ಎಂಟಿಬಿ ಬಗ್ಗೆ ಅಪಪ್ರಚಾರ; ಸಹೋದರ ಪಿಳ್ಳಣ್ಣ ವಿರುದ್ಧ ಕುರುಬರ ಸಂಘದ ಮುಖಂಡ ಆಕ್ರೋಶ

ಪಿಳ್ಳಣ್ಣ ತಮ್ಮ ಜಗಳವನ್ನು ಗರುಡಾಚಾರ್ ಪಾಳ್ಯದಲ್ಲಿಟ್ಟುಕೊಳ್ಳಬೇಕೇ ಹೊರತು ಹೊಸಕೋಟೆಯಲ್ಲಲ್ಲ. ತಮ್ಮ ಮನೆ ಜಗಳವನ್ನು ಬೀದಿಗೆ ಬರಬಾರದು. ಎಂಟಿಬಿ ನಾಗರಾಜ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದನ್ನು ಅವರು ನಿಲ್ಲಿಸಬೇಕು. ಇಂಥ ಹೇಳಿಕೆ ಮುಂದುವರಿದಲ್ಲಿ ಅವರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಚೌಡಪ್ಪ ಎಚ್ಚರಿಕೆ ನೀಡಿದ್ದಾರೆ.

news18
Updated:November 17, 2019, 3:14 PM IST
ಎಂಟಿಬಿ ಬಗ್ಗೆ ಅಪಪ್ರಚಾರ; ಸಹೋದರ ಪಿಳ್ಳಣ್ಣ ವಿರುದ್ಧ ಕುರುಬರ ಸಂಘದ ಮುಖಂಡ ಆಕ್ರೋಶ
ಎಂಟಿಬಿ ನಾಗರಾಜ್​​
  • News18
  • Last Updated: November 17, 2019, 3:14 PM IST
  • Share this:
ಹೊಸಕೋಟೆ(ನ. 17): ಹೊಸಕೋಟೆ ಉಪಚುನಾವಣೆಯ ಕಾವು ದಿನೇದಿನೇ ಏರುತ್ತಿದೆ. ಕಾಂಗ್ರೆಸ್​ನಿಂದ ಕಳೆದ ಬಾರಿ ಗೆದ್ದು ಇದೀಗ ಬಿಜೆಪಿ ಟಿಕೆಟ್​ನಲ್ಲಿ ಸ್ಪರ್ಧಿಸುತ್ತಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಅವರ ಹಿರಿಯ ಸಹೋದರ ಪಿಳ್ಳಣ್ಣ ಅವರೇ ಟೀಕೆಗಳ ಸುರಿಮಳೆಗೈಯ್ಯುತ್ತಿದ್ದಾರೆ. ಪಿಳ್ಳಣ್ಣ ಅವರ ಈ ವರ್ತನೆ ವಿರುದ್ಧ ಹೊಸಕೋಟೆ ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೌಡಪ್ಪ ತಿರುಗಿಬಿದ್ಇದ್ದಾರೆ. ಎಂಟಿಬಿಯನ್ನು ಪದೇ ಪದೇ ಹೇಳಿಕೆಗಳನ್ನು ನೀಡುವ ಮೂಲಕ ಕುರುಬ ಸಮುದಾಯದ ನಾಯಕನನ್ನು ನಿಂದಿಸುತ್ತಿದ್ದಾರೆ ಎಂದು ಚೌಡಪ್ಪ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಪಿಳ್ಳಣ್ಣಗೆ ಅಕ್ರಮಗಳನ್ನು ಮಾಡಲು ಎಂಟಿಬಿ ಬಿಡಲಿಲ್ಲವೆಂದು ಈ ರೀತಿಯಾಗಿ ತೇಜೋವಧೆ ಮಾಡುತ್ತಿದ್ದಾರೆ. ಹೊಸಕೋಟೆ ಕ್ಷೇತ್ರಕ್ಕೆ ಪಿಳ್ಳಣ್ಣನವರ ಕೊಡುಗೆ ಏನೂ ಇಲ್ಲ. ಅವರ ಹೆಸರಿನಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಹತ್ತು ವೋಟೂ ಕೂಡ ಬೀಳುವುದಿಲ್ಲ ಎಂದು ಕುರುಬರ ಸಂಘದ ಮುಖಂಡರು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: ಉಪಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟ; ನಟ ಜಗ್ಗೇಶ್, ಸಂಸದ ತೇಜಸ್ವಿ ಸೂರ್ಯ ಸೇರಿ ಹಲವು ಪ್ರಮುಖರಿಗೆ ಕೊಕ್​

ಪಿಳ್ಳಣ್ಣ ತಮ್ಮ ಜಗಳವನ್ನು ಗರುಡಾಚಾರ್ ಪಾಳ್ಯದಲ್ಲಿಟ್ಟುಕೊಳ್ಳಬೇಕೇ ಹೊರತು ಹೊಸಕೋಟೆಯಲ್ಲಲ್ಲ. ತಮ್ಮ ಮನೆ ಜಗಳವನ್ನು ಬೀದಿಗೆ ಬರಬಾರದು. ಎಂಟಿಬಿ ನಾಗರಾಜ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದನ್ನು ಅವರು ನಿಲ್ಲಿಸಬೇಕು. ಇಂಥ ಹೇಳಿಕೆ ಮುಂದುವರಿದಲ್ಲಿ ಅವರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಚೌಡಪ್ಪ ಎಚ್ಚರಿಕೆ ನೀಡಿದ್ದಾರೆ.

ಅನರ್ಹ ಶಾಸಕ ಎಂಟಿಬಿ ನಾಗರಾಜ್ ಬಿಜೆಪಿ ಸೇರ್ಪಡೆಯಾಗುವುದರೊಂದಿಗೆ ಹೊಸಕೋಟೆ ರಣಾಂಗಣಕ್ಕೆ ಹೊಸ ಆಯಾಮ ಸಿಕ್ಕಿದೆ. ಬಿಜೆಪಿಯಲ್ಲಿ ಶರತ್ ಬಚ್ಚೇಗೌಡ ಬಂಡಾಯ ಎದ್ದು ಈಗ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಇಲ್ಲಿ ಅಪರೂಪಕ್ಕೆ ತ್ರಿಕೋನ ಫೈಟ್ ಪ್ರಾರಂಭಗೊಂಡಿದೆ. ಕಾಂಗ್ರೆಸ್​ನಲ್ಲಿದ್ದ ಎಂಟಿಬಿ ನಾಗರಾಜ್ ಈಗ ಬಿಜೆಪಿ ಟಿಕೆಟ್​ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಂಟಿಬಿ ನಾಗರಾಜ್ ವರ್ಸಸ್ ಶರತ್ ಬಚ್ಚೇಗೌಡ ಹಣಾಹಣಿಯಲ್ಲಿ ಕಾಂಗ್ರೆಸ್ ಕೂಡ ಮೂರನೇ ಶಕ್ತಿಯಾಗಿ ತೊಡೆ ತಟ್ಟುತ್ತಿದೆ. ಭೈರತಿ ಸುರೇಶ್ ಪತ್ನಿ ಪದ್ಮಾವತಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿರುವುದು ಹೊಸಕೋಟೆ ಅಖಾಡಕ್ಕೆ ಹೊಸ ಕಳೆ ಬಂದಿದೆ.

ಇದನ್ನೂ ಓದಿ: ಮರ್ಯಾದೆ ಇಲ್ಲದ ಅನರ್ಹರು ಚುನಾವಣೆ ಗೆಲ್ಲಲು ಗಿಮಿಕ್ ಮಾಡುತ್ತಿದ್ದಾರೆ; ಸಿದ್ದರಾಮಯ್ಯ

ಡಿಸೆಂಬರ್ 5ಕ್ಕೆ ನಿಗದಿಯಾಗಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ನ. 18, ಸೋಮವಾರ ಕೊನೆಯ ದಿನವಾಗಿದೆ. ನಾಮಪತ್ರ ಹಿಂಪಡೆಯಲು ನ. 21 ಅಂತಿಮ ದಿನವಾಗಿದೆ. ಶರತ್ ಬಚ್ಚೇಗೌಡ ಈಗಾಗಲೇ ನಾಮಪತ್ರ ಸಲ್ಲಿಸಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಕೂಡ ನಿನ್ನೆಯೇ ನಾಮಪತ್ರ ಸಲ್ಲಿಸಿದ್ದಾರೆ. ಎಂಟಿಬಿ ನಾಗರಾಜ್ ಮೊನ್ನೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರಾದರೂ ಸೋಮವಾರ ಅಧಿಕೃತವಾಗಿ ಮತ್ತೊಮ್ಮೆ ನಾಮಪತ್ರ ಕೊಡಲಿದ್ದಾರೆ. ಶರತ್ ಬಚ್ಚೇಗೌಡ ಮತ್ತು ಪದ್ಮಾವತಿ ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ವ್ಯಕ್ತವಾಗಿದ್ದ ಶಕ್ತಿ ಪ್ರದರ್ಶನಕ್ಕಿಂತ ಬೃಹತ್ ಮಟ್ಟದಲ್ಲಿ ಸೋಮವಾರ ತಮ್ಮ ಶಕ್ತಿ ಪ್ರದರ್ಶನ ತೋರಲು ಎಂಟಿಬಿ ಯೋಜಿಸಿದ್ದಾರೆನ್ನಲಾಗಿದೆ.(ವರದಿ: ನವೀನ್ ಗೌಡ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 17, 2019, 3:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading