Dakshina Kannada: ಭೂಮಿಯಿಂದ ಚಿಮ್ಮುತ್ತೆ ಬಿಸಿನೀರಿನ ತೀರ್ಥ, ಇದರಿಂದ ಸ್ನಾನ ಮಾಡಿದ್ರೆ ಚರ್ಮರೋಗ ಮಾಯ!

ದಕ್ಷಿಣ ಭಾರತದ ಏಕೈಕ ಬಿಸಿನೀರಿನ ತೀರ್ಥ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿದೆ. ಬೆಂದ್ರ್ ಅಂದ್ರೆ ತುಳುವಿನಲ್ಲಿ ಬಿಸಿನೀರು ಎಂದರ್ಥ. ಇದರಿಂದ ಸ್ನಾನ ಮಾಡಿದ್ರೆ ಚರ್ಮರೋಗ ಮಾಯವಾಗುತ್ತೆ. ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ನಿರ್ಧರಿಸಿದೆ.

ಬಿಸಿನೀರಿನ ಬುಗ್ಗೆ

ಬಿಸಿನೀರಿನ ಬುಗ್ಗೆ

  • Share this:
ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಬುಗ್ಗೆ (Hot Water Shrine) ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿದೆ. ಪುತ್ತೂರಿನಿಂದ (Putturu)  ಸುಮಾರು 16 ಕಿಲೋ ಮೀಟರ್ ದೂರದ ಬೆಟ್ಟಂಪಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇರ್ದೆ ಗ್ರಾಮದಲ್ಲಿ ಬೆಂದ್ರತೀರ್ಥವಿದೆ. ಬೆಂದ್ರ್ ಅಂದ್ರೆ ತುಳುವಿನಲ್ಲಿ ಬಿಸಿನೀರು ಎಂದರ್ಥ. ಬೆಂದ್ರತೀರ್ಥ ಹಲವು ದಶಕದಿಂದ ದಕ್ಷಿಣ ಭಾರತದ (South India) ಏಕೈಕ ಬಿಸಿನೀರಿನ ತಾಣ ಎಂದು ಪ್ರಸಿದ್ಧಿ ಪಡೆದಿದೆ. ಇಲ್ಲಿ ಚಿಮ್ಮುವ ನೀರು 99 ಡಿಗ್ರಿ ರಿಂದ 106 ಡಿಗ್ರಿ ಫಾರನ್ ಹೀಟ್ ಗಳಷ್ಟಿದೆ ಎನ್ನುವುದು ವೈಜ್ಞಾನಿಕವಾಗಿ ( Scientifically Confirmed)  ದೃಢಪಟ್ಟಿದೆ. ಈಗ ಈ ಕ್ಷೇತ್ರದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ (Tourist Department) ಹಸಿರು ನಿಶಾನೆ ನೀಡಿದ್ದು, ನರೇಗಾ ಯೋಜನೆಯಲ್ಲಿ ತಾಣದ ಕಾಯಕಲ್ಪಕ್ಕೆ ಸಿದ್ಧತೆ ನಡೆದಿದೆ.

ಗಂಟೆಗೆ 1350 ರಿಂದ 4600 ಲೀಟರ್ ನಷ್ಟು ಬಿಸಿ ನೀರು ಚಿಮ್ಮತ್ತಿದ್ದು, ಇದರ ಉಷ್ಣಾಂಶ 99 ಡಿಗ್ರಿ ರಿಂದ 106 ಡಿಗ್ರಿ ಫಾರನ್ ಹೀಟ್ ಗಳಷ್ಟಿದೆ ಎನ್ನುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಗಂಧಕದ ವಾಸನೆಯಿಂದ ಕೂಡಿದ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗ ದೂರವಾಗುತ್ತದೆ ಎಂಬ ನಂಬಿಕೆ ಈ ಭಾಗದ ಜನರಲ್ಲಿ ಇನ್ನೂ ಇದೆ.

ಬೆಂದ್ರತೀರ್ಥದಲ್ಲಿ ಸ್ನಾನಮಾಡಿ ಪುನೀತರಾಗುತ್ತಿದ್ರು ಜನ!
ಸಾವಿರಾರು ಜನರು ಈ ಪ್ರದೇಶಕ್ಕೆ ಬಂದು ಕೆರೆಯಲ್ಲಿ ಸ್ನಾನ ಮಾಡಿ ಪುನೀತರಾಗುತ್ತಿದ್ದರು. ಬೆಂದ್ರ ಎಂಬುದು ತುಳುವಿನಲ್ಲಿ ಬಿಸಿ ಎನ್ನುವ ಅರ್ಥವನ್ನು ನೀಡುತ್ತದೆ. ಈ ಕಾರಣದಿಂದ ಕೆರೆಯಲ್ಲಿ ಬಿಸಿ ನೀರು ಚಿಮ್ಮುವುದರಿಂದಾಗಿ ಇಲ್ಲಿಗೆ ಬೆಂದ್ರತೀರ್ಥ ಎಂಬ ಹೆಸರು ಬರಲು ಕಾರಣವಾಯಿತು. ಮಾತ್ರವಲ್ಲದೇ ದಕ್ಷಿಣ ಭಾರತ ಏಕೈಕ ಸ್ಥಳ ಎಂದು ಪ್ರಖ್ಯಾತವಾಯಿತು.

Hot water gushes from the earth now green signal for development south indias only hot shrine place
ಬೆಂದ್ರತೀರ್ಥ (ಬಿಸಿನೀರಿನ ಬುಗ್ಗೆ)


ಇದನ್ನೂ ಓದಿ: ಕುರುಡುಮಲೆ ವಿನಾಯಕ ಬ್ರಹ್ಮ ರಥೋತ್ಸವ ಸಂಪನ್ನ, ಮಳೆಹಾನಿ ತಡೆಯುವಂತೆ ವಿಘ್ನೇಶ್ವರನಲ್ಲಿ ಮನವಿ

ಜಾತ್ರೆಗೂ ಮುನ್ನ ಬೆಂದ್ರತೀರ್ಥದಿಂದ ಅಭಿಷೇಕ
ಬೆಂದ್ರತೀರ್ಥ ಇರುವಂತಹ ಸ್ಥಳದ ಪಕ್ಕದಲ್ಲಿ ಸೀರೆನದಿ ಹರಿಯುತ್ತಿದೆ. ಇದರ ತಟದಲ್ಲಿ ಇರ್ದೆ ವಿಷ್ಣುಮೂರ್ತಿ ದೇವಾಲಯವಿದೆ. ವಾರ್ಷಿಕ ಜಾತ್ರೆಗೆ ಮುಂಚೆ ಬೆಂದ್ರತೀರ್ಥದಿಂದ ತೀರ್ಥ ತಂದು ದೇವರಿಗೆ ಅಭಿಷೇಕ ಮಾಡಿ ನಂತರದಲ್ಲಿ ಜಾತ್ರೆಯ ಕಾರ್ಯಗಳು ನಡೆಯುತ್ತದೆ.

ಪ್ರತೀ ಅಮಾವಾಸ್ಯೆಗೆ ಭಕ್ತರಿಂದ ತೀರ್ಥಸ್ನಾನ
ಇಲ್ಲಿರುವ ಅಶ್ವಥ ಮರದ ಕೆಳಗೆ ದೇವರ ಕಟ್ಟೆಯಿದ್ದು ಕಟ್ಟೆ ಪೂಜೆಗಳು ಇಲ್ಲಿ ನಿರಂತರವಾಗಿ ನಡೆಯುತ್ತಾ ಬರುತ್ತಿದೆ. ಪ್ರತಿವರ್ಷ ತೀರ್ಥ ಅಮಾವಾಸ್ಯೆಯಂದು ಇಲ್ಲಿಗೆ ತೀರ್ಥಸ್ನಾನಕ್ಕೆ ನೂರಾರು ಜನರು ಬರುತ್ತಾರೆ. ಇಷ್ಟೆಲ್ಲಾ ವಿಶೇಷತೆಗಳಿದ್ದ ಬೆಂದ್ರ ತೀರ್ಥವನ್ನು ಅಭಿವೃದ್ಧಿಗೊಳಿಸದೆ ನಿರ್ಲಕ್ಷ್ಯ ಮಾಡಿದ ಪರಿಣಾಮ ಈ ಕ್ಷೇತ್ರವೀಗ ಪಾಳು ಬಿದ್ದಿದೆ.

Hot water gushes from the earth now green signal for development south indias only hot shrine place
ಬಿಸಿನೀರಿನ ಕೊಳದ ಬಳಿ ಹರಿಯುವ ನದಿ


ಕೊಳವೆಬಾವಿಯಲ್ಲೂ ಬರ್ತಿದ್ಯಂತೆ ಬಿಸಿನೀರು!
ಇಲ್ಲಿನ ಸ್ನಾನಗೃಹ, ಪುಷ್ಕರಣಿ ಕೆರೆ, ಅಡುಗೆ ಕೊಠಡಿಗಳು ಉಪಯೋಗಕ್ಕೆ ಯೋಗ್ಯವಾಗದಂತಹ ಸ್ಥಿತಿಗೆ ತಲುಪಿವೆ. ಬಿಸಿ ನೀರಿನ ಬುಗ್ಗೆ ಇರುವ ಈ ತೀರ್ಥ ಕ್ಷೇತ್ರದ ಹತ್ತಿರದಲ್ಲೇ ಹಲವು ಕೊಳವೆ ಬಾವಿಗಳನ್ನು ಕೊರೆದಿರುವುದರಿಂದ ಕೊಳವೆ ಬಾವಿಗಳಲ್ಲಿ ಬಿಸಿನೀರು ಬರುವಂತಹ ಸ್ಥಿತಿಗೆ ತಲುಪಿದೆ ಎನ್ನುವ ಅಭಿಪ್ರಾಯ ಸ್ಥಳೀಯರದ್ದಾಗಿದೆ.

ಬೇಸಿಗೆಯಲ್ಲಿ ಕೆರೆಯಲ್ಲಿ ನೀರಿನ ಬುಗ್ಗೆ ಬರುವುದು ಮತ್ತು ಕೊಳವೆಬಾವಿಯಲ್ಲಿ ಬಿಸಿನೀರು ಬರುತ್ತದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಪ್ರವಾಸೋದ್ಯಮ ಇಲಾಖೆಗೆ ಸೇರಿದ ಕಟ್ಟಡ ಇಲ್ಲಿದ್ದು, ಬೆಟ್ಟಂಪಾಡಿ ಗ್ರಾಮ ಪಂಚಾಯ್ತಿ ಇದರ ನಿರ್ವಹಣೆ ಮಾಡುತ್ತಿದೆ.

ಬೆಂದ್ರತೀರ್ಥ ಅಭಿವೃದ್ಧಿಗೆ ಸರ್ಕಾರದ ನಿರ್ಧಾರ
ಇದೀಗ ಈ ಬಿಸಿ ನೀರಿನ ಬುಗ್ಗೆಯ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಯೋಜನೆಗಳನ್ನು ಹಾಕಲಾಗಿದೆ. ಪ್ರವಾಸೋದ್ಯಮ ಇಲಾಖೆ ನಿರ್ದೇಶನದಲ್ಲಿ ನರೇಗಾ ಯೋಜನೆಯಡಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಕ್ರಮಕೈಗೊಳ್ಳಲಾಗಿದೆ. ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ, ಸುತ್ತಲೂ ಆವರಣ ಗೋಡೆ, ಗಿಡಗಳನ್ನು ಬೆಳೆಸಿ ಥೀಮ್ ಪಾರ್ಕ್ ಮಾಡಲು ಪ್ಲ್ಯಾನ್ ನಡೀತಿದೆ.

ಇದನ್ನೂ ಓದಿ: ಗಣಪತಿ ಪೂಜೆ ಮಾ ಮುಸ್ಲಿಂ ಮಹಿಳೆ ವಿರುದ್ಧ ಫತ್ವಾ, 'ಜಿಹಾದಿ' ಎಂದ ಬಿಜೆಪಿ ನಾಯಕ!

ದೋಣಿ ವಿಹಾರ ಮಾಡಲು ಚಿಂತನೆ
ಪಕ್ಕದಲ್ಲಿ ಸೀರೆ ನದಿ ಹರಿಯುತ್ತಿದ್ದು ದೋಣಿ ವಿಹಾರ, ಸಾರ್ವಜನಿಕರ ವಿಹಾರಧಾಮ ಮುಂತಾದ ಕಾರ್ಯಕ್ರಮಗಳನ್ನು ಮತ್ತು ಭೂಗರ್ಭ ತಜ್ಞರನ್ನು ಕರೆಸಿ ಹಿಂದಿನ ಕಾಲದಲ್ಲಿ ಇದ್ದ ಬಿಸಿನೀರು ಮತ್ತೆ ಬರುವಂತೆ ಮಾಡಲು ಅಧಿಕಾರಿಗಳು ಪ್ರಯತ್ನದಲ್ಲಿದ್ದಾರೆ. ಇದೀಗ ಪ್ರವಾಸೋದ್ಯಮ ಇಲಾಖೆಗೆ ಹಸಿರು ನಿಶಾನೆ ನೀಡಿದ್ದು ಅಭಿವೃದ್ಧಿಗೆ ಸಂಬಂಧಿಸಿದಂತೆ ದೇವಾಲಯದ ಆಡಳಿತ ಮಂಡಳಿ, ಭಕ್ತರ ಸಭೆ ಕರೆದು ಅಭಿವೃದ್ಧಿ ಬಗ್ಗೆ ಚಿಂತನೆ ಸದ್ಯದಲ್ಲೇ ನಡೆಯಲಿದೆ.
Published by:Thara Kemmara
First published: