News18 India World Cup 2019

ಗೌರಿ ಹಂತಕರು ಸಿಕ್ಕಿಬಿದ್ದಿದ್ದು ಹೇಗೆ? ಇಲ್ಲಿಯವರೆಗೆ ನಡೆದ ಘಟನೆಗಳೇನು?

ಸಾಮಾಜಿಕ ಕಾರ್ಯಕರ್ತೆ, ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್​ ಮುಸುಕುಧಾರಿಗಳ ಗುಂಡಿನ  ದಾಳಿಗೆ ಬಲಿಯಾಗಿ ಇಂದಿಗೆ ಒಂದು ವರ್ಷ

news18
Updated:September 5, 2018, 8:42 PM IST
ಗೌರಿ ಹಂತಕರು ಸಿಕ್ಕಿಬಿದ್ದಿದ್ದು ಹೇಗೆ? ಇಲ್ಲಿಯವರೆಗೆ ನಡೆದ ಘಟನೆಗಳೇನು?
ಸಾಮಾಜಿಕ ಕಾರ್ಯಕರ್ತೆ, ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್​ ಮುಸುಕುಧಾರಿಗಳ ಗುಂಡಿನ  ದಾಳಿಗೆ ಬಲಿಯಾಗಿ ಇಂದಿಗೆ ಒಂದು ವರ್ಷ
news18
Updated: September 5, 2018, 8:42 PM IST
- ಸೀಮಾ ಆರ್​, ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 05): ಸಾಮಾಜಿಕ ಕಾರ್ಯಕರ್ತೆ, ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್​ ಮುಸುಕುಧಾರಿಗಳ ಗುಂಡಿನ  ದಾಳಿಗೆ ಬಲಿಯಾಗಿ ಇಂದಿಗೆ ಒಂದು ವರ್ಷ. ಸಮಾಜದಲ್ಲಿನ ಅಸಮಾನತೆಯ ವಿರುದ್ಧ ನಿರ್ಭೀತವಾಗಿ ಹೋರಾಡುತ್ತಿದ್ದ ಪತ್ರಕರ್ತೆ ಗೌರಿ ಈ ರೀತಿ ಅಮಾನುಷವಾಗಿ ಹತ್ಯೆಗೀಡಾಗುತ್ತಾರೆಂದು ಯಾರು ಕೂಡ ಊಹಿಸಿರಲಿಲ್ಲ. ಆದರೆ ಸದಾ ತಾನು ಕೂಡ ಹಿಟ್​ಲಿಸ್ಟ್​ನಲ್ಲಿರುವೆ ಎಂದು ಹೇಳುತ್ತಿದ್ದ ಗೌರಿ ಕೊನೆಗೂ ಗುಂಡಿಗೆ ಬಲಿಯಾಗಿಯೇಬಿಟ್ಟರು.

ಗೌರಿ ಲಂಕೇಶರ ಹತ್ಯೆ ರಾಜ್ಯದಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಆಕೆಯ ಹತ್ಯೆಗೂ ಮುನ್ನ ಕೊಲೆಯಾಗಿದ್ದ ದಾಭೋಲ್ಕರ್​, ಪಾನ್ಸಾರೆ, ಕಲಬುರ್ಗಿ ಕೂಡ ಇದೇ ರೀತಿ ಗುಂಡಿಗೆ ಬಲಿಯಾಗಿದ್ದರು. ಈ ಹತ್ಯೆಯ ಹಿಂದೆ ಸಂಘ ಪರಿವಾರ ಕೈವಾಡವಿದೆ. ಕೂಡಲೇ ಅವರನ್ನು ಬಂಧಿಸುವಂತೆ ಸರ್ಕಾರಕ್ಕೆ ಬುದ್ದಿಜೀವಿಗಳ ವರ್ಗ ಆಗ್ರಹಿಸಿತ್ತು.

ಗೌರಿ ಹತ್ಯೆ: ಕಳೆದ ವರ್ಷ ಸೆ​.05 (2017) ರಂದು ಗೌರಿ ಹತ್ಯೆ ಬಳಿಕ ಸಾಹಿತಿ, ಸಾಮಾಜಿಕ ಹೋರಾಟಗಾರು, ಪ್ರಗತಿಪರ ಸಂಘಟನೆಗಳು ‘ಗೌರಿ ಲಂಕೇಶ್​ ಬಳಗ’ ಹೆಸರಿನಲ್ಲಿ ‘ನಾನು ಗೌರಿ’ ಎಂಬ ಪ್ರತಿರೋಧ ಸಮಾವೇಶವನ್ನು ಆಯೋಜಿಸಿತ್ತು. ಸಮಾವೇಶದಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಸ್ವಾತಂತ್ರ್ಯ ಹೋರಾಟಗಾರ ಎಚ್​.ಎಸ್​ . ದೊರೆಸ್ವಾಮಿ ನೇತೃತ್ವದಲ್ಲಿ ನಿಯೋಗ ಭೇಟಿ ಮಾಡಿ ಮನವಿ ಮಾಡಿತ್ತು.

ಎಸ್​ಐಟಿ ತಂಡ ರಚನೆ: ಬಳಿಕ ಗೌರಿ ಹತ್ಯೆಯನ್ನು ಗಂಭೀರವಾಗಿ ತೆಗೆದುಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಕರಣ ಬೇಧಿಸಲು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದರು. ಬೆಂಗಳೂರು ನಗರದ ಪಶ್ಚಿಮ ವಲಯದ ಡಿಸಿಪಿ ಎಂ.ಎನ್.ಅನುಚೇತ್ ನೇತೃತ್ವದಲ್ಲಿ ಇಬ್ಬರು ಎಸ್ಪಿಗಳು, ನಾಲ್ವರು ಡಿವೈಎಸ್ಪಿಗಳು ಹಾಗೂ ಹದಿನಾಲ್ಕು ಇನ್ಸ್'ಪೆಕ್ಟರ್‌'ಗಳು ಸೇರಿದಂತೆ 21 ಅಧಿಕಾರಿಗಳ ತಂಡದಲ್ಲಿದ್ದರು.

ನಕ್ಸಲ್​ ನಂಟು, ಭ್ರಷ್ಟಚಾರ ವಿರೋಧಿ ವರದಿಗಾರಿಕೆ, ವೈಚಾರಿಕ ಭಿನ್ನಾಭಿಪ್ರಾಯ, ವೈಯಕ್ತಿಕ ವಿಷಯಗಳ ಕುರಿತು ತನಿಖೆ ನಡೆಸುತ್ತ ಹೋದ ಎಸ್​ಐಟಿ ತಂಡ ಒಂದೊಂದೇ ವಿಷಯಗಳನ್ನು ಭೇದಿಸಲು ಶುರುಮಾಡಿತು. ಗೌರಿ ಮನೆಯ ಸಿಸಿಟಿವಿ ದೃಶ್ಯಾವಳಿ, ಪ್ರತ್ಯಕ್ಷದರ್ಶಿಗಳ ನೀಡಿರುವ ಮಾಹಿತಿ ಮೇರೆಗೆ ಹಂತಕನ ರೇಖಾಚಿತ್ರ ಬಿಡಿಸಿ ಶೋಧಕಾರ್ಯ ಮಂದುವರೆಸಿತು.
Loading...

ಹೊಟ್ಟೆಮಂಜ ಸೆರೆ: ಫೆ.18 (2018)ರಂದು ಮೆಜೆಸ್ಟಿಕ್​ನಲ್ಲಿ ಶಸ್ತ್ರಾಸ್ತ್ರ ಸಾಗಾಟದಲ್ಲಿ ಸಿಸಿಬಿಗೆ ಸೆರೆಸಿಕ್ಕ ಮದ್ದೂರಿನ ಕೆ.ಟಿ. ನವೀನ್​ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಮಂಗಳೂರಿನಲ್ಲಿ ಎಸ್​ಐಟಿ ತಂಡ ಬಂಧಿಸಿತು. ಆರೋಪಿ ವಿರುದ್ಧ 650 ಪುಟಗಳ ಚಾರ್ಜ್​​ಶೀಟ್​ ಅನ್ನು 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿತು.

ನವೀನ್​ ಕುಮಾರ್​ ಹತ್ಯೆಗೆ ಸಂಚು ರೂಪಿಸಿದ್ದ, ಬೆಂಗಳೂರು, ಬೆಳಗಾವಿಯಲ್ಲಿ ಈ ಹತ್ಯೆಗೆ ಯೋಜನೆ ರೂಪಿಸಲಾಗಿತ್ತು. ಈ ತಂಡ ಪ್ರೊ ಭಗವಾನ್​ ಹತ್ಯೆಗೂ ಸಂಚು ರೂಪಿಸಿದ್ದರು. ಈತ ಶೂಟರ್​ಗಳಿಗೆ ಬುಲೆಟ್​ ನೀಡಿದ್ದ ಎಂದು ಎಸ್​ಐಟಿ ತಿಳಿಸಿತ್ತು. ಮಂಡ್ಯ ಮೂಲದ ನವೀನ್​ ಹಿಂದೂ ಯುವ ಸೇನೆ ಅಧ್ಯಕ್ಷ ಅಮೋಲ್​ ಕಾಳೆಗೆ ಜೀವಂತ ಗುಂಡುಗಳನ್ನು ಪೂರೈಸುತ್ತಿದ್ದ ಎಂಬ ಆರೋಪವನ್ನು ಹೊಂದಿದ್ದ.

ಅಮೋಲ್​ ಕಾಳೆ ಬಂಧನ: ಮೇ.15 ರಂದು ಉಡುಪಿಯಲ್ಲಿ  ಸೆರೆಸಿಕ್ಕವನು ಪ್ರವೀಣ್​ ಆಲಿಯಾಸ್​ ಸುಜಿತ್​ ನವೀನ್​ನನ್ನು ಕಾಳೆಗೆ ಪರಿಚಯಿಸಿದವನು ಈತನೇ ಎಂಬುದನ್ನು ಎಸ್​ಐಟಿ ದಾಖಲಿಸಿತು. ಪ್ರಕರಣವನ್ನು ಬಗೆದಷ್ಟು ಅಮೋಲ್​ಕಾಳೆ, ಅಮಿತ್​ ದೆಗ್ವೇಕರ್​, ಮನೋಹರ್​ ಯಡವೆ ಸಿಕ್ಕಿಬಿದ್ದರು. ಈ ಮೂವರು ಹಿಂದೂ ಸಂಘಟನೆಗಳ ಸಂಬಂಧ ಹೊಂದಿದ್ದರು ಎನ್ನಲಾಗಿತ್ತು.

ಭಗವಾನ್​​ ಹತ್ಯೆಗೆ ಸಂಚು: ದಾವಣಗೆರೆಯಲ್ಲಿ ಸೆರೆ ಸಿಕ್ಕ ಇವರೆಲ್ಲರೂ ಹಿಂದೂ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು. ಗೋವಾ, ಬೆಳಗಾವಿ ಧಾರವಾಡ ಸೇರಿದಂತೆ ಅನೇಕ ಕಡೆ ಶಸ್ತ್ರಾಸ್ತ್ರ ತರಬೇತಿಯನ್ನು ಇವರು ಪಡೆದಿದ್ದಾರೆ ಎಂದು ಎಸ್​ಐಟಿ ಚಾರ್ಜ್​ಶೀಟ್​ನಲ್ಲಿ ತಿಳಿಸಿತ್ತು. ಗೌರಿ ಕೇಸ್​​ ತನಿಖೆಯಲ್ಲಿ ಭಗವಾನ್​ ಹತ್ಯೆಗೆ ಸಂಚು ರೂಪಿಸಿದ್ದ ಎಂಬ ಆರೋಪದಲ್ಲಿ ಪುಣೆ ಮೂಲದ ಅಮೋಲ್​ ಕಾಳೆಯನ್ನು ಬಂಧಿಸಲಾಗಿತ್ತು. ಈತನ ಡೈರಿಯಲ್ಲಿ ಎಂಎಂ ಕಲ್ಬರ್ಗಿ, ಪನ್ಸಾರೆ, ನರೇಂದ್ರ ದಾಬೋಲ್ಕರ್​ ಹೆಸರಿತ್ತು ಎನ್ನುತ್ತಿವೆ ಮೂಲಗಳು.

ಅಮೋಲ್​ ಕಾಳೆ ನವೀನ್​ ಕುಮಾರ್​ ಆಪ್ತನಾಗಿದ್ದ. ಮಹಾರಾಷ್ಟ್ರದ ಸಿಂಧುದುರ್ಗ ಮೂಲಕ ಅಮಿತ್​ ದೇಗ್ವೆಕರ್ ಕೂಡ ಗೌರಿ ಹತ್ಯೆಯಲ್ಲಿ ಪಾತ್ರ ಹೊಂದಿದ್ದ. ಪ್ರದೀಪ್​ ಎಂದು ಗುರುತಿಸಿಕೊಂಡಿದ್ದ ಈತ, ಅಮೋಲ್​ ಕಾಳೆಯ ಸ್ನೇಹಿತನಾಗಿದ್ದ. ಅಲ್ಲದೇ  ಬಂದೂಕು ತರಬೇತಿ ಪಡೆದಿದ್ದಾನೆ ಎಂದು ತನಿಖೆಯಲ್ಲಿ ಬಯಲಾಯ್ತು.

ಬಗೆದಷ್ಟು ಸತ್ಯ ಬಯಲು: ವಿಜಯಪುರದ ರತ್ನಾಪುರ ಗ್ರಾಮದ ಮನೋಹರ ಯಡವೆ ಎಂಬಾತ ಹಿಂದೂಪರ ಸಂಘಟನೆಯೊಂದಿಗಿ ನಂಟು ಹೊಂದಿದ್ದ. ಗೌರಿ ಹತ್ಯೆ ಯಾರು ಮಾಡಬೇಕೆಂಬುದನ್ನು ಈತನೇ ನಿರ್ಧರಿಸಿದ್ದ ಎನ್ನಲಾಗಿತ್ತು. ಈ ಬೆನ್ನಲ್ಲೇ ದಕ್ಷಿಣ ಕನ್ನಡದ ಸಂಪಾಜೆ ಮೂಲದ ಮೋಹನ್​ ನಾಯಕ್​ ಜು. 22ರಂದು ಎಸ್​ಐಟಿ ಬಲೆಗೆ ಬಿದ್ದ. ಕುಶಾಲನಗರದಲ್ಲಿ ಬಂದೂಕು ಮಳಿಗೆಯಿತ್ತು. ಈತನೇ ಗೌರಿ ಹತ್ಯೆಯ ಸುಪಾರಿ ಕಿಲ್ಲರ್​ಗಳಿಗೆ ಬಂದೂಕು ಒದಗಿಸಿದ್ದ ಎಂದು ವರದಿಯಾಗಿತ್ತು.

ಇನ್ನು ರಾಜೇಶ ಬಂಗೇರ ಎಂಬಾತ ಮಡಿಕೇರಿಯಲ್ಲಿ ಡಿಡಿಪಿಐ ಕಚೇರಿಯಲ್ಲಿ ಸರ್ಕಾರಿ ನೌಕರನಾಗಿದ್ದ. ಈತ ಗೋವಾ ಮೂಲದ ಹಿಂದೂ ಸನಾತನ ಸಂಸ್ಥೆ ಜೊತೆ ಒಡನಾಟ ಬೆಳೆಸಿದ್ದ. ಗೌರಿ ಹತ್ಯೆಗೆ ಅಮೋಲ್​ ಕಾಳೆಗೆ ಈತ 20 ಜೀವಂತ ಗುಂಡು ನೀಡಿದ್ದ ಎನ್ನಲಾಗಿದೆ.

​ಗೌರಿ ಹತ್ಯೆ ಆರೋಪಿಗಳಿಗೆ ಕುಣಿಗಲ್​ ಮೂಲದ ಎಚ್​.ಎಲ್​ ಸುರೇಶ್ ಎಂಬಾತ ಮನೆ, ಬೈಕ್​ ನೀಡಿ ಸಹಾಯ ಮಾಡಿದ್ದ. ಬಳಿಕ ಸಾಕ್ಷ್ಯ ನಾಶಕ್ಕೂ ಸಹಾಯ ಮಾಡಿದ್ದ. ಸನಾತನ ಸಂಸ್ಥೆಯೊಂದಿಗೆ ಒಡನಾಟ ಹೊಂದಿದ್ದ ಈತ  ಸುಂಕದಕಟ್ಟೆಯಲ್ಲಿ ಆರೋಪಿಗಳಿಗೆ ವಾಸ್ತವ್ಯ ವ್ಯವಸ್ಥೆ ಮಾಡಿದ್ದ ಎಂದು ದೋಷಾರೋಪಣ ಪಟ್ಟಿಯಲ್ಲಿ ತಿಳಿಸಲಾಗಿತ್ತು.

ವಾಘ್ಮೋರೆ ಪೊಲೀಸ್​ ಬಲೆಗೆ: ಮತ್ತೊಬ್ಬ ಆರೋಪಿ ಮನೋಹರ ವಿಚಾರಣೆ ವೇಳೆ ದೊರಕಿದ ಮಾಹಿತಿ ಮೇರೆಗೆ, ಎಸ್​ಐಟಿ ತಂಡವೂ ವಿಜಯಪುರ ಮೂಲದ ಪರಶುರಾಮ್​ ವಾಘ್ಮೋರೆಯನ್ನು ಜೂನ್​ 7ರಂದು ಬಂಧಿಸಿತು. ಗೌರಿಯನ್ನು ತಾನೇ ಗುಂಡಿಟ್ಟು ಕೊಂದಿದ್ದ ಎಂದು ಈತ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದ ಎನ್ನಲಾಗಿದೆ. ಅಲ್ಲದೇ ಈತ ರಾಯಚೂರಿನ ಸಿಂದಗಿ ತಹಶೀಲ್ದಾರ್​ ಕಚೇರಿ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ್ದ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ ಈತನನ್ನು ಕೋರ್ಟ್​ ನಿರ್ದೋಷಿ ಎಂದಿತ್ತು.

ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ ಪೊಲೀಸರು​ ಹುಬ್ಬಳ್ಳಿ ಮೂಲದ ಗಣೇಶ್​ ಮಿಸ್ಕಿನ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದರು. ಈತ ಮೊದಲ ಬಾರಿಗೆ ಮಾಧ್ಯಮದವರಿಗೆ ಆರ್​ಎಸ್​ಎಸ್​ ಹೆಸರು ತಿಳಿಸಿದ. ಅಗರಬತ್ತಿ ಕಾರ್ಖಾನೆ ನಡೆಸುತ್ತಿದ್ದ ಗಣೇಶ್​, ಗೌರಿ ಹತ್ಯೆ ಪ್ರಕರಣದಲ್ಲಿ ಬೈಕ್​ ಚಲಾಯಿಸಿದ್ದ ಎನ್ನಲಾಗಿದೆ.

ಗಣೇಶ್​ ಮಿಸ್ಕಿನ್​ ಸ್ನೇಹಿತನಾಗಿದ್ದ ಅಮಿತ್​ ಬುದ್ದಿ ಎಂಬ ಆರೋಪಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು. ಗೌರಿ ಹತ್ಯೆಯ ಬಳಿಕ ಮಿಸ್ಕಿನ್​, ವಾಘ್ಮೋರೆ ಯನ್ನು ತಪ್ಪಿಸಲು ಸಹಾಯ ಮಾಡಿದ್ದ. ಗೌರಿ ಮನೆಯಿಂದ ಐದು ಕಿ,ಮೀ ದೂರದಲ್ಲಿ ಕಾರನ್ನು ನಿಲ್ಲಿಸಿ ಕಾದು ಅವರನ್ನುಕರೆದೊಯ್ದ ಎಂದು ಪೊಲೀಸರು ತಿಳಿಸಿದ್ಧಾರೆ.

ಪರಶುರಾಮ್​ ವಾಘ್ಮೋರೆಯೇ ಕೊಲೆಗಾರ: ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದ ಈ ಪ್ರಕರಣ ಕಡೆಗೂ ಒಂದು ಹಂತ ತಲುಪಿದೆ. ಗೌರಿ ಹತ್ಯೆಯಾಗಿ ಒಂದು ವರ್ಷಕ್ಕೆ ಒಂದು ದಿನ ಬಾಕಿ ಇರುವಂತೆಯೇ ಎಸ್​ಐಟಿ ಆರೋಪಿಯನ್ನು ಪತ್ತೆ ಹಚ್ಚಿದೆ. ಎಫ್​ಎಸ್​ಎಲ್​ ವರದಿಯಲ್ಲಿ ಪರಶುರಾಮ್​ ವಾಘ್ಮೋರೆಯೇ ಗೌರಿ ಹತ್ಯೆ ನಡೆಸಿರುವುದು ಎಂಬುದು ಸಾಬೀತಾಗಿದೆ. ಸಿಸಿಟಿವಿ ಮರುಸೃಷ್ಠಿಯಲ್ಲಿ ದೃಶ್ಯಾವಳಿ ಸಾಮ್ಯತೆ ಹೊಂದಿದೆ. ಹೀಗಾಗಿ ವಾಘ್ಮೋರೆಯೇ ಅಪರಾಧಿ ಎಂಬುದು ಎಸ್​ಐಟಿ ದೃಢಪಡಿಸಿದೆ.

First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...