ಗಲಭೆ ಸಂದರ್ಭದಲ್ಲಿ ಅಂತರ್ಜಾಲ ನಿಷೇಧದ ಕುರಿತು ಮಹತ್ವದ ತೀರ್ಪು ನೀಡಿದ ಅಸ್ಸಾಂ ಹೈಕೋರ್ಟ್​; ಆದೇಶದಲ್ಲೇನಿದೆ?

ಮೊಬೈಲ್ ಅಂತಾರ್ಜಾಲ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ನಿರ್ಬಂಧಿಸಿದ 9 ದಿನಗಳ ನಂತರ ಅಲ್ಲಿನ ಹೈಕೋರ್ಟ್ ಇಂತಹ ಮಹತ್ವದ ತೀರ್ಪು ನೀಡಿದ್ದು ಅನೇಕರು ಈ ತೀರ್ಪಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

MAshok Kumar | news18-kannada
Updated:December 21, 2019, 3:51 PM IST
ಗಲಭೆ ಸಂದರ್ಭದಲ್ಲಿ ಅಂತರ್ಜಾಲ ನಿಷೇಧದ ಕುರಿತು ಮಹತ್ವದ ತೀರ್ಪು ನೀಡಿದ ಅಸ್ಸಾಂ ಹೈಕೋರ್ಟ್​; ಆದೇಶದಲ್ಲೇನಿದೆ?
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ (ಡಿಸೆಂಬರ್ 21); ದೇಶದಲ್ಲಿ ಅಂತರ್ಜಾಲ ವ್ಯವಸ್ಥೆಯನ್ನು ಕಡಿತಗೊಳಿಸುವುದನ್ನು ಸಮರ್ಥಿಸಿಕೊಳ್ಳಲು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಕೇಂದ್ರ ಸಮಿತಿಯ ಅಧಿಕೃತ ಪತ್ರಿಕೆ ಪೀಪಲ್ಸ್ ಡೈಲಿ ಭಾರತದ ಉದಾಹರಣೆಯನ್ನು ಉಲ್ಲೇಖಿಸಿ ಟೀಕಿಸಿದೆ.

ವಿವಾದಾತ್ಮಕ ಹೊಸ ಪೌರತ್ವ ತಿದ್ದುಪಡಿ ಮಸೂದೆಯ ಮೇಲಿನ ಪ್ರತಿಭಟನೆಯನ್ನು ನಿಯಂತ್ರಿಸಲು ಭಾರತ ಇತ್ತೀಚೆಗೆ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲು ಆದೇಶಿಸಿದೆ. ಇದರರ್ಥ ತುರ್ತು ಪರಿಸ್ಥಿತಿಯಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸುವುದು ಸಾರ್ವಭೌಮ ರಾಷ್ಟ್ರಗಳಿಗೆ ಪ್ರಮಾಣಿತ ಅಭ್ಯಾಸವಾಗಿರಬೇಕು" ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ.

ಇತ್ತೀಚಿನ ದಿನಗಳಲ್ಲಿ, ಇಡೀ ಜಗತ್ತಿನಲ್ಲಿ ಗರಿಷ್ಠ ಸಂಖ್ಯೆಯ ಇಂಟರ್ನೆಟ್ ಅಡೆತಡೆಗಳನ್ನು ಕಂಡ ದೇಶ ಎಂಬ ಕುಖ್ಯಾತಿಗೆ ಭಾರತ ಪಾತ್ರವಾಗಿದೆ. ವಾಸ್ತವದಲ್ಲಿ ಪಾಕಿಸ್ತಾನ, ಇರಾಕ್, ಸಿರಿಯಾ, ಟರ್ಕಿ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯಗಳಿಗಿಂತ ಭಾರತದಲ್ಲಿ ಹೆಚ್ಚಿನ ಬಾರಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಹೀಗಾಗಿ ಸರ್ಕಾರಕ್ಕೆ ಚಾಟಿ ಬೀಸಿದ್ದ ಗೌಹಾಟಿ ಹೈಕೋರ್ಟ್, "ಚೀನಾ ಸರ್ಕಾರದ ಅಥವಾ ಭಾರತದ ಕಿವಿಗೆ ಅಸ್ಸಾಂ ರಾಜ್ಯದ ವಿಚಾರ ಸಂಗೀತ ಕಾರ್ಯಕ್ರಮವಲ್ಲ. ಮೊದಲು ಅಂತಾರ್ಜಾಲ ಸೇವೆಯ ಮೇಲೆ ಸರ್ಕಾರ ವಿಧಿಸಿರುವ ನಿರ್ಬಂಧವನ್ನು ಶೀಘ್ರದಲ್ಲಿ ತೆರವುಗೊಳಿಸಲಿ ಎಂದು ಆದೇಶಿಸಿದೆ. ನ್ಯಾಯಾಲಯದ ಈ ತೀರ್ಪು ಅಂತಾರ್ಜಾಲ ವ್ಯವಸ್ಥೆಯ ಮೇಲಿನ ಸರ್ಕಾರದ ನಿರ್ಬಂಧದ ಕುರಿತ ಒಂದು ಮಹತ್ವದ ನಿರ್ಧಾರ ಎನ್ನಲಾಗುತ್ತಿದೆ.

ಮುಖ್ಯ ನ್ಯಾಯಮೂರ್ತಿ ಅಜಯ್ ಲಾಂಬಾ ಮತ್ತು ನ್ಯಾಯಮೂರ್ತಿ ಅಚಿಂತ್ಯ ಮಲ್ಲಾ ಬುಜೋರ್ ಬರುವಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಕುರಿತು ತೀರ್ಪು ನೀಡಿದ್ದು, “ರಾಜ್ಯದ ನಾಗರೀಕರ ಜೀವನದ ಮೇಲೆ ಅಡತಡೆಗಳನ್ನು ಹೇರುವ ಯಾವುದೇ ವಿಚಾರವನ್ನು ನ್ಯಾಯಾಲಯ ಸಹಿಸುವುದಿಲ್ಲ. ಅದೇ ಸಂದರ್ಭದಲ್ಲಿ ಹಿಂಸಾಚಾರ ಅಥವಾ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಯ ಪಾಲನೆಗಾಗಿ ಕೆಲವು ಸಂದರ್ಭದಲ್ಲಿ ಮೊಬೈಲ್ ಇಂಟರ್ನೆಟ್ ನಿರ್ಬಂಧವನ್ನು ಸಡಿಲಿಸಲೂ ಸಹ ಸಾಧ್ಯವಿಲ್ಲ” ಎಂದು ಅಭಿಪ್ರಾಯ ಪಟ್ಟಿದೆ.

ಮೊಬೈಲ್ ಅಂತಾರ್ಜಾಲ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ನಿರ್ಬಂಧಿಸಿದ 9 ದಿನಗಳ ನಂತರ ಅಲ್ಲಿನ ಹೈಕೋರ್ಟ್ ಇಂತಹ ಮಹತ್ವದ ತೀರ್ಪು ನೀಡಿದ್ದು ಅನೇಕರು ಈ ತೀರ್ಪಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಗೌಹಾಟಿ ಹೈಕೋರ್ಟ್ ಆದೇಶವನ್ನು ಸಮತೋಲಿತ ಆದೇಶ ಎಂದು ವಿಶ್ಲೇಷಿಸಿರುವ ಸುಪ್ರೀಂ ಕೋರ್ಟ್ ನ್ಯಾಯವಾದಿ ಗೌತಮ್ ಭಾಟಿಯಾ, "ಕೆಲವು ಸಂದರ್ಭಗಳಲ್ಲಿ, ಹಿಂಸಾಚಾರವನ್ನು ಪ್ರಚೋದಿಸುವುದನ್ನು ತಪ್ಪಿಸಲು ತಾತ್ಕಾಲಿಕವಾಗಿ ಇಂಟರ್ನೆಟ್ ಅನ್ನು ಅಮಾನತುಗೊಳಿಸಬೇಕಾಗಬಹುದು ಎಂಬ ಪ್ರಮೇಯವನ್ನು ಹೈಕೋರ್ಟ್ ಸ್ವೀಕರಿಸುತ್ತದೆ. ಆದರೆ, ನ್ಯಾಯಾಲಯದ ತೀರ್ಪು ಇದೇ ಸಂದರ್ಭದಲ್ಲಿ ಎರಡು ಪ್ರಮುಖ ವಿಷಯಗಳನ್ನು ಹೇಳುತ್ತದೆ.ಮೊದಲನೆಯದಾಗಿ ಹಿಂಸಾಚಾರವನ್ನು ಉತ್ತೇಜಿಸಲು ಅಂತರ್ಜಾಲವನ್ನು ಹೇಗೆ ಬಳಸಲಾಗಿದೆ ಎಂಬುದನ್ನು ದಾಖಲೆಯಲ್ಲಿ ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ ಮತ್ತು ಎರಡನೆಯದಾಗಿ, ಅಂತರ್ಜಾಲದಿಂದ ಪ್ರಚೋದಿಸಲ್ಪಟ್ಟ ಯಾವುದೇ ಹಿಂಸಾಚಾರದ ಘಟನೆಗಳು ದಾಖಲಾಗಿಲ್ಲ ಎಂದು ವ್ಯಾಖ್ಯಾನಿಸಿದ್ದಾರೆ.

ಇದನ್ನೂ ಓದಿ : ನನ್ನ ಮಗನ ಸಾವಿಗೆ ಪರಿಹಾರ ಬೇಡ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ; ಗೋಲಿಬಾರ್​ನಲ್ಲಿ ಮೃತಪಟ್ಟ ನೌಷದ್ ತಾಯಿಯ ಅಳಲು
First published:December 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ