದೇವೇಗೌಡರೊಂದಿಗೆ ಜನತಾ ದಳ (ಜಾತ್ಯತೀತ) ಸೇರಿದರು ಆದರೆ 1999 ರ ರಾಜ್ಯ ಚುನಾವಣೆಯಲ್ಲಿ ಸೋತರು. ಆದಾಗ್ಯೂ, 2004 ರಲ್ಲಿ ಕಾಂಗ್ರೆಸ್ ಮತ್ತು ಜೆಡಿ(ಎಸ್) ಸಮ್ಮಿಶ್ರ ಸರ್ಕಾರದ ಅಡಿಯಲ್ಲಿ ಅವರನ್ನು ಮತ್ತೆ ಉಪಮುಖ್ಯಮಂತ್ರಿಯಾಗಿ ನೇಮಿಸಲಾಯಿತು.




ದೇವೇಗೌಡರೊಂದಿಗಿನ ಭಿನ್ನಾಭಿಪ್ರಾಯಗಳ ನಂತರ, ಜೆಡಿ (ಎಸ್) ನಿಂದ ನಿರ್ಗಮನ ಪಡೆದುಕೊಂಡ ಸಿದ್ಧರಾಮಯ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.


2013ರಲ್ಲಿ ವರುಣಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸಿಎಂ ಆದರು. ಅವರು 2013 ರಿಂದ 2018 ರವರೆಗೆ ಪೂರ್ಣ ಅವಧಿಗೆ ಸೇವೆ ಸಲ್ಲಿಸಿದರು.


ಇದನ್ನೂ ಓದಿ:  Karnataka Election Results: ಬಿಎಸ್​​ಪಿ ಸಾಲಿಗೆ ಸೇರ್ತಿದೆಯಾ ಜೆಡಿಎಸ್? ದಳಪತಿಗಳ ಮುಂದಿನ ಭವಿಷ್ಯ ಏನು?


ನಾಯಕನಾಗಿ ಸೋತು ನಿರಾಕರಣೆಗೆ ಒಳಪಟ್ಟಿದ್ದ ಸಿದ್ಧರಾಮಯ್ಯ ಫೀನಿಕ್ಸ್ ಹಕ್ಕಿಯಂತೆ ಎದ್ದುನಿಂತಿದ್ದಾರೆ ಹಾಗೂ ತಮ್ಮ ಉಪಸ್ಥಿತಿಯಿಂದ ಪಕ್ಷಕ್ಕೆ ಒದಗುವ ಪ್ರಯೋಜನಗಳೇನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.


ತಾವು ಸೋಲುಗಳಿಂದ ಕಂಗೆಟ್ಟಿದ್ದರೂ ಹತಾಶೆಯ ಮಟ್ಟಕ್ಕೆ ಇಳಿದಿಲ್ಲ ಎಂಬುದನ್ನು ಪಕ್ಷದ ಹಿರಿ ಕಿರಿಯರಿಗೆ ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯನ್ನಾಗಿ ಆರಿಸಲು ಹಾಗೂ ಅಧಿಕಾರ ಸ್ವೀಕರಿಸಲು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತಿರುವವರ ಮಧ್ಯೆ ಸಿದ್ಧರಾಮಯ್ಯನವರೇ ಆಯ್ಕೆಯಾಗಿದ್ದಾರೆ.

top videos
    First published: