• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Congress Promises: ಸರ್ಕಾರ ರಚನೆಯತ್ತ ಕಾಂಗ್ರೆಸ್ ದಾಪುಗಾಲು, ಮಹಿಳೆಯರಿಗೆ 2 ಸಾವಿರ,​ ಉಚಿತ ವಿದ್ಯುತ್, ಈಡೇರಬಹುದೇ ಗ್ಯಾರಂಟಿ?

Congress Promises: ಸರ್ಕಾರ ರಚನೆಯತ್ತ ಕಾಂಗ್ರೆಸ್ ದಾಪುಗಾಲು, ಮಹಿಳೆಯರಿಗೆ 2 ಸಾವಿರ,​ ಉಚಿತ ವಿದ್ಯುತ್, ಈಡೇರಬಹುದೇ ಗ್ಯಾರಂಟಿ?

ಕಾಂಗ್ರೆಸ್​ ಭರವಸೆಗಳು ನಿಜವಾಗುತ್ತಾ?

ಕಾಂಗ್ರೆಸ್​ ಭರವಸೆಗಳು ನಿಜವಾಗುತ್ತಾ?

Karnataka Election Results : ಕಾಂಗ್ರೆಸ್​ ಚುನಾವಣೆಗೂ ಮುನ್ನ ಹಲವು ಯೋಜನೆಗಳನ್ನು ಘೋಷಿಸಿದ್ದು, ನಾಡಿನ ಜನತೆಗೆ ಏನೆಲ್ಲಾ ಸೌಲಭ್ಯ ಸಿಗಬಹುದು ಎನ್ನುವುದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ​

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಚುನಾವಣಾಪೂರ್ವ ಸಮೀಕ್ಷೆಯಂತೆ ರಾಜ್ಯದಲ್ಲಿ ಕಾಂಗ್ರೆಸ್​ (Congress) ಭರ್ಜರಿ ಜಯ ಸಾಧಿಸಿದೆ. 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸ್ವತಂತ್ರ ಪಕ್ಷವಾಗಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಕರ್ನಾಟಕ (Karnataka Election 2023) ಜನರು ಕಾಂಗ್ರೆಸ್ ಸಂಪೂರ್ಣ ಬಹುಮತ ನೀಡಿದ್ದು, 2013ರಂತೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದೀಗ ಕಾಂಗ್ರೆಸ್ (Congress)​ ಚುನಾವಣೆಗೂ ಮುನ್ನ ಹಲವು ಯೋಜನೆಗಳನ್ನು ಘೋಷಿಸಿದ್ದು, ನಾಡಿನ ಜನತೆಗೆ ಏನೆಲ್ಲಾ ಸೌಲಭ್ಯ ಸಿಗಲಿದೆ ಎನ್ನುವುದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ​


 • ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆಯನ್ನು ಮತ್ತೆ ಜಾರಿಗೆ ತರಲಿದ್ದು, ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತವಾಗಿ ಸಿಗಲಿದೆ. ಮತ್ತೆ ಜಾರಿಗೆ ತರುವುದಾಗಿ ಹೇಳಿದೆ.

 • ಅಲ್ಪಸಂಖ್ಯಾತರಿಗೆ ಒಬಿಸಿ 2ಬಿ ವರ್ಗದಡಿ ಶೇ 4ರಷ್ಟು ಮೀಸಲಾತಿಯನ್ನು ಪುನಃ ಸಿಗಲಿದೆ

 • ಗೃಹಲಕ್ಷ್ಮಿ ಯೋಜನೆ ಮೂಲಕ ಕರ್ನಾಟಕದ ಪ್ರತಿಯೊಂದು ಮನೆಯ ಯಜಮಾನಿಗೆ 2000 ರೂಪಾಯಿ ಸಹಾಯಧನ ಸಿಗಲಿದೆ.

 • ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಗೃಹಜ್ಯೋತಿ ಯೋಜನೆ

 • ಅಂಗನವಾಡಿ ಕಾರ್ಯಕರ್ತೆಯರ ವೇತನ 11,500 ರೂ ದಿಂದ 15,000 ರೂಗೆ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

 • ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ 10 ಸಾವಿರ ರೂಪಾಯಿಗೆ ಏರಿಕೆ ಮತ್ತು ವಿಶ್ರಾಂತಿ ವೇತನ 2 ಲಕ್ಷ ರೂ ನೀಡುವುದು.

 • ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ 8,000 ರೂಗೆ ಹೆಚ್ಚಳ ಮಾಡುವುದಾಗಿ ಕಾಂಗ್ರೆಸ್​ ಭರವಸೆ ನೀಡಿದ್ದಾರೆ. ಬಿಸಿಯೂಟದ ಅಡುಗೆಯವರಿಗೆ ಮಾಸಿಕ ಗೌರವಧನ 6,000 ರೂಗೆ ಏರಿಕೆ.

 • ಪೊಲೀಸ್ ಇಲಾಖೆಯಲ್ಲಿ ಶೇ 33ರಷ್ಟು ಮಹಿಳೆಯರ ನೇಮಕಾತಿ ಮಾಡುವುದಾಗಿ ಕಾಂಗ್ರೆಸ್​ ಪಕ್ಷ ಘೋಷಿಸಿದೆ. ಅಲ್ಲದೆ ಶೇ 1ರಷ್ಟು ತೃತೀಯ ಲಿಂಗಿಗಳಿಗೆ ಅವಕಾಶ ಮಾಡಿಕೊಡಲಿದೆ. ಜೊತೆಗೆ ರಾತ್ರಿ ಪಾಳಿ ಸಿಬ್ಬಂದಿಗೆ 5 ಸಾವಿರ ರೂ ವಿಶೇಷ ಮಾಸಿಕ ಭತ್ಯೆ ಮತ್ತು ಎಲ್ಲ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ಹೆಚ್ಚುವರಿ ವೇತನ ನೀಡುವುದಾಗಿ ಕೈ ಪಕ್ಷ ಭರವಸೆ ನೀಡಿದೆ.

 • ಹಾಲಿನ ಸಬ್ಸಿಡಿ ಪ್ರತಿ ಲೀಟರ್‌ಗೆ 5 ರಿಂದ 7 ರೂಗೆ ಹೆಚ್ಚಳ. ಜಾನುವಾರು ಖರೀದಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂವರೆಗೆ ಸಾಲ

 • ಮನೆಗಳಲ್ಲಿ ಬಳಸುವ ಸೌರಶಕ್ತಿ ಪರಿಕರಗಳಿಗೆ ರೂ 3 ಲಕ್ಷದವರೆಗೆ ಶೇ 25ರಷ್ಟು ಸಬ್ಸಿಡಿ. ಬೃಹತ್ ಸೋಲಾರ್ ಪಾರ್ಕ್‌ಗಳ ನಿರ್ಮಾಣಕ್ಕೆ ಉತ್ತೇಜನ.

 • ರಾಜ್ಯದಲ್ಲಿ ಎಲ್ಲ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ಸೌಲಭ್ಯ


 • ಇತರೆ ಯೋಜನೆಗಳು*ಪ್ರತಿ ಕ್ಷೇತ್ರದಲ್ಲಿ ಶಿತಲೀಕರಣ ಘಟಕ ಸ್ಥಾಪನೆ
  *ಬಿಜೆಪಿ ತಂದಿರುವ ಕೃಷಿ ಕಾಯ್ದೆಗಳು ರದ್ಧು
  *ಎಪಿಎಂಸಿ ಕಾಯ್ದೆ ರದ್ಧು ಪಡಿಸುತ್ತೇವೆ
  *ರೈತರ ಮೇಲಿನ ಎಲ್ಲಾ ಕೇಸ್ ವಾಪಸ್
  *ಪ್ರತಿ ಜಿಲ್ಲೆಗೆ ಒಂದು ರೈತ ಮಾಲ್ ಆರಂಭ
  *ಸಾವಯವ ಕೃಷಿ ಯೋಜನೆಗೆ 2500ಕೋಟಿ ಹೂಡಿಕೆ


  *ಪತ್ರಕರ್ತರ ಕ್ಷೇಮಾಭಿವೃದ್ಧಿ ಸ್ಥಾಪನೆ- 500 ಕೋಟಿ
  *ಸ್ವಸಹಾಯ ಗುಂಪುಗಳಿಗೆ 3 ಲಕ್ಷ ಬಡ್ಡಿರಹಿತ ಸಾಲ
  *ಪ್ರತ್ಯೇಕ ಕೃಷಿ ಕೋಶ ಕೇಂದ್ರ ಸ್ಥಾಪನೆ
  *ಗದಗದಲ್ಲಿ ಹತ್ತಿ ರಫ್ತು ಸಂಸ್ಕರಣ ಕೇಂದ್ರ
  *ಸಿಂಧನೂರಿನಲ್ಲಿ ಅಕ್ಕಿ ಸಂಸ್ಕರಣ ಕೇಂದ್ರ
  *ಬೆಳಗಾವಿ, ಬಾಗಲಕೋಟೆ, ಮಂಡ್ಯದಲ್ಲಿ ಎಥೆನಾಲ್ ಘಟಕ
  *ಕೊಡಗು,ಚಿಕ್ಕಮಗಳೂರಿನಲ್ಲಿ ಕಾಳು ಮೆಣಸು ಸಂಸ್ಕರಣೆ
  *ದೊಡ್ಡಬಳ್ಳಾಪುರದಲ್ಲಿ ಹೂ ಸಂಶೋಧನಾ ಕೇಂದ್ರ
  *ಜೇನು ಸಾಕಾಣಿಕೆಗೆ 50 ಕೋಟಿ


top videos
  First published: