ಕಳ್ಳತನ ಮಾಡಲು ಬಂದು ಮನೆಗೆ ಬೆಂಕಿ ಇಟ್ಟು ಪರಾರಿಯಾದ ಕಳ್ಳರು

ಸೋನಪ್ಪ ತಳವಾರ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲು ಬಂದ ಕಳ್ಳರು ಕಳ್ಳತನ ಮಾಡಿ ಸಾಕ್ಷಿ ನಾಶಪಡಿಸಲು ಇಡೀ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

G Hareeshkumar | news18-kannada
Updated:November 7, 2019, 12:25 PM IST
ಕಳ್ಳತನ ಮಾಡಲು ಬಂದು ಮನೆಗೆ ಬೆಂಕಿ ಇಟ್ಟು ಪರಾರಿಯಾದ ಕಳ್ಳರು
ಮನೆಗೆ ಬೆಂಕಿ ಹಚ್ಚಿದ ಕಳ್ಳರು
  • Share this:
ಬೆಳಗಾವಿ(ನ.06): ಮನೆಗಳ್ಳತನ ಮಾಡಲು ಬಂದು ಸಾಕ್ಷಿ ನಾಶಪಡಿಸಲು ಇಡೀ ಮನೆಗೆ ಬೆಂಕಿ ಹಚ್ಚಿ ಕದಿಮರು ಪರಾರಿಯಾದ ಘಟನೆ ಬೆಳಗಾವಿ ತಾಲೂಕಿನ ಕಣಬರ ಗ್ರಾಮದಲ್ಲಿ ನಡೆದಿದೆ.

ಸೋನಪ್ಪ ತಳವಾರ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದ. ಕಳ್ಳರು. ಸಾಕ್ಷಿ ನಾಶಪಡಿಸಲು ಇಡೀ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಮನೆಯಯವರು ಹೊರಗಡೆ ಹೋಗಿದ್ದರು. ಇದನ್ನೂ ಗಮನಿಸಿದ ಕಳ್ಳರು ಮನೆಗೆ ನುಗ್ಗಿ ಮನೆಯಲ್ಲಿದ್ದ 50 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ, 25 ಸಾವಿರ ನಗದು, ಟಿ ವಿ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಕಳ್ಳತನ ಮಾಡಿದ್ದಾರೆ.

belagavi house theft
ಸುಟ್ಟು ಕರಕಲಾದ ವಸ್ತುಗಳು


ಕದ್ದು ನಂತರ ಸಾಕ್ಷಿ ನಾಶಪಡಿಸಲು ಮನೆಗೆ ಬೆಂಕಿ ಹಚ್ಚಿದ್ದಾರೆ. ಸುಟ್ಟು ಕರಕಲಾದ ಮನೆಯಲ್ಲಿನ ಅಳಿದುಳಿದು ವಸ್ತುಗಳು ಕಳೆದುಕೊಂಡ ಮನೆಯವರು ಕಂಗಾಲಾಗಿದ್ದಾರೆ.

ಇದನ್ನೂ ಓದಿ : ಹುಚ್ಚುನಾಯಿಗೆ ಹೊಡೆದಂತೆ ಕಲ್ಲು ಹೊಡೆಯಿರಿ: ರಮೇಶ್​ ಬೆಂಬಲಿಗರಿಂದ ದೌರ್ಜನ್ಯವಾಗತ್ತಿದೆ ಎಂದ ಮಹಿಳೆಗೆ ಸತೀಶ್ ಜಾರಕಿಹೊಳಿ ಸಲಹೆ

ಘಟನೆ ಬಗ್ಗೆ ಮಾಳಮಾರುತಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ವ್ಯಾಪಕ ಬಲೆಯನ್ನು ಬೀಸಿದ್ದಾರೆ.

 
First published: November 6, 2019, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading