ನಾಳೆಯಿಂದ ಹೆಸರಘಟ್ಟದ ಐಐಹೆಚ್​​ಆರ್​ನಲ್ಲಿ ತೋಟಗಾರಿಕೆ ಮೇಳ; ಈ ಬಾರಿಯ ವಿಶೇಷತೆಗಳೇನು ಗೊತ್ತಾ?

ಐಐಹೆಚ್​ಆರ್ ಸಂಸ್ಥೆ ಇದುವರೆಗೂ 54 ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದಂತೆ 300 ಅಭಿವೃದ್ಧಿ ಮಾಡಿದೆ. 800 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಕೃಷಿ ಕ್ಷೇತ್ರದ ಏಳ್ಗೆಗೆ  ದುಡಿಯುತ್ತಿದೆ. ಈ ಮೇಳದಲ್ಲಿ 240ಕ್ಕೂ ಹೆಚ್ಚು  ಪ್ರದರ್ಶನ ಮಳಿಗೆ ಮತ್ತು 263 ಪ್ರಾತ್ಯಕ್ಷಿತೆಗಳನ್ನ  ಸ್ಥಾಪನೆ ಮಾಡಲಾಗಿದೆ.

ತೋಟಗಾರಿಕಾ ಮೇಳದ ಝಲಕ್​

ತೋಟಗಾರಿಕಾ ಮೇಳದ ಝಲಕ್​

  • Share this:
ಯಲಹಂಕ (ಫೆ.4):  ತೋಟಗಾರಿಕಾ ಬೆಳೆಗಳ ಕುರಿತು ಸಂಶೋಧನೆ ನಡೆಸುವ  'ಭಾರತೀಯ ತೋಟಗಾರಿಕಾ  ಸಂಶೋಧನಾ ಸಂಸ್ಥೆ' ( ಐಐಹೆಚ್ ಆರ್)  1968 ರಂದು ಹೆಸರಘಟ್ಟದ 263 ಹೆಕ್ಟೇರ್  ವಿಸ್ತೀರ್ಣದಲ್ಲಿ ಸ್ಥಾಪನೆಯಾಗಿರುವ ಸಂಸ್ಥೆ 54 ತೋಟಗಾರಿಕಾ ಬೆಳೆಗಳ 300 ಹೆಚ್ಚು ತಳಿಗಳ ಸಂಶೋಧನೆ ನಡೆಸಿದೆ. ಈ ಮೂಲಕ ರೈತರನ್ನ ಉದ್ಯಮದಾರರನ್ನಾಗಿ ಮಾಡಿದೆ. ಸಂಸ್ಥೆಯ ಆವರಣದಲ್ಲಿ ಇದೇ ಫೆಬ್ರವರಿ 5 ರಿಂದ ನಾಲ್ಕು ದಿನಗಳ ‘ರಾಷ್ಟ್ರೀಯ ತೋಟಗಾರಿಕಾ ಮೇಳ- 2020’ ನಡೆಯಲ್ಲಿದ್ದು 22 ರಾಜ್ಯಗಳ 50 ಸಾವಿರಕ್ಕೂ ಹೆಚ್ಚು ರೈತರು ಮೇಳದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

ಐಐಹೆಚ್​ಆರ್ ಸಂಸ್ಥೆ ಇದುವರೆಗೂ 54 ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದಂತೆ 300 ಅಭಿವೃದ್ಧಿ ಮಾಡಿದೆ. 800 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಕೃಷಿ ಕ್ಷೇತ್ರದ ಏಳ್ಗೆಗೆ  ದುಡಿಯುತ್ತಿದೆ. ಈ ಮೇಳದಲ್ಲಿ 240ಕ್ಕೂ ಹೆಚ್ಚು  ಪ್ರದರ್ಶನ ಮಳಿಗೆ ಮತ್ತು 263 ಪ್ರಾತ್ಯಕ್ಷಿತೆಗಳನ್ನ  ಸ್ಥಾಪನೆ ಮಾಡಲಾಗಿದೆ. ಸಂಸ್ಥೆ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಮತ್ತು ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಸಂರಕ್ಷಿತ ಬೇಸಾಯ, ಬೀಜೋತ್ಪಾದನೆಯ ಮೂಲಕ ಆದಾಯ ಗಳಿಸುವುದು, ಸಂಸ್ಥೆ ಅಭಿವೃದ್ಧಿ ಪಡಿಸಿದ ತಳಿಗಳಲ್ಲಿ ನ್ಯೂನತೆ ಇದ್ದಾರೆ ಈ ಬಗ್ಗೆ  ಕೃಷಿ ವಿಜ್ಞಾನಿಗಳೂಂದಿಗೆ ರೈತರ ಸಂವಾದ ಮಾಡುವ ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: ಒಂದು ಹಲಸಿನ ಮರದಿಂದ ವರ್ಷಕ್ಕೆ ಒಂದು ಕೋಟಿ ದುಡಿಯುತ್ತಿರುವ ರೈತ; ಆತ ಯಾರು? ಆ ಮರದ ವಿಶಿಷ್ಟತೆ ಏನು? ಇಲ್ಲಿದೆ ಡೀಟೈಲ್!

ಕಳೆದ ಐದು ವರ್ಷಗಳಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳ ಪ್ರದರ್ಶನ, ಹೆಚ್ಚಿನ ಇಳುವರಿ  ಪ್ರಭೇದಗಳು, ಕೀಟ ಮತ್ತು ರೋಗ ಸಹಿಷ್ಣು ಪ್ರಭೇದಗಳು, ಕೀಟ ಆಕರ್ಷಣ ಬಲೆಗಳು, ಜೈವಿಕ  ಕೀಟನಾಶಕಗಳು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು, ಹಲಾಸುರಾಸ್ (ಪಾನೀಯ).  ಅರ್ಕಾ ( ಚಾಕೋಲೇಟ್) ಅರ್ಕಾ ಜಾಕೀಸ್ (ಕುಕೀಸ್) , ಅಣಬೆಯಲ್ಲಿ ಮೌಲ್ಯವರ್ಧಿತ ಚಟ್ನಿ ಮತ್ತು ರಸಂ ಪುಡಿಗಳು, ಆರೋಗ್ಯ  ಪ್ರಯೋಜಕ ಬೆಣ್ಣೆ ಹಣ್ಣಿನ ಪುಡಿ ಮೇಳದ ಪ್ರಮುಖ ಆಕರ್ಷಣೆಯಾಗಿದೆ.

ಕೃಷಿಯನ್ನ ಲಾಭದಾಯಕ ಉದ್ಯಮ ಮಾಡುವ ನಿಟ್ಟಿನಲ್ಲಿ ಐಐಹೆಚ್​ಆರ್ ಸಂಸ್ಥೆ ನಾಲ್ಕು ವರ್ಷದಿಂದ ಶ್ರಮಿಸುತ್ತಿದೆ. ಸಂಸ್ಥೆಯ ನೂರಾರು  ಕೃಷಿ ವಿಜ್ಞಾನಿಗಳ ಸಂಶೋಧನೆಯ ಫಲ ರೋಗ ನಿರೋಧಕ, ಅಧಿಕ ಇಳುವರಿಯ ತಳಿಗಳು ರೈತರ ತೋಟಗಳಲ್ಲಿ ಫಲ ನೀಡುತ್ತಿವೆ. ತೋಟಗಾರಿಕಾ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ತೋಟಗಾರಿಕಾ ಕ್ಷೇತ್ರವನ್ನು ಲಾಭದಾಯಕ ಉದ್ಯಮನ್ನಾಗಿಸಲಿ ಎನ್ನುವುದು ಜನರ ಆಶಯ.
First published: