ಹನಿಟ್ರ್ಯಾಪ್ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ; ಎರಡೇ ದಿನಕ್ಕೆ ವಿಚಾರಣೆ ಅಂತ್ಯ; ರಾಜಕೀಯ ಒತ್ತಡಕ್ಕೆ ಬೇಸತ್ತಿತಾ ಸಿಸಿಬಿ?

ಇಬ್ಬರು ಅನರ್ಹ ಶಾಸಕರು, ಒಬ್ಬ ಬಿಜೆಪಿ ಶಾಸಕ ಸೇರಿದಂತೆ 10 ಶಾಸಕರು ಕಿಂಗ್​ಪಿನ್ ರಾಘವೇಂದ್ರನ ಹನಿಟ್ರ್ಯಾಪ್​ಗೆ ಸಿಲುಕಿಕೊಂಡಿರುವುದು ತಿಳಿದುಬಂದಿದೆ. ಈ ಹತ್ತು ಶಾಸಕರಷ್ಟೇ ಅಲ್ಲ ವಿವಿಧ ಪಕ್ಷಗಳ ಇನ್ನೂ ಹಲವು ರಾಜಕಾರಣಿಗಳನ್ನು ಹನಿಟ್ರ್ಯಾಪ್​ಗೆ ಕೆಡವಲಾಗಿದೆ.

news18
Updated:November 30, 2019, 2:48 PM IST
ಹನಿಟ್ರ್ಯಾಪ್ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ; ಎರಡೇ ದಿನಕ್ಕೆ ವಿಚಾರಣೆ ಅಂತ್ಯ; ರಾಜಕೀಯ ಒತ್ತಡಕ್ಕೆ ಬೇಸತ್ತಿತಾ ಸಿಸಿಬಿ?
ಲೈಂಗಿಕ ಅಪರಾಧ
  • News18
  • Last Updated: November 30, 2019, 2:48 PM IST
  • Share this:
ಬೆಂಗಳೂರು(ನ. 30): ಹಲವು ಜನಪ್ರತಿನಿಧಿಗಳು ಸಿಲುಕಿರುವ ಹನಿಟ್ರ್ಯಾಪ್ ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವಂತಿದೆ. ಪ್ರಕರಣದ ಪ್ರಮುಖ ಆರೋಪಿ ರಾಘವೇಂದ್ರ ಅವರನ್ನು ಸಿಸಿಬಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆರೋಪಿಯ ವಿಚಾರಣೆ ನಡೆಸಲು ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಎರಡು ದಿನಕ್ಕೆ ಸುಸ್ತಾಗಿರುವಂತೆ ತೋರುತ್ತಿದೆ. ಅವಧಿಗೆ ಮುನ್ನವೇ ರಾಘವೇಂದ್ರನನ್ನು ಕೋರ್ಟ್​ಗೆ ಹಾಜರುಪಡಿಸಿದ್ದಾರೆ. ನಿನ್ನೆ ರಾತ್ರಿ ನ್ಯಾಯಾಲಯವು ರಾಘವೇಂದ್ರನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿ ಆದೇಶಿಸಿದೆ. ಇದರ ಬೆನ್ನಲ್ಲೇ ಆತನನ್ನು ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ.

ಈ ಪ್ರಕರಣದ ತನಿಖೆಯ ವೇಳೆ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಹಲವು ಜನಪ್ರತಿನಿಧಿಗಳು ಹನಿಟ್ರ್ಯಾಪ್​ಗೆ ಒಳಗಾಗಿರುವ ವಿಚಾರ ಬಯಲಿಗೆ ಬರುತ್ತಲೇ ಇದೆ. ವಿಚಾರಣೆ ವೇಳೆ ಪ್ರಮುಖ ಆರೋಪಿ ರಾಘವೇಂದ್ರ ಹಲವು ಮುಖಂಡರ ಬಂಡವಾಳ ಬಿಚ್ಚಿಟ್ಟಿದ್ದನೆನ್ನಲಾಗಿದೆ. ಇದರಿಂದಾಗಿ ರಾಜಕೀಯ ಮುಖಂಡರಿಂದ ಸಿಸಿಬಿ ಮೇಲೆ ನಿರಂತರ ಒತ್ತಡ ಬರಲಾರಂಭಿಸಿದೆ. ರಾಘವೇಂದ್ರನಿಂದ ಪಡೆದಿರುವ ವಿಡಿಯೋವನ್ನು ಡಿಲೀಟ್ ಮಾಡುವಂತೆ ಹಲವು ರಾಜಕಾರಣಿಗಳು ದುಂಬಾಲು ಬೀಳುತ್ತಿದ್ದಾರೆ. ಇದರಿಂದ ವಿಪರೀತ ಒತ್ತಡಕ್ಕೊಳಗಾಗಿರುವ ಸಿಸಿಬಿ ಪೊಲೀಸರು ಆರೋಪಿ ರಾಘವೇಂದ್ರನನ್ನು ತಮ್ಮ ಕಸ್ಟಡಿಯಿಂದ ಹೊರಕಳುಹಿಸುವ ತೀರ್ಮಾನಕ್ಕೆ ಬಂದರೆಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಹೀಗಾಗಿಯೇ, ಆರು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದ ರಾಘವೇಂದ್ರನ ವಿಚಾರಣೆಯನ್ನು ಎರಡೇ ದಿನಕ್ಕೆ ಅಂತ್ಯಗೊಳಿಸಿ ಕೈ ತೊಳೆದುಕೊಂಡಿದ್ದಾರೆನ್ನಲಾಗಿದೆ.

ಇದನ್ನೂ ಓದಿ: ಹನಿಟ್ರ್ಯಾಪ್​ ಪ್ರಕರಣ: ಖಾಸಗಿ ವಿಡಿಯೋ ಡಿಲೀಟ್​ ಮಾಡಿಸಲು ಸಿಸಿಬಿ ಕಚೇರಿ ಬಳಿ ಶಾಸಕರ-ಅಧಿಕಾರಿಗಳ ದಂಡು!

ಇಬ್ಬರು ಅನರ್ಹ ಶಾಸಕರು, ಒಬ್ಬ ಬಿಜೆಪಿ ಶಾಸಕ ಸೇರಿದಂತೆ 10 ಶಾಸಕರು ಕಿಂಗ್​ಪಿನ್ ರಾಘವೇಂದ್ರನ ಹನಿಟ್ರ್ಯಾಪ್​ಗೆ ಸಿಲುಕಿಕೊಂಡಿರುವುದು ತಿಳಿದುಬಂದಿದೆ. ಈ ಹತ್ತು ಶಾಸಕರಷ್ಟೇ ಅಲ್ಲ ವಿವಿಧ ಪಕ್ಷಗಳ ಇನ್ನೂ ಹಲವು ರಾಜಕಾರಣಿಗಳನ್ನು ಹನಿಟ್ರ್ಯಾಪ್​ಗೆ ಕೆಡವಲಾಗಿದೆ. ಹನಿಟ್ರ್ಯಾಪ್​ಗೆ ಒಳಪಡಿಸಿ ರೆಕಾರ್ಡ್ ಮಾಡಲಾದ ಅಶ್ಲೀಲ ವಿಡಿಯೋವನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬ್ಲ್ಯಾಕ್​ಮೇಲ್ ಮಾಡಲಾಗುತ್ತಿತ್ತು. ಸಿಸಿಬಿ ಪೊಲೀಸರು ಪ್ರಕರಣದ ಮಾಸ್ಟರ್​ಮೈಂಡ್ ರಾಘವೇಂದ್ರ ಅಲಿಯಾಸ್ ರಘು ಅಲಿಯಾಸ್ ರಾಕಿಯನ್ನು ಹಣ ಕೊಡುವ ನೆಪದಲ್ಲಿ ಕರೆಸಿ ಬಂಧಿಸಿದ್ದಾರೆ. ರಾಘವೇಂದ್ರನ ಪ್ರೇಯಸಿ ಪುಷ್ಪಾ ಹಾಗೂ ಇತರ ಎಂಟತ್ತು ಮಂದಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ಧಾರೆ.

ಹನಿಟ್ರ್ಯಾಪ್ ಗ್ಯಾಂಗು ಹಲವು ರಾಜಕಾರಣಿಗಳು ಹಾಗೂ ಶ್ರೀಮಂತರನ್ನ ಟಾರ್ಗೆಟ್ ಮಾಡುತ್ತು. ರಾಜಕಾರಣಿ ಬಳಿ ಒಬ್ಬ ಮಹಿಳೆಯನ್ನು ಕಳುಹಿಸಿ ಅವರೊಂದಿಗೆ ನಿಧಾನವಾಗಿ ಸಂಬಂಧ ವೃದ್ಧಿಸುವಂತೆ ಮಾಡಲಾಗುತ್ತಿತ್ತು. ಆ ಮಹಿಳೆಗೆ ರಾಜಕಾರಣಿಯು ಹತ್ತಿರವಾಗುತ್ತಿರುವುದು ಕಂಡು ಬರುತ್ತಿದ್ದಂತೆಯೇ ಯಾವುದಾದರೋ ಹೋಟೆಲ್ ರೂಮನ್ನು ಬುಕ್ ಮಾಡಲಾಗುತ್ತಿತ್ತು. ಆ ರೂಮಿನಲ್ಲಿ ರಹಸ್ಯ ಕೆಮರಾಗಳನ್ನು ಇಟ್ಟು, ಮಹಿಳೆಯೊಂದಿಗೆ ಆ ವ್ಯಕ್ತಿ ನಡೆಸುವ ಸರಸ ಸಲ್ಲಾಪಗಳ ವಿಡಿಯೋ ಸೆರೆಹಿಡಿಯಲಾಗುತ್ತಿತ್ತು. ನಂತರ ವಿಡಿಯೋವನ್ನು ಇಟ್ಟುಕೊಂಡು ಕೋಟಿಗಟ್ಟಲೆ ಹಣಕ್ಕೆ ಬ್ಲ್ಯಾಕ್​ಮೇಲ್ ಮಾಡಲಾಗುತ್ತಿತ್ತು ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:November 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ