• Home
  • »
  • News
  • »
  • state
  • »
  • Hijab Row: ಹಿಜಾಬ್ ನಿಷೇಧದ ಬಳಿಕ ಕಾಲೇಜ್ ತೊರೆದವರ ಸಂಖ್ಯೆ ಎಷ್ಟು? PUCL ವರದಿಯಲ್ಲಿ ಮಾಹಿತಿ

Hijab Row: ಹಿಜಾಬ್ ನಿಷೇಧದ ಬಳಿಕ ಕಾಲೇಜ್ ತೊರೆದವರ ಸಂಖ್ಯೆ ಎಷ್ಟು? PUCL ವರದಿಯಲ್ಲಿ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಂವಿಧಾನದ 15, 21, 19 (1) (ಎ) ವಿಧಿಗಳ ಅಡಿಯಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪಿಯುಸಿಎಲ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

  • Trending Desk
  • 2-MIN READ
  • Last Updated :
  • Share this:

ಬೆಂಗಳೂರು: ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ನ ಕರ್ನಾಟಕ ಘಟಕ ((PUCL- People's Union for Civil Liberties)​ ಸೋಮವಾರ ಕರ್ನಾಟಕದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ (Muslim Students) ಮೇಲೆ ಹಿಜಾಬ್ ನಿಷೇಧದ (Hijab Ban) ಪರಿಣಾಮದ ಕುರಿತು ವರದಿಯನ್ನು ಬಿಡುಗಡೆ ಮಾಡಿದೆ. 'ಶಿಕ್ಷಣದ ಬಾಗಿಲನ್ನು ಮುಚ್ಚುವುದು: ಕರ್ನಾಟಕದಲ್ಲಿ (Karnataka) ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳ ಹಕ್ಕುಗಳ ಉಲ್ಲಂಘನೆ’ ಎಂಬ ವರದಿಯು ನಿಷೇಧಕ್ಕೆ ಸಂಬಂಧಿಸಿದಂತೆ ಕಾಲೇಜು ಅಧಿಕಾರಿಗಳು, ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳ ಪಾತ್ರವನ್ನು ಸಹ ಪರಿಶೀಲಿಸುತ್ತದೆ. ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳು "ಶಿಕ್ಷಣದ ಹಕ್ಕನ್ನು ಪಡೆಯದಂತೆ ಸಕ್ರಿಯವಾಗಿ ತಡೆಯಲಾಗಿರುವುದು ಮಾತ್ರವಲ್ಲದೆ ತಪ್ಪು ಮಾಹಿತಿಯಿಂದ ದ್ವೇಷ, ಹಗೆತನದ ವಾತಾವರಣದವನ್ನು ಸೃಷ್ಟಿಸಲಾಗಿದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಐದು ಜಿಲ್ಲೆಗಳಲ್ಲಿ ಅಧ್ಯಯನ


ಹಾಸನ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ರಾಯಚೂರು - ಕರ್ನಾಟಕದ ಐದು ಜಿಲ್ಲೆಗಳಲ್ಲಿ ಪಿಯುಸಿಎಲ್ ಈ ಅಧ್ಯಯನವನ್ನು ನಡೆಸಿದೆ.


ಹಿಜಾಬ್ ಧರಿಸಿದ ವಿದ್ಯಾರ್ಥಿಗಳ ವಿರುದ್ಧ ಹಿಂದುತ್ವ ಸಂಘಟನೆಗಳು ಅಪಪ್ರಚಾರ ನಡೆಸುತ್ತಿದ್ದು, ಸರಕಾರ ಮತ್ತು ಪೊಲೀಸರ ನಿಷ್ಕ್ರಿಯತೆಯು ಇಂತಹ ಮೂಲಭೂತವಾದಿ ಶಕ್ತಿಗಳಿಗೆ ಸೂಚ್ಯವಾಗಿ ಪ್ರೋತ್ಸಾಹ ನೀಡುತ್ತಿದೆ ಎಂದು ಪಿಯುಸಿಎಲ್ ಆರೋಪಿಸಿದೆ.


ಕಾಲೇಜು  ತೊರೆದವರು ಎಷ್ಟು ಜನ?


ಆದಾಗ್ಯೂ, ಹಿಜಾಬ್ ವಿಷಯದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ದಂತಹ ನಿಷೇಧಿತ ಸಂಘಟನೆಗಳ ಉದ್ದೇಶಿತ ಪಾತ್ರದ ಬಗ್ಗೆ ಪಿಯುಸಿಎಲ್ ವರದಿಯು ಬೆಳಕು ಚೆಲ್ಲುವುದಿಲ್ಲ.


ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಪ್ರತಿಕ್ರಿಯೆಯಂತೆ ಒಟ್ಟು 1,010 ಹಿಜಾಬ್ ಧರಿಸಿದ ಹುಡುಗಿಯರು "ಹಿಜಾಬ್ ನಿಷೇಧ ಮತ್ತು ಇತರ ಕಾರಣಗಳಿಂದಾಗಿ" ಪಿಯು ಕಾಲೇಜುಗಳನ್ನು ತೊರೆದಿದ್ದಾರೆ ಎನ್ನುವ ಅಂಶವನ್ನು ಪಿಯುಸಿಎಲ್ ವರದಿ ಅಧ್ಯಯನದಲ್ಲಿ ಗಮನಿಸಲಾಗಿದೆ.


ರಾಜ್ಯ ಸರ್ಕಾರದ ವಿಫಲತೆ


ಸಂವಿಧಾನದ 41 ನೇ ವಿಧಿಯನ್ನು (ಶಿಕ್ಷಣದ ಹಕ್ಕನ್ನು ಭದ್ರಪಡಿಸುವ ಪರಿಣಾಮಕಾರಿ ನಿಬಂಧನೆ) ಎತ್ತಿಹಿಡಿಯುವ ತನ್ನ ಬಾಧ್ಯತೆಯನ್ನು ಪೂರೈಸಲು ಸರ್ಕಾರ ವಿಫಲವಾಗಿದೆ ಎಂದು ಹೇಳಿದೆ.


ಅಧ್ಯಾಪಕರು, ಕಾಲೇಜು ಆಡಳಿತ ಮಂಡಳಿ ಹಾಗೂ ಸಹಪಾಠಿಗಳ ಕೈಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗಳಲ್ಲಿ ಅವಮಾನ ಮತ್ತು ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ಪಿಯುಸಿಎಲ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.


ಹಿಜಾಬ್ ನಿಷೇಧದ ನಂತರ, ವಿದ್ಯಾರ್ಥಿಗಳು ತಮ್ಮ ಹಿಜಾಬ್ ಅನ್ನು ತೆಗೆದುಹಾಕಿ ಕಾಲೇಜು ಆವರಣಕ್ಕೆ ಪ್ರವೇಶಿಸುವಂತೆ ಒತ್ತಾಯಿಸಲಾಗಿದೆ.


ವರ್ಗಾವಣೆ ಅರ್ಜಿ


ಅಲ್ಲದೆ, ಅದೇ ಕಾಲೇಜುಗಳಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಿದ ವಿದ್ಯಾರ್ಥಿಗಳು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ ಎಂದು ಪಿಯುಸಿಎಲ್ ವರದಿ ಹೇಳಿದೆ.


ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸಿರುವ ಕಾರಣ ಕೆಲವರು ಅಮಾನತು ಮತ್ತು ಶಿಸ್ತಿನ ಕ್ರಮವನ್ನು ಎದುರಿಸಿದ್ದಾರೆ. ಶೈಕ್ಷಣಿಕ ವರ್ಷ ಮುಗಿಯುವ ಮೊದಲು ತಮ್ಮ ವರ್ಗಾವಣೆ ಪ್ರಮಾಣಪತ್ರಗಳನ್ನು ಕೈಬಿಡಲು ಅಥವಾ ಸಂಗ್ರಹಿಸಲು ಒತ್ತಾಯಿಸಿದ ಅನೇಕ ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ವರ್ಗಾವಣೆ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ.


ಇದನ್ನೂ ಓದಿ:  Bengaluru: ಪೋಷಕರು ದೂರು ನೀಡುವ ಮೊದಲೇ ಪೊಲೀಸರಿಂದ ಅಪಹರಣಕ್ಕೊಳಗಾಗಿದ್ದ ಯುವಕನ ರಕ್ಷಣೆ


ಉನ್ನತ ಶಿಕ್ಷಣದ ಕಡೆಗೆ ಪರ್ಯಾಯ ಮಾರ್ಗಗಳನ್ನು ಪ್ರವೇಶಿಸಲು ಸಾಧ್ಯವಾಗದ ಕಾರಣ ಹಲವಾರು ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಸಂಪೂರ್ಣವಾಗಿ ಕೈಬಿಡಬೇಕಾಯಿತು ಎಂದು ಈ ವರದಿ ಹೇಳುತ್ತದೆ.


ರಾಜ್ಯ ಸರ್ಕಾರಕ್ಕೆ ಒತ್ತಾಯ


ಸಂವಿಧಾನದ 15, 21, 19 (1) (ಎ) ವಿಧಿಗಳ ಅಡಿಯಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪಿಯುಸಿಎಲ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.


ಇದಲ್ಲದೆ ಸಂತ್ರಸ್ತ ವಿದ್ಯಾರ್ಥಿಗಳಿಗೆ ಪರಿಹಾರ ನೀಡುವಂತೆ ಅದು ಸರ್ಕಾರವನ್ನು ಕೇಳಿದ್ದು, ಭ್ರಾತೃತ್ವದ ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯಲು ಸಂಸದರಿಗೆ ನೀತಿ ಸಂಹಿತೆಯನ್ನು ಸಮಾಲೋಚನಾ ಪ್ರಕ್ರಿಯೆಯ ಮೂಲಕ ಪರಿಚಯಿಸಲು ಸ್ಪೀಕರ್ ಅವರನ್ನು ಒತ್ತಾಯಿಸಿದೆ.


ಒಟ್ಟಿನಲ್ಲಿ ಹಿಜಾಬ್ ವಿವಾದ ಉಂಟಾದ ಪರಿಣಾಮದಿಂದಾಗಿ ರಾಜ್ಯದಲ್ಲಿ ಯಾವ ರೀತಿ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಹಕ್ಕು ದಮನವಾಗಿದೆ ಎಂಬುದರ ಮೇಲೆಯೇ ಈ ವರದಿ ಹೆಚ್ಚಿನ ಒತ್ತು ನೀಡಿದೆ ಎಂಬುದನ್ನಷ್ಟೆ ಹೇಳಬಹುದಾಗಿದೆ.

Published by:Mahmadrafik K
First published: