• Home
  • »
  • News
  • »
  • state
  • »
  • Hotel Food Price Hike: ಹೋಟೆಲ್ ಫುಡ್ ದರ ಏರಿಕೆ; ನಿಮ್ಮಿಷ್ಟದ ತಿಂಡಿ ಬೆಲೆ ಎಷ್ಟು ಹೆಚ್ಚಾಗಿದೆ?

Hotel Food Price Hike: ಹೋಟೆಲ್ ಫುಡ್ ದರ ಏರಿಕೆ; ನಿಮ್ಮಿಷ್ಟದ ತಿಂಡಿ ಬೆಲೆ ಎಷ್ಟು ಹೆಚ್ಚಾಗಿದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ಹಲವು ದಿನಗಳಿಂದ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ತರಕಾರಿ ಬೆಲೆಯೂ ಹೆಚ್ಚಾಗುತ್ತಿದೆ. ಕಟ್ಟಡದ ಬಾಡಿಗೆ, ತೆರಿಗೆ ಸಹ ಹೆಚ್ಚಳವಾಗಿದೆ. ಕಟ್ಟಡದ ಮೇಲಿನ ಜಿಎಸ್​ಟಿ ಸಹ  ನಮಗೆ ಹೊರೆ ಆಗುತ್ತಿದೆ ಎಂದು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ.

  • Share this:

Hotel Food Price Hike: ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮತ್ತೆ ತಾಗಿದೆ. ಕಳೆದ ತಿಂಗಳು ಹಾಲು ಮತ್ತು ಮೊಸರಿನ (Milk And Curd Price) ದರ ಏರಿಕೆಯಾಗಿತ್ತು. ಇದರ ಜೊತೆಯಲ್ಲಿಯೇ ಕೆಎಂಎಫ್​ ತನ್ನ ಎಲ್ಲಾ ಉತ್ಪನ್ನಗಳ (KMF Product Price) ಮೇಲಿನ ದರವನ್ನು ಹಂತ ಹಂತವಾಗಿ ಏರಿಕೆ ಮಾಡಿದೆ. ಇದೀಗ ಮತ್ತೆ ಬೆಲೆ ಏರಿಕೆ ಮಾಡಲಾಗಿದೆ. ಬೆಂಗಳೂರಿನ ಬಹುತೇಕ ಹೋಟೆಲ್​ಗಳು ಹೊಸ ದರಗಳತ್ತ ಮುಖ ಮಾಡಿವೆ. ಟೀ, ಕಾಫಿ, ತಿಂಡಿ, ಊಟ ಹೀಗೆ ಎಲ್ಲಾ ಆಹಾರ ಪದಾರ್ಥಗಳ ಮೇಲಿನ ದರ ಏರಿಕೆ ಕಂಡಿದೆ. ಬಿಸಿ ಬಿಸಿ ಟೀ, ಕಾಫಿ ಕುಡಿಯಲು ಹೋದ್ರೆ ಜೇಬು ಸಹ ಸುಡುತ್ತಿದೆ. ಹೋಟೆಲ್​ಗಳಲ್ಲಿ ಹೊಸ  ದರದ ಬೋರ್ಡ್ ಹಾಕಲಾಗುತ್ತಿದೆ.


ಬೆಲೆ ಏರಿಕೆ ಯಾಕೆ?


ನವೆಂಬರ್ ಕೊನೆ ವಾರದಲ್ಲಿ ಕೆಎಂಎಫ್ ಹಾಲು ಮತ್ತು ಮೊಸರಿನ ದರ ಏರಿಕೆ ಮಾಡಿತ್ತು. ಇದರ ಜೊತೆ ತುಪ್ಪ, ಪನೀರ್ ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆ ಸಹ ಏರಿಕೆಯಾಗಿದೆ. ಗ್ಯಾಸ್ ಬೆಲೆ, ಕಟ್ಟಡಗಳ ಬಾಡಿಗೆ, ತೆರಿಗೆ ಸಹ ಏರಿಕೆಯಾಗಿದೆ.


ಕಳೆದ ಹಲವು ದಿನಗಳಿಂದ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ತರಕಾರಿ ಬೆಲೆಯೂ ಹೆಚ್ಚಾಗುತ್ತಿದೆ. ಕಟ್ಟಡದ ಬಾಡಿಗೆ, ತೆರಿಗೆ ಸಹ ಹೆಚ್ಚಳವಾಗಿದೆ. ಕಟ್ಟಡದ ಮೇಲಿನ ಜಿಎಸ್​ಟಿ ಸಹ  ನಮಗೆ ಹೊರೆ ಆಗುತ್ತಿದೆ ಎಂದು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ.


ಅಡುಗೆ ಸಾಮಾಗ್ರಿ ಸೇರಿದಂತೆ ಇನ್ನಿತರ ಬೆಲೆಗಳಲ್ಲಿ ಏರಿಕೆಯಾಗಿರುವ ಹಿನ್ನೆಲೆ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.


ಮಧ್ಯಮ ಹೋಟೆಲ್ ದರ ಏರಿಕೆ ಹೀಗಿದೆ

ತಿಂಡಿಮೊದಲಿನ ದರಹೊಸ ದರ
ಚಿತ್ರಾನ್ನ30 ರೂಪಾಯಿ35 ರೂಪಾಯಿ
ಪರೋಟಾ30 ರೂಪಾಯಿ40 ರೂಪಾಯಿ
ಎರಡು ಚಪಾತಿ20 ರೂಪಾಯಿ30 ರೂಪಾಯಿ
ಪುಳಿಯೋಗರೆ30 ರೂಪಾಯಿ40 ರೂಪಾಯಿ
ಮೊಸರನ್ನ30 ರೂಪಾಯಿ35 ರೂಪಾಯಿ
ರೈಸ್ ಬಾತ್30 ರೂಪಾಯಿ35-40 ರೂಪಾಯಿ
ಪೂರಿ30 ರೂಪಾಯಿ40 ರೂಪಾಯಿ
ಅನ್ನ-ಸಾಂಬಾರ್30 ರೂಪಾಯಿ40 ರೂಪಾಯಿ
ದೋಸೆ35 ರೂಪಾಯಿ40 ರೂಪಾಯಿ
ಟೀ10-12 ರೂಪಾಯಿ15-18 ರೂಪಾಯಿ
ಸೆಟ್ ದೋಸೆ30 ರೂಪಾಯಿ40 ರೂಪಾಯಿ

ಪ್ರತಿ ಲೀ. ಹಾಲಿನ ದರ 2 ರೂಪಾಯಿ ಹೆಚ್ಚಳವಾಗಲಿದೆ. ಗ್ರಾಹಕರಿಗೆ, ರೈತರಿಗೆ ಹೊರೆಯಾಗದಂತೆ ನಿರ್ಧಾರ ಕೈಗೊಂಡಿದ್ದು, ಹಾಲು ಹಾಗೂ ಮೊಸರು ಪ್ರತಿ ಲೀಟರ್​​ಗೆ​ 2 ರೂ. ದರ ಹೆಚ್ಚಳ ಮಾಡಿದ್ದು, ನಾಳಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಗ್ರಾಹಕರು ಸಹಕಾರ ನೀಡಬೇಕು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ.


ಹಾಲು-   ಹಳೆಯ ದರ   ಹೊಸ‌ ದರ


ಟೋನ್ಡ್ ಹಾಲು - ಹಳೆಯ ದರ 37 -  ಹೊಸ‌ ದರ 39 ರೂ
ಹೋಮೋಜಿನೈಸ್ಡ್ ಟೋನ್ಡ್ ಹಾಲು - 38 - 40 ರೂ
ಹೋಮೋಜಿನೈಸ್ಡ್ ಹಸುವಿನ ಹಾಲು - 42 - 44 ರೂ
ಸ್ಪೆಷಲ್‌ ಹಾಲು - 43 - 45 ರೂ
ಶುಭಂ ಹಾಲು - 43 - 45 ರೂ
ಹೋಮೋಜಿನೈಸ್ಡ್ ಸ್ಟ್ಯಾಂಡರ್ಡೈಸರ್ ಹಾಲು - 44 - 46 ರೂ
ಸಮೃದ್ಧಿ ಹಾಲು - 48 - 50 ರೂ
ಸಂತೃಪ್ತಿ ಹಾಲು - 50 - 52 ರೂ
ಡಬ್ಬಲ್‌ ಟೋನ್ಡ್ ಹಾಲು - 36 - 38 ರೂ
ಮೊಸರು ಪ್ರತಿ ಲೀಟರ್​ಗೆ - 45 - 47 ರೂ ಏರಿಕೆಯಾಗಿದೆ.


ಇದನ್ನೂಓದಿ: Karnataka Election 2023: ಖರ್ಗೆಗೆ ತವರು ಗೆಲ್ಲುವ ಸವಾಲು; ಕರ್ನಾಟಕ ಟೀಂ ಜೊತೆ ಇಂದು ಮೀಟಿಂಗ್


ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಹಾಲು ಉತ್ಪಾದಕರಿಗೆ (Milk Producers) ಉತ್ತೇಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉಳಿಕೆ ಅನುದಾನದಲ್ಲಿ ಕುರಿ, ಮೇಕೆ, ಹಸು ಹಾಗೂ ಎಮ್ಮೆ ಘಟಕಗಳ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Published by:Mahmadrafik K
First published: