ನೀವು ಎಷ್ಟೇ ಟ್ವಿಸ್ಟ್ ಮಾಡಿ ಕೇಳಿದರೂ ಪ್ರಶ್ನೆಪತ್ರಿಕೆ ಲೀಕ್ ಮಾಡಲ್ಲ - 20 ವರ್ಷದಿಂದಲೂ ನಾನು ರ‍್ಯಾಂಕ್ ಸ್ಟೂಡೆಂಟ್ ; ಲಖನ್ ಜಾರಕಿಹೊಳಿ

ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ಕುಳಿತ ನಾಯಕರು ಕುಶಲೋಪರಿ ವಿಚಾರಿಸಿಕೊಂಡರು.  ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ಮತ್ತು ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಕೊಠಡಿಯಲ್ಲಿ ಅಕ್ಕಪಕ್ಕ ಕುಳಿತು ಮಾತುಕತೆ ನಡೆಸಿದರು.  ಒಂದೇ ಕೊಠಡಿಯಲ್ಲಿ ಇದ್ರು ಅಣ್ಣನಿಂದ ಲಖನ್ ಜಾರಕಿಹೊಳಿ‌ ಅಂತರ ಕಾಯ್ದುಕೊಂಡರು.

G Hareeshkumar | news18-kannada
Updated:November 19, 2019, 3:09 PM IST
ನೀವು ಎಷ್ಟೇ ಟ್ವಿಸ್ಟ್ ಮಾಡಿ ಕೇಳಿದರೂ ಪ್ರಶ್ನೆಪತ್ರಿಕೆ ಲೀಕ್ ಮಾಡಲ್ಲ - 20 ವರ್ಷದಿಂದಲೂ ನಾನು ರ‍್ಯಾಂಕ್ ಸ್ಟೂಡೆಂಟ್ ; ಲಖನ್ ಜಾರಕಿಹೊಳಿ
ಲಖನ್​ ಜಾರಕಿಹೊಳಿ
  • Share this:
ಬೆಳಗಾವಿ(ನ.19) : ನಾನು ಮತ್ತು ಸತೀಶ್ ಜಾರಕಿಹೊಳಿ‌ ಸ್ಟಾರ್ ಪ್ರಚಾರಕರಿದ್ದಂತೆ, ನೀವು ಎಷ್ಟೆ ಟ್ವಿಸ್ಟ್ ಮಾಡಿ ಪ್ರಶ್ನೆ ಕೇಳಿದರೂ ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ. ಕಳೆದ 20 ವರ್ಷದಿಂದ ನಾನು  ರ‍್ಯಾಂಕ್​​​ ಸ್ಟೂಡೇಂಟ್ ನಾನು ಪ್ರಶ್ನೆ ಪತ್ರಿಕೆ ಪೇಪರ್ ಲೀಕ್ ಮಾಡಲ್ಲ ಎಂದು ಗೋಕಾಕ್​​​​​​​​​​​​​​ ಕಾಂಗ್ರೆಸ್ ಅಭ್ಯರ್ಥಿ ಲಖನ್​​​​ ಜಾರಕಿಹೊಳಿ ಹೇಳಿದ್ದಾರೆ. 

ಈಗಾಗಲೇ ನಾಮಪತ್ರ ಪರಿಶೀಲನೆ ಮುಕ್ತಾಯವಾಗಿದ್ದು, ಪ್ರಚಾರ ಮುಂದುವರೆಸುತ್ತೇವೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರಚಾರಕ್ಕೆ ಬರಲಿದ್ದಾರೆ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆ ಶಿವಕುಮಾರ್ ಪ್ರಚಾರಕ್ಕೆ ಬರುವ ಕುರಿತು ಮಾಜಿ ಸಚಿವ ಸತೀಶ್ ಜಾರಕಿಹೊಳಿ‌ ಹೇಳುತ್ತಾರೆ ಎಂದರು.

ಕಳೆದ 20 ವರ್ಷದಿಂದ ರಮೇಶ್ ಜಾರಕಿಹೊಳಿ ಮಾತನ್ನು ಕೇಳುತ್ತಿದ್ದೇವೆ. ಆಗ ನಾವು ರಮೇಶ್ ಗೆ ಒಳ್ಳೆಯವರಾಗಿದ್ವಿ. ಅವರ ಅಳಿಯಂದಿರ ಭ್ರಷ್ಟಾಚಾರ ಹೊರ ತೆಗೆದಿದ್ದಕ್ಕೆ ಈಗ ನಾವು ಬೆನ್ನಿಗೆ ಚೂರಿ ಹಾಕಿದಂತಾಗುತ್ತದೆಯಾ? ಬೇರೆ ಕಡೆ ಜನ ಬೆನ್ನಿಗೆ ಚೂರಿ ಹಾಕಿದ್ರು ಅಂದರೆ ಎನಪ್ಪ ಇದು ಅಂತಾರೆ‌. ಆದರೆ ನಮ್ಮ ಗೋಕಾಕ ತಾಲೂಕಿನ ಜನರಿಗೆ ಏ ಇದಾ ಬಿಡಪ್ಪ ಅಂತಾರೆ ಎಂದು  ಪರೋಕ್ಷವಾಗಿ ರಮೇಶ್ ಜಾರಕಿಹೊಳಿ‌ಗೆ ಲಖನ್​​​ ಜಾರಕಿಹೊಳಿ ತಿರುಗೇಟು ನೀಡಿದರು.

ಇದನ್ನೂ ಓದಿ : ಜೆಡಿಎಸ್ ಮತ್ತು ಬಿಜೆಪಿ ನಾಯಕರು ಹಣದ ಮೂಲಕ ಚುನಾವಣೆ ಮಾಡಲು ಹೊರಟಿದ್ದಾರೆ ; ಸಿದ್ಧರಾಮಯ್ಯ

ರಮೇಶ್ ಜಾರಕಿಹೊಳಿ‌ ಮತ್ತು ಅವರ ಅಳಿಯಂದಿರು ಕ್ಷೇತ್ರದ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ರಮೇಶ್ ಜಾರಕಿಹೊಳಿ‌ ದಿನವೊಂದಕ್ಕೆ ಹೇಳಿಕೆ ಕೊಡ್ತಾರೆ. ನಮ್ಮ ಟಿಕೆಟ್ ತಪ್ಪಿಸಲು ನನ್ನ ಪ್ರೀತಿಯ ತಮ್ಮ ಅಂತಿದ್ದರು‌. ನನಗೆ ಬಿ ಪಾರಂ ಸಿಗುತ್ತಿದ್ದಂತೆ ಬೆನ್ನಿಗೆ ಚೂರಿ ಹಾಕಿದೆ‌ ಅಂತಿದ್ದಾರೆ. ಅಣ್ಣತಮ್ಮಂದಿರ ನಡುವೆ ಜಗಳ ಹಚ್ಚಿದ್ದು ರಮೇಶ್ ಜಾರಕಿಹೊಳಿ‌ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಹೇಳಿದರು.

ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ಕುಳಿತ ನಾಯಕರು ಕುಶಲೋಪರಿ ವಿಚಾರಿಸಿಕೊಂಡರು.  ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ಮತ್ತು ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಕೊಠಡಿಯಲ್ಲಿ ಅಕ್ಕಪಕ್ಕ ಕುಳಿತು ಮಾತುಕತೆ ನಡೆಸಿದರು.  ಒಂದೇ ಕೊಠಡಿಯಲ್ಲಿ ಇದ್ರು ಅಣ್ಣನಿಂದ ಲಖನ್ ಜಾರಕಿಹೊಳಿ‌ ಅಂತರ ಕಾಯ್ದುಕೊಂಡರು.

ಎಚ್ಡಿಕೆ ಆಗಮಿಸಿದಕ್ಕೆ ನಮಗೆ ಹೆಚ್ಚಿನ ಶಕ್ತಿ ಬಂದಿದೆ  - ಅಶೋಕ ಪೂಜಾರಿಶುಕ್ರವಾರದಿಂದ ಅಧಿಕೃತವಾಗಿ ಪ್ರಚಾರ ಮಾಡಲು ಆರಂಭಿಸುತ್ತೇನೆ. ಮಾಜಿ ಸಿಎಂ ಕುಮಾರಸ್ವಾಮಿ ಗೋಕಾಕ್ ಆಗಮಿಸಿದ್ದಕ್ಕೆ ಹೆಚ್ಚಿನ ಶಕ್ತಿ ಬಂದಿದೆ. ಎಲ್ಲಾ ಪಕ್ಷದ ಪ್ರಮುಖ ಮುಖಂಡರನ್ನ ಕರೆದು ಮಾತನಾಡಿದ್ದಾರೆ. ಈ ಚುನಾವಣೆ ಜವಾಬ್ದಾರಿ ಕುಮಾರಸ್ವಾಮಿ ಹೊತ್ತುಕೊಂಡಿದ್ದಾರೆ. ಬೇರೆ ಪಕ್ಷದ ನಾಯಕರ ಸಪೋರ್ಟ್ ಕುರಿತು ಅಧಿಕೃತವಾಗಿ ಹೇಳುವುದಿಲ್ಲ ಎಂದು ಅಶೋಕ ಪೂಜಾರಿ ಹೇಳಿದರು.

ಇದನ್ನೂ ಓದಿ : ಯಾರಿಗೆ ಬೆಂಬಲ?: ಇನ್ನೆರಡು ದಿನದಲ್ಲಿ ನಿರ್ಧಾರ ಪ್ರಕಟಿಸಲಿರುವ ಸಂಸದೆ ಸುಮಲತಾ

ನಾನು ಗೆಲ್ಲಬೇಕೆಂಬ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ನನ್ನ ಗೆಲುವಿಗೆ ಯಾರಾದರೂ ಕೈ ಜೋಡಿಸಿದರೇ ನಾನು ಸ್ವಾಗತ ಮಾಡುತ್ತೇನೆ. ಈ ಚುನಾವಣೆಯಲ್ಲಿ ಮತದಾರರೇ ಇದಕ್ಕೆ ಉತ್ತರ ಕೊಡುತ್ತಾರೆ. ಭ್ರಷ್ಟಾಚಾರ ನಿರ್ಮೂಲ ಆಗಬೇಕು ಸರ್ವಾಧಿಕಾರಿ ಧೋರಣೆ ಹೋಗಬೇಕೆಂದು ನಮ್ಮ ಹೋರಾಟ. ಗೋಕಾಕ್ ಮತದಾರರನ್ನ ಕೇಳಿದ್ರೆ ಇದಕ್ಕೆ ಸ್ಪಷ್ಟತೆ ಸಿಗಲಿದೆ. ಸತ್ಯ ಯಾವಾಗಲೂ ಸತ್ಯ, ವಾಸ್ತವ್ಯ ಯಾವಾಗಲೂ ವಾಸ್ತವ. ವ್ಯವಸ್ಥೆ ರೂವಾರಿ ಮಾಡಿದ್ದೆ ಸರಿ ಎಂಬ ವಾದವಿರುತ್ತೆ ಅವರ ವಿತ್ತಂಡವಾದ ಎಂದು ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ಗೆ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ತಿರುಗೇಟು ನೀಡಿದರು.

(ವರದಿ : ಚಂದ್ರಕಾಂತ್ ಸುಗಂಧಿ)

First published:November 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ