• Home
  • »
  • News
  • »
  • state
  • »
  • Health Tips: ಬ್ಯುಸಿ ಲೈಫ್ ಸಾಕಾಗಿ ಹೋಗಿದ್ಯಾ? ಒತ್ತಡ ನಿರ್ವಹಣೆಗೆ ಆಯುರ್ವೇದದಲ್ಲಿದೆ ಮದ್ದು!

Health Tips: ಬ್ಯುಸಿ ಲೈಫ್ ಸಾಕಾಗಿ ಹೋಗಿದ್ಯಾ? ಒತ್ತಡ ನಿರ್ವಹಣೆಗೆ ಆಯುರ್ವೇದದಲ್ಲಿದೆ ಮದ್ದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಮ್ಮ ಜೀವನಶೈಲಿಯ ಆಯ್ಕೆಗಳು ಮಾನಸಿಕ ಆರೋಗ್ಯದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತವೆ. ದಿನಚರಿಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡ್ರೆ ಒತ್ತಡವನ್ನು ನಿಯಂತ್ರಣಕ್ಕೆ ತರಬಹುದು.

  • Share this:

ಆಧುನಿಕ ಜೀವನಶೈಲಿಯಿಂದ (Modern life style) ಬೇಸತ್ತಿದ್ದಿರಾ? ನಿಮ್ಮ ಮನಸ್ಸಿನ ಒತ್ತಡ ಮೀತಿ ಮೀರುತ್ತಿದೆಯೇ? ಒತ್ತಡವನ್ನು ತೊಡೆದುಹಾಕಲು ನೀವು ಮಾರ್ಗಗಳನ್ನು ಹುಡುಕುತ್ತಿದ್ದೀರಾ? ಒತ್ತಡವನ್ನು (Stress) ನಿವಾರಿಸಲು ನಿಮಗೆ ಸಹಾಯ ಮಾಡುವ ಆಯುರ್ವೇದ ಪದ್ಧತಿಗಳು ಇಲ್ಲಿವೆ ನೋಡಿ. ನಿಮ್ಮ ಮನಸ್ಸನ್ನು ಹಗುರವನ್ನಾಗಿಸಿ ಒತ್ತಡ ನಿವಾರಣೆ ಮಾಡಲು ಈ ಆಯುರ್ವೇದದ ಚಿಕಿತ್ಸೆ (Ayurvedic Treatment) ಸಹಾಯ ಮಾಡುತ್ತದೆ. ಅದಕ್ಕಾಗಿ ನೀವು ಯಾವ ಮಾರ್ಗವನ್ನು ಅನುಸರಿಸಬೇಕು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.


ಸ್ವಲ್ಪ ಒತ್ತಡವು ದೈನಂದಿನ ಜೀವನದ ಒಂದು ಭಾಗವಾಗಿದ್ದರೂ, ದೀರ್ಘಕಾಲದ ಒತ್ತಡವು ಮಾರಣಾಂತಿಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದು ವಯಸ್ಸಾಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಹೃದ್ರೋಗಗಳು, ಮಧುಮೇಹ ಮತ್ತು ಖಿನ್ನತೆಯಂತಹ ಮಾನಸಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಒತ್ತಡವನ್ನು ನಿಯಂತ್ರಿಸುವುದು ಮುಖ್ಯ, ಮತ್ತು ಅದನ್ನು ನಿರ್ವಹಿಸಲು ಆಯುರ್ವೇದವು ನಿಮಗೆ ಸಹಾಯ ಮಾಡುತ್ತದೆ.


How can Ayurveda help you cope up in your hectic lifestyle?
ಸಾಂದರ್ಭಿಕ ಚಿತ್ರ


ಆಯುರ್ವೇದ ತಜ್ಞರು ಹೇಳೋದೇನು?


ತಜ್ಞರ ಪ್ರಕಾರ, “74% ರಷ್ಟು ಭಾರತೀಯರು ಒತ್ತಡದಿಂದ ಬಳಲುತ್ತಿದ್ದಾರೆ ಮತ್ತು 88% ರಷ್ಟು ಜನರು ತಮ್ಮ ದೈನಂದಿನ ಜೀವನದಲ್ಲಿ ಆತಂಕವನ್ನು ಅನುಭವಿಸುತ್ತಿದ್ದಾರೆ. ಇದು ನಮ್ಮ ಭಾವನೆಗಳು ಮತ್ತು ಸಂಪೂರ್ಣ ನಡವಳಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ” ಎಂದು ಹೇಳಿದ್ದಾರೆ.


ಇದಲ್ಲದೆ, ಇದು ದೇಹದ ಒತ್ತಡದ ಪ್ರತಿಕ್ರಿಯೆಯ ಭಾಗವಾಗಿ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆಗಳನ್ನು ಕಡಿಮೆ ಮಾಡುತ್ತದೆ. ಇದು ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು ಎಂದಿದ್ದಾರೆ.


ಒತ್ತಡದಲ್ಲಿರುವ ಜನರು, ಹೆಚ್ಚಿನ ಸಮಯ ಅದನ್ನು ಅರಿತುಕೊಳ್ಳುವುದಿಲ್ಲ. ಒತ್ತಡವನ್ನು ಗುರುತಿಸುವುದು ಮತ್ತು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಮೊದಲು ನೀವು ಸಾಧ್ಯವಾದಷ್ಟು ಬೇಗ ಚಿಕಿತ್ಸೆಯನ್ನು ಪಡೆಯುವುದು ಅತ್ಯಗತ್ಯ.


ಆತಂಕ, ನಿರಾಶೆ, ಹತಾಶೆ, ಅತಿಯಾದ ಭಾವನೆಗಳು ಮತ್ತು ನಿದ್ರಾಹೀನತೆಯಂತಹ ತೊಂದರೆಗಳನ್ನು ಅನುಭವಿಸುತ್ತಿದ್ದರೆ ಅವು ಒತ್ತಡದ ಸಾಮಾನ್ಯ ಲಕ್ಷಣಗಳು ಆಗಿವೆ. ಈ ಲಕ್ಷಣಗಳನ್ನು ಕಡೆಗಣಿಸುವ ಬದಲು ಆರೋಗ್ಯ ತಜ್ಞ ಸಲಹೆಗಾರರೊಂದಿಗೆ ಮಾತನಾಡುವುದು ಉತ್ತಮ.


ಒತ್ತಡದ ಮೂಲ ಕಾರಣಗಳನ್ನು ಗುರುತಿಸಿ ಅದಕ್ಕೆ ಪರಿಹಾರ ಕಂಡುಹಿಡಿಯುವುದಕ್ಕೆ ಆಪ್ತ ಸಮಾಲೋಚನೆಯು ಸಹಾಯಕವಾಗಬಹುದು. ಸಮಾಲೋಚನೆಯ ಅಂತಿಮ ಗುರಿಯು ಒತ್ತಡದ ಪ್ರಚೋದಕಗಳನ್ನು ಪರೀಕ್ಷಿಸಲು ಸಹಾಯ ಮಾಡುವುದು.


ಆಯುರ್ವೇದ ಮತ್ತು ಒತ್ತಡ


ಅನಾದಿ ಕಾಲದಿಂದಲೂ ಆರ್ಯುವೇದದಲ್ಲಿ ಎಲ್ಲ ಸಮಸ್ಯೆಗಳಿಗೂ ಉತ್ತರ ಇದ್ದೆ ಇದೆ. ಆಯುರ್ವೇದ ಔಷಧಗಳು ಒತ್ತಡವನ್ನು ನಿಭಾಯಿಸಲು ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಆಯುರ್ವೇದವು ಅಸ್ವಸ್ಥತೆಗಳಿಗೆ ಅದರ ವಿಸ್ತಾರವಾದ ನೈಸರ್ಗಿಕ ಚಿಕಿತ್ಸಾ ಆಯ್ಕೆಗಳಿಗೆ ಮತ್ತು ಒಟ್ಟಾರೆ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸಲು ಹೆಸರುವಾಸಿಯಾಗಿದೆ. ಜೊತೆಗೆ ಆಯುರ್ವೇದವು ಜೀವನ ವಿಜ್ಞಾನವಾಗಿ ಸೇವೆ ಸಲ್ಲಿಸುತ್ತಿದೆ. ಅನಾರೋಗ್ಯದ ಚಿಕಿತ್ಸೆಗಾಗಿ ವೈದ್ಯಕೀಯ ತಂತ್ರಗಳ ಶ್ರೇಣಿಯ ಜೊತೆಗೆ, ಇದು ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ನಮಗೆ ಉಪಯುಕ್ತವಾಗಿದೆ.


ಆಯುರ್ವೇದ ಚಿಕಿತ್ಸೆಗಳು ಒತ್ತಡವನ್ನು ನಿವಾರಿಸಲು ಹೆಸರುವಾಸಿಯಾಗಿದೆ. ಚಿಕಿತ್ಸೆಗಾಗಿ ಬಳಸಲಾಗುವ ಚಿಕಿತ್ಸೆಗಳಲ್ಲಿ ನೈಸರ್ಗಿಕ ಘಟಕಗಳು ಕೇಂದ್ರ ವಿಷಯವಾಗಿದೆ. ಇದು ಮೆದುಳಿನ ಕೆಲವು ಭಾಗಗಳನ್ನು ಸಕ್ರಿಯಗೊಳಿಸಲು ಮತ್ತು ಮನಸ್ಸನ್ನು ಶಾಂತಗೊಳಿಸಲು, ಆಂತರಿಕ ಶಾಂತಿಯನ್ನು ತರಲು ದೈನಂದಿನ ಪದಾರ್ಥಗಳಿಂದ ತಯಾರಿಸಲಾದ ಔಷಧೀಯ ತೈಲಗಳನ್ನು ಬಳಸುವುದರ ಮೂಲಕ ಒತ್ತಡವನ್ನು ಕಡಿಮೆಗೊಳಿಸುತ್ತದೆ.


ಈ ಆಯುರ್ವೇದ ತೈಲಗಳಿಂದ ನಿಯಮಿತವಾಗಿ ಮಸಾಜ್ ಮಾಡುವ ಮೂಲಕ ರಕ್ತಪರಿಚಲನೆಯನ್ನು ಸುಗಮಗೊಳಿಸುವ ಮೂಲಕ, ಮಾನಸಿಕ ಆಯಾಸವನ್ನು ದೂರ ಮಾಡುವ ಮೂಲಕ ಶಕ್ತಿಯನ್ನು ಹೆಚ್ಚಿಸುತ್ತದೆ.


ಆರ್ಯವೇದದಿಂದ ಸಶಕ್ತಗೊಳ್ಳುವ ಮನಸ್ಸು


ಆಧುನಿಕ ದಿನಗಳಲ್ಲಿ ಬಿಡುವಿಲ್ಲದ ಜೀವನಶೈಲಿಯನ್ನು ಸಮತೋಲನಗೊಳಿಸಲು ಲಾಜಿಕ್‌ ಆಗಿ ಯೋಚಿಸುವ ಅಗತ್ಯ ಇರುವುದು ಬಹಳ ಮುಖ್ಯ. ನಮ್ಮ ಜೀವನಶೈಲಿಯ ಆಯ್ಕೆಗಳು ಮಾನಸಿಕ ಆರೋಗ್ಯದ ಮೇಲೆ ಬಹಳಷ್ಟು ಪ್ರಭಾವವನ್ನು ಬೀರುತ್ತವೆ.


ಇದನ್ನೂ ಓದಿ: Cauliflower Effect: ಈ ಆರೋಗ್ಯ ಸಮಸ್ಯೆ ಇದ್ರೆ ಚಳಿಗಾಲದಲ್ಲಿ ಹೂಕೋಸಿನಿಂದ ದೂರ ಇರಿ


ಆದ್ದರಿಂದ ನಿಮ್ಮ ದಿನಚರಿಯಲ್ಲಿ ಆಯುರ್ವೇದ ಅಭ್ಯಾಸಗಳನ್ನು ಸೇರಿಸುವುದು ಪ್ರಮುಖವಾಗಿದೆ. ಈ ಚಿಕಿತ್ಸೆಗಳು ನೈಸರ್ಗಿಕವಾಗಿರುವುದರಿಂದ ದೇಹದ ಮೇಲೆ ಅನೇಕ ಅನುಕೂಲಕರ ಪರಿಣಾಮಗಳನ್ನು ಬೀರಬಹುದು. ಈಗ ನೀವು ಮಾಡಬೇಕಾಗಿರುವುದು ಇಷ್ಟೆ, ಅದೇನೆಂದರೆ ಪ್ರಮಾಣೀಕೃತ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ. ಅವರು ಸೂಚಿಸಿದ ಚಿಕಿತ್ಸೆಗಳನ್ನು ಪಡೆಯಿರಿ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು