• Home
  • »
  • News
  • »
  • state
  • »
  • House Robbery: ಮದುವೆ ಆಮಂತ್ರಣ ಪತ್ರಿಕೆ ನೀಡುವ ನೆಪದಲ್ಲಿ ಬಂದು ಮನೆಯನ್ನೇ ದೋಚಿದ್ರು!

House Robbery: ಮದುವೆ ಆಮಂತ್ರಣ ಪತ್ರಿಕೆ ನೀಡುವ ನೆಪದಲ್ಲಿ ಬಂದು ಮನೆಯನ್ನೇ ದೋಚಿದ್ರು!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಮದುವೆ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮನೆಗೆ ಬಂದ ದರೋಡೆಕೋರರು, ಮನೆಯಲ್ಲಿದ್ದ 43 ಲಕ್ಷ ನಗದು ಹಾಗೂ 250 ಗ್ರಾಂ‌ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.

  • Share this:

ಕೋಲಾರ (ಸೆ.24): ದರೋಡೆಕೋರರು ಹಾವಳಿ ಹೆಚ್ಚಾಗಿದೆ. ಸಾಮಾನ್ಯವಾಗಿ ಮನೆಗೆ ಮದುವೆ ಆಮಂತ್ರಣ ಪತ್ರಿಕೆ ನೀಡಲು ಬರುವವರನ್ನು ಒಳಗೆ ಕರೆದು ಕೂರಿಸಿ ಮಾತಾಡಿಸಿ ಕಳುಹಿಸ್ತೇವೆ. ಆದ್ರೆ ಕೋಲಾರದಲ್ಲಿ (Kolara) ಮದುವೆ ಆಮಂತ್ರಣ (Wedding Invitation) ಪತ್ರಿಕೆ ನೀಡಲು ಬಂದವರು ಮನೆಯನ್ನೇ ದೋಚಿಕೊಂಡಿರೋ (House Robbery)  ಘಟನೆ ನಡೆದಿದೆ. ಲಕ್ಷಾಂತರ ಮೌಲ್ಯದ ಹಣ, ಒಡವೆಯನ್ನು ಕಳೆದುಕೊಂಡ ಮಾಲೀಕರು ಕಣ್ಣೀರಿಡುತ್ತಿದ್ದಾನೆ.


43 ಲಕ್ಷ ಹಣ ಕದ್ದು ಎಸ್ಕೇಪ್​


ಮದುವೆ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮನೆಗೆ ಬಂದ ದರೋಡೆಕೋರರು, ಮನೆಯಲ್ಲಿದ್ದ 43 ಲಕ್ಷ ನಗದು ಹಾಗೂ 250 ಗ್ರಾಂ‌ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಸಂಪಂಗೆರೆ ಗ್ರಾಮದಲ್ಲಿ ನಡೆದಿದೆ. ಸಂಪಂಗೆರೆ ಗ್ರಾಮದ ನಿವಾಸಿ ಮಂಜುನಾಥ್ ಎಂಬುವರ ಮನೆಯಲ್ಲಿ ದರೋಡೆ ನಡೆದಿದೆ.


ಮನೆಯಲ್ಲಿದ್ದ ಹಣ ಒಡವೆ ದೋಚಿ ಪರಾರಿ


ಕಳೆದ ರಾತ್ರಿ ಮನೆಯಲ್ಲಿ ಮಂಜುನಾಥ್ ಅವರ ಪತ್ನಿ ಮಮತಾ ಅವರು ಒಬ್ಬರೇ ಮನೆಯಲ್ಲಿದ್ದರು. ಈ ವೇಳೆ, ಯಾರೂ ಇಲ್ಲದಿರುವುದನ್ನು ಗಮನಿಸಿರುವ ದರೋಡೆಕೋರರು, ಮದುವೆ ಆಹ್ವಾನ ಪತ್ರಿಕೆಯನ್ನು ನೀಡುವ ನೆಪದಲ್ಲಿ ಮನೆಗೆ ಬಂದಿದ್ದಾರೆ. ಮನೆಯಲ್ಲಿದ್ದ ಮಹಿಳೆ ವಿಳಾಸ ಪರಿಚಯ ಕೇಳುವ ಸಂದರ್ಭದಲ್ಲಿ ಆಕೆಗೆ ಪ್ರಜ್ಞೆ ತಪ್ಪುವ ಸ್ಪ್ರೇ ಮಾಡಿ ಮನೆಯಲ್ಲಿದ್ದ ಹಣ ಒಡವೆ ದೋಚಿ ಪರಾರಿಯಾಗಿದ್ದಾರೆ.


ಆರೋಪಿಗಳ‌ ಪತ್ತೆಗೆ ಬಲೆ ಬೀಸಿದ್ದಾರೆ.


ಮಂಜುನಾಥ್  ಅವರು ಇತ್ತೀಚೆಗಷ್ಟೆ ಜಮೀನು ಮಾರಾಟ ಮಾಡಿ ಬಂದಿದ್ದ ಸುಮಾರು 43 ಲಕ್ಷ ರೂಪಾಯಿಯನ್ನು ಮನೆಯಲ್ಲೇ ಇಟ್ಟಿದ್ದರು. ಇದೀಗ ಹಣವೂ ಇಲ್ಲ ಜಮೀನು ಇಲ್ಲ ಅನ್ನೋ ಸ್ಥಿತಿ ಮಂಜುನಾಥ್​ ಅವರದ್ದಾಗಿದೆ. ಇನ್ನು ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ‌ ಪತ್ತೆಗೆ ಬಲೆ ಬೀಸಿದ್ದಾರೆ.


ಇದನ್ನೂ ಓದಿ: Kalaburagi: ಹಾಲು ಕುಡಿದ ಕಲ್ಲಿನ ಬಸವ, ನಂದಿ ವಿಗ್ರಹದ ಪವಾಡ ನೋಡಲು ಹರಿದು ಬರ್ತಿದೆ ಜನ ಸಾಗರ


ಬೆಳಗಾವಿಯ ಬಿಡಿಸಿಸಿ ಬ್ಯಾಂಕ್ ದರೋಡೆ

 ಬೆಳಗಾವಿ ಜಿಲ್ಲೆಯ ಸದವತ್ತಿ ತಾಲೂಕಿನ ಮುರುಗೋಡ ಗ್ರಾಮದ ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಕಳ್ಳತನ ನಡೆದಿತ್ತು. ದರೋಡೆಯಲ್ಲಿ ಬರೋಬ್ಬರಿ 4.37 ಕೋಟಿ ರೂಪಾಯಿ ಹಣ ಹಾಗೂ 1.65 ಕೋಟಿ ಮೌಲ್ಯದ ಚಿನ್ನಾಭರಣ ದೋಚಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಬೆಳರಚ್ಚು ತಜ್ಞರು, ಶ್ವಾನ ದಳ ಹಾಗೂ ಮುರಗೋಡು ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ಯಾಂಕ್ ಶಾಖೆಯನ್ನು ಸಂಪೂರ್ಣವಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದ್ದು, ಯಾರೊಬ್ಬರನ್ನು ಸಹ ಒಳಗೆ ಪ್ರವೇಶ ನೀಡಿಲ್ಲ.




ಇದನ್ನೂ ಓದಿ: Accident: ಆಂಧ್ರದಲ್ಲಿ ಕರ್ನಾಟಕ ಪೊಲೀಸರ ವಾಹನ ಅಪಘಾತ; ಶಿವಾಜಿನಗರ ಪಿಎಸ್ಐ, ಕಾನ್ಸ್‌ಟೇಬಲ್ ಸೇರಿ ಮೂವರ ದುರ್ಮರಣ


ಮ್ಯಾನೇಜರ್​ ರಿಂದ ಪೊಲೀಸರಿಗೆ ದೂರು


ಬಿಡಿಸಿಸಿ ಬ್ಯಾಂಕ್ ಮುರಗೋಡ ಶಾಖೆಯ ಮ್ಯಾನೇಜರ್ ಪ್ರಮೋದ ಯಲಿಗಾರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬ್ಯಾಂಕ್ ನಲ್ಲಿ ಕಳೆದ ಒಂದು ತಿಂಗಳಿಂದ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೇ ಬ್ಯಾಂಕ್ ನಲ್ಲಿ ಮ್ಯಾನೇಜರ್, ಕ್ಯಾಶರ್ ಹಾಗೂ ಸಿಬ್ಬಂದಿ 6 ಜನ ಕೆಲಸ ನಿರ್ವಹಣೆ ಮಾಡುತ್ತಿದ್ದೇವೆ. ನಿನ್ನೆ ಬ್ಯಾಂಕ್ ನಲ್ಲಿ 4.41 ಕೋಟಿ ರೂಪಾಯಿ ಹಣ ನಗದು  ಹಾಗೂ  ಚಿನ್ನಾಭರಣ ಅಡಮಾನವಾಗಿ ಇಟ್ಟು ಸಾಲ ಕೊಟ್ಟಿದ್ದ 3.93 ಕೆಜಿ ಚಿನ್ನಾಭರಣ ಸಹ ಇತ್ತು.


ಶೆಟರ್ ಕೀ ಹಾಗೂ ಸ್ಟ್ರಾಂಗ್ ರೂಂ ಕೀ ಎರಡು ಸೆಟ್ಟು ಇತ್ತು. ಸ್ಟ್ರಾಂಗ್ ರೂಂ ಒಡೆದಿಲ್ಲ, ಬದಲಾಗಿ ಕೀ ಬಳಸಿ ಓಪನ್ ಮಾಡಲಾಗಿದೆ. ಇನ್ನೂ ಸಿಸಿಟಿವಿ ಡಿವಿಆರ್ ಸಹ ಕಳ್ಳತನ ಮಾಡಲಾಗಿದೆ ಎಂದು ಮ್ಯಾನೇಜರ್ ಪ್ರಮೋದ್​ ಯಲಿಗಾರ್ ದೂರು ನೀಡಿದ್ದಾರೆ.


Published by:ಪಾವನ ಎಚ್ ಎಸ್
First published: