ಏಷ್ಯನ್​ ಗೇಮ್ಸ್​ನಲ್ಲಿ ಕಂಚಿನ ಪದಕ ಗೆದ್ದ ಮಲಪ್ರಭಾ ಜಾಧವ್​ಗೆ ಚಿನ್ನ ಗೆಲ್ಲುವಾಸೆ!

news18
Updated:September 2, 2018, 5:46 PM IST
ಏಷ್ಯನ್​ ಗೇಮ್ಸ್​ನಲ್ಲಿ ಕಂಚಿನ ಪದಕ ಗೆದ್ದ ಮಲಪ್ರಭಾ ಜಾಧವ್​ಗೆ ಚಿನ್ನ ಗೆಲ್ಲುವಾಸೆ!
  • Advertorial
  • Last Updated: September 2, 2018, 5:46 PM IST
  • Share this:
-ಚಂದ್ರಕಾಂತ್​ ಸುಗಂಧಿ, ನ್ಯೂಸ್​ 18 ಕನ್ನಡ

 ಬೆಳಗಾವಿ,(ಸೆ.02): ಕುಂದಾ ನಗರಿ ಬೆಳಗಾವಿಯ ಮಲಪ್ರಭಾ ಜಾಧವ್ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾಳೆ. ಮಲಪ್ರಭಾ ಪದಕ ಬೇಟೆಯಾಡಿದ ಬಳಿಕ ಇದೇ ಮೊದಲ ಬಾರಿಗೆ ತಾಯಿನಾಡಿಗೆ ಆಗಮಿಸಿದ್ದಳು. ಭಾರತಕ್ಕೆ ಪದಕ ತಂದು ದೇಶದ ಕೀರ್ತಿ ಹೆಚ್ಚಿಸಿ ಮಲಪ್ರಭಾಳನ್ನು ತವರಿನಲ್ಲಿ ಹೃತ್ಪೂರ್ವಕ ಸ್ವಾಗತ ನೀಡಲಾಯಿತು.18ನೇ ಏಷಿಯನ್ ಗೇಮ್ಸ್ ನಲ್ಲಿ ಜುಡೋ, ಕುರಾಶ್ ಗೇಮ್ ನಲ್ಲಿ ಮಲಪ್ರಭಾ ಜಾಧವ್ ಕಂಚಿನ ಪದಕ ದೇಶದ ಗರಿಮೆ ಹೆಚ್ಚಿಸಿದ್ದಾಳೆ. ಪದಕ ಪಡೆದ ಬಳಿಕ ಇದೇ ಮೊಲದ ಬಾರಿಗೆ ಬೆಳಗಾವಿಯ ಮಲಪ್ರಭಾ ಆಗಮಿಸಿದ್ದಳು. ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಲಪ್ರಭಾಗೆ ಆತ್ಮೀಯ ಸನ್ಮಾನ ಮಾಡಲಾಯಿತು. ಈ ವೇಳೆ  ನಗರ ಪೊಲೀಸ್ ಆಯುಕ್ತ ಡಿ.ಸಿ ರಾಜಪ್ಪ, ಎಸ್ಪಿ ಸುಧೀರ ಕುಮಾರ್ ರೆಡ್ಡಿ ಸೇರಿ ಅನೇಕರು ಪಾಲ್ಗೊಂಡಿದ್ದರು. ಈವರೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ 2 ಚಿನ್ನ, 3 ಕಂಚು, ರಾಷ್ಟ್ರ ಮಟ್ಟದಲ್ಲಿ 6 ಚಿನ್ನದ ಪದಕ, 1 ಬೆಳ್ಳಿ, 1 ಕಂಚಿನ ಪದಕ. ರಾಜ್ಯಮಟ್ಟದಲ್ಲಿ 6 ಚಿನ್ನದ ಪದಕ ಹಾಗೂ 1 ಬೆಳ್ಳಿಯ ಪದಕ ಪಡೆದು ಮಲಪ್ರಭಾ ಮಿಂಚಿದ್ದಾಳೆ. ಈ ವೇಳೆ ಮಾತನಾಡಿದ ಮಲಪ್ರಭಾ, ಬೆಳಗಾವಿಯಲ್ಲಿ ಜೂಡೋ ಅಕಾಡೆಮಿ ಮಾಡಲು ಸಹಾಯ ಮಾಡಬೇಕು ಎಂದು ಮನವಿ ಮಾಡಿದಳು. ಇನ್ನು ಮುಂದೆ ಒಲಂಪಿಕ್ ನಲ್ಲಿ ಪಾಲ್ಗೊಂಡು ಪದಕ ಗೆಲ್ಲುವ ಆಸೆ ವ್ಯಕ್ತಪಡಿಸಿದಳು.ಇನ್ನೂ ಪದಕ ವಿಜೇತ ಮಲಪ್ರಭಾ ಬೆಳಗಾವಿ ತಾಲೂಕಿನ ತುರುಮುರಿ ಗ್ರಾಮದ ಯಲ್ಲಪ್ಪ ಜಾಧವ ಅವರ ಪುತ್ರಿಯಾಗಿದ್ದಾಳೆ. ಕಳೆದ 8 ವರ್ಷಗಳಿಂದ ಬೆಳಗಾವಿಯಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯದಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಕಳೆದ 2 ವರ್ಷಗಳಿಂದ ಕುರಾಶ್ ಕ್ರೀಡೆಯಲ್ಲಿಯೂ ಸಹ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಲಪ್ರಭಾ ಮಿಂಚಿದ್ದಾಳೆ. ಮಲಪ್ರಭಾ ಪದಕ ಗೆಲ್ಲಲು ನಾವು ಸಾಕಷ್ಟು ಪ್ರಯತ್ನಿಸಿದ್ದೇವೆ. ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬೆಳಗಾವಿಗೆ ಬಂದು ತರಬೇತಿ ನೀಡಿದ್ದೇನೆ ಎನ್ನುತ್ತಾರೆ ಕೋಚ್ ಜೀತೆಂದ್ರ ಸಿಂಗ್.

ಮಲಪ್ರಭಾಗೆ ಈಗಾಗಲೇ ಏಕಲವ್ಯ, ಕರ್ನಾಟಕ ಒಲಂಪಿಕ್ ಪ್ರಶಸ್ತಿ ನೀಡಿ ಸರ್ಕಾರ ಗೌರವಿಸಿದೆ. ಇನ್ನೂ ಒಲಂಪಿಕ್ ನಲ್ಲಿ ಪಾಲ್ಗೊಳ್ಳಲು ಆಕೆಗೆ ಬೇಕಾದ ಸೌಕರ್ಯವನ್ನು ರಾಜ್ಯ ಸರ್ಕಾರ ಒದಗಿಸಬೇಕಿದೆ. ಮಲಪ್ರಭಾ ಸಾಧನೆಗೆ ಮೆಚ್ಚಿ ನಗರ ಪೊಲೀಸ್ ಆಯುಕ್ತ ಡಿ.ಸಿ.ರಾಜಪ್ಪ 10 ಸಾವಿರ ನಗದು ಬಹುಮಾನ ಘೋಷಣೆ ಮಾಡಿದ್ದಾರೆ. ಬೆಳಗಾವಿಯಲ್ಲಿ ನೂರಾರು ಜನ ಕ್ರೀಡಾಪಟುಗಳು ಜೂಡೋ, ಕುರಾಷ್ ನಲ್ಲಿ ಪರಿಣಿತಿ ಹೊಂದಿದ್ದು ಇವರಿಗೆ ಇನ್ನಷ್ಟು ತರಬೇತಿ ನೀಡಿದರೆ ಒಲಂಪಿಕ್ ನಲ್ಲಿ ಪದಕ ಗ್ಯಾರಂಟಿ.
First published:September 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ