HOME » NEWS » State » HOW CAN POLITICAL VALUES STAYS ROWDIES WAS ENTER INTO POLITICS SAYS SIDDARAMAIAH RHHSN

ಹೊಡಿಬಡಿ ಅನ್ನೋರು ರಾಜಕೀಯಕ್ಕೆ ಬಂದ ಮೇಲೆ ಮೌಲ್ಯಗಳು ಹೇಗೆ ಉಳಿಯುತ್ತವೆ?; ಸಿದ್ದರಾಮಯ್ಯ ಅಸಮಾಧಾನ

ಪಕ್ಷಕ್ಕೆ ಮೋಸ ಮಾಡಿದವರನ್ನು ಚುನಾವಣೆಗೆ ನಿಲ್ಲದಂತೆ ಮಾಡಬೇಕು. ಪಕ್ಷಾಂತರ ಮಾಡುವುದನ್ನು ಕಡ್ಡಾಯವಾಗಿ ತಪ್ಪಿಸಬೇಕು. ಉಪಚುನಾವಣೆಗಳು ಹೇಗೆ ನಡೆಯುತ್ತಾವೆ ನೋಡಿದ್ದೇನೆ. ಈಗ ಸದನದಲ್ಲಿ ಮಿನಿಸ್ಟರ್ಸ್ ಕೂರಲ್ಲ. ಶಾಸಕರನ್ನು ಕೂರಿ ಅಂತ ಹೇಳುವುದು ಹೇಗೆ. ವಾಟಳ್ ನಾಗರಾಜ್ ಶಾಸಕರಾಗಿದ್ದಾಗ ಬೆಳಿಗ್ಗೆ ಸದನಕ್ಕೆ ಬಂದ್ರೆ ಮನೆಗೆ ಹೋಗ್ತಿದ್ದು ಸಂಜೆಯೇ ಎಂದು ಹೇಳಿದರು.

news18-kannada
Updated:February 24, 2021, 8:41 PM IST
ಹೊಡಿಬಡಿ ಅನ್ನೋರು ರಾಜಕೀಯಕ್ಕೆ ಬಂದ ಮೇಲೆ ಮೌಲ್ಯಗಳು ಹೇಗೆ ಉಳಿಯುತ್ತವೆ?; ಸಿದ್ದರಾಮಯ್ಯ ಅಸಮಾಧಾನ
ಸಿದ್ದರಾಮಯ್ಯ.
  • Share this:
ಬೆಂಗಳೂರು: ಕನಿಷ್ಠ 60 ದಿನ ಸದನ ನಡೆಯಬೇಕು ಅಂತ ಕಾನೂನು ಮಾಡಿದ್ದೇವೆ. ಸರ್ಕಾರ ಇಷ್ಟು ದಿನ ಸದನ ನಡೆಸಬೇಕು ಅನ್ನೋದು ನೀವು ತೀರ್ಮಾನ ಮಾಡಬೇಕು.  ನಾನು ಇದ್ದಾಗ ಕಾನೂನು ಮಾಡಿದ್ದು. ಮೌಲ್ಯಗಳು ಕುಸಿಯುತ್ತಿವೆ ಅನ್ನೋದು ಗೊತ್ತಾಗಿದೆ. ನಾವು ಎಚ್ಚೆತ್ತುಕೊಂಡು ಕೆಲಸ ಮಾಡಬೇಕಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಬಗ್ಗೆ ಎಷ್ಟು ದಿನ ಚರ್ಚೆ ಆಗಿದೆ. ತರಾತುರಿಯಲ್ಲಿ ಆರ್ಡಿನೆನ್ಸ್ ಮಾಡುವ ಅವಶ್ಯಕತೆ ಏನಿತ್ತು‌.ಇದಲ್ಲವೇ ಮೌಲ್ಯ ಕುಸಿತಕ್ಕೆ ಕಾರಣ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ನಾನು ಬಸವರಾಜ ಹೊರಟ್ಟಿ ಹೋಗೋ ಬಾರೋ ಫ್ರೆಂಡ್ಸ್. ನನಗಿಂತಲೂ ಮೊದಲೇ ಅವನು ವಿಧಾನಸೌಧಕ್ಕೆ ಬಂದ. ನಾನು 1983 ರಲ್ಲಿ ವಿಧಾನಸೌಧಕ್ಕೆ ಬಂದೆ. ಈಗಿನ ಎಷ್ಟೋ ಜನ ಶಾಸಕರು ವಿಧಾನಸೌಧದಲ್ಲಿರುವ ಲೈಬ್ರರಿಗೆ ಹೋಗುವುದೇ ಇಲ್ಲ ಎಂದರು. ಹಿಂದೆ ಗೋಪಾಲಗೌಡರಿಗೆ ದುಡ್ಡು ಕೊಟ್ಟು ಮತ ಕೊಡುತ್ತಿದ್ದರು. 1983 ರಲ್ಲಿ ಹಣ ಕೊಡಲಿಲ್ಲ. ಅವರೇ ನನಗೆ ಹಣ ಕೊಟ್ರು. ವಿಲ್ಯಾದೆಲೆಯಲ್ಲಿ ಇಟ್ಟು ದೊಡ್ಡು ಕೊಟ್ರು.  ಹೊಡಿಬಡಿ ಅನ್ನೋರು ರಾಜಕೀಯಕ್ಕೆ ಬಂದ ಮೇಲೆ ಮೌಲ್ಯಗಳು ಹೇಗೆ ಉಳಿಯುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರವೇ ಚುನಾವಣಾ ನಡೆಸಬೇಕು. ನಾಮಪತ್ರ ಸಲ್ಲಿಸಿದ ಬಳಿಕ ಅಭ್ಯರ್ಥಿ ಕ್ಷೇತ್ರಕ್ಕೆ ಹೋಗಲೇಬಾರದು. ರಾಜಕೀಯ ಪಕ್ಷಗಳಲ್ಲಿ ಚುನಾವಣೆ ನಡೆಸುವ ವಿಧಾನ ಬದಲಾಗಬೇಕು ಎಂದು ಹೇಳಿದರು.

ಸಂವಿಧಾನದ ಅನುಚ್ಛೇದ 10 ನಾವೇ ಮಾಡಿದ್ದು. ಆಪರೇಷನ್ ಮಾಡೋದು ಯಾರು?  ಚಾಪೆ ಕೆಳಗಡೆ ನುಗ್ಗುತ್ತಾರೆ ಅಂದ್ರೆ ರಂಗೋಲಿ ಕೆಳಗಡೆ ನುಗ್ಗುತ್ತಾರೆ. ಅನುಚ್ಛೇದ 10 ಮತ್ತಷ್ಟು ಗಟ್ಟಿಯಾಗಬೇಕು. ಇಂತಹ ಪಕ್ಷಕ್ಕೆ ಮೋಸ ಮಾಡಿದವರನ್ನು ಚುನಾವಣೆಗೆ ನಿಲ್ಲದಂತೆ ಮಾಡಬೇಕು. ಪಕ್ಷಾಂತರ ಮಾಡುವುದನ್ನು ಕಡ್ಡಾಯವಾಗಿ ತಪ್ಪಿಸಬೇಕು. ಉಪಚುನಾವಣೆಗಳು ಹೇಗೆ ನಡೆಯುತ್ತಾವೆ ನೋಡಿದ್ದೇನೆ. ಈಗ ಸದನದಲ್ಲಿ ಮಿನಿಸ್ಟರ್ಸ್ ಕೂರಲ್ಲ. ಶಾಸಕರನ್ನು ಕೂರಿ ಅಂತ ಹೇಳುವುದು ಹೇಗೆ. ವಾಟಳ್ ನಾಗರಾಜ್ ಶಾಸಕರಾಗಿದ್ದಾಗ ಬೆಳಿಗ್ಗೆ ಸದನಕ್ಕೆ ಬಂದ್ರೆ ಮನೆಗೆ ಹೋಗ್ತಿದ್ದು ಸಂಜೆಯೇ ಎಂದು ಹೇಳಿದರು.

ಇದನ್ನು ಓದಿ: ಸ್ಫೋಟಕಗಳನ್ನು ಸಮೀಪದಲ್ಲಿ ಕಾಡಿನಲ್ಲಿ ವಿಲೇವಾರಿ ಮಾಡಿದ್ದೆ ಹಿರೇನಾಗವಲ್ಲಿ ಸ್ಫೋಟಕ್ಕೆ ಕಾರಣ; ಸಚಿವ ಸುಧಾಕರ್

ವಿದ್ಯಾವಂತರಲ್ಲಿ ಜಾತಿ ಜಾಸ್ತಿ ಆಗುತ್ತಿದೆ. ಇದು ಬಹಳ ದೊಡ್ಡ ದುರಂತ. ವ್ಯವಸ್ಥೆ ಸರಿಪಡಿಸಲು ಸರ್ಕಾರದ ಜತೆ ನಾವು ಸಹಕಾರ ಕೊಡ್ತೀವಿ. ನೀವು ಸಹ ಸರ್ಕಾರದ ಜತೆ ಮಾತನಾಡಿ. ನಮ್ಮ ಪಕ್ಷದಿಂದ ಏನಾದರೂ ಆಗಬೇಕು ಅಂತ ಹೇಳಿದರೆ ಅದನ್ನು ಸಹ ನಾವು ಮಾಡುತ್ತೇವೆ ಎಂದರು.

ಕೊರೋನಾ ವೇಳೆ ರಾಜ್ಯದ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಹೋಗಿದೆ. ರಾಜ್ಯ ಸರ್ಕಾರದ ಅನಿಶ್ಚಿತ ನಿಲುವುಗಳು ಮತ್ತು ಹೊಂದಾಣಿಕೆಯ ರಾಜಕೀಯಕ್ಕೆ ರಾಜ್ಯದ ಅಮಾಯಕ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಶುಲ್ಕ ಕಡಿತದ ಸರ್ಕಾರಿ ಆದೇಶವನ್ನು ಧಿಕ್ಕರಿಸಿರುವ  ಖಾಸಗಿ ಶಾಲೆಗಳ ನಿಲುವಿನ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದು ಅವರ ಅಸಾಮರ್ಥ್ಯವನ್ನಷ್ಟೇ ತೋರಿಸುತ್ತದೆ. ಶಿಕ್ಷಣ ಸಚಿವರು ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಪೋಷಕರ ಸಭೆ ಕರೆದು  ಬಿಕ್ಕಟ್ಟನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು. ವಿದ್ಯಾರ್ಥಿಗಳನ್ನು ಈಗಿನ ಅತಂತ್ರ ಸ್ಥಿತಿಯಿಂದ ಮುಕ್ತಗೊಳಿಸಬೇಕು. ಕೊರೋನಾ ಹಾವಳಿಯಿಂದಾಗಿ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳೆಲ್ಲರೂ ಕಷ್ಟ-ನಷ್ಟಕ್ಕೀಡಾಗಿದ್ದಾರೆ.  ಇಂತಹ ಸಂದರ್ಭದಲ್ಲಿ ಕೊಡು-ಕೊಳ್ಳುವಿಕೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಒಂದು ವರ್ಗದ ಹಿತೈಷಿಯಂತೆ ವರ್ತಿಸಬಾರದು ಎಂದ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
Published by: HR Ramesh
First published: February 24, 2021, 8:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories