New Traffic Rules: ಹೊಸ ಸಂಚಾರಿ ನಿಯಮದಡಿ ಬೆಂಗಳೂರಲ್ಲಿ ದಾಖಲಾದ ಪ್ರಕರಣಗಳೆಷ್ಟು? ಸಂಗ್ರಹವಾದ ದಂಡ ಎಷ್ಟು? ಇಲ್ಲಿದೆ ಮಾಹಿತಿ

Latha CG | news18
Updated:September 9, 2019, 1:18 PM IST
New Traffic Rules: ಹೊಸ ಸಂಚಾರಿ ನಿಯಮದಡಿ ಬೆಂಗಳೂರಲ್ಲಿ ದಾಖಲಾದ ಪ್ರಕರಣಗಳೆಷ್ಟು? ಸಂಗ್ರಹವಾದ ದಂಡ ಎಷ್ಟು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
 • News18
 • Last Updated: September 9, 2019, 1:18 PM IST
 • Share this:
ಬೆಂಗಳೂರು(ಸೆ.06): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ಕಾಯ್ದೆ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ಸಂಚಾರಿ ನಿಯಮ ಪಾಲಿಸದಿದ್ದರೆ ಹತ್ತು ಪಟ್ಟು ಹೆಚ್ಚು ದಂಡ ಕಟ್ಟಬೇಕಾಗುತ್ತದೆ. ದೇಶಾದ್ಯಂತ ಈ ಹೊಸ ಟ್ರಾಫಿಕ್​ ರೂಲ್ಸ್​​ ಜಾರಿಯಾದಾಗಿಂದ ಹೆಚ್ಚೆಚ್ಚು ಪ್ರಕರಣಗಳು ದಾಖಲಾಗಿವೆ. ಅಂತೆಯೇ ದಂಡವೂ ಸಹ ಭಾರೀ ಮೊತ್ತದಲ್ಲಿ ಸಂಗ್ರಹವಾಗಿದೆ. 

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ,  ಕೇವಲ 5 ದಿನಗಳಲ್ಲಿ 1968 ಪ್ರಕರಣಗಳು ದಾಖಲಾಗಿವೆ. 5 ದಿನದಲ್ಲಿ ಸಂಗ್ರಹವಾದ ದಂಡ ಬರೋಬ್ಬರಿ 72,49,900 ರೂ.ಗಳು.  ಸೆ.4ನೇ ತಾರೀಖಿನಿಂದ ಇಂದು ಬೆಳಗ್ಗೆ 10 ಗಂಟೆಯವರೆಗಿನ ಅಂಕಿ ಅಂಶ ಇಲ್ಲಿದೆ.


 • ಮದ್ಯ ಸೇವಿಸಿ ಚಾಲನೆ- 72 ಕೇಸ್​ ದಾಖಲು

 • ಪರವಾನಗಿ ರಹಿತ ಚಾಲನೆ -50,000 ರೂ. ಸಂಗ್ರಹ

 • ವಿಮೆ ರಹಿತ ಚಾಲನೆ- 109 ಕೇಸ್, 1,44,800 ದಂಡ

 • ಮೊಬೈಲ್ ಬಳಕೆ - 695 ಕೇಸ್, 13,90,000 ದಂಡ
 • ಯೂಟರ್ನ್ ನಿಯಮ ಉಲ್ಲಂಘನೆ - 4400 ದಂಡ

 • ತ್ರಿಬಲ್ ರೈಡಿಂಗ್ - 7 ಕೇಸ್, 3500 ದಂಡ

 • ಹೆಲ್ಮೆಟ್ ರಹಿತ ಚಾಲನೆ - 19,68,000 ದಂಡ ಸಂಗ್ರಹ

 • ಹಿಂಬದಿ ಸವಾರರ ಹೆಲ್ಮೆಟ್ ರಹಿತ ಚಾಲನೆ - 2645 ಕೇಸ್ - 26,45,000 ದಂಡ

 • ಸೀಟ್ ಬೆಲ್ಟ್ ರಹಿತ ಚಾಲನೆ - 708 ಕೇಸ್ - 7,08,000 ದಂಡ

 • ನೋ ಪಾರ್ಕಿಂಗ್ - ನೋ ಎಂಟ್ರಿ - 27 ಕೇಸ್- 14,500 ದಂಡ

 • ದಾಖಲೆ ರಹಿತ ಪ್ರಯಾಣ - 66 ಕೇಸ್ - 64 ಸಾವಿರ ದಂಡ

 • ಸಿಗ್ನಲ್ ಜಂಪ್ - 10 ಕೇಸ್ - 5000 ದಂಡ

 • ಓವರ್ ಲೋಡ್ ಗೂಡ್ಸ್ ವಾಹನಗಳು - 18 ಕೇಸ್, 18 ಸಾವಿರ ದಂಡ

 • ಒನ್ ವೇ - 425 ಕೇಸ್ - 2,12 ,500 ದಂಡ


 ಹೊಸ ಮೋಟಾರು ಕಾಯ್ದೆಗೂ ಮುನ್ನ 

 • ಜನವರಿಯಿಂದ ಆಗಸ್ಟ್ ವರೆಗೂ 59,49,491 ಕೇಸ್ ದಾಖಲಾಗಿತ್ತು.

 • ಎಂಟು ತಿಂಗಳಿಗೆ ಬರೋಬ್ಬರಿ 468645200 ದಂಡ ವಸೂಲಿಯಾಗಿತ್ತು

 • ಪ್ರತಿ ತಿಂಗಳಿಗೆ ಏಳು ಲಕ್ಷಕ್ಕೂ ಹೆಚ್ಚು ಕೇಸ್ ದಾಖಲಾಗುತ್ತಿತ್ತು.


ಬ್ರಿಟಿಷ್ ಏರ್​ವೇಸ್​ಗೆ ಮುಷ್ಕರ ಬಿಸಿ: ಪೈಲಟ್​ಗಳಿಂದ 48 ಗಂಟೆ ಸ್ಟ್ರೈಕ್ ಪ್ರಾರಂಭ; 3 ಲಕ್ಷ ಪ್ರಯಾಣಿಕರಿಗೆ ಅನಿಶ್ಚಿತ ಸ್ಥಿತಿ

ಟ್ರಾಫಿಕ್ ಅಪರಾಧಗಳ ಗಣನೀಯ ಕುಸಿತ 

ಹೊಸ ಮೋಟಾರು ಕಾಯ್ದೆ ಜಾರಿಯಾದ ಬಳಿಕ ಪ್ರಾರಂಭದಲ್ಲಿ ಪ್ರಕರಣಗಳು  ಹೆಚ್ಚಾಗಿ ದಾಖಲಾದರೂ, ಕ್ರಮೇಣ ಇಳಿಕೆಯಾಗಿವೆ ಎನ್ನಲಾಗಿದೆ. ದಂಡ ಕಟ್ಟಲು ಹೆದರಿದ ವಾಹನ ಸವಾರರು ಕಟ್ಟುನಿಟ್ಟಾಗಿ ಟ್ರಾಫಿಕ್​ ನಿಯಮ ಪಾಲಿಸಲು ತೊಡಗಿದ್ದಾರೆ.

 • ಮೊದಲ ದಿನ 30 ಲಕ್ಷ ಸಂಗ್ರಹ ಆಗಿತ್ತು. 2918 ಪ್ರಕರಣಗಳು ದಾಖಲಾಗಿದ್ದವು.

 • 5 ದಿನಗಳಲ್ಲಿ 1968 ಪ್ರಕರಣಗಳು ದಾಖಲಾಗಿವೆ. ವಸೂಲಾದ ದಂಡ 72,49,900 ರೂಗಳು.

 • ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣದಲ್ಲೂ ಗಣನೀಯ ಇಳಿಕೆಯಾಗಿದ್ದು, 5 ದಿನಗಳಲ್ಲಿ ಕೇವಲ 72 ಪ್ರಕರಣಗಳು ದಾಖಲಾಗಿವೆ.

 • ಹಿಂಬದಿಯ ಸವಾರ ಹೆಲ್ಮೆಟ್ ಧರಿಸದೆ ಇರುವ ಪ್ರಕರಣ ಜಾಸ್ತಿ 2645, ಸಂಗ್ರಹವಾದ ದಂಡ 26,45000 ರೂಗಳು.

 • ವಾಹನ ಸವಾರ ಹೆಲ್ಮೆಟ್ ಧರಿಸದ ಪ್ರಕರಣಗಳು 1968, ಸಂಗ್ರಹವಾದ ದಂಡ 19,68,000 ರೂಗಳು.

 • ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ 695 ಪ್ರಕರಣಗಳು, 13,90,000 ರೂ.ಗಳು.


(ವರದಿ: ಗಂಗಾಧರ್​)

First published: September 9, 2019, 1:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading