Hunsur, Hoskote Bypoll Results: ಎಂಟಿಬಿ ನಾಗರಾಜ್, ಹೆಚ್. ವಿಶ್ವನಾಥ್​ಗೆ ಮುಖಭಂಗ; ಸೋಲಿನ ಸುಳಿವು ಅವರಿಗೆ ಮೊದಲೇ ಸಿಕ್ಕಿತ್ತಾ?

ಎಂಟಿಬಿ ನಾಗರಾಜ್ ಮತ್ತು ಹೆಚ್. ವಿಶ್ವನಾಥ್ ಅವರ ಇತ್ತೀಚಿನ ಕೆಲ ಹೇಳಿಕೆಗಳು ಅವರಿಗೆ ಸೋಲಿನ ಭೀತಿಯಲ್ಲಿದ್ದಿರಬಹುದು ಎಂಬ ಅನುಮಾನ ಮೂಡಿಸುಂತಿದ್ದವು.

ಎಂಟಿಬಿ ನಾಗರಾಜ್, ಹೆಚ್. ವಿಶ್ವನಾಥ್

ಎಂಟಿಬಿ ನಾಗರಾಜ್, ಹೆಚ್. ವಿಶ್ವನಾಥ್

  • News18
  • Last Updated :
  • Share this:
ಬೆಂಗಳೂರು(ಡಿ. 09): ಈ ಬಾರಿಯ ಉಪಚುನಾವಣೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಕ್ಷೇತ್ರಗಳಲ್ಲಿ ಹೊಸಕೋಟೆ ಮತ್ತು ಹುಣಸೂರು ಕೂಡ ಇವೆ. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಿಬ್ಬರೂ ಸೋಲನುಭವಿಸುತ್ತಿದ್ಧಾರೆ. ಕರ್ನಾಟಕ ರಾಜಕಾರಣಿಗಳ ಪೈಕಿ ಅತೀ ಹೆಚ್ಚು ಘೋಷಿತ ಆದಾಯ ಇರುವ ಅಭ್ಯರ್ಥಿಗಳಲ್ಲಿ ಎಂಟಿಬಿ ನಾಗರಾಜ್ ಕೂಡ ಒಬ್ಬರು. ಇವರು ಹೊಸಕೋಟೆಯಲ್ಲಿ ಸೋಲನುಭವಿಸುತ್ತಿದ್ದಾರೆ. ಇಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದಿದ್ದ ಶರತ್ ಬಚ್ಚೇಗೌಡ ಗೆಲುವು ಸಾಧಿಸುವುದು ಖಚಿತವಾಗಿದೆ.

ಹುಣಸೂರಿನಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ತ್ರಿಕೋನ ಹಣಾಹಣಿ  ನಡೆದಿದೆ. ಆದರೆ, ಇಲ್ಲಿ ಕಾಂಗ್ರೆಸ್ ಪಕ್ಷದ ಹೆಚ್.ಪಿ. ಮಂಜುನಾಥ್ ಅವರು ಸ್ಪಷ್ಟ ಮುನ್ನಡೆ ಗಿಟ್ಟಿಸಿದ್ದಾರೆ. ಹೆಚ್. ವಿಶ್ವನಾಥ್ ಅವರು ಎರಡನೇ ಸ್ಥಾನಕ್ಕಾಗಿ ಇಲ್ಲಿ ಪೈಪೋಟಿ ನಡೆಸಬೇಕಾದ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿ: Karnataka Bypoll Results: ಹುಣಸೂರು ಮತ್ತು ಶಿವಾಜಿನಗರ ಕ್ಷೇತ್ರಗಳು ಮಾತ್ರ ಕಾಂಗ್ರೆಸ್ ತೆಕ್ಕೆಗೆ?

ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಿನ ಸುಳಿವು ಮೊದಲೇ ಸಿಕ್ಕಿತ್ತಾ ಎಂದು ಅನುಮಾನ ಮೂಡಿಸುವ ಬೆಳವಣಿಗೆ ಇತ್ತೀಚೆಗೆ ಕಂಡು ಬಂದಿದ್ದವು. ಹೊಸಕೋಟೆಯ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ತಾನು ಸೋತರೆ ಅದಕ್ಕೆ ಬಚ್ಚೇಗೌಡರೇ ಕಾರಣ ಎಂಬಂತಹ ಮಾತುಗಳನ್ನಾಡಿದ್ದರು. ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರ ತಂದೆ ಮತ್ತು ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಅವರು ತಮ್ಮ ಪರವಾಗಿ ಕೆಲಸ ಮಾಡಿಲ್ಲ ಎಂದು ಎಂಟಿಬಿ ದೂರಿದ್ದರು.

ಇನ್ನು, ಹುಣಸೂರಿನಲ್ಲೂ ಹೆಚ್. ವಿಶ್ವನಾಥ್ ಅವರಿಗೆ ಸೋಲಿನ ಹಣೆಬರಹ ಕಾಣಿಸಿದ್ದಂತಿತ್ತು. ಇದಕ್ಕೆ ಅವರ ಇತ್ತೀಚಿನ ಹೇಳಿಕೆಗಳೇ ಸಾಕ್ಷಿ. ಕಾಂಗ್ರೆಸ್ ಪಕ್ಷವನ್ನು ಬಿಟ್ಟಾಗಿನಿಂದಲೂ ಸಿದ್ದರಾಮಯ್ಯರನ್ನು ನಿರಂತರವಾಗಿ ಟೀಕಿಸುತ್ತಾ ಬರುತ್ತಿದ್ದ ವಿಶ್ವನಾಥ್ ಇತ್ತೀಚೆಗೆ ಸಿದ್ದರಾಮಯ್ಯರ ಬಗ್ಗೆ ಸಕರಾತ್ಮಕವಾಗಿ ಮಾತನಾಡುತ್ತಿದ್ದರು. ಸಿದ್ದರಾಮಯ್ಯ ರಾಜಕೀಯವಾಗಿ ಏನೇ  ಇದ್ದರೂ ವೈಯಕ್ತಿಕವಾಗಿ ಬಹಳ ಶಿಸ್ತಿನ ಮನುಷ್ಯ, ಭ್ರಷ್ಟರಹಿತ ರಾಜಕಾರಣಿ ಎಂದೆಲ್ಲಾ ಹೊಗಳಿದ್ದರು. ಸಿದ್ದರಾಮಯ್ಯರನ್ನು ಟೀಕಿಸಿದರೆ ಕುರುಬರ ವೋಟು ಕೈತಪ್ಪಿಹೋಗಬಹುದೆಂಬ ಭೀತಿ ಅವರನ್ನು ಕಾಡಿದಂತಿತ್ತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: