Summerನಲ್ಲಿ ವಿದ್ಯುತ್​ ಅಭಾವ ಎದುರಿಸಲು ಹೇಗೆ ಸಿದ್ದವಾಗಿದೆ ರಾಜ್ಯ?

ದೇಶಾದ್ಯಂತ ಕಲ್ಲಿದ್ದಲಿನ ಕೊರತೆಯು ಕರ್ನಾಟಕದ ವಿದ್ಯುತ್ ಸನ್ನಿವೇಶದ ಮೇಲೆ ಪರಿಣಾಮ ಬೀರಲು ವಿಫಲವಾಗಿದೆ. ಹಿಂದಿನ ಪರಿಣಾಮಕಾರಿ ಯೋಜನೆಯಿಂದಾಗಿ, ಸಂಭವನೀಯ ಬಳಕೆಯ ಮಾದರಿಯನ್ನು ಗಮನದಲ್ಲಿಟ್ಟುಕೊಂಡು, ಇಂದು ಕರ್ನಾಟಕವು ಹೆಚ್ಚುವರಿ ಶಕ್ತಿಯನ್ನು ಹೊಂದಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೇಸಿಗೆ ಬಂತೆಂದರೆ ಸಾಕು ಬಹುತೇಕ ಭಾರತದ ಎಲ್ಲ ರಾಜ್ಯಗಳಿಗೂ ಕಾಡುವ ಒಂದು ದೊಡ್ಡ ಸಮಸ್ಯೆ ಎಂದರೆ ವಿದ್ಯುತ್ ಶಕ್ತಿಯ (Power Supply) ಅಭಾವ. ಸಾಮಾನ್ಯವಾಗಿ ಭಾರತವು ತಾನು ಬಳಸುವ ವಿದ್ಯುತ್ ಶಕ್ತಿಯ ಉತ್ಪಾದನೆಗಾಗಿ ಹಲವು ಮೂಲಗಳ ಮೇಲೆ ಅವಲಂಬಿತವಾಗಿದ್ದು ಅದರಲ್ಲಿ ಕಲ್ಲಿದ್ದಿಲಿನಿಂದ ಉತ್ಪತ್ತಿ ಮಾಡಲಾಗುವ ವಿದ್ಯುತ್ ಶಕ್ತಿ ಉತ್ಪಾದನೆಯೂ ಸಹ ಒಂದಾಗಿದೆ.ಬೇಸಿಗೆಯಲ್ಲಿ ಜಲ ವಿದ್ಯುತ್ (Hydro Power) ಘಟಕಗಳು ಕಾರ್ಯನಿರ್ವಹಿಸಲು ಕಠಿಣ ಪರಿಸ್ಥಿತಿ ಇರುವುದರಿಂದ ಬಹುತೇಕವಾಗಿ ಕಲ್ಲಿದ್ದಲನ್ನು (Coil) ಬಳಸಿ ಶಾಖೋತ್ಪನ್ನ ಕೇಂದ್ರಗಳಿಂದ ತಯಾರಿಸಲಾಗುವ ವಿದ್ಯುತ್ ಶಕ್ತಿಯ ಮೇಲೆಯೇ ಹೆಚ್ಚು ಅವಲಂಬಿತವಾಗಬೇಕಾದ ಪರಿಸ್ಥಿತಿ ಇರುತ್ತದೆ. ಇದನ್ನು ಮನಗಂಡಿರುವ ಕರ್ನಾಟಕವು ಈ ನಿಟ್ಟಿನಲ್ಲಿ ವಿವಿಧ ಇಂಧನ ಸಂಪನ್ಮೂಲಗಳ ವೈವಿಧ್ಯತೆಯನ್ನು ಕಾಯ್ದುಕೊಂಡು, ಇಲ್ಲಿಯವರೆಗೆ, ಕಲ್ಲಿದ್ದಲಿನ ತೀವ್ರ ಕೊರತೆಯಿಂದಾಗಿ ದೇಶದಾದ್ಯಂತ ತಲೆದೋರಿರುವ ವಿದ್ಯುತ್ ಬಿಕ್ಕಟ್ಟಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹೆಚ್ಚುತ್ತಿರುವ ಇಂಧನದ ಬೇಡಿಕೆ

ನವೀಕರಿಸಬಹುದಾದ ಶಕ್ತಿ ಮತ್ತು ನವೀಕರಿಸಲಾಗದ ಇಂಧನ ಸಂಪನ್ಮೂಲಗಳ ನಡುವೆ ಸಂದರ್ಭಕ್ಕನುಗುಣವಾಗಿ ಬಳಸಿಕೊಳ್ಳುವುದು ಹಾಗೂ ಆ ಮೂಲಕ ಉಷ್ಣ ವಿದ್ಯುತ್ ಉತ್ಪಾದನಾ ಘಟಕಗಳ ಮೇಲೆ ಕನಿಷ್ಠ ಅವಲಂಬನೆಯಾಗಬಹುದಾದ ಸಂದರ್ಭವನ್ನು ನಿರ್ಮಾಣ ಮಾಡಿದೆ. ಈ ಮೂಲಕ ರಾಜ್ಯ ತನ್ನ ಬೆಳೆಯುತ್ತಿರುವ ಇಂಧನ ಬೇಡಿಕೆ ಅಂದರೆ ಈ ಬೇಸಿಗೆಯಲ್ಲಿ ದಿನಕ್ಕೆ 15,000 MW ಬಳಕೆಯೊಂದಿಗೆ ಹೊಸ ಎತ್ತರವನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ.

ವಿದ್ಯುತ್​ ಸಮಸ್ಯೆ ಎದುರಿಸಲು ಸಜ್ಜು

ಉದ್ಭವವಾಗುತ್ತಿರುವ ವಿದ್ಯುತ್ ಬಿಕ್ಕಟ್ಟಿನಿಂದಾಗಿ ಪ್ರಸ್ತುತ ಬಹುಪಾಲು ರಾಜ್ಯಗಳು ಅನಿಯಂತ್ರಿತ ವಿದ್ಯುತ್ ಕಡಿತವನ್ನು ಆಶ್ರಯಿಸುತ್ತಿರುವ ಈ ಸಮಯದಲ್ಲಿ ಕರ್ನಾಟಕವು ಕಳೆದ ಕೆಲವು ವರ್ಷಗಳಲ್ಲಿ ಯೋಜಿಸಿದ್ದ ಮತ್ತು ಕಾರ್ಯಾರಂಭ ಮಾಡಿರುವ ಮಿಶ್ರ ಇಂಧನ ಸಂಪನ್ಮೂಲಗಳ ಲಭ್ಯತೆಯಿಂದ ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡಿರುವುದಾಗಿ ಇಂಧನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯದ ಇಂಧನ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಮಾತನಾಡುತ್ತ, “ದೇಶಾದ್ಯಂತ ಕಲ್ಲಿದ್ದಲಿನ ಕೊರತೆಯು ಕರ್ನಾಟಕದ ವಿದ್ಯುತ್ ಸನ್ನಿವೇಶದ ಮೇಲೆ ಪರಿಣಾಮ ಬೀರಲು ವಿಫಲವಾಗಿದೆ. ಹಿಂದಿನ ಪರಿಣಾಮಕಾರಿ ಯೋಜನೆಯಿಂದಾಗಿ, ಸಂಭವನೀಯ ಬಳಕೆಯ ಮಾದರಿಯನ್ನು ಗಮನದಲ್ಲಿಟ್ಟುಕೊಂಡು, ಇಂದು ಕರ್ನಾಟಕವು ಹೆಚ್ಚುವರಿ ಶಕ್ತಿಯನ್ನು ಹೊಂದಿದೆ" ಎಂದು ತಿಳಿಸಿದ್ದಾರೆ.

ವಿದ್ಯುತ್​ ಬಿಕ್ಕಟ್ಟು

ಈಗ ತಾನೇ ದೇಶವು ಕೋವಿಡ್ ಸಂಕಷ್ಟದಿಂದ ಆಚೆ ಬಂದಿದ್ದು ಈ ಸಂದರ್ಭದಲ್ಲಿ ಕೈಗಾರಿಕೆಗಳ ಪುನಾರಂಭದಿಂದಾಗಿ ಹೆಚ್ಚಿದ ಬೇಡಿಕೆಯು ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ರಾಜ್ಯಗಳು ಹಾಗೂ ಸಾಂಪ್ರದಾಯಿಕ ಇಂಧನವನ್ನು ಹೆಚ್ಚಾಗಿ ಅವಲಂಬಿಸಿರುವ ಇತರೆ ರಾಜ್ಯಗಳಲ್ಲಿ ಸದ್ಯದ ಸ್ಥಿತಿಯು ತೀವ್ರ ವಿದ್ಯುತ್ ಬಿಕ್ಕಟ್ಟನ್ನು ಉಂಟುಮಾಡಿದೆ ಎಂದು ಹೇಳಬಹುದಾಗಿದೆ.

ಇದನ್ನು ಓದಿ: ನಾಳೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಕರ್ನಾಟಕ ವಿದ್ಯುತ್ ವಿಷಯದಲ್ಲಿ ತನ್ನನ್ನು ತಾನು ಹೇಗೆ ನಿಭಾಯಿಸುತ್ತಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಜಿ. ಕುಮಾರ್ ನಾಯಕ್, "ಮಿಶ್ರ ಇಂಧನ ಸಂಪನ್ಮೂಲಗಳಿಂದಾಗಿ ನಾವು (ಕರ್ನಾಟಕ) ನಮ್ಮನ್ನು ವಿದ್ಯುತ್ ಸಮಸ್ಯೆ ಬಾಧಿಸದಂತೆ ಇರಿಸಿಕೊಳ್ಳಲು ಸಾಧ್ಯವಾಗಿದೆ. ನಮ್ಮ ಸ್ಥಾಪಿತ ಸಾಮರ್ಥ್ಯದ 51% ರಷ್ಟು ಶಕ್ತಿಯು ನವೀಕರಿಸಬಹುದಾದ ಮೂಲಗಳಿಂದ ಅಂದರೆ ಸೌರ, ಗಾಳಿ ಮತ್ತು ಕೋಜೆನರೇಶನ್‌ನಿಂದ ಪಡೆಯುತ್ತೇವೆ. ಮತ್ತೊಂದು 12% ರಷ್ಟು ಶಕ್ತಿ ಜಲ ಸಂಪನ್ಮೂಲಗಳಿಂದಲೂ ಹಾಗೂ 3% ಶಕ್ತಿ ಪರಮಾಣು ಮೂಲಗಳಿಂದಲೂ ಬರುತ್ತದೆ. ನಮ್ಮ ಶಕ್ತಿಯ ಅವಶ್ಯಕತೆಯ ಸುಮಾರು 34% ರಷ್ಟು ಮಾತ್ರ ಉಷ್ಣ ಸ್ಥಾವರಗಳಿಂದ ಪೂರೈಸಲಾಗುತ್ತದೆ" ಎಂದು ಹೇಳುತ್ತಾರೆ.

ಮಳೆಯಿಂದ ವಿದ್ಯುತ್​ ಅಡಚಣೆ

ಆದರೂ, ರಾಜ್ಯದಲ್ಲಿ ಸದ್ಯ ಗಮನಿಸಲಾಗುತ್ತಿರುವ ಬಳಕೆಯ ಪ್ರವೃತ್ತಿ ನೋಡಿದರೆ ಅಧಿಕಾರಿಗಳು ಕೊಂಚ ಚಿಂತಿತರಾದಂತೆ ಕಂಡುಬಂದಿದ್ದಾರೆಂದು ಹೇಳಬಹುದು. ಇಂಧನ ಇಲಾಖೆಯ ಹಿರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಒಬ್ಬರು, “ಕರ್ನಾಟಕವು ಮಾರ್ಚ್ 2022 ರಲ್ಲಿ 14,818 ಮೆಗಾ ವ್ಯಾಟ್‌ನ ಸಾರ್ವಕಾಲಿಕ ಗರಿಷ್ಠ ಲೋಡ್ ಅನ್ನು ಸಾಧಿಸಿದೆ, 285 ಮಿಲಿಯನ್ ಯುನಿಟ್‌ಗಳ (MU) ಅತ್ಯಧಿಕ ಬಳಕೆಯನ್ನು ಹೊಂದಿದೆ, ಇದು ಕಳೆದ ವರ್ಷಕ್ಕಿಂತ 30% ರಿಂದ 40% ಹೆಚ್ಚಾಗಿದೆ. ಆದರೂ, ನಮ್ಮಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ಇದ್ದಿದ್ದರಿಂದ ಇದು ಸಾಧ್ಯವಾಯಿತು. ಅಲ್ಲಲ್ಲಿ ಸ್ವಲ್ಪ ವಿದ್ಯುತ್ ವ್ಯತ್ಯಯಗಳುಂಟಾಗಬಹುದು. ಈ ಕಡಿತ ಕಲ್ಲಿದ್ದಲಿನ ಕೊರತೆಯಿಂದಾಗಿ ಅಲ್ಲ, ಬದಲಾಗಿ ಮಳೆಯಿಂದಾದ ಅಡಚಣೆ ಹಾಗೂ ಕೇಬಲ್ ಹಾಕುವಿಕೆಯ ಕೆಲಸಗಳಿಂದ" ಎಂದು ಹೇಳಿದ್ದಾರೆ.

ಇದನ್ನು ಓದಿ: Keruru ಏತ ನೀರಾವರಿ ಯೋಜನೆಗೆ ಶಂಕು ಸ್ಥಾಪನೆ; ಒಂದೇ ವೇದಿಕೆಯಲ್ಲಿ ಸಿಎಂ-ಮಾಜಿ ಸಿಎಂ

ಆದರೂ ಮುಂದಿನ ಸಮಯ ಯಾವೆಲ್ಲ ಸಮಸ್ಯೆ ತಂದೊಡ್ಡಬಹುದೆಂಬುದರ ಕಾಳಜಿ ಇರುವ ರಾಜ್ಯವು, ಕೇಂದ್ರದ ನಿರ್ಧಾರಕ್ಕೆ ಅನುಗುಣವಾಗಿ ಅದರ ನವೀಕರಿಸಬಹುದಾದ ಸಂಪನ್ಮೂಲಗಳ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜಿಸಿದೆ. ಅಲ್ಲದೆ, ಗ್ರಿಡ್‌ನಲ್ಲಿನ ನವೀಕರಿಸಬಹುದಾದ ಶಕ್ತಿಯ ವ್ಯತ್ಯಾಸದ ಪ್ರಭಾವವನ್ನು ಪಂಪ್ಡ್ ಹೈಡ್ರೋ ಸ್ಟೋರೇಜ್ ಮತ್ತು ಬ್ಯಾಟರಿ ಎನರ್ಜಿ ಶೇಖರಣಾ ವ್ಯವಸ್ಥೆಗಳ ರೂಪದಲ್ಲಿ ಪರಿವರ್ತಿಸಿ ದೊಡ್ಡ ಗ್ರಿಡ್-ಸಂಪರ್ಕಿತ ಶೇಖರಣಾ ವ್ಯವಸ್ಥೆಗಳನ್ನು ಬಳಸುವ ಮೂಲಕ ಅಲ್ಲಿ ಸುಮಾರು 25% ರಿಂದ 30% ರಷ್ಟು ಶಕ್ತಿಯನ್ನು ಸಂಗ್ರಹಿಸಬಹುದು ಎಂದು ನಾಯಕ್ ಹೇಳಿದ್ದಾರೆ.
Published by:Seema R
First published: