ದಾವಣಗೆರೆ: ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೀವ್ರ ಮುಖಭಂಗ ಉಂಟಾಗಿದೆ. ಕಮಲ ಪಾಳಯದ ಹೀನಾಯ ಸೋಲಿನಿಂದ ಹೊರಬರಲು ಕೇಸರಿ ನಾಯಕರು ಇನ್ನೂ ಪ್ರಯತ್ನಪಡುತ್ತಲೇ ಇದ್ದಾರೆ. ಈ ಮಧ್ಯೆ ಹೊನ್ನಾಳಿ ಶಾಸಕರಾಗಿದ್ದ ಎಂಪಿ ರೇಣುಕಾಚಾರ್ಯ (MP Renukacharya) ಅವರು ತಮ್ಮ ಸೋಲಿನಿಂದ ಕಂಗಾಲಾಗಿದ್ದಾರೆ. ಇಷ್ಟು ಮಾತ್ರವಲ್ಲದೇ ರಾಜಕೀಯ ನಿವೃತ್ತಿಗೂ (Political Retirement) ಮುಂದಾಗಿದ್ದಾರೆ.
ನಿನ್ನೆ ನಡೆದ ಚುನಾವಣಾ ಫಲಿತಾಂಶದಲ್ಲಿ ಒಂದು ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಳ್ಳದೆ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆ ತೀವ್ರ ಮುಖಭಂಗಕ್ಕೆ ಒಳಗಾಗಿರುವ ಎಂಪಿ ರೇಣುಕಾಚಾರ್ಯ, ಸೋಲನ್ನು ಅರಗಿಸಲಾರದೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ನಿನ್ನೆ ತಡರಾತ್ರಿ ತಮ್ಮ ಹೊನ್ನಾಳಿ ನಿವಾಸದಲ್ಲಿ ಸಾಕಷ್ಟು ಬೆಂಬಲಿಗರ ಜೊತೆ ಮಾತನಾಡುತ್ತಿದ್ದ ವೇಳೆ ಕಣ್ಣೀರೇ ಹಾಕಿಬಿಟ್ಟ ರೇಣುಕಾಚಾರ್ಯ, ಕ್ಷೇತ್ರದ ಜನರಿಗೆ ಸಾಕಷ್ಟು ಕೆಲಸ ಮಾಡಿ ಕೊಟ್ಟರೂ ಗೆಲ್ಲಲಿಲ್ಲ ಅಂತ ಅತ್ತಿದ್ದಾರೆ.
ಇದನ್ನೂ ಓದಿ: Dr Ashwath Narayan: ಒಂದು ಮನೆ ನೂರು ಬಾಗಿಲಾಗಿದೆ; ಹೀನಾಯ ಸೋಲಿನ ಬಳಿಕ ಅಶ್ವತ್ಥ್ ನಾರಾಯಣ್ ಬೇಸರ
'ಕೆಲಸ ಮಾಡಿದ್ರೂ ಸೋಲಿಸ್ಬುಟ್ರಲ್ಲಾ'
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಮ್ಮ ಕ್ಷೇತ್ರದಲ್ಲಿ ರೇಣುಕಾಚಾರ್ಯ ಕಣ್ಣಿರು ಹಾಕಿದ್ದು, ಒಂದು ಸುತ್ತಿನಲ್ಲೂ ಕೂಡ ಮುನ್ನಡೆ ಸಾಧಿಸದೆ ಇರೋದಕ್ಕೆ ತೀವ್ರ ನೊಂದಿದ್ದಾರೆ. ನಾನು ಕ್ಷೇತ್ರದ ಜನರಿಗೆ ಹಗಲಿರುಳು ಕೆಲಸ ಮಾಡಿದೆ. ಆದರೂ ಈ ರೀತಿ ಸೋಲು ಆಯ್ತಲ್ಲ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವೇಳೆ ಬೆಂಬಲಿಗರು ಸಮಾಧಾನ ಪಡಿಸಲು ಯತ್ನಿಸಿದರೂ ಕೂಡ ಸೋಲಿನ ಆಘಾತದಿಂದ ತಮ್ಮ ಕ್ಷೇತ್ರದ ಜನರ ಜೊತೆ ಮಾತನಾಡಲಾಗದೆ ಪುನಃ ಅತ್ತಿದ್ದಾರೆ.
ಅಳುತ್ತಲೇ ನಿವೃತ್ತಿ ಘೋಷಣೆ!
ಕೊನೆಗೆ ಒಂದು ನಿರ್ಧಾರಕ್ಕೆ ಬಂದ ರೇಣುಕಾಚಾರ್ಯ, ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ರಾಜಕೀಯ ನಿವೃತ್ತಿ ಪ್ರಸ್ತಾಪವನ್ನು ಮಾಡಿದ್ದಾರೆ. ಈ ವೇಳೆ ರೇಣುಕಾಚಾರ್ಯ ನಿರ್ಧಾರಕ್ಕೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಕೂಡ ಎಂಪಿಆರ್‌ಗೆ ಧೈರ್ಯ ಹೇಳಿದರು.
ಇದನ್ನೂ ಓದಿ: MK Stalin Calls Siddaramaiah: 'ಸಿದ್ರಾಮಯ್ಯ ಸಾಹೇಬ್ರೇ, ಕಂಗ್ರಾಟ್ಸ್', ಕರೆ ಮಾಡಿ ಅಭಿನಂದಿಸಿದ ತಮಿಳುನಾಡು ಸಿಎಂ
ಬಿಜೆಪಿಯವರ ತಲೆಯ ಮೇಲೆಯೇ ಗದಾಪ್ರಹಾರ
ಮುಂಬೈ: ಬಿಜೆಪಿಯವರು ಭಜರಂಗಬಲಿಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ್ರು, ಆದರೆ ಭಜರಂಗಬಲಿ ಬಿಜೆಪಿಯವರ ತಲೆಯ ಮೇಲೆಯೇ ಗದಾಪ್ರಹಾರ ಮಾಡಿದೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ವ್ಯಂಗ್ಯವಾಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿಗೆ ಹೀನಾಯ ಸೋಲು ಉಂಟಾಗಿರುವ ಹಿನ್ನೆಲೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿಯ ಸೋಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಸೋಲು ಎಂದು ಹೇಳಿದ್ದಾರೆ.
ಕರ್ನಾಟಕದ ಚುನಾವಣೆಯಲ್ಲಿ ಏನು ಫಲಿತಾಂಶ ಬಂದಿದೆಯೋ ಅದೇ ಫಲಿತಾಂಶ 2024ರ ಲೋಕಸಭಾ ಚುನಾವಣೆಯಲ್ಲಿಯೂ ಬರಲಿದೆ ಎಂದಿರುವ ಸಂಜಯ್ ರಾವತ್, ಕರ್ನಾಟಕದ ಚುನಾವಣಾ ಫಲಿತಾಂಶ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ