ವಿಶ್ವಖ್ಯಾತ ಶಿಲ್ಪಿ ಹೊನ್ನಪ್ಪ ಆಚಾರ್ ಹೊಸ ಪ್ರಯೋಗ; ಸಂಗೀತ ಹೊರಹೊಮ್ಮಿಸುವ ವಿಗ್ರಹ

ನಾಡಿನ ಶಿಲ್ಪಕಲೆಯ ಪರಂಪರೆ ದೇಶ- ವಿದೇಶಗಳಲ್ಲಿ ಈಗಾಗಲೇ ಜನಜನಿತವಾಗಿದೆ. ಈ ಕೀರ್ತಿಯನ್ನು ಮತ್ತಷ್ಟು ಪಸರಿಸಲು ಹೊರಟಿದ್ದಾರೆ. ಪರಂಪರಾನುಗತವಾಗಿ ಲೋಹಶಿಲ್ಪದಲ್ಲಿ ಸಿದ್ಧಹಸ್ತರಾದ ಹೊನ್ನಪ್ಪ ಆಚಾರ್. ಪಂಚಲೋಹದ ವಿಗ್ರಹದಲ್ಲಿ ಇಂಪಾದ ಸಂಗೀತ ಹೊರಹೊಮ್ಮುವ ವಿನೂತನ ಪ್ರಯೋಗದಲ್ಲಿ ತೊಡಗಿ ಯಶಸ್ಸುಗಳಿಸಿದ್ದಾರೆ.


Updated:September 6, 2018, 7:30 PM IST
ವಿಶ್ವಖ್ಯಾತ ಶಿಲ್ಪಿ ಹೊನ್ನಪ್ಪ ಆಚಾರ್ ಹೊಸ ಪ್ರಯೋಗ; ಸಂಗೀತ ಹೊರಹೊಮ್ಮಿಸುವ ವಿಗ್ರಹ
ಕಲಾಕೃತಿಯೊಂದಿಗೆ ಹೊನ್ನಪ್ಪಚಾರ್

Updated: September 6, 2018, 7:30 PM IST
- ಶ್ಯಾಮ್ ಎಸ್., ನ್ಯೂಸ್18 ಕನ್ನಡ

ಬೆಂಗಳೂರು(ಸೆ. 06): ಈ ಸುಂದರ ಮೂರ್ತಿಯನ್ನು ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕೆನ್ನಿಸುತ್ತೆ. ಮೂರು ಕಾಲು ಅಡಿಯ ಸುಮಾರು 40 ರಿಂದ 50 ಕೆಜಿ ತೂಗುವ ಈ ವಿಗ್ರಹವು ಶಿಲ್ಪಕಲೆಯ ಪ್ರಯೋಗದಲ್ಲಿ ಅಪರೂಪದ್ದೆಂದೇ ಹೇಳಬಹುದು. ರಾಜ್ಯ ಪ್ರಶಸ್ತಿ ವಿಜೇತ ಲೋಹಶಿಲ್ಪಿ ಹೊನ್ನಪ್ಪ ಆಚಾರ್, ಪ್ರಪ್ರಥಮ ಬಾರಿಗೆ ಪಂಚಲೋಹದಲ್ಲಿ ಮುರುಳಿ ಮೋಹನನ ಮೂರ್ತಿಯಿಂದ ಸಂಗೀತ ಹೊರಹೊಮ್ಮುವ ಪ್ರಯೋಗ ಮಾಡಲು ಹೊರಟು ಯಶಸ್ವಿಯಾಗಿದ್ದಾರೆ. ಈ ಗೋಪಾಲಕೃಷ್ಣ ಕೆಲದಿನಗಳಲ್ಲೇ ವಿದೇಶಕ್ಕೆ ಹಾರಲಿದ್ದಾನೆ.

ಪಂಚಲೋಹವನ್ನು ತಮಗೆ ಬೇಕಾದಂತೆ ಕೆತ್ತನೆ ಮಾಡುವುದು ಮೊದಲೇ ಕಷ್ಟಕರ. ಅಂಥದ್ರಲ್ಲಿ ಈ ಮುರುಳಿ ಮೋಹನನ ವಿಗ್ರಹದಲ್ಲಿ ಸ್ಪೀಕರ್ ಅಳವಡಿಸಿ ಅದ್ರಿಂದ ನಿರಂತರವಾಗಿ ಸಂಗೀತ ಹೊರಹೊಮ್ಮುವಂತೆ ಮಾಡಿದ್ದಾರೆ. ಇದೊಂದು ಸವಾಲಿನ ಕೆಲಸವಾಗಿತ್ತು. 6 ತಿಂಗಳು ಹಗುಲಿರುಳು ವರ್ಕ್ ಮಾಡಿ ತಮ್ಮ ಕೈಚಳಕದಿಂದ ಈ ಸಂಗೀತ ಕೃಷ್ಣನನ್ನು ರೂಪಿಸಿದ್ದಾರೆ. ಈ ಮೂರ್ತಿ ರೂಪಿಸಲು ಸುಮಾರು ಒಂದೂವರೆ ಲಕ್ಷ ರೂಪಾಯಿ ವೆಚ್ಚವಾಗಿದ್ಯಂತೆ.

ಹೊನ್ನಪ್ಪಚಾರ್ ಸಿದ್ಧಪಡಿಸಿದ ಪಂಚಲೋಹ ಶಿಲ್ಪಗಳು


ನಾಡಿನ ಲೋಹಶಿಲ್ಪ ಪರಂಪರೆಯನ್ನು ಮುಂದುವರೆಸಲು ರಾಜ್ಯದ ಮೂಲೆಮೂಲೆಯಲ್ಲಿನ ಅತ್ಯಪರೂಪದ ಲೋಹಮೂರ್ತಿಯ 5 ಸಾವಿರಕ್ಕೂ ಅಧಿಕ ಮಾಡೆಲ್​ಗಳನ್ನು ಓಕಳಿಪುರದಲ್ಲಿನ ತಮ್ಮ ಮಾರುತಿ ಲೋಹಶಿಲ್ಪಾ ಕಲಾಕೇಂದ್ರದಲ್ಲಿ ರೂಪಿಸಿ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ ಹೊನ್ನಪ್ಪ ಆಚಾರ್. ತಮ್ಮ ಕಲಾಶ್ರೀಮಂತಿಕೆಯನ್ನು 200 ವಿದ್ಯಾರ್ಥಿಗಳಿಗೆ ಧಾರೆ ಎರೆದಿದ್ದಾರೆ. ಹೊನ್ನಪ್ಪ ಆಚಾರ್ ಕಲಾಸೇವೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹತ್ತಾರು ಅವಾರ್ಡ್​ಗಳು ಇವರನ್ನ ಅರಸಿ ಬಂದಿವೆ.

12 ವರ್ಷಕ್ಕೊಮ್ಮೆ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಈ ಬಾರಿ ಫೆಬ್ರವರಿಯಲ್ಲಿ ನೆರವೇರಿತ್ತು. ಈ ಸಂದರ್ಭದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಗೆ ಒಂದು ವಿಭಿನ್ನ ಸ್ಮರಣಿಕೆ ಮಾಡಿಕೊಡುವಂತೆ ಜೈನಮಠದಿಂದ ಇವರಿಗೆ ಆರ್ಡರ್ ಬಂದಿತ್ತು. ಒಂದು ಕ್ಷಣ ಯೋಚಿಸಿದವ್ರೆ, ತಡಮಾಡದೆ ಇಡೀ ವಿಂಧ್ಯಗಿರಿ ಬೆಟ್ಟವನ್ನೇ ಹೆಲಿಕಾಪ್ಟರ್​ನಿಂದ ಸುದೀರ್ಘವಾಗಿ ಫೋಟೋ ತೆಗಿಸಿ ವಿಂಧ್ಯಗಿರಿಯ ಪ್ರತಿಕೃತಿಯನ್ನೇ 25 ಕೆಜಿಯ ಪಂಚಲೋಹದಲ್ಲಿ ಸಿದ್ದಪಡಿಸಿ ಸ್ಮರಣಿಕೆ ಸಿದ್ದಪಡಿಸಿದ್ರು. ಸದ್ಯ ಈ ಸ್ಮರಣಿಕೆ ರಾಷ್ಟ್ರಪತಿ ಭವನದಲ್ಲಿಡಲಾಗಿದೆ. ಹಂಪಿ ವಿವಿ ನೀಡುವ ನಾಡೋಜ ಪ್ರಶಸ್ತಿಯ ಸರಸ್ವತಿ ಸ್ಮರಣಿಕೆಗಳು ಇವರ ಕಲಾ ಕೇಂದ್ರದಲ್ಲಿ ಸಿದ್ದಪಡಿಸಲಾಗುತ್ತೆ. ಇಂತಹ ನೂರಾರು ಕಲಾಕೃತಿಗಳು ಹೊನ್ನಪ್ಪಚಾರ್ ಕೈಯಲ್ಲಿರಳಿದೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ