• Home
  • »
  • News
  • »
  • state
  • »
  • Bengaluru: ಬೆಂಗಳೂರಿಗೆ ಹೋಗೋ ಕನಸು ಹೊತ್ತುಕೊಂಡಿರುವವರಿಗೆ ಶಾಕ್ ಕೊಟ್ಟ ವರದಿ!

Bengaluru: ಬೆಂಗಳೂರಿಗೆ ಹೋಗೋ ಕನಸು ಹೊತ್ತುಕೊಂಡಿರುವವರಿಗೆ ಶಾಕ್ ಕೊಟ್ಟ ವರದಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗೇಟೆಡ್ ರೆಸಿಡೆನ್ಶಿಯಲ್ ಸೊಸೈಟಿಗಳ ಅಪಾರ್ಟ್‌ಮೆಂಟ್‌ಗಳಿಗೆ ಹೆಚ್ಚಿನ ಬೇಡಿಕೆಯನ್ನು ಉಲ್ಲೇಖಿಸಿ ಸಿಲಿಕಾನ್ ಸಿಟಿಯ ಗೇಟೆಡ್ ಕಮ್ಯುನಿಟಿಗಳಲ್ಲಿ ವಸತಿ ಬಾಡಿಗೆಯು ಶೇಕಡಾ 40 ರಷ್ಟು ಹೆಚ್ಚುತ್ತಿದೆ

  • Share this:

    ಟೆಕ್‌ ಹಬ್‌ಗಳಾಗಿ (Tech Hub) ಬೆಳೆಯುತ್ತಿರುವ ಬೆಂಗಳೂರಿನಂತಹ (Bengaluru) ಮಹಾನಗರಗಳಲ್ಲಿ ಮನೆ ಬಾಡಿಗೆ ಹುಡುಕೋದು ಒಂದು ಕಷ್ಟವಾದ್ರೆ, ಆ ಮನೆಗೆ ಬಾಡಿಗೆ (Rent) ಕಟ್ಟೋದು ಮತ್ತೊಂದು ತಾಪತ್ರಯ. ಯಾಕೆಂದರೆ ಒಂದು ಸಣ್ಣ ಮನೆಗೂ ದುಬಾರಿ ಬಾಡಿಗೆಯನ್ನ ಬೆಂಗಳೂರಿನಲ್ಲಿ ಮನೆ ಮಾಲೀಕರು ಕೇಳ್ತಿದಾರೆ. ದುಡಿದ ದುಡ್ಡಲ್ಲಿ ಬಹುತೇಕ ಮೊತ್ತ ಬಾಡಿಗೆ ಪಾವತಿಸಲೇ ಹೋಗುತ್ತದೆ ಎಂಬುವುದು ಹಲವರ ನೀವು.  ಪೇಚಾಡಿ ಪೇಚಾಡಿ ಒಂದು ದಿನ ಬೆಂಗಳೂರು ಬಿಟ್ಟು ಸೀದಾ ತಮ್ಮ ಊರಿಗೆ ಹೋgಓ ಬಹಳಷ್ಟು ಜನರು ದಿನನಿತ್ಯ ನಮಗೆ ಸಿಗ್ತಾರೆ ಎಂದು ಹೇಳಬಹುದು.


    ಇದಕ್ಕೆ ವಿರುದ್ದವಾಗಿ ಮತ್ತೊಂದು ವರ್ಗದ ಜನರು ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ವಸತಿ ಬಾಡಿಗೆಯನ್ನು ತೆಗೆದುಕೊಳ್ಳಲು ಹಾತೊರೆಯುತ್ತಾರೆ ಎಂಬ ವರದಿಗಳು ಬೆಳಕಿಗೆ ಬಂದಿವೆ.


    ವರದಿಗಳು ಏನು ಹೇಳ್ತಿವೆ?


    ಈ ಸಮಸ್ಯೆ ಕುರಿತು, “ಗೇಟೆಡ್ ರೆಸಿಡೆನ್ಶಿಯಲ್ ಸೊಸೈಟಿಗಳ ಅಪಾರ್ಟ್‌ಮೆಂಟ್‌ಗಳಿಗೆ ಹೆಚ್ಚಿನ ಬೇಡಿಕೆಯನ್ನು ಉಲ್ಲೇಖಿಸಿ ಸಿಲಿಕಾನ್ ಸಿಟಿಯ ಗೇಟೆಡ್ ಕಮ್ಯುನಿಟಿಗಳಲ್ಲಿ ವಸತಿ ಬಾಡಿಗೆಯು ಶೇಕಡಾ 40 ರಷ್ಟು ಹೆಚ್ಚುತ್ತಿದೆ” ಎಂದು NoBroker.com ವರದಿ ಮಾಡಿದೆ.


    ವಸತಿ ಸಮುಚ್ಛಯದ ಬಾಡಿಗೆ ಮನೆಗಳಿಗೆ ಹೆಚ್ಚಿದ ಬೇಡಿಕೆ


    ಕಳೆದ ಎರಡು ವರ್ಷಗಳಲ್ಲಿ, COVID-19 ಸಾಂಕ್ರಾಮಿಕ ರೋಗದ ಪೂರ್ವ ಮತ್ತು ನಂತರದಲ್ಲಿ ನೋಡುವುದಾದ್ರೆ, ಬೆಂಗಳೂರು ಮತ್ತು ಪುಣೆ ತ್ವರಿತ ನಗರೀಕರಣವನ್ನು ಕಂಡವು. ಈಗ ಆಫಿಸ್‌ಗಳು ತೆರೆದಿವೆ. ವರ್ಕ್‌ ಫ್ರಮ್‌ ಹೋಮ್‌ ಕೆಲಸಗಳು ನಿಂತಿವೆ. ಆದ್ದರಿಂದ ಕೆಲಸಗಾರರು ಮತ್ತೆ ನಗರಕ್ಕೆ ಬರುವುದು ಅನಿವಾರ್ಯವಾಗಿದೆ. ಸುಮಾರು ಎರಡು ವರ್ಷಗಳಿಂದ ನಿಂತಿದ್ದ ನಿರ್ಮಾಣ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ನಗರಕ್ಕೆ ಜನರು ಆಗಮಿಸುತ್ತಿರುವುದರಿಂದ ಇದೀಗ ಬಾಡಿಗೆ ಮನೆಗಳಿಗೆ ಬೇಡಿಕೆ ಹೆಚ್ಚಿದೆ.


    NoBroker.com ನ CEO ಮತ್ತು ಸಹ-ಸಂಸ್ಥಾಪಕರ ಅಭಿಪ್ರಾಯ


    "ಬೆಂಗಳೂರಿನ ಗೇಟೆಡ್ ಕಮ್ಯುನಿಟಿಗಳ ಅಪಾರ್ಟ್‌ಮೆಂಟ್‌ಗಳಿಗೆ ಈಗ ಅಗಾಧ ಬೇಡಿಕೆ ಕಂಡು ಬಂದಿದೆ. ಏಕೆಂದರೆ ಈಗ ತಾನೇ ಕಾಲೇಜು ಮುಗಿಸಿ, ನಗರಕ್ಕೆ ಕೆಲಸಕ್ಕೆ ಬರುವವರು, ಇತರ ನಗರಗಳಿಂದ ಬೆಂಗಳೂರಿಗೆ ಸ್ಥಳಾಂತಗೊಂಡಿರುವ ವೃತ್ತಿಪರರು, ವರ್ಕ್‌ ಫ್ರಮ್‌ ಹೋಮ್‌ ಕಾರಣ ಊರಿಗೆ ತೆರಳಿದ್ದ ಕೆಲಸಗಾರರು, ಈಗ ಮತ್ತೆ ನಗರಕ್ಕೆ ಮರಳಿ ಬರುತ್ತಿರುವುದರಿಂದ, ಬಾಡಿಗೆ ಮನೆಗಳಿಗೆ ಬೇಡಿಕೆ ಹೆಚ್ಚಿದೆ” ಎಂದು NoBroker.com ನ CEO ಮತ್ತು ಸಹ-ಸಂಸ್ಥಾಪಕ ಅಮಿತ್ ಕುಮಾರ್ ಅಗರ್ವಾಲ್ ಹೇಳಿದರು.


    40% ರಷ್ಟು ಹೆಚ್ಚಾದ ಬಾಡಿಗೆ


    “ಗೇಟೆಡ್ ಸೊಸೈಟಿಗಳ ಅಪಾರ್ಟ್‌ಮೆಂಟ್‌ಗಳು ಯಾವಾಗಲೂ ಹೆಚ್ಚಿನ ಜನರಿಗೆ ವಸತಿಯ ಆದ್ಯತೆಯ ಆಯ್ಕೆಯಾಗಿವೆ ಏಕೆಂದರೆ ಅವುಗಳು ಒದಗಿಸುವ ಅನೇಕ ಸೌಲಭ್ಯಗಳಿಂದ ಅವುಗಳನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ. ಆದರೆ ಕೋವಿಡ್ ಸಮಯದಲ್ಲಿ ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಂಡಿವೆ ಎಂಬ ಅಂಶವನ್ನು ಗಮನಿಸಿದರೆ, ಹೊಸ ನಿರ್ಮಾಣಗಳ ಪೂರೈಕೆಯು ಬೇಡಿಕೆಗೆ ಹೊಂದಿಕೆಯಾಗುತ್ತಿಲ್ಲ. ಸಾಂಪ್ರದಾಯಿಕವಾಗಿ, ಬಾಡಿಗೆಗಳು ವರ್ಷದಲ್ಲಿ 7-8% ರಷ್ಟು ಹೆಚ್ಚಾಗುತ್ತವೆ. ಆದರೆ ಈ ವರ್ಷ ಅವು 15 ರಿಂದ 40% ರಷ್ಟು ಹೆಚ್ಚಾಗಿವೆ ”ಎಂದು ಅಮಿತ್‌ ಕುಮಾರ್‌ ಹೇಳಿದರು.


    ಇದನ್ನೂ ಓದಿ: ಬಾಡಿಗೆ ಮನೆಗೆ ಹೋಗುವ ಮುನ್ನ ಈ ಅಂಶಗಳು ಗಮನದಲ್ಲಿರಲಿ...!


    ಗೇಟೆಡ್ ಸೊಸೈಟಿಗಳ ಅಪಾರ್ಟ್‌ಮೆಂಟ್‌ಗಳು ಬಾಡಿಗೆಯ ವಿಷಯಕ್ಕೆ ಬಂದರೆ ಹೆಚ್ಚಿನ ಬೇಡಿಕೆಯಲ್ಲಿವೆ ಎಂದು ವರದಿ ಸೂಚಿಸಿದೆ. ಬಹುತೇಕ ಎಲ್ಲಾ ಬಾಡಿಗೆ ಮನೆಗಳನ್ನು 5-6 ಗಂಟೆಗಳ ಒಳಗೆ ಬಾಡಿಗೆಗೆ ನೀಡಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಪೂರ್ವ ಬೆಂಗಳೂರು ಅಥವಾ ಐಟಿ ಕಾರಿಡಾರ್ ಎಂದು ಕರೆಯುವ ಪ್ರದೇಶದಲ್ಲಿ ಇದು ಹೆಚ್ಚಿದೆ ಎಂದು ವರದಿಗಳು ಹೇಳುತ್ತಿವೆ.


    ಎಷ್ಟಿದೆ ಬಾಡಿಗೆ?


    ವಿವರಗಳ ಪ್ರಕಾರ, ಬೆಳ್ಳಂದೂರಿನ ಆದರ್ಶ ಪಾಮ್ ರಿಟ್ರೀಟ್‌ನಲ್ಲಿರುವ 3BHK ಅಪಾರ್ಟ್‌ಮೆಂಟ್‌ಗಳಲ್ಲಿ ಮಾಸಿಕ ಬಾಡಿಗೆ 2021 ರಲ್ಲಿ ₹45,000-55,000 ವ್ಯಾಪ್ತಿಯಲ್ಲಿ ಇದ್ದವು. ಆದರೆ ಈಗ ₹65,000-75,000 ಮಾಸಿಕ ಬಾಡಿಗೆಯನ್ನು ಹೊಂದಿವೆ. ಅದೇ ರೀತಿ, ಕೋರಮಂಗಲದ ಮತ್ತೊಂದು ಗೇಟೆಡ್ ಸೊಸೈಟಿ - ರಹೇಜಾ ರೆಸಿಡೆನ್ಸಿಯಲ್ಲಿರುವ 2BHK ಅಪಾರ್ಟ್‌ಮೆಂಟ್‌ಗಳು ಈಗ ₹ 50,000-55,000 ಮಾಸಿಕ ಬಾಡಿಗೆಯನ್ನು ಹೊಂದಿವೆ. ಆದರೆ ಕಳೆದ ವರ್ಷ ಅಲ್ಲಿನ ಬಾಡಿಗೆ ₹ 35,000-40,000 ಮಾತ್ರ ಇತ್ತು.


    ಇದನ್ನೂ ಓದಿ:ಎಲ್ಲಾ ಆಸ್ತಿಯಲ್ಲಿ ಮಹಿಳೆಯರಿಗೆ ಸಮನಾದ ಹಕ್ಕು; ಕರ್ನಾಟಕ ರಾಜ್ಯ ಸರ್ಕಾರದಿಂದ ಚಿಂತನೆ


    "ಇದರ ಕುರಿತು ಇರುವ ಇನ್ನೊಂದು ಇಂಟ್ರೆಸ್ಟಿಂಗ್‌ ವಿಷಯ ಏನೆಂದ್ರೆ, ಇದು ಕೇವಲ ಬೆಂಗಳೂರಿನಲ್ಲಿ ಮಾತ್ರವೇ ನಡೆಯುತ್ತಿಲ್ಲ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಈ ವಿದ್ಯಮಾನ ಇದೇ ರೀತಿ ನಡೆಯುತ್ತಿದೆ” ಎಂದು ಅಮಿತ್‌ ಕುಮಾರ್‌ ಅಗರ್ವಾಲ್ ಹೇಳಿದರು.

    Published by:Precilla Olivia Dias
    First published: