ಮಣ್ಣಿನ ಗಣೇಶ ಎಷ್ಟು ಸುರಕ್ಷಿತ​; ಜೇಡಿಮಣ್ಣು ನೀರಿನ ಮೂಲಕ್ಕೂ ತರುತ್ತದೆಯಾ ಕುತ್ತು

news18
Updated:September 13, 2018, 8:38 AM IST
ಮಣ್ಣಿನ ಗಣೇಶ ಎಷ್ಟು ಸುರಕ್ಷಿತ​; ಜೇಡಿಮಣ್ಣು ನೀರಿನ ಮೂಲಕ್ಕೂ ತರುತ್ತದೆಯಾ ಕುತ್ತು
  • Advertorial
  • Last Updated: September 13, 2018, 8:38 AM IST
  • Share this:
ಸೀಮಾ. ಆರ್​, ನ್ಯೂಸ್​ 18 ಕನ್ನಡ

ಪಿಒಪಿ ಗಣೇಶವನ್ನು ಕರೆಗೆ ಬಿಡುವುದರಿಂದ ರಾಸಾಯನಿಕ ಅಂಶಗಳು ನೀರಿಗೆ ಸೇರಿಕೊಳ್ಳುತ್ತದೆ. ಈ ಹಿನ್ನಲೆಯಲ್ಲಿ ಜೇಡಿನ ಮಣ್ಣಿನ ಗಣೇಶಕ್ಕೆ ಈ ಬಾರಿ ಡಿಮ್ಯಾಂಡ್​ ಹೆ್ಚ್ಚಿದೆ. ಆದರೆ ಈ ಜೇಡಿ ಮಣ್ಣಿನ ಗಣೇಶ ಕೂಡ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಪರಿಸರ ತಜ್ಞರಲ್ಲಿಯೂ ಕಾಡಿದೆ. ಕಾರಣ  ಕೆರೆಯ ಹೂಳು.

ಗಣೇಶನನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ಕೆರೆಯಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿ ನೀರಿನ ಶೇಖರಣೆಗೆ ತೊಂದರೆಯಾಗುತ್ತದೆ ಎಂಬುದು ಬಹುತೇಕರು ಮರೆತಿರುತ್ತಾರೆ.

ಮಣ್ಣಿನ ಗಣೇಶ ಪರಿಸರ ಸ್ನೇಹಿ.  ಮಣ್ಣು ಸುಲಭವಾಗಿ ನೀರಿನಲ್ಲಿ ಕರಗುತ್ಜತದೆ.  ಆದರೆ ಈ ಮಣ್ಣು ಕೆರೆಗಳಲ್ಲಿ ಹೂಳಿ ಪ್ರಮಾಣವನ್ನು ಹೆಚ್ಚು ಮಾಡುತ್ತದೆ ಎಂಬುದು ಕೂಡ ಸುಳ್ಳಲ್ಲ.

ಒಂದು ಚಿಕ್ಕ ಮಣ್ಣಿನ  ಗಣೇಶ ಮೂರ್ತಿಯನ್ನು ಮಾಡಲು ಆರರಿಂದ-ಏಳು ಕೆ.ಜಿ ಮಣ್ಣುಬೇಕಾಗುತ್ತದೆ.  ದೊಡ್ಡ ಮಟ್ಟದ ಗಣೇಶನಿಗೆ ಎಷ್ಟು ಮಣ್ಣು ಬೇಕಾಗುವುದು ಎಂದು ನೀವೇ ಲೆಕ್ಕ ಹಾಕಿಕೊಳ್ಳಿ ಎನ್ನುತ್ತಾರೆ ಗಣಪತಿ ಮೂರ್ತಿ ತಯಾರಕರಾದ ಗಿರೀಶ್​ ಗುಡಿಗಾರ್.

ಕೆರೆಯಲ್ಲಿ ಒಟ್ಟಿಗೆ ನೂರಾರು ಗಣೇಶನನ್ನು  ವಿಸರ್ಜಿಸುವುದರಿಂದ ಶೇಖರಣೆಯಾಗುವ ಹೂಳಿನ ಪ್ರಮಾಣ ಅಲ್ಲಿಗೆ ಲಕ್ಷ ಗಟ್ಟಲೆ. ಈ ಹೂಳನ್ನು  ತಕ್ಷಣಕ್ಕೆ ತೆಗೆದರೆ ಯಾವುದೇ ಅನಾಹುತವಿಲ್ಲ. ಆದರೆ ಇದನ್ನು ತೆಗೆಯದಿಂದಲ್ಲಿ ಕೆರೆಗಳಿಗೆ ಆಪತ್ತು ಖಂಡಿತ.

ಹೂಳಿರುವುದರಿಂದ ಕೆರೆ ತುಂಬುವ ನೀರಿನ ಪ್ರ ಮಾಣ ಕಡಿಮೆಯಾಗುತ್ತದೆ. ಅಲ್ಲದೇ ಇದು ಜಲಚರಗಳ ಆಹಾರ ಉತ್ಪಾದನೆಗೂ ಪರಿಣಾಮ ಬೀರುತ್ತದೆ. ಜೇಡಿ ಮಣ್ಣು ನೀರಿನ ಆಳದಲ್ಲಿ ನಿಲ್ಲುವುದರಿಂದ ಗಿಡಗಂಟೆಗಳ ಬೆಳೆಯುವಿಕೆಗೂ ತೊಂದರೆಯಾಗುತ್ತದೆ. ಅಲ್ಲದೆ ಮಳೆ ನೀರು ಕೊಚ್ಚಿ ಹೋಗುತ್ತದೆ.
Loading...

ಈ ಕುರಿತು ನ್ಯೂಸ್​ 18 ಜೊತೆ ಮಾತನಾಡಿದ ಪರಿಸರ ಬರಹಗಾರ ಶಿವನಾಂದ ಕಳವೆ ಅವರು, ಜೇಡಿ ಮಣ್ಣು ಹೂಳಿನ ರೂಪದಲ್ಲಿ ಕೆರೆಯ ತಳಭಾಗದಲ್ಲಿ ನಿಲ್ಲುವುದರಿಂದ ಹೊಸ ನೀರು ಶೇಖರಣೆಯಾಗುವುದಿಲ್ಲ. ಇದರ ಬದಲು ಕೃತಕ ಕರೆಗಳನ್ನು ನಿರ್ಮಾಣ ಮಾಡಿ ಅದರಲ್ಲಿ ಗಣೇಶ ವಿಸರ್ಜನೆ ಮಾಡಬೇಕು. ಮಣ್ಣಿನ ಗಣೇಶನಿಗೆ ಯಾವುದೇ ಬಣ್ಣ ಬಳಿಯದಂತೆ ಕೂಡ ಅರಿವು ಮೂಡಿಸಬೇಕು. ಈ ಬಣ್ಣಗಳು ಕೂಡ ಹಾನಿಕಾರಕ ಅಂಶಹೊಂದಿರುತ್ತವೆ. ಇದರಿಂದ ಯಾವ ಹಾನಿ ಎಂಬ ಬಗ್ಗೆ ಕೂಡ ತಿಳಿಸಬೇಕು ಎನ್ನುತ್ತಾರೆ

ಮಣ್ಣಿನಿಂದ ತಯಾರಾದ ಗಣೇಶ ಮರಳಿ ಮಣ್ಣಿಗೆ ಎನ್ನುವ  ಪರಿಕಲ್ಪನೆ ಕೂಡ ಈಗ ಮೂಡಿದೆ. ಗಣೇಶನನ್ನು ವಿಸರ್ಜಿಸಿದ ಮಣ್ಣಿನಿಂದ ಗಿಡಗಳನ್ನು ಬೆಳಸಿ ಎನ್ನಲಾಗುತ್ತಿದೆ, ಆದರೆ, ಈ ಜೇಡಿ ಮಣ್ಣಿನಲ್ಲಿ ಸುಣ್ಣದ ಅಂಶ ಹೆಚ್ಚಿರುವುದರಿಂದ ಗಿಡಗಳು ಸಮೃದ್ಧಿಯಾಗಿ ಬರುವುದಿಲ್ಲ. ಈ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಜೇಡಿ ಮಣ್ಣಿನ ಜೊತೆ ರಾಸಾಯನಿಕಯುಕ್ತ ಅಥವಾ ಎರೆ ಮಣ್ಣನ್ನು ಬಳಸಿದರೆ ಮಾತ್ರ ಉತ್ತಮ ಗಿಡ ಬೆಳೆಯಲು ಸಾಧ್ಯ. ಈ ಕುರಿತು ಜನರಿಗೆ ತಿಳಿಹೇಳುವ ಪ್ರಯತ್ನ ಮಾಡಬೇಕು ಎನ್ನುತ್ತಾರೆ.

ಈ ಬಾರಿ ರಾಜ್ಯದ ಹಲವೆಡೆ ಉತ್ತಮವಾಗಿ ಮಳೆಯಾಗಿ ನೀರಿನ ಸಂಗ್ರಹಣೆ ಕೂಡ ಆಗಿದೆ. ಈ ನೀರನ್ನು ಕಾಪಾಡುವ ಅವಶ್ಯಕತೆ ಇದ್ದು, ನಗರ, ಗ್ರಾಮಗಳ ಕಲ್ಯಾಣಿ, ಕೆರೆ-ಕಟ್ಟೆಗಳನ್ನು ಗಣೇಶ ವಿಸರ್ಜನೆ ಬಳಿಕ ಶುಚಿ ಮಾಡಬೇಕು. ಈ ಬಗ್ಗೆ ಕೂಡ ಜನರಲ್ಲಿ ಅರಿವು ಮೂಡಿಸಬೇಕು. ಈ ರೀತಿ ಪರ್ಯಾಯ ಮಾರ್ಗ ಹುಡುಕುವ  ಮೂಲಕ ಪರಿಸರ ಸ್ನೇಹಿ ಹಬ್ಬವನ್ನು ಆಚರಣೆ ಮಾಡಬೇಕು ಎನ್ನುತ್ತಾರೆ.

ರಾಸಾಯನಿಕ ಗಣೇಶನಿಗೆ ಹೋಲಿಸಿದರೆ ಜೇಡಿನ ಗಣೇಶ ಉತ್ತಮ. ಆದರೆ, ಇದು ಕೂಡ ನೀರಿನ ಮೂಲಕ್ಕೆ ಅಪಾಯವನ್ನು ಕಡಿಮೆ ಪ್ರಮಾಣದಲ್ಲಿ ತಂದೊಡ್ಡುತ್ತದೆ. ಆದರೆ ಅದನ್ನು ಪರ್ಯಾಯ ಕ್ರಮ ಬಳಸಿ ವಿಸರ್ಜನೆ ಮಾಡಬೇಕು. ಇಲ್ಲ ಗಣೇಶ ವಿಸರ್ಜನೆಯಾದ ವಾರದೊಳಗೆ ಹೂಳು ತೆಗೆಯುವ ಮೂಲಕ ಸರ್ಕಾರ, ಸಂಘ ಸಂಸ್ಥೆಗಳು ಕೆರೆ ಸಂರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ,
First published:September 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...