ಚಲಿಸುವ ಬೈಕ್​ನಿಂದ ಬಿದ್ದೇ ಬಿಟ್ರು ಅಪ್ಪ, ಅಮ್ಮ: 500 ಮೀಟರ್​ ದೂರ ಹೋಗಿ ಬಿದ್ದ ಕಂದಮ್ಮ


Updated:August 21, 2018, 5:23 PM IST
ಚಲಿಸುವ ಬೈಕ್​ನಿಂದ ಬಿದ್ದೇ ಬಿಟ್ರು ಅಪ್ಪ, ಅಮ್ಮ: 500 ಮೀಟರ್​ ದೂರ ಹೋಗಿ ಬಿದ್ದ ಕಂದಮ್ಮ

Updated: August 21, 2018, 5:23 PM IST
ನ್ಯೂಸ್​ 18 ಕನ್ನಡ

ಬೆಂಗಳೂರು(ಆ.21): ಆಯುಷ್ಯ ಗಟ್ಟಿ ಇದ್ದರೆ ಏನೇ ಸಂಭವಿಸಿದರೂ ಆ ಮನುಷ್ಯನಿಗೆ ಸಾವು ಬರಲ್ಲ ಎಂಬುದಕ್ಕೆ ಈ ಭಯಾನಕ ಅಪಘಾತವೇ ಸಾಕ್ಷಿ. ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ನಿಯಮ ಪಾಲಿಸದ ಬೈಕ್ ಸವಾರ, ನಿಂತಿದ್ದ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದಿರುವ ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಂತಹುದ್ದೊಂದು ಶಾಕಿಂಗ್​ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದ ಬಳಿ ಸಂಭವಿಸಿದೆ.

ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಈ ಅಪಘಾತ ನಡೆದಿದೆ. ತುಮಕೂರು ಮಾರ್ಗದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ, ಬೈಕ್ ನಿಂತಿದ್ದ ಮತ್ತೊಂದು ಬೈಕ್​ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಸಲ್ಪ ಯಾಮಾರಿದ್ರು ಆ ಬೈಕ್ ನ ಸವಾರ, ಹಿಂಬದಿ ಕುಳಿತಿದ್ದ ಮಹಿಳೆ ಹಾಗೂ ಪುಟ್ಟ ಮಗು ಪವಾಡ ರೀತಿಯಲ್ಲಿ ಪಾರಾಗಿದ್ದಾರೆ.

ಅಪಘಾತವಾದ ತಕ್ಷಣವೇ ಸವಾರ ಹಾಗೂ ಮಹಿಳೆ ಕೆಳಗೆ ಬಿದ್ದು ಉರುಳಾಡಿದರೆ, ಬೈಕ್​ನ ಮುಂದೆ ಕುಳಿತಿದ್ದ ಪುಟ್ಟ ಮಗು ಬೈಕ್ ನಲ್ಲಿ ಐನೂರು ಮೀಟರ್ ಮುಂದೆ ಸಾಗಿ ಪುಟ್ ಪಾತ್ ನ ಬಳಿಯ ಹುಲ್ಲಿನ ಪೊದೆಯಲ್ಲಿ ಸುರಕ್ಷಿತವಾಗಿದೆ. ಈ ದೃಶ್ಯಗಳು ಕಾರ್ ನ ಕ್ಯಾಮರದಲ್ಲಿ ಸೆರೆಯಾಗಿದೆ. ಬೈಕ್ ನಲ್ಲಿದ್ದವರು ತುಮಕೂರು ಜಿಲ್ಲೆಯ ಕುಣಿಗಲ್ ನಿಂದ ಬೆಂಗಳೂರಿನ ಮಲ್ಲೇಶ್ವರಂಗೆ ಬರುತಿದ್ದರು ಎನ್ನಲಾಗಿದೆ.


ರೇಣುಕಮ್ಮ ಮಹಿಳೆ ಹಾಗೂ ಅಮೂಲ್ಯ ಪುಟ್ಟ ಮಗು ಸವಾರನಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ಬೈಕ್ ಸವಾರರಿಗೂ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅಪಘಾತ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಯಾವುದೇ ಪ್ರಕರಣ ದಾಖಲಾಗಿಲ್ಲ.

ಆಯುಷ್ಯ ಗಟ್ಟಿ ಇದ್ದರೆ ಬಂಡೆ ಬಂದು ಅಪ್ಪಳಿಸಿದರೂ ಏನೂ ಆಗಲ್ಲ ಎಂಬುದಕ್ಕೆ ಈ ಅಪಘಾತವೇ ಸಾಕ್ಷಿಯಾಗಿದೆ. ಅವಸರ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದೆ, ಈ ಭೀಕರ ಅಪಘಾತಕ್ಕೆ ಸಾಕ್ಷಿಯಾಗಿದೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ