ನನ್ನ ರಕ್ತದ ಕಣ-ಕಣದಲ್ಲೂ ಯಡಿಯೂರಪ್ಪನವರ ಹೋರಾಟವಿದೆ; ಸ್ವಾಮಿನಿಷ್ಠೆ ಮೆರೆದ ಶಾಸಕ ರೇಣುಕಾಚಾರ್ಯ

ಸಚಿವ ಸ್ಥಾನಕ್ಕೆ ನಾನು ಲಾಬಿ ಮಾಡಿಲ್ಲ. ಲಾಬಿ ಮಾಡಿದ್ದೇನೆ ಎಂದಾದರೆ ರಾಜೀನಾಮೆ ಕೊಟ್ಟು ನಿವೃತ್ತಿ ತೆಗೆದುಕೊಳ್ಳುತ್ತೇನೆ. ಮಾಜಿ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದು ಬೇಸರ ತರಿಸಿದೆ, ಆ ವಿಚಾರದಲ್ಲಿ ಅಸಮಾಧಾನ ಇದೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

Sushma Chakre | news18
Updated:August 21, 2019, 3:02 PM IST
ನನ್ನ ರಕ್ತದ ಕಣ-ಕಣದಲ್ಲೂ ಯಡಿಯೂರಪ್ಪನವರ ಹೋರಾಟವಿದೆ; ಸ್ವಾಮಿನಿಷ್ಠೆ ಮೆರೆದ ಶಾಸಕ ರೇಣುಕಾಚಾರ್ಯ
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ
  • News18
  • Last Updated: August 21, 2019, 3:02 PM IST
  • Share this:
ಬೆಂಗಳೂರು (ಆ. 21): ನಿನ್ನೆಯಷ್ಟೇ 17 ಶಾಸಕರು ಬಿ.ಎಸ್​. ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ನೂತನ ಸಚಿವರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲವೆಂದು ಬಿಜೆಪಿಯ ಕೆಲ ಶಾಸಕರು ಅಸಮಾಧಾನ ಹೊರಹಾಕಿದ್ದರು. ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರ ಹೆಸರೂ ಇತ್ತು. 

ಆದರೆ, ತಮಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಯಾವುದೇ ಬೇಸರವಿಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ. ನಿನ್ನೆಯಷ್ಟೇ ಬಿಜೆಪಿ ಶಾಸಕರಾದ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಅಂಗಾರ ಸೇರಿದಂತೆ ಕೆಲವರು ತಮ್ಮ ಅಸಮಾಧಾನ ಹೊರಹಾಕಿದ್ದರು.

ನಮ್ಮ ಕ್ಷೇತ್ರದ ಜನರು, ಯಡಿಯೂರಪ್ಪನವರು ನನಗೆ ಎಲ್ಲವನ್ನೂ ನೀಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಯಡಿಯೂರಪ್ಪ ನನಗೆ ಆದರ್ಶ. ನನಗೆ ಹೋರಾಟದ ಮನೋಭಾವ ಕಲಿಸಿದವರು ಯಡಿಯೂರಪ್ಪ. ನನ್ನ ರಕ್ತದ ಕಣ ಕಣದಲ್ಲೂ ಯಡಿಯೂರಪ್ಪನವರ ಹೋರಾಟ ಇದ್ದೇ ಇದೆ. ಅವರ ನಿರ್ಧಾರಕ್ಕೆ ನಾನು ಸದಾ ಬದ್ಧನಾಗಿರುತ್ತೇನೆ ಎಂದು ಶಾಸಕ ರೇಣುಕಾಚಾರ್ಯ ಸ್ವಾಮಿನಿಷ್ಠೆ ಮೆರೆದಿದ್ದಾರೆ.

ನನಗೆ ಸಚಿವ ಸ್ಥಾನ ಸಿಗದಂತೆ ನಮ್ಮ ಪಕ್ಷದವರೇ ಗೇಮ್ ಆಡಿದ್ದಾರೆ; ಸುರಪುರ ಶಾಸಕ ರಾಜುಗೌಡ ಆರೋಪ!

ಆದರೆ, ಬಿಜೆಪಿ ನಾಯಕರ ನಿರ್ಧಾರಕ್ಕೆ ಗೌರವ ನೀಡಿರುವುದಾಗಿ ಹೇಳಿರುವ ಎಂ.ಪಿ. ರೇಣುಕಾಚಾರ್ಯ, ನಾನು ಯಡಿಯೂರಪ್ಪನವರಿಗೆ, ಬಿಜೆಪಿಗೆ ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ. ರಾಜಕಾರಣದಲ್ಲಿ ಇರುವ ತನಕ ಹೆಚ್​.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡುವ ಪ್ರಶ್ನೆಯೇ ಇಲ್ಲ. ನಾನು ಕ್ಷೇತ್ರದ ಕಡೆ ಗಮನ ಕೊಡುತ್ತಿದ್ದೇನೆ. 14 ದಿನದಿಂದ ಕ್ಷೇತ್ರದ ಕೆಲಸ ಮಾಡ್ತಾ ಇದ್ದೇನೆ ಎಂದು ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆ; ಬೆಂಗಳೂರು ನಗರಕ್ಕೆ ಸಿಂಹಪಾಲು; ಬರೋಬ್ಬರಿ 17 ಜಿಲ್ಲೆಗಳಿಗಿಲ್ಲ ಮಂತ್ರಿ ಭಾಗ್ಯ

ಸಚಿವ ಸ್ಥಾನಕ್ಕೆ ನಾನು ಲಾಬಿ ಮಾಡಿಲ್ಲ. ಲಾಬಿ ಮಾಡಿದ್ದೇನೆ ಎಂದಾದರೆ ರಾಜೀನಾಮೆ ಕೊಟ್ಟು ನಿವೃತ್ತಿ ತೆಗೆದುಕೊಳ್ಳುತ್ತೇನೆ. ಮಾಜಿ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದು ಬೇಸರ ತರಿಸಿದೆ, ಆ ವಿಚಾರದಲ್ಲಿ ಅಸಮಾಧಾನ ಇದೆ. ನಾನು ಯಾರಿಗೂ ಹೆದರೋದಿಲ್ಲ, ನೇರವಾಗಿ ಮಾತಾಡ್ತೀನಿ. ಗುಪ್ತ ಸಭೆ, ಸಮಾರಂಭ ನಡೆಸುವ ಪ್ರಶ್ನೆಯೇ ಇಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.ರಾಮಣ್ಣ ಲಮಾಣಿ, ಉಮೇಶ್ ಕತ್ತಿ ಯಾರಿಗಾದ್ರೂ  ಸಚಿವ ಸ್ಥಾನ ಕೊಡಬಹುದಿತ್ತು. ಯಡಿಯೂರಪ್ಪನವರ ವಿರುದ್ಧ ಮಾತಾಡಿದವರಿಗೆ ಸಚಿವ ಸ್ಥಾನ ಸಿಕ್ಕಿದೆ. ಇಂದೇ ರಾಜಕೀಯದಿಂದ ನಿವೃತ್ತಿಯಾದ್ರೂ ಪರವಾಗಿಲ್ಲ, ನನ್ನ ಅಭಿಪ್ರಾಯ ಬಹಿರಂಗವಾಗಿ ಹೇಳಿದ್ದೇನೆ ಎಂದು ಬೆಂಗಳೂರಿನಲ್ಲಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

(ವರದಿ: ರಮೇಶ್ ಹಿರೇಜಂಬೂರು)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

First published:August 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading