• Home
  • »
  • News
  • »
  • state
  • »
  • Vidhana Soudha: ರಾಷ್ಟ್ರಪತಿಗಳಿಗೆ ನಾಗರೀಕ ಸತ್ಕಾರ; ನಾನು ಜನತಾ ಸೇವೆಗೆ ಇರೋ ಸೇವಕಿ ಎಂದ್ರು ದ್ರೌಪದಿ ಮುರ್ಮು

Vidhana Soudha: ರಾಷ್ಟ್ರಪತಿಗಳಿಗೆ ನಾಗರೀಕ ಸತ್ಕಾರ; ನಾನು ಜನತಾ ಸೇವೆಗೆ ಇರೋ ಸೇವಕಿ ಎಂದ್ರು ದ್ರೌಪದಿ ಮುರ್ಮು

ದ್ರೌಪತಿ ಮುರ್ಮು ಅವರಿಗೆ ಸನ್ಮಾನ

ದ್ರೌಪತಿ ಮುರ್ಮು ಅವರಿಗೆ ಸನ್ಮಾನ

ಸಿಎಂ ಬೊಮ್ಮಾಯಿ ಅವರು ನನ್ನ ಬಗ್ಗೆ ಹೊಗಳಿ ಮಾತಾಡಿದರು. ಅವರು ಏನೇ ಹೊಗಳಿದರೂ ನಾನು ಜನತಾ ಸೇವೆಗೆ ಇರೋ ಸೇವಕಿ ಎಂದ್ರು. ದೇಶ ಅಮೃತ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮದಲ್ಲಿದೆ. ಅನೇಕರು ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ್ದಾರೆ ಎಂದ್ರು.

  • Share this:

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರಿಗೆ ನಾಗರೀಕ ಸತ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ   ಮೈಸೂರು ಪೇಟ ತೊಡಿಸಿ ಶ್ರೀ ಗಂಧದ ಬುದ್ಧನ ಮೂರ್ತಿ ನೀಡಿ ಗೌರವ ಸಲ್ಲಿಕೆ ಮಾಡಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರದ ರಾಜ್ಯ ಸಚಿವ ನಾರಾಯಣ ಸ್ವಾಮಿ, ಸ್ಪೀಕರ್ ಕಾಗೇರಿ, ಸಭಾಪತಿ ಮಲ್ಕಾಪುರೆ ಭಾಗಿಯಾಗಿದ್ರು. ಇದೇ ವೇಳೆ ಮಾತಾಡಿದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಇದೊಂದು ಅಪರೂಪದ ಕಾರ್ಯಕ್ರಮ ಎಂದು ಹೇಳಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಈ ಕಾರ್ಯಕ್ರಮ ನಡೆದಿರಲಿಲ್ಲ, ರಾಷ್ಟ್ರಪತಿ ಗಳಿಗೆ ನಾಗರೀಕ ಸತ್ಕಾರ ಕಾರ್ಯಕ್ರಮ (Honor Program) ಅತ್ಯಂತ ಅಪರೂಪವಾಗಿದೆ ಎಂದ್ರು.


ರಾಷ್ಟಪತಿಗಳನ್ನು ಕೊಂಡಾಡಿದ ಸಿಎಂ ಬೊಮ್ಮಾಯಿ


ರಾಷ್ಟ್ರಪತಿ ಚುನಾವಣೆ ಪೂರ್ವದಲ್ಲಿ ಅವ್ರು ಬೆಂಗಳೂರಿಗೆ ಬಂದಿದ್ರು. ಅವಾಗ ಈ ಚುನಾವಣೆ ಆದ ಮೇಲೆ ಕರ್ನಾಟಕಕ್ಕೆ ಬರುವ ಇಚ್ಚೆ ವ್ಯಕ್ತಪಡಿಸಿದ್ದರು. ಕರ್ನಾಟಕ ಯಾವಾಗಲೂ ನಿಮ್ಮ ಸ್ವಾಗತಕ್ಕೆ ರೆಡಿ ಇದೆ ಎಂದು ಹೇಳಿದ್ದೆ. ದಸರಾ ಹಬ್ಬಕ್ಕೆ ಆಹ್ವಾನ ಕೊಟ್ಟಾಗ ಸಂಜೆಯೇ ಅವ್ರು ಅನುಮತಿ ಕೊಟ್ರು, ಇದ್ರಿಂದ ಅವರಿಗೆ ಈ ರಾಜ್ಯದ ಮೇಲಿರೋ ಪ್ರೀತಿ ತೋರಿಸುತ್ತದೆ. ರಾಷ್ಟ್ರಪತಿಗಳು ಅಪಾರವಾದ ಸಾರ್ವಜನಿಕ ಜೀವನದಲ್ಲಿ ಅನುಭವ ಇರುವಂತವರು ಭಾರತ ದೇಶದ ಇತಿಹಾಸದ ಬಗ್ಗೆ ಬಹಳ ತಿಳಿದುಕೊಂಡಿದ್ದಾರೆ. ಬುಡಕಟ್ಟು ಜೀವನ, ಕುಟುಂಬದಲ್ಲಿನ ಬದಲಾವಣೆ ಮಾನವೀಯ ಗುಣಗಳುಳ್ಳ ವ್ಯಕ್ತಿ. ಆದರ್ಶ ಶಾಸಕರಾಗಿ, ಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಇದೆ. ಜಾರ್ಖಾಂಡ್ ರಾಜ್ಯಪಾಲರಾಗಿ ಒಳ್ಳೆಯ ಕೆಲಸ ಮಾಡಿದ ಅನುಭವ ಇದೆ.


ಅವ್ರು ಗುಣದಲ್ಲಿ ಸ್ವಲ್ಪವೂ ಬದಲಾವಣೆ ಆಗಿಲ್ಲ


ಅವ್ರು ರಾಜ್ಯಪಾಲರು ಅವಧಿ ಮುಗಿದ ಕೂಡಲೇ ಶಿಕ್ಷಕರ ವೃತ್ತಿಗೆ ಹೋಗಿದ್ರು. ಹೀಗಾಗಿ ಅವರ ಮಾನವೀಯ ಗುಣಗಳು ಬದಲಾವಣೆ ಆಗದೆ ಇರೋದು ಸರ್ವಶ್ರೇಷ್ಠ. ನರೇಂದ್ರ ಮೋದಿಯವರು ನೀವು ರಾಷ್ಟ್ರಪತಿ ಅಭ್ಯರ್ಥಿ ಆಗಬೇಕು ಅಂದಾಗ ನಾನು ಯಾಕೆ ಅಂತಾರೆ. ಆ ಮೇಲೆ ನೀವು ಎಲ್ಲಿದ್ದೀರಾ ಅಂದಾಗ ದೇವಸ್ಥಾನದಲ್ಲಿ ಶುಚಿ ಮಾಡ್ತಿದ್ದೀನಿ ಅಂತಾರೆ. ಇಂತಹ ವ್ಯಕ್ತಿ ದೇಶದ ರಾಷ್ಟ್ರಪತಿ ಆಗಿರೋದು ಪ್ರಜಾಪ್ರಭುತ್ವದ ಜೀವಂತಿಕೆ, ಜಯ ಎಂದು ಇಚ್ಚೆ ಪಡ್ತೀನಿ. ಎಳ್ಳಿನಷ್ಟು ಅವರಲ್ಲಿ ಬದಲಾವಣೆ ಆಗಿಲ್ಲ. ರಾಷ್ಟ್ರಪತಿ ಆಗುವ ಮುನ್ನ ಹೇಗಿದ್ರು ಆದ ಮೇಲು ಹಾಗೇ ಇದ್ದಾರೆ.


ಇದನ್ನೂ ಓದಿ: Sudha Murthy: ರಾಜಮಾತೆ ಕಾಲಿಗೆ ನಮಸ್ಕರಿಸಿದ ಸುಧಾ ಮೂರ್ತಿ; ನೀವು ಮಾಡಿದ್ದು ಸರೀನಾ ಎಂದು ನೆಟ್ಟಿಗರ ಪ್ರಶ್ನೆ!


ನಾನು ಜನತಾ ಸೇವೆಗೆ ಇರೋ ಸೇವಕಿ


ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಾಯಿ ಭುವನೇಶ್ವರಿಗೆ ಕನ್ನಡದಲ್ಲಿ ನಮಸ್ಕರಿಸಿ ಭಾಷಣ ಆರಂಭಿಸಿದ್ರು. ಈ ಕಾರ್ಯಕ್ರಮದಲ್ಲಿ ಬಂದಿರುವ ಗಣ್ಯರು, ಸಾಧಕರು ನನಗೆ ರಾಜ್ಯದ ಸಂಸ್ಕೃತಿಯ ದರ್ಶನ ಮಾಡಿಸಿದ್ದಾರೆ. ಸಿಎಂ ಬೊಮ್ಮಾಯಿ ಅವರು ನನ್ನ ಬಗ್ಗೆ ಹೊಗಳಿ ಮಾತಾಡಿದರು. ಅವರು ಏನೇ ಹೊಗಳಿದರೂ ನಾನು ಜನತಾ ಸೇವೆಗೆ ಇರೋ ಸೇವಕಿ ಎಂದ್ರು. ದೇಶ ಅಮೃತ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮದಲ್ಲಿದೆ. ಅನೇಕರು ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ್ದಾರೆ ಎಂದ್ರು.


ಅಮರ ದೇಶಪ್ರೇಮಿಗಳಿಗೆ ಈ ನೆಲ ಜನ್ಮ ನೀಡಿದೆ


ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರು ಸ್ವಾತಂತ್ರ್ಯಕ್ಕಾಗಿ ಪ್ರಾಣ ಅರ್ಪಣೆ ಮಾಡಿದ್ದಾರೆ. ಇದು ಹರ್ಡೇಕರ್ ಮಂಜಪ್ಪ, ತಗಡೂರು ರಾಮಚಂದ್ರರಾವ್, ಯಶೋಧರ ದಾಸಪ್ಪನವರು ಜೀವಿಸಿದ್ದ ನಾಡು, ಬಾಣಾವರ ರಾಮಸ್ವಾಮಿಯವರಂಥ ಅಮರ ದೇಶಪ್ರೇಮಿಗಳಿಗೆ ಈ ನೆಲ ಜನ್ಮ ನೀಡಿದೆ ಎಂದ್ರು.


ಇದನ್ನೂ ಓದಿ: Basavaraj Bommai: ಪೊಲೀಸರು PFI ಮತ್ತು SDPI ಮುಖಂಡರ ಮನೆ ಮೇಲೆ ದಾಳಿ ನಡೆಸಿಲ್ಲ ಎಂದ್ರು ಸಿಎಂ ಬೊಮ್ಮಾಯಿ


ಪಂಪ, ರನ್ನ, ಪೊನ್ನರ ನೆಲೆ ಬೀಡು ಇದು. ಬೇಲೂರು, ಹಳೇ ಬೀಡು, ಪಟ್ಟದ ಕಲ್ಲು ಐತಿಹಾಸಿಕ ಕ್ಷೇತ್ರಗಳು ಮಹತ್ವ ಪಡೆದುಕೊಂಡಿವೆ. ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ಕೂಡಲ ಸಂಗಮ, ಬಸವಣ್ಣ, ಅಕ್ಕಮಹಾದೇವಿ, ಪುರಂದರ ದಾಸ, ಕನಕದಾಸರಂಥ ಮಹನೀಯರು ಈ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ಕುವೆಂಪು, ಮಾಸ್ತಿ, ದಾ.ರಾ ಬೇಂದ್ರೆ ಮುಂತಾದವರ ಸಾಹಿತಿ, ಕವಿಗಳು ಸಾಹಿತ್ಯದಲ್ಲಿ ಅದ್ಭುತ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ನಾಡನ್ನು ರಾಷ್ಟ್ರಪತಿಗಳು ಕೊಂಡಾಡಿದ್ದಾರೆ.

Published by:ಪಾವನ ಎಚ್ ಎಸ್
First published: