ಸಾಮಾಜಿಕ ಜಾಲತಾಣದ ಮೂಲಕ ಹನಿಟ್ರ್ಯಾಪ್; ಆರೋಪಿಗಳ ಬಂಧನ

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅಪರಿಚಿತರನ್ನು ಮನೆಗೆ ಆಹ್ವಾನಿಸುತ್ತಿದ್ದರು. ಮನೆಯಲ್ಲಿ ಯಾರಿಲ್ಲ ಎಂದು ನಂಬಿಸಿ ಕರೆಸಿಕೊಳ್ಳುತ್ತಿದ್ದರು. ಅವರು ಮನೆಗೆ ಬಂದ ಬಳಿಕ ಈ ನಾಲ್ವರು ಅವರನ್ನು ಹೆದರಿಸಿ, ಹಲ್ಲೆ ನಡೆಸಿ ದುಡ್ಡು ಕೀಳುತ್ತಿದ್ದರು

  • Share this:

ಮಂಗಳೂರು (ಜ. 19): ಸಾಮಾಜಿಕ ಜಾಲತಾಣದ ಮೂಲಕ ಹನಿಟ್ರ್ಯಾಪ್​ ಮಾಡುತ್ತಿದ್ದ ಗ್ಯಾಂಗ್​ವೊಂದನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಾಲ್ವರಲ್ಲಿ ಇಬ್ಬರು ಹುಡುಗಿರಯರು ಇದ್ದಾರೆ. ರೇಶ್ಮಾಆಲಿಯಾಸ್​ ನೀಮಾ , ಜೀನತ್ ಮುಬಿನ್, ಮಹಮ್ಮದ್ ಆಲಿಯಾಸ್​  ಇಕ್ಬಾಲ್, ಮತ್ತು ನಾಸಿಫ್ ಆಲಿಯಾಸ್​ಅಬ್ದುಲ್ ಖಾದರ್ ನಾಜೀಫ್​ ಬಂಧಿತ ಆರೋಪಿಗಳು. ಕೇರಳ ಮೂಲದ ಯುವಕನನ್ನು ಹನಿಟ್ರ್ಯಾಪ್​ ಮಾಡಿದ ಈ ನಾಲ್ವರು ದುಡ್ಡಿಗಾಗಿ ಬೆದರಿಕೆ ಒಡ್ಡುತ್ತಿದ್ದರು. ಈ ಹಿನ್ನಲೆಯಲ್ಲಿ ರೋಸಿಪ ಹೋದ ಯುವಕ ಪೊಲೀಸರಿಗೆ ದೂರು ಸಲ್ಲಿಸಿದ್ದು, ಇವರ ಅಕ್ರಮ ಬಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಂದರ ಚಿತ್ರಗಳನ್ನು ಹಾಕಿ ಅಪರಿಚಿತರಿಗೆ ಸ್ನೇಹ ಸಂದೇಶ ರವಾನಿಸುತ್ತಿದ್ದ ಇವರು, ಬಳಿಕ ಅವರನ್ನು ಹನಿಟ್ರ್ಯಾಪ್​ ಮಾಡುತ್ತಿದ್ದರು. ಇದೇ ರೀತಿ ಹಲವು ಜನರಿಗೆ ಈ ಗ್ಯಾಂಗ್​ ಮೋಸ ಮಾಡಿರುವುದು ಬಯಲಾಗಿದೆ. 


ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಹೂಡುತ್ತಿದ್ದ ಈ ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅಪರಿಚಿತರನ್ನು ಮನೆಗೆ ಆಹ್ವಾನಿಸುತ್ತಿದ್ದರು. ಮನೆಯಲ್ಲಿ ಯಾರಿಲ್ಲ ಎಂದು ನಂಬಿಸಿ ಕರೆಸಿಕೊಳ್ಳುತ್ತಿದ್ದರು. ಅವರು ಮನೆಗೆ ಬಂದ ಬಳಿಕ ಈ ನಾಲ್ವರು ಅವರನ್ನು ಹೆದರಿಸಿ, ಹಲ್ಲೆ ನಡೆಸಿ ದುಡ್ಡು ಕೀಳುತ್ತಿದ್ದರು. ಅಷ್ಟೇ ಅಲ್ಲದೇ, ಈ ದೃಶ್ಯಾವಳಿಗಳನ್ನು ವಿಡಿಯೋ ಮಾಡಿಕೊಂಡು ದುಡ್ಡಿಗೆ ಬೇಡಿಕೆ ಇಡುತ್ತಿದ್ದರು. ಒಂದು ವೇಳೆ ಹಣ ನೀಡದಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ಹಣವನ್ನು ಹರಿ ಬಿಡುವ ಬೆದರಿಕೆ ಒಡ್ಡುತ್ತಿದ್ದರು.


ಇದೇ ರೀತಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬಳೆಯ ಯುವಕನನ್ನು ಜನವರಿ 14 ರಂದು ಸುರತ್ಕಲ್‌ಗೆ ಕರೆಸಿಕೊಂಡಿದ್ದರು. ಕಾರಿನಲ್ಲಿ ಬಂದಿದ್ದ ಸಂತ್ರಸ್ತನನ್ನು ಮನೆಯೊಳಗೆ ಕೂಡಿ ಹಾಕಿ, ಹಲ್ಲೆ ನಡೆಸಿದ್ದಾರೆ. ಅಲ್ಲದೇ ಐದು ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದೆ ಇದ್ದರೆ ವಿಡಿಯೋ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತೇವೆ.  ಅತ್ಯಚಾರ ದೂರು ನೀಡುತ್ತೇವೆ ಎಂದು ಬೆದರಿಸಿದ್ದಾರೆ. ಸಂತ್ರಸ್ತನ ಬಳಿ ಹಣ ಇಲ್ಲದೆ ಇದ್ದುದರಿಂದ ಆತನ ಕಾರನ್ನು ತೆಗೆದುಕೊಂಡು ಕಳುಹಿಸಿದ್ದಾರೆ.  ಒಂದು ದಿನದ ಬಳಿಕ ಇನ್ನಷ್ಟು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಇದರಿಂದ ಕಂಗೆಟ್ಟ ಯುವಕ ಜನವರಿ 16ಕ್ಕೆ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.


ಇದನ್ನು ಓದಿ: ತುಪ್ಪರಿ ಹಳ್ಳ ಸೇರುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್​ ಕಾರ್ಖಾನೆ ಕಲುಷಿತ ನೀರು; ಸಾವಿರಾರು ಮೀನುಗಳ ಮಾರಣ ಹೋಮ


ವಿಚಾರಣೆ ಸಂದರ್ಭ ಈ ಗ್ಯಾಂಗ್ ಕಳೆದ ಏಳೆಂಟು ತಿಂಗಳಲ್ಲಿ ಐದಾರು ಮಂದಿಗೆ ಈ ರೀತಿ ಹನಿಟ್ರ್ಯಾಪ್ ಮಾಡಿರೋದು ಬೆಳಕಿಗೆ ಬಂದಿದೆ.


ಬಂಧಿತರು ಈ ಅಪರಾಧ ಚಟುವಟಿಕೆಗಳ ಜೊತೆಗೆ ರೇಶ್ಮಾ ಬೀಡಿ ಕಟ್ಟುವ ವೃತ್ತಿ ನಡೆಸುತ್ತಿದ್ದಾರೆ. ಜೀನತ್ ಇನ್ಸೂರೆನ್ಸ್‌ ಹಾಗೂ ಇಕ್ಬಾಲ್ ಮತ್ತು ನಾಜೀಪ್ ಚಾಲಕ ವೃತ್ತಿ ನಡೆಸುತ್ತಿದ್ದರು. ಸದ್ಯ ಆರೋಪಿಗಳಿಂದ ಮೊಬೈಲ್ ಫೋನ್, ನಗದು ಹಣ, ಆಯುಧ, ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಬಂಧಿತರ ಇನ್ನಷ್ಟು ವಿಚಾರಣೆ ನಡೆಸುತ್ತಿದ್ದು ಮುಂದೆ ಪ್ರಕರಣ ಇನ್ನಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ.

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು