ಹನಿಟ್ರ್ಯಾಪ್​ ಪ್ರಕರಣ; ಬೆಳಗಾವಿ ಬಟ್ಟೆ ವ್ಯಾಪಾರಿಯ ನಗ್ನ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಯುವತಿಯ ಗ್ಯಾಂಗ್ ಬಂಧನ

Honey Trapping Case: ಬಟ್ಟೆ ವ್ಯಾಪಾರಿ ಎಂ.ಎಂ. ಮುಜಾವರ್​ಗೆ 6 ಲಕ್ಷ ರೂ. ನೀಡಬೇಕಿದ್ದ ಆರೋಪಿ ಬಿಬಿ ಆಯೇಷಾ ಹಣ ಕೊಡುತ್ತೇವೆ ಎಂದು ಕರೆದುಕೊಂಡು ಹೋಗಿ ತನ್ನ ಗ್ಯಾಂಗ್ ಜೊತೆ ಸೇರಿ ಬಟ್ಟೆ ವ್ಯಾಪಾರಿಯನ್ನು ಮನೆಯೊಂದರಲ್ಲಿ ಕೂಡಿಹಾಕಿ ನಗ್ನ ವಿಡಿಯೋ ಮಾಡಿದ್ದಳು.

news18-kannada
Updated:December 4, 2019, 9:18 AM IST
ಹನಿಟ್ರ್ಯಾಪ್​ ಪ್ರಕರಣ; ಬೆಳಗಾವಿ ಬಟ್ಟೆ ವ್ಯಾಪಾರಿಯ ನಗ್ನ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಯುವತಿಯ ಗ್ಯಾಂಗ್ ಬಂಧನ
ಹನಿಟ್ಯ್ರಾಪ್
  • Share this:
ಬೆಳಗಾವಿ (ಡಿ. 4): ಹನಿಟ್ರ್ಯಾಪ್​ಗೆ ಪ್ರಯತ್ನಿಸಿದ ಬೆಳಗಾವಿಯ ಖತರ್ನಾಕ್ ಗುಂಪೊಂದನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಬಟ್ಟೆ ವ್ಯಾಪಾರಿಯ ನಗ್ನ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್​ ಬಗ್ಗೆ ದೂರು ಬಂದಿದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಓರ್ವ ಬಾಲಕ, ಇಬ್ಬರು ಮಹಿಳೆಯರು ಸೇರಿ 6 ಜನರನ್ನು ಬಂಧಿಸಿದ್ದಾರೆ.

ಮಹಾಂತೇಶ ನಗರದ ಬಿಬಿ ಆಯೇಷಾ ಶೇಖ್, ಆಶ್ರಯ ಕಾಲೋನಿ ರುಕ್ಮಿಣಿ ನಗರ ನಿವಾಸಿ ಹೀನಾ ಅಕ್ಬರ್ ಸವಣೂರ, ಅಲೀಶಾನ್ ಶಾಬುದ್ದೀನ್, ಅಖೀಬ್ ಅಲ್ಲಾಭಕ್ಷ್ ಬೇಪಾರಿ, ಸಲ್ಮಾನ್ ಗುಲಾಜ್ಬೇಗ್ ಹಾಗೂ ಓರ್ವ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಟ್ಟೆ ವ್ಯಾಪಾರಿ ಎಂ.ಎಂ. ಮುಜಾವರ್​ಗೆ 6 ಲಕ್ಷ ರೂ. ನೀಡಬೇಕಿದ್ದ ಆರೋಪಿ ಬಿಬಿ ಆಯೇಷಾ ಹಣ ಕೊಡುತ್ತೇವೆ ಎಂದು ಕರೆದುಕೊಂಡು ಹೋಗಿ ತನ್ನ ಗ್ಯಾಂಗ್ ಜೊತೆ ಸೇರಿಕೊಂಡು ಬಟ್ಟೆ ವ್ಯಾಪಾರಿಯನ್ನು ಮನೆಯೊಂದರಲ್ಲಿ ಕೂಡಿಹಾಕಿದ್ದಳು. ನಂತರ ಬಟ್ಟೆ ವ್ಯಾಪಾರಿಯ ನಗ್ನ ವಿಡಿಯೋ ಮಾಡಿ ತಾವೇ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದರು.

ರಾಣೆಬೆನ್ನೂರು ಕೈ ಅಭ್ಯರ್ಥಿ ಕೋಳಿವಾಡ ಮನೆ ಮೇಲೆ ಐಟಿ ದಾಳಿ; ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಗ್ಯಾಂಗ್​ ಹಾಕಿದ ಬೆದರಿಕೆಗೆ ಹೆದರಿದ ಬಟ್ಟೆ ವ್ಯಾಪಾರಿ ಮುಜಾವರ್ ಮನೆಗೆ ಹೋಗಿ ಹಣ ತರುವುದಾಗಿ ಹೇಳಿ ಅಲ್ಲಿಂದ ವಾಪಾಸ್​ ಬಂದಿದ್ದರು. ಬಳಿಕ ನೇರವಾಗಿ ಮಾಳಮಾರುತಿ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ