Honeytrap: 'ಪದ್ಮ'ನ ಹಿಂದೆ ಹೋಗಿದ್ದವ 'ಹನಿ' ಬಲೆಗೆ ಬಿದ್ದ! ಯಾರದ್ದೋ ಮನೆಗೆ ಹೋಗುವ ಮುನ್ನ ಎಚ್ಚರ

ಸ್ನೇಹಿತನ ಮಾತು ನಂಬಿ ಆತ ಕರೆದಲ್ಲಿಗೆ ಹೋಗಿದ್ದ. ಅಲ್ಲಿ ಬಂದಿದ್ದಳು 'ಪದ್ಮಾ'! ಕಣ್ಣಿನಲ್ಲೇ ಕೊಲ್ಲುವಂತೆ ನೋಡಿದ ಆಕೆ, ನಿಧಾನಕ್ಕೆ ಹನಿ ಬಲೆಯಲ್ಲಿ ಬೀಳಿಸತೊಡಗಿದ್ದಳು. ಅಷ್ಟರಲ್ಲಿ ಯಾರೋ ಬಾಗಿಲು ಬಡಿದ್ದಿದ್ದರು. ಮುಂದೇನಾಯ್ತು?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಉತ್ತರ ಕನ್ನಡ: ಕೆಲವರು ನಿಮಗೆ ಕೆಲಸ (Job) ಕೊಡ್ತೀವಿ ಅಂತ ನಂಬಿಸ್ತಾರೆ. ದುಡ್ಡು (Money) ಕೊಟ್ರೆ ನಿಮಗೆ ಬೇಕಾದ ಕೆಲಸ ಗ್ಯಾರೆಂಟಿ ಅಂತ ಹೇಳ್ತಾರೆ. ದೊಡ್ಡ ದೊಡ್ಡ ವ್ಯಕ್ತಿಗಳು ನಮ್ಮ ಸಂಪರ್ಕದಲ್ಲಿದ್ದಾರೆ (Contact) ಅಂತ ಪೋಸ್ ಕೊಡ್ತಾರೆ. ಅಂತವ್ರನ್ನು ನಂಬಿಕೊಂಡು ನೀವೇನಾದ್ರೂ ಹೋದ್ರೋ ನಿಮ್ಮ ಕಥೆ ಮುಗೀತು ಅಂತಾನೇ ಅರ್ಥ. ಅವ್ರು ನಿಮ್ಮನ್ನೇನೂ ಸಾಯಿಸುವುದಿಲ್ಲ ನಿಜ. ಆದರೆ ನಿಮ್ಮ ಮಾನ ಮರ್ಯಾದೆ, ಹಣ, ಆಸ್ತಿಯನ್ನೆಲ್ಲ ಕರಗಿಸಿ ಬಿಡ್ತಾರೆ. ಪ್ರತಿನಿತ್ಯ ನರಳಿ ನರಳಿ ಸಾಯುವಂತೆ ಮಾಡ್ತಾರೆ. ಅರೇ ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂತೀರಾ? ಅದಕ್ಕೆ ಕಾರಣನೂ ಇದೆ. ಈಗ ಇಲ್ಲಿ ಹೇಳೋಕೆ ಹೊರಟಿರೋ ಕಥೆಯೂ ಅಂಥದ್ದೇ. ಇಲ್ಲಿ ಪರಿಚಯಸ್ಥನ ಮಾತು ಕೇಳಿ ಹೋದ ಅಮಾಯಕ, ಆ ಹೆಣ್ಣಿನ ಬಲೆಗೆ ಬಿದ್ದಿದ್ದಾನೆ. ಹನಿ ಟ್ರ್ಯಾಪ್‌ನಲ್ಲಿ (Honeytrap) ಸಿಲುಕಿ ಒದ್ದಾಡಿದ್ದಾನೆ.

ಶಿರಸಿಯಲ್ಲಿ ಘಟನೆ, ಶಿವಮೊಗ್ಗದಲ್ಲಿ ಅರೆಸ್ಟ್

 ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಮೋಸಹೋದ ವ್ಯಕ್ತಿ ಕೊಟ್ಟಿದ ದೂರಿನ ಆಧಾರದ ಮೇಲೆ ಶಿರಸಿ ಪೊಲೀಸರು ಶಿವಮೊಗ್ಗದಲ್ಲಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಇದ್ದಾಳೆ. ಬಂಧಿತರನ್ನು ಶಿರಸಿ ತಾಲೂಕಿನ ಉಂಚಳ್ಳಿಯ ಅಜಿತ್ ನಾಡಿಗ್, ಗೋಲಕೇರಿ ಗ್ರಾಮದ ದಿಲೀಪ್ ಕುಮಾರ್ ಶೆಟ್ಟಿ ಹಾಗೂ ಶಿವಮೊಗ್ಗದ ಗೋಪಾಲ ರಂಗನಾಥ ಬಡಾವಣೆಯ ಪದ್ಮಜಾ ಎಂದು ಗುರುತಿಸಲಾಗಿದೆ.

ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ

ದೂರುದಾರ ವ್ಯಕ್ತಿ ಹಾಗೂ ಬಂಧಿತ ಅಜಿತ್ ಇಬ್ಬರು ಕಳೆದ ಐದಾರು ವರ್ಷಗಳಿಂದ ಪರಿಚಿತರಾಗಿದ್ದರು. ಆತ ಸರ್ಕಾರಿ ಕಾಲೇಜು ಉಪನ್ಯಾಸಕನಾಗಿದ್ದ. ಆದರೆ ಕೆಲಸ ಖಾಯಂ ಆಗಿರಲಿಲ್ಲ. ಹೀಗಾಗಿ ಸರಕಾರಿ ಖಾಯಂ ಉಪನ್ಯಾಸ ಹುದ್ದೆ ಕೊಡಿಸೋದಾಗಿ  ಸಂತ್ರಸ್ತನನ್ನು  ಆರೋಪಿ ಅಜಿತ್ ಹಾಗೂ ದಿಲೀಪ್ ನಂಬಿಸಿದ್ದರು.

ಇದನ್ನೂ ಓದಿ: Bengaluru: ನಂಬರ್ ಕೇಳ್ತಾರೆ, ಫೋಟೋ ಕೇಳ್ತಾರೆ ಆಮೇಲೆ ಹಣ ಕೀಳ್ತಾರೆ! ಆ್ಯಪ್‌ ಬಳಸೋ ಮಹಿಳೆಯರೇ ಹುಷಾರ್

ಶಿವಮೊಗ್ಗಕ್ಕೆ ಕರೆಯಿಸಿ ಹನಿಟ್ರ್ಯಾಪ್

ಆರೋಪಿಗಳಿಬ್ಬರು ಕಳೆದ ಜನವರಿ 17ರಂದು ಸಂತ್ರಸ್ತನನ್ನು ಶಿವಮೊಗ್ಗಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಆತನನ್ನು ಮನೆಯೊಂದರ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಅಲ್ಲಿ ತಮ್ಮ ಟೀಂನಲ್ಲಿದ್ದ ಪದ್ಮಾ ಎಂಬಾಕೆಯನ್ನು ಕರೆಯಿಸಿದ್ದಾರೆ. ಜೊತೆಗೆ ಇಬ್ಬರನ್ನೂ ನಗ್ನಗೊಳಿಸಿ, ಫೋಟೋ ತೆಗೆದುಕೊಂಡಿದ್ದಾರೆ. ಜೊತೆಗೆ ವಿಡಿಯೋ ರೆಕಾರ್ಡ್‌ ಸಹ ಮಾಡಿಕೊಂಡಿದ್ದಾರೆ.

15 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಖದೀಮರು

ಇಷ್ಟೆಲ್ಲಾ ಆದ ಮೇಲೆ ಆರೋಪಿಗಳು ದುಡ್ಡಿಗಾಗಿ ಬೇಡಿಕೆಯಿಟ್ಟಿದ್ದಾರೆ. ಬರೋಬ್ಬರಿ 15 ಲಕ್ಷ ಕೊಡುವಂತೆ ಬೆದರಿಕೆ ಹಾಕಿದ್ದಾರೆ. ಹಣ ಕೊಡದೇ ಇದ್ದರೆ ಮಹಿಳೆ ಜೊತೆ ನಗ್ನವಾಗಿ ಇರುವ ವಿಡಿಯೋ ಹಾಗೂ ಫೋಟೋಗಳನ್ನು ವೈರಲ್ ಮಾಡುವುದಾಗಿ ಹೆದರಿಸಿದ್ದಾರೆ. ಸಾಲದ್ದಕ್ಕೆ ಸುಳ್ಳು ಕರಾರು ಪತ್ರ, ಬ್ಲ್ಯಾಂಕ್ ಚೆಕ್ ಕೂಡಾ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ದೂರುದಾರನ ತಂದೆಗೂ ಬೆದರಿಸಿದ್ದ ಖದೀಮರು

15 ಲಕ್ಷ ಹಣ ಕೊಡುವುದಕ್ಕೆ ಸಂತ್ರಸ್ತ ಒಪ್ಪದೇ ಇದ್ದಾಗ ಆತನ ತಂದೆಯನ್ನೂ ಸಂಪರ್ಸಿಕಿದ್ದಾರೆ ಎನ್ನಲಾಗಿದೆ. ಜನವರಿ 18ರಂದು ಆತನ ತಂದೆ ಬಳಿಗೆ ತೆರಳಿ ಮಗನ ಫೋಟೋ ಹಾಗೂ ವಿಡಿಯೋ ತೋರಿಸಿದ್ದಾರೆ. ಹಣ ನೀಡದಿದ್ದರೆ ಇದನ್ನೆಲ್ಲ ವೈರಲ್ ಮಾಡುತ್ತೇವೆ. ಜೊತೆಗೆ ನಿನ್ನ ಮಗನ ಪ್ರಾಣಕ್ಕೂ ಅಪಾಯ ಬರಬಹುದು ಅಂತ ಹೆದರಿಸಿದ್ದಾಗಿ ತಿಳಿದು ಬಂದಿದೆ.

ಇದನ್ನೂ ಓದಿ:  Hijab ಗಲಾಟೆಯಲ್ಲಿ ಭಯೋತ್ಪಾದಕ, ಉಗ್ರ ಸಂಘಟನೆಗಳ ಕೈವಾಡ: MP Renukacharya ಹೇಳಿಕೆ

ಪೊಲೀಸರ ಬಲೆಗೆ ಬಿದ್ದ ಹನಿಟ್ರ್ಯಾಪ್ ವಂಚಕರು

ಕೊನೆಗೆ ಬೇರೆ ದಾರಿ ಕಾಣದೇ ಸಂತ್ರಸ್ತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಶಿರಸಿ ಪೊಲೀಸರು, ಯಶಸ್ವಿ ಕಾರ್ಯಾಚರಣೆ ಮಾಡಿದ್ದಾರೆ. ಇದೀಗ ಹನಿಟ್ರ್ಯಾಪ್ ಮಾಡುತ್ತಿದ್ದ ಮೂವರು ಖದೀಮರು ಅಂದರ್ ಆಗಿದ್ದಾರೆ.
Published by:Annappa Achari
First published: