• Home
  • »
  • News
  • »
  • state
  • »
  • Panchamasali Reservation: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಎಷ್ಟು? ರಾಜ್ಯ ಸರ್ಕಾರದ ವಿರುದ್ಧ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಗುಡುಗು

Panchamasali Reservation: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಎಷ್ಟು? ರಾಜ್ಯ ಸರ್ಕಾರದ ವಿರುದ್ಧ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಗುಡುಗು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾವೂ ಹೋರಾಟ ಮಾಡಿದ್ದು ನಮಗೆ ಏನು ಕೊಟ್ಟಂತೆ ಆಯ್ತು‌‌. ಸಚಿವ ಸಂಪುಟದಲ್ಲಾದ ನಿರ್ಣಯ ಗೊಂದಲಕ್ಕಿಡು ಮಾಡಿದೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ.

  • Share this:

ವಿಜಯಪುರ: ರಾಜ್ಯದ ಪ್ರಬಲ ಸಮುದಾಯಗಳಲ್ಲಿ ಒಂದಾಗಿರುವ ಪಂಚಮಸಾಲಿ (Panchamasali Reservation) ಸಮುದಾಯ 2ಎ (2A Reservation) ಮೀಸಲಾತಿ ನೀಡುವಂತೆ ನಡೆಸುತ್ತಿದ್ದ ಹೋರಾಟಕ್ಕೆ ಮಣಿದಿದ್ದ ರಾಜ್ಯ ಬಿಜೆಪಿ ಸರ್ಕಾರ (Karnataka BJP Government) ಕಳೆದ ಎರಡು ದಿನಗಳ ಹಿಂದೆಯಷ್ಟೇ 2ಡಿ ಪ್ರವರ್ಗ ರಚನೆ ಮಾಡಿ, ಮೀಸಲಾತಿ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಈ ಕುರಿತು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji ), 2ಡಿಯಲ್ಲಿ ಪಂಚಮಸಾಲಿ ಸಮಾಜಕ್ಕೆ ಮೀಸಲು ಪ್ರಮಾಣ ಎಷ್ಟಿದೆ ಎಂದು ಪ್ರಶ್ನಿಸಿದ್ದಾರೆ.


ವಿಜಯಪುರ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮೀಜಿಗಳು, ಈವರೆಗೂ ಎಲ್ಲಾ ಲಿಂಗಾಯತರು ಮೀಸಲಾತಿ ಪಟ್ಟಿಯಲ್ಲಿ 3ಬಿ ಯಲ್ಲಿದ್ದೇವು. ಆದರೆ 3ಬಿನಲ್ಲಿ ಸಮುದಾಯಕ್ಕೆ ಯಾವುದೇ ಪ್ರಯೋಜನ ಸಿಕ್ಕಿಲ್ಲ ಎಂದು ಪಂಚಮಸಾಲಿ ಸಮಾಜ 2ಎಗೆ ಹೋರಾಟ ಮಾಡಿದೆ.


ಈಗ ಉಳಿದ ಲಿಂಗಾಯತರನ್ನು 2ಡಿಗೆ ಸೇರಿಸ್ತೀವಿ ಎಂದರೇ ದೊಡ್ಡ ಕ್ರೆಡಿಟ್ ಪಂಚಮಸಾಲಿಯವರಿಗೆ ಸಲ್ಲುತ್ತೆ. ನಾವು ಹೋರಾಟ, ಬೀದಿಗಳಿದಿದ್ದು, ಹಕ್ಕೊತ್ತಾಯ ಮಾಡಿದ್ದೇವು. ನಮ್ಮಿಂದ ಅವರಿಗೆ ನ್ಯಾಯ ಸಿಕ್ಕಿದೆ, ಆದರೆ ನಮಗೆ ಬೇಸರ ಇಲ್ಲ. ಆದರೆ ನಾವು ದುಡಿದವರು, ನಾವು ನಮ್ಮ ಪಾಲು ಎಷ್ಟು ಎಂದು ಪ್ರಶ್ನಿಸಿದ್ದಾರೆ.


ಪಂಚಮಸಾಲಿ ಮೀಸಲಾತಿ ಹೋರಾಟ


ಇದನ್ನೂ ಓದಿ:  Panchamasali Reservation: ರಾಜ್ಯದ ಪ್ರಬಲ ಸಮುದಾಯಕ್ಕೆ ಪ್ರತ್ಯೇಕ ಕ್ಯಾಟಗರಿ; ಪಂಚಮಸಾಲಿಗೆ 2D, ಒಕ್ಕಲಿಗರಿಗೆ 2C ಪ್ರವರ್ಗ ರಚಿಸಿದ ಸರ್ಕಾರ


ನಮಗೆ ಏನು ಕೊಟ್ಟಂತೆ ಆಯ್ತು‌‌?


ನಾವು 2ಎ ಕೇಳಿದ್ದವು, 2ಎನಲ್ಲಿರೋ ಉಳಿದ ಸಮಾಜಕ್ಕೆ ಅನ್ಯಾಯ ಆಗಬಾರದು ಎಂದು 2ಡಿ ಮಾಡಿದ್ದೀರಿ. ಆದರೆ ನಮ್ಮ ಮೀಸಲಾತಿ ಪ್ರಮಾಣ ಎಲ್ಲಿದೆ. ಪಂಚಮಸಾಲಿ ಎಂದು ಉಲ್ಲೇಖವೂ ತೋರಿಸಿಲ್ಲ. ನಾವೂ ಹೋರಾಟ ಮಾಡಿದ್ದೇವು, ಪಂಚಮಸಾಲಿಯವರ ಅಸ್ಮಿತೆಯಿದೆಯಲ್ಲ.


ನಾವೂ ಹೋರಾಟ ಮಾಡಿದ್ದು ನಮಗೆ ಏನು ಕೊಟ್ಟಂತೆ ಆಯ್ತು‌‌. ಸಚಿವ ಸಂಪುಟದಲ್ಲಾದ ನಿರ್ಣಯ ಗೊಂದಲಕ್ಕಿಡು ಮಾಡಿದೆ. ಮೀಸಲಾತಿ ಪ್ರಮಾಣ ಇನ್ನೂ ನಿಗದಿ ಮಾಡಿಲ್ಲ ಎಂದು ಕೆಲವರು ಹೇಳ್ತಿದ್ದಾರೆ. ಉಳಿದವರಿಗೆ ಮೀಸಲಾತಿ ಕೊಟ್ಟಿದ್ದಾರೆ.


ಪಂಚಮಸಾಲಿ ಸಮಾಜದ ಮೀಸಲಾತಿ ಪ್ರಮಾಣ ಎಷ್ಟು?


ನಾನು ಪಂಚಮಸಾಲಿ ಸಮುದಾಯದ ಅನ್ನ ಉಂಡಿದ್ದೇನೆ. ನನ್ನ ಜನಾಂಗಕ್ಕೆ ನ್ಯಾಯ ಕೊಡಿಸೋದು ನನ್ನ ಕರ್ತವ್ಯ. ಉಳಿದವರ ಬಗ್ಗೆ ನಾನು ಹೇಳೋಕೆ ಹೋಗಲ್ಲ. ಬಡ ಪಂಚಮಸಾಲಿಗಳ ಅನ್ನ ಉಂಡು ನಮ್ಮಂತಹ ಸ್ವಾಮೀಜಿಗಳು ಜನಾಂಗಕ್ಕೆ ಮೋಸ ಮಾಡಬಾರದು.


ಇದನ್ನೂ ಓದಿ: Jayamruthyunjaya Swamiji: ಪಂಚಮಸಾಲಿ ಮೀಸಲಾತಿಗೆ ಯಡಿಯೂರಪ್ಪ ಅಡ್ಡಿ; ಜಯಮೃತ್ಯುಂಜಯ ಸ್ವಾಮೀಜಿ ಆರೋಪ


ನನ್ನ ಜನಾಂಗದ ಜೊತೆಗೆ ಉಳಿದ ಜನಾಂಗಕ್ಕೆ ಕೊಡಿಸೋದು ನನ್ನ ಕರ್ತವ್ಯ. ನನ್ನ ಜನಾಂಗಕ್ಕೆ ಮೋಸ ಮಾಡಿ ಉಳಿದವರಿಗಷ್ಟೇ ನ್ಯಾಯ ಸಿಗಲಿ ಅನ್ನೋದು ನಮ್ಮ ಸಮಾಜಕ್ಕೆ ದ್ರೋಹ ಮಾಡಿದ್ದಂತೆ. ಎಲ್ಲರಿಗೂ ಸಿಗಬೇಕು ಅನ್ನೋದು ಸರ್ಕಾರದ ಬಯಕೆ. ಪಂಚಮಸಾಲಿ ಸಮಾಜದ ಮೀಸಲಾತಿ ಪ್ರಮಾಣ ಎಷ್ಟು ಅನ್ನೋದು ಸರ್ಕಾರ ಸ್ಪಷ್ಟಪಡಿಸಲಿ ಎಂದು ತಿಳಿಸಿದ್ದಾರೆ.


Yeddyurappa obstructs Panchmasali reservation; Statement by Jayamrityunjaya Swamiji
ಪಂಚಮಸಾಲಿ ಮೀಸಲಾತಿ ಪ್ರತಿಭಟನೆ


ಕಳೆದ ಎರಡು ದಿನಗಳ ಹಿಂದಷ್ಟೇ ಸಂಪುಟ ಸಭೆ ನಡೆಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದರು.


2 ಪ್ರಬಲ ಸಮುದಾಯಗಳಿಗೆ ಪ್ರತ್ಯೇಕ ಕ್ಯಾಟಗರಿಯನ್ನು ಸೃಷ್ಟಿ ಮಾಡುವ ಮೂಲಕ ಮೀಸಲಾತಿಯನ್ನು ಹೆಚ್ಚಳ ಮಾಡಿದ್ದರು. ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಡಿ ಕ್ಯಾಟಗಿರಿಯಲ್ಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ 2ಸಿ ಕ್ಯಾಟಗಿರನ್ನು ರಚನೆ ಮಾಡಲಾಗಿತ್ತು. ಆದರೆ ಮೀಸಲಾತಿ ಪ್ರಮಾಣವನ್ನು ಹಿಂದುಳಿದ ವರ್ಗಗಳ ಆಯೋಗ ಅಂತಿಮ ವರದಿ ಬಂದ ಬಳಿಕ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ್ದರು.

Published by:Sumanth SN
First published: