• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Polls 2023: ಮಮತಾ ಬ್ಯಾನರ್ಜಿ ರಾಜಕೀಯ ಲೆಕ್ಕಾಚಾರದ ಮೇಲೆ ಕರ್ನಾಟಕ ಫಲಿತಾಂಶ ಪರಿಣಾಮ ಬೀರುತ್ತಾ?

Karnataka Polls 2023: ಮಮತಾ ಬ್ಯಾನರ್ಜಿ ರಾಜಕೀಯ ಲೆಕ್ಕಾಚಾರದ ಮೇಲೆ ಕರ್ನಾಟಕ ಫಲಿತಾಂಶ ಪರಿಣಾಮ ಬೀರುತ್ತಾ?

ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ

ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ

Mamata Banerjee: 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಮಾನ ಮನಸ್ಕ ಪಕ್ಷಗಳ ವಿರೋಧ ಪಕ್ಷದ ಮೈತ್ರಿಯನ್ನು ಮುನ್ನಡೆಸುವುದಾಗಿ ಕಾಂಗ್ರೆಸ್ ಸಮರ್ಥಿಸಿಕೊಂಡಿದೆ ಅದಾಗ್ಯೂ ಟಿಎಂಸಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಸಾಧಿಸುವುದಿಲ್ಲ ಎಂದು ಹೇಳಿತ್ತು.

 • Trending Desk
 • 2-MIN READ
 • Last Updated :
 • Karnataka, India
 • Share this:

ಬೆಂಗಳೂರು: 2023 ರ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election 2023) ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಗೆಲುವು ರಾಜಕೀಯದಲ್ಲಿ ಅನೇಕ ಬೆಳವಣಿಗೆಗಳನ್ನು ಉಂಟುಮಾಡಲಿದ್ದು ತೃಣಮೂಲ ಕಾಂಗ್ರೆಸ್ (ಟಿಎಂಸಿ-TMC) ಅಧ್ಯಕ್ಷೆ ಮಮತಾ ಬ್ಯಾನರ್ಜಿ (CM Mamata Banerjee) ಅವರು 2024 ರ ಲೋಕಸಭೆ ಚುನಾವಣೆಯಲ್ಲಿ (Loksabha Election) ಹಳೆಯ ಪಕ್ಷ ಹಾಗೂ ಎರಡರಂಗಗಳನ್ನು ಹೇಗೆ ಎದುರಿಸಲಿದ್ದಾರೆ ಎಂಬ ಚಿಂತನೆಗಳನ್ನು ಹುಟ್ಟುಹಾಕಿದೆ.


ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವಿರುದ್ಧ ಒಟ್ಟಾಗಿ ಸಮರ ಸಾರಲು ಪ್ರಾದೇಶಿಕ ಪಕ್ಷಗಳ ನಾಯಕರು ಸಾಮಾನ್ಯ ವೇದಿಕೆಯನ್ನು ಹಂಚಿಕೊಳ್ಳಬೇಕು ಎಂಬ ತೀರ್ಮಾನವನ್ನು ಕೈಗೊಂಡಿದ್ದರೂ ಕಾಂಗ್ರೆಸ್ ಹಾಗೂ ಎಡಪಕ್ಷಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.


ದೀದಿ ವಿರುದ್ಧ ಕಾಂಗ್ರೆಸ್ ಹೇಳಿಕೆ


ಏಕೆಂದರೆ ಬಿಜೆಪಿಗೆ ಸಹಾಯ ಮಾಡಲು ಗೋವಾ, ಮೇಘಾಲಯ ಮತ್ತು ತ್ರಿಪುರಾದಲ್ಲಿ ಟಿಎಂಸಿ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಿದೆ ಎಂದು ಕಾಂಗ್ರೆಸ್ ಮಮತಾ ಬ್ಯಾನರ್ಜಿಯನ್ನು ಗುರಿಯಾಗಿಸಿ ಹೇಳಿಕೆ ನೀಡಿದೆ.


ಡಿಕೆ ಶಿವಕುಮಾರ್ / ಸಿದ್ದರಾಮಯ್ಯ


ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಸಾಗರ್ದಿಘಿ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್-ಎಡ ಮೈತ್ರಿಕೂಟವು ಗೆಲುವು ಸಾಧಿಸಿದಾಗ ಮೊದಲೇ ಸೃಷ್ಟಿಯಾಗಿದ್ದ ಟೀಕೆಗಳು ಇನ್ನಷ್ಟು ಪ್ರಬಲವಾಯಿತು ಹಾಗೂ ಅಲ್ಲಿ ಮುಸ್ಲಿಂ ಜನಸಂಖ್ಯೆಯು 66.28% ಪ್ರಾಬಲ್ಯವನ್ನು ಹೊಂದಿದ್ದು ಇದು ರಾಜ್ಯದಲ್ಲೇ ಅತ್ಯಧಿಕ ಎಂದೆನ್ನಿಸಿದೆ.


ಬಿಜೆಪಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಒಟ್ಟಾಗಿ ಮೈತ್ರಿ ರಚನೆ


ಎಡ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ 47.35% ಮತಗಳನ್ನು ಗಳಿಸಿದರೆ, ಟಿಎಂಸಿ ಪಾಲು 34.94% ಕ್ಕೆ ಇಳಿದಿದೆ. ಬಿಜೆಪಿ ಕೇವಲ 13.94% ಗಳಿಸಿ ಮೂರನೇ ಸ್ಥಾನದಲ್ಲಿದೆ.


2021 ರ ಚುನಾವಣೆಯಲ್ಲಿ ಆಡಳಿತ ಪಕ್ಷವು 67% ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ್ದ ಭಂಗಾರ್ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರಿಂದ ಟಿಎಂಸಿ  ಮುಖಂಡರು ಅಲ್ಪಸಂಖ್ಯಾತ ಮತಬ್ಯಾಂಕ್‌ನಲ್ಲಿ ಭಾರೀ ಹಿನ್ನಡೆಯಾಗಿ ಕಂಡಿದ್ದರು.


mamata banerjee politics, TMC loksabha election strategy, mamata banerjee election strategy, karnataka election result effect, karnataka election result effect effect tmc, kannada news, karnataka news, ಮಮತಾ ಬ್ಯಾನರ್ಜಿ ರಾಜಕೀಯ, ಟಿಎಂಸಿ ಲೋಕಸಭಾ ಎಲೆಕ್ಷನ್
ಮಮತಾ ಬ್ಯಾನರ್ಜಿ, ಸಿಎಂ


ಟಿಎಂಸಿಯನ್ನು ಸೋಲಿಸಲು ಮೂರು ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳು ಒಟ್ಟಾಗಿ ಮೈತ್ರಿ ರಚಿಸಿವೆ ಎಂದು ದೂರಿದ್ದರು.


2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಮಾನ ಮನಸ್ಕ ಪಕ್ಷಗಳ ವಿರೋಧ ಪಕ್ಷದ ಮೈತ್ರಿಯನ್ನು ಮುನ್ನಡೆಸುವುದಾಗಿ ಕಾಂಗ್ರೆಸ್ ಸಮರ್ಥಿಸಿಕೊಂಡಿದೆ ಅದಾಗ್ಯೂ ಟಿಎಂಸಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಸಾಧಿಸುವುದಿಲ್ಲ ಎಂದು ಹೇಳಿತ್ತು.


ಬಿಜೆಪಿ ಸೋಲು ಖಚಿತವೆಂದು ಭವಿಷ್ಯ ನುಡಿದಿದ್ದ ಮಮತಾ ಬ್ಯಾನರ್ಜಿ


ಕರ್ನಾಟಕ ಚುನಾವಣಾ ಫಲಿತಾಂಶಗಳು ಪ್ರಕಟವಾದಾಗ, 2024 ರಲ್ಲಿ ಬಿಜೆಪಿಯು ರಾಷ್ಟ್ರದಾದ್ಯಂತ 100 ಸ್ಥಾನಗಳನ್ನು ಸಹ ಪಡೆಯುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದರು.


Mamata Banerjee has often called for Opposition unity after karnataka election
ಮಮತಾ ಬ್ಯಾನರ್ಜಿ, ಸಿಎಂ


ಮೊದಲ ಬಾರಿಗೆ, ರಾಷ್ಟ್ರೀಯ ಪಕ್ಷಗಳು ಸಹ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಒಂದಾದ ಮೇಲೊಂದು ಸ್ಪರ್ಧೆಯನ್ನು ಹೊಂದಿರಬೇಕು ಎಂದು ತಿಳಿಸಿದ್ದರು.


ಮತ್ತೊಂದೆಡೆ, ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ, ಬಿಜೆಪಿ ವಿರುದ್ಧದ ಹೋರಾಟದಲ್ಲಿ ಟಿಎಂಸಿ ಭಾಗಿಯಾಗಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ. ರಾಹುಲ್ ಗಾಂಧಿ ಹಾಗೂ ಭಾರತ್ ಜೋಡೋ ಯಾತ್ರೆ ಅಷ್ಟೊಂದು ಪರಿಣಾಮಕಾರಿಯಲ್ಲ ಎಂದು ದೀದಿ ಭಾವಿಸಿದ್ದರು. ಆದರೆ ಬಿಜೆಪಿ ವಿರುದ್ಧದ ಹೋರಾಟವನ್ನು ಮುನ್ನಡೆಸಬಲ್ಲ ಏಕೈಕ ಪಕ್ಷ ಕಾಂಗ್ರೆಸ್ ಎಂದು ಚೌಧರಿ ತಿಳಿಸಿದ್ದರು.
ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಪ್ರಬಲ ಮೈತ್ರಿ ಸಾಧ್ಯತೆ


ರಾಜ್ಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಪ್ರದೀಪ್ ಭಟ್ಟಾಚಾರ್ಯ ಅವರು ಮುಂಬರುವ ಬಂಗಾಳ ಪಂಚಾಯತ್ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಪ್ರಬಲ ಮೈತ್ರಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಬೆಂಬಲಿಸಿದೆ.


ಇದನ್ನೂ ಓದಿ:  Mandya Politics: ಸೋಲಿನ ಬಳಿಕ ಆಪ್ತನ ಮೂಲಕ BJP ತೊರೆಯುವ ಸುಳಿವು ನೀಡಿದ್ರಾ ಮಾಜಿ ಸಚಿವ?


ಟಿಎಂಸಿ ರಾಜ್ಯ ಉಪಾಧ್ಯಕ್ಷ ಜಯಪ್ರಕಾಶ್ ಮಜುಂದಾರ್ ಪಕ್ಷವು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ನೊಂದಿಗೆ ಬಿಜೆಪಿ ವಿರೋಧಿ ಮೈತ್ರಿಯ ಭಾಗವಾಗಲಿದೆಯೇ ಎಂಬ ಹೇಳಿಕೆಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

First published: