• Home
  • »
  • News
  • »
  • state
  • »
  • ಮರ್ಯಾದಾ ಹತ್ಯೆಗೆ ಮುಂದಾದ ಪೋಷಕರು; ಯುವತಿಯ ಬೆರಳು ಕಟ್​​

ಮರ್ಯಾದಾ ಹತ್ಯೆಗೆ ಮುಂದಾದ ಪೋಷಕರು; ಯುವತಿಯ ಬೆರಳು ಕಟ್​​

ಗಾಯಗೊಂಡ ಯುವತಿ

ಗಾಯಗೊಂಡ ಯುವತಿ

ತಂದೆ, ಮಗಳ ಕುತ್ತಿಗೆಗೆ ಕುಡುಗೋಲಿನಿಂದ ಹೊಡೆದಾಗ ಆಕೆ  ತನ್ನ ಬಲಗೈ  ಅಡ್ಡ ಹಿಡಿದಿದ್ದಾಳೆ. ಈ ವೇಳೆ  ಕುಡುಗೋಲಿಗೆ ಸಿಲುಕಿ ಆಕೆಯ ನಾಲ್ಕು ಬೆರಳುಗಳು ಕಟ್ ಆಗಿವೆ.

  • Share this:

ಚಾಮರಾಜನಗರ (ಡಿ. 05): ತಾನು ಪ್ರೀತಿಸಿದವನ ಜೊತೆ ಮದುವೆಗೆ ಮುಂದಾಗಿದ್ದ ಯುವತಿಯನ್ನು ಆಕೆಯ ತಂದೆಯೇ ಕೊಲೆ ಮಾಡಲು ಯತ್ನಿಸಿದ್ದು ಘಟನೆಯಲ್ಲಿ ಯುವತಿಯ ನಾಲ್ಕು ಬೆರಳುಗಳು ಕತ್ತರಿಸಿ ಹೋಗಿರುವ  ಘಟನೆ  ಜಿಲ್ಲೆ ಹನೂರು ತಾಲೋಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ. ಪರಸ್ಪರ ಪ್ರೀತಿಸಿ ಮದುವೆಗೆ ಮುಂದಾಗಿದ್ದ ಜೋಡಿ ಈಗ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದು,  ಜೀವರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಪಿ.ಜಿ. ಪಾಳ್ಯ ಗ್ರಾಮದ ಸತ್ಯ ಹಾಗೂ ಧನಲಕ್ಷ್ಮಿ ಇಬ್ಬರು ಪರಸ್ಪರ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸತ್ಯನನ್ನು  ಪ್ರೀತಿಸುತ್ತಿರುವ  ವಿಷಯವನ್ನು ಪೋಷಕರಿಗೆ ತಿಳಿಸಿದ ಧನಲಕ್ಷ್ಮಿ ಆತನ ಜೊತೆ ಮದುವೆ ಮಾಡಿಕೊಡುವಂತೆ ಒತ್ತಾಯಿಸಿದ್ದಳು. ಆದರೆ ಈ  ಮದುವೆಗೆ ಧನಲಕ್ಷ್ಮಿಯ ಪೋಷಕರು ವಿರೋಧ ವ್ಯಕ್ತಪಡಿಸಿ ಆಗಾಗ್ಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಪೋಷಕರ ಕಿರುಕುಳ ತಾಳಲಾರದೆ  ಮನೆ ಬಿಟ್ಟು  ಹೋಗಿದ್ದಳು. 


ಧನಲಕ್ಷ್ಮಿ ಬೆಂಗಳೂರಿನಲ್ಲಿದ್ದ ಸತ್ಯನಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ. ಇದರಿಂದ ಗಾಬರಿಗೊಂಡ ಸತ್ಯ ತಕ್ಷಣ ಹೊರಟು ಬಂದು ಮಳವಳ್ಳಿ ಬಳಿ ಇದ್ದ ಧನಲಕ್ಷ್ಮಿಯನ್ನು ತನ್ನ ಜೊತೆ ಕರೆತಂದು ಆಕೆಯ, ಅತ್ತೆಯ ಮನೆಗೆ ಬಿಟ್ಟಿದ್ದ.  ಈ ವೇಳೆ ಅಲ್ಲಿಗೆ ಬಂದ ಆಕೆಯ ಪೋಷಕರು  ಮದುವೆ ವಿಚಾರ ಬಿಟ್ಟು ಮರಳಿ ಮನೆಗೆ ಬರುವಂತೆ ಒತ್ತಡ ಹೇರಿದ್ದಾರೆ. ಆದರೆ ಧನಲಕ್ಷ್ಮಿ ಇದಕ್ಕೆ ಒಪ್ಪದೆ ಇದ್ದಾಗ ಇನ್ನು ಮುಂದೆ ನಿನಗೂ ನಮಗೂ ಸಂಬಂಧವಿಲ್ಲ  ಎಂದು  ಹೇಳಿ ಹೊರಟು ಹೋಗಿದ್ದರು


ಇದನ್ನು ಓದಿ: ಗೌರವ ಇದ್ರೆ ತಾನೇ ಹಾಳಾಗೋಕೆ; ಎಚ್​ಡಿ ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು


ಪೋಷಕರ ವಿರೋಧದ ನಡುವೆಯು ಈ ಪ್ರೇಮಿಗಳು ಡಿಸೆಂಬರ್ 7 ರಂದು ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು.  ಇಂದು ಬೆಳಿಗ್ಗೆ ಔಷಧಿ ಖರೀದಿಸಲೆಂದು ಪಿ.ಜಿ. ಪಾಳ್ಳದ ಗ್ರಾಮದ ಮೆಡಿಕಲ್ ಸ್ಟೋರ್ ಗೆ ಈ ಪ್ರೇಮಿಗಳು ಬಂದಿದ್ದಾಗ ಧನಲಕ್ಷ್ಮಿಯ  ತಂದೆ ಶಿವಸ್ವಾಮಿ ಹಾಗು ಅಣ್ಣ ಮಹೇಂದ್ರ ನಡುರಸ್ತೆಯಲ್ಲೇ  ಮಚ್ಚು ಹಾಗು ಕುಡುಗೋಲಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಈ ವೇಳೆ ತಂದೆ ಶಿವಸ್ವಾಮಿ ಮಗಳು ಧನಲಕ್ಷ್ಮಿಯ ಕುತ್ತಿಗೆಗೆ ಕುಡುಗೋಲಿನಿಂದ ಹೊಡೆದಾಗ  ಧನಲಕ್ಷ್ಮಿ ತನ್ನ ಬಲಗೈ  ಅಡ್ಡ ಹಿಡಿದಿದ್ದಾಳೆ. ಈ ವೇಳೆ  ಕುಡುಗೋಲಿಗೆ ಸಿಲುಕಿ ಆಕೆಯ ನಾಲ್ಕು  ಬೆರಳುಗಳು ಕಟ್ ಆಗಿವೆ.


ಘಟನೆಯಲ್ಲಿ ಯುವಕ ಸತ್ಯ ಸಹ ಗಾಯಗೊಂಡಿದ್ದು, ಇಬ್ಬರೂ ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೂ ಮೊದಲು ಹನೂರು ಪೋಲಿಸ್ ಠಾಣೆಗೆ ದೂರು ನೀಡಿರುವ ಈ  ಪ್ರೇಮಿಗಳು ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಮಚ್ಚು ಕುಡುಗೋಲಿನಿಂದ ಹಲ್ಲೆ ಮಾಡಿದ ತಂದೆ ಶಿವಸ್ವಾಮಿ ಹಾಗೂ ಅಣ್ಣ ಮಹೇಂದ್ರ ನಾಪತ್ತೆಯಾಗಿದ್ದಾರೆ


(ವರದಿ: ಎಸ್.ಎಂ.ನಂದೀಶ್ )

Published by:Seema R
First published: