ಶ್ರಾವಣ ಸಿನಿರಂಗಕ್ಕೆ ಒಳ್ಳೆ ಸೀಸನ್​: ಏನಾಗಲಿದೆ ಈ ಬಾರಿ ಚಂದನವನದಲ್ಲಿ?

news18
Updated:August 11, 2018, 11:19 AM IST
ಶ್ರಾವಣ ಸಿನಿರಂಗಕ್ಕೆ ಒಳ್ಳೆ ಸೀಸನ್​: ಏನಾಗಲಿದೆ ಈ ಬಾರಿ ಚಂದನವನದಲ್ಲಿ?
news18
Updated: August 11, 2018, 11:19 AM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

ಅಷಾಢ ಮುಗಿದ ತಕ್ಷಣ ಶ್ರಾವಣ ಬರುವಂತೆ, ಹಬ್ಬದ ಸಮಯದಲ್ಲಿ ಸಿನಿಮಾ ತೆರೆ ಕಾಣೋದೆ ಬಾಕ್ಸಾಫಿಸ್‍ಗೆ ಒಳ್ಳೆಯ ಸೀಸನ್​. ಆದರೆ ನಮ್ಮ ಚಂದನವನದ ಮಂದಿ ಮಾತ್ರ ಇಂತಹ ಒಳ್ಳೆಯ ಅವಕಾಶವನ್ನ ಬಳಸಿಕೊಂಡಿದ್ದೇ ಅಪರೂಪ.

ಹಬ್ಬ ಹರಿದಿನಗಳನ್ನ ಸ್ಯಾಂಡಲ್‍ವುಡ್ ಸರಿಯಾಗಿ ಬಳಸಿಕೊಂಡ ಉದಾಹರಣೆ ಕಡಿಮೆನೇ. ಹಬ್ಬದ ಸೀಸನ್‍ನಲ್ಲಿ ತುಂಬಾ ರಜೆಗಳಿರುತ್ತವೆ. ದೀರ್ಘ ವಾರಾಂತ್ಯದಲ್ಲಿ ಒಳ್ಳೆಯ ಕಲೆಕ್ಷನ್ ಆಗುತ್ತೆ ಅಂತ ಪರಭಾಷೆಯವರು ಹಬ್ಬಗಳಿಗೆ ಕಾದು, ದೊಡ್ಡ ಸಿನಿಮಾಗಳನ್ನ ಬಿಡುಗಡೆ ಮಾಡುತ್ತಾರೆ. ಅದರಲ್ಲೂ ಬಾಲಿವುಡ್‍ನಲ್ಲಿ ಒಬ್ಬೊಬ್ಬ ಖಾನ್ ಒಂದೊಂದು ಹಬ್ಬವನ್ನ ಬುಕ್ ಮಾಡಿಕೊಂಡು ಬಿಟ್ಟಿರುತ್ತಾರೆ. ಸಲ್ಲುಗೆ ರಂಜಾನ್​, ಶಾರುಖ್‍ಗೆ ದೀಪಾವಳಿ, ಅಮಿರ್​ಗೆ ಕ್ರಿಸ್​ಮಸ್​ ಪಕ್ಕಾ ಫಿಕ್ಸು. ಇನ್ನು ತಮಿಳು-ತೆಲುಗಿನಲ್ಲೂ ಇದೇ ರೀತಿ ಫಿಕ್ಸ್​ ಆಗಿರುತ್ತದೆ.

ಆದರೆ ಸ್ಯಾಂಡಲ್‍ವುಡ್ ಯಾವತ್ತೂ ಇದಕ್ಕೆ ಅಪವಾದ. ಈ ಬಾರಿಯೂ ಸಹ ಇದು ಮರುಕಳಿಸುತ್ತಿದೆ. ವರಮಹಾಲಕ್ಷ್ಮೀಯ ಕೃಪಾಕಟಾಕ್ಷ ಬಯಸಿದ್ದ `ದಿ ವಿಲನ್' ಲಕುಮಿಯ ಪೂಜೆಗೆ ಬರುತ್ತಿಲ್ಲ. ಅಲ್ಲಿಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಯಾವ ದೊಡ್ಡ ಸಿನಿಮಾನೂ ಕನ್ನಡಿಗರಿಗೆ ನೋಡಲು ಸಿಗೋದಿಲ್ಲ. ಹಬ್ಬದ ದಿನ ಹೋಳಿಗೆ ಊಟ ಮಾಡಿ, ಒಂದೊಳ್ಳೆ ಕನ್ನಡ ಸಿನಿಮಾ ನೋಡಬೇಕು ಅಂದ್ಕೊಂಡವರು ಬೇರೆ ಭಾಷೆಯ ಸಿನಿಮಾ ನೋಡೋದರಲ್ಲಿ ಅನುಮಾನವೇ ಇಲ್ಲ.

ಶ್ರಾವಣದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ.  ವರಮಹಾಲಕ್ಷ್ಮಿ ಹಬ್ಬದ ನಂತರ ಗೌರಿ-ಗಣಪ ಬರುತ್ತಾನೆ. ಆದರೆ ಗೌರಿ-ಗಣಪನ ಸ್ವಾಗತಕ್ಕೆ ಇನ್ನೂ ಕನ್ನಡದ ಯಾವ ದೊಡ್ಡ ಸಿನಿಮಾನೂ ಸಿದ್ಧವಾಗಿಲ್ಲವಾ? 'ಕೆ.ಜಿ.ಎಫ್', 'ನಟಸಾರ್ವಭೌಮ' ನಂತಹ ಯಾವ ಸಿನಿಮಾ ಸಹ, ಗಣಪನ ಹಬ್ಬಕ್ಕೂ ನೋಡಲು ಸಿಗುವುದಿಲ್ಲವಾ ಅಂತಿದೆ ಪ್ರೇಕ್ಷಕ ಬಳಗ.

ಇನ್ನು ಕನ್ನಡದ ಮತ್ತೊಂದು ಬಹು ನಿರೀಕ್ಷಿತ ಚಿತ್ರ 'ಕುರುಕ್ಷೇತ್ರ' ದಸರಾ ಹಬ್ಬಕ್ಕೆ ಬರುತ್ತೆ ಎಂದೇ ಎಲ್ಲರೂ ನಿರೀಕ್ಷೆ ಮಾಡುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 'ದುರ್ಯೋಧನ' ಆಯುಧ ಪೂಜೆ ಮಾಡೋದು ದಸರಾ ವೈಭವದಲ್ಲಿ ಬಾಕ್ಸಾಫಿಸ್ ಕೊಳ್ಳೆ ಹೊಡೆಯೋದು ಫಿಕ್ಸು ಅಂಲೇ ಹೇಳಲಾಗುತ್ತಿದೆ.

ದಸರಾ ಕರುನಾಡಿನ ನಾಡ ಹಬ್ಬ. ಈ ಸಂಧರ್ಭದಲ್ಲಿ ಸಾಲು ಸಾಲು ರಜೆಗಳಿರುತ್ತವೆ. ವಾರಾಂತ್ಯದ ಮಾತಿರಲಿ, ಇಡೀ ವಾರವೇ ವಾರಂತ್ಯದಂತೆ ಇರುತ್ತೆ. ಇಂತಹ ಸಮಯದಲ್ಲಿ ಸಹ ಯಾವ ದೊಡ್ಡ ಸಿನಿಮಾ ಬರಲಿಲ್ಲ ಅಂದರೆ ಅದು ಇಡೀ ಸಿನಿ ರಂಗಕ್ಕೆ ದೊಡ್ಡ ನಷ್ಟವೆಂದು ಹೇಳಬಹುದು. ಒಟ್ಟಾರೆ ಈ ಎಲ್ಲ ಉದಾಹರಣೆ ನೋಡೋದಾದರೆ? ಕನ್ನಡ ಸಿನಿಮಾ ಮಂದಿ ಹಬ್ಬಗಳನ್ನ ಬಳಸಿಕೊಳ್ಳೋದರಲ್ಲಿ ಹಿಂದೆ ಬೀಳುತ್ತಾರೆ ಅಂತಲೇ ಹೇಳಬಹುದು.
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...