ಡೈವರ್ಸ್​ ಕೇಸ್​ ಗೆ ಟ್ವಿಸ್ಟ್ ; ಗಂಡನ ಹನಿ ಟ್ರ್ಯಾಪ್ ಮಾಡಿಸಲು ಸ್ನೇಹಿತೆಗೆ ಸುಪಾರಿ..?

news18
Updated:September 5, 2018, 3:22 PM IST
ಡೈವರ್ಸ್​ ಕೇಸ್​ ಗೆ ಟ್ವಿಸ್ಟ್ ; ಗಂಡನ ಹನಿ ಟ್ರ್ಯಾಪ್ ಮಾಡಿಸಲು ಸ್ನೇಹಿತೆಗೆ ಸುಪಾರಿ..?
news18
Updated: September 5, 2018, 3:22 PM IST
ನಾಗರಾಜ್, ನ್ಯೂಸ್ 18 ಕನ್ನಡ 

ಶಿವಮೊಗ್ಗ ( ಸೆ.05) : ಗಂಡನಿಗೆ ಪತ್ನಿಯೇ ಸ್ನೇಹಿತೆಯ ಮೂಲಕ ಹನಿಟ್ರ್ಯಾಪ್ ಗೆ ಯತ್ನ ಮಾಡುತ್ತಿದ್ದಾಳೆಂದು ಶಿವಮೊಗ್ಗ ಮೂಲದ ಶಿವಾನಂದ್ ಈ ಆರೋಪವನ್ನು ಮಾಡಿದ್ದಾರೆ. ಶಿವಾನಂದ ಮತ್ತು ಆತನ ಪತ್ನಿ ಪ್ರಿಯಾಂಕಾ ವಿಚ್ಚೇದನಕ್ಕಾಗಿ ಕೋರ್ಟ್ ಮೇಟ್ಟಿಲೇರಿದ್ದಾರೆ. ಪ್ರಕರಣವನ್ನು ಖಾಸಗಿಯಾಗಿ ಬಗೆ ಹರಿಸಿಕೊಳ್ಳೋಣ ಎಂದು ಪ್ರಿಯಾಂಕಾ ಒತ್ತಡ ಹಾಕುತ್ತಿದ್ದಾರೆ. ಇದಕ್ಕೆ ಒಪ್ಪದ ಹಿನ್ನಲೆಯಲ್ಲಿ ಯುವತಿಯೊಬ್ಬಳ ಮೂಲಕ ಹನಿಟ್ರ್ಯಾಪ್ ಗೆ ಯತ್ನ ಮಾಡುತ್ತಿದ್ದಾರೆ ಎಂದು ದೂರಿದ್ದಾನೆ.

ಶಿವಮೊಗ್ಗದ ಚಾಲುಕ್ಯ ನಗರದ ನಿವಾಸಿ ಶಿವಾನಂದ್ ಈ ಆರೋಪ ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಭದ್ರಾವತಿಯ ಹೊಸಮನೆ ಬಡಾವಣೆಯ  ಪ್ರಿಯಾಂಕಾ ಎಂಬ ಯುವತಿಯನ್ನು ಶಿವಾನಂದ್ ಮದುವೆಯಾಗಿದ್ದ. ನಂತರ ಪತಿ ಪತ್ನಿಯ ನಡುವೆ ಸಂಸಾರಿಕ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬಂದಿದ್ದವು. ಹೀಗಾಗಿ ಶಿವಾನಂದ್  ಪ್ರಿಯಾಂಕ​ಳಿಂದ ವಿಚ್ಛೇದನ ಪಡೆಯುವು ಸಲುವಾಗಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ಸಹ ನಡೆಯುತ್ತಿದೆ. ಅದರೆ ಇದರ ಮಧ್ಯೆ ಪ್ರಿಯಾಂಕಾ ಖಾಸಗಿಯಾಗಿ ಪ್ರಕರಣವನ್ನು ಬಗೆ ಹರಿಸಿಕೊಳ್ಳವಂತೆ ಬೇದರಿಕೆ ಹಾಕುತ್ತಿದ್ದಾರೆ ಎಂಬ ಆರೋಪವನ್ನು ಶಿವಾನಂದ್ ಮಾಡಿದ್ದಾರೆ.

ಇದಕ್ಕೆ ಒಪ್ಪದ ಹಿನ್ನಲೆಯಲ್ಲಿ ನನ್ನನ್ನು ಯಾವುದಾದರೂ ಕೇಸಿನಲ್ಲಿ ಸಿಲುಕಿಸಲು ಪ್ರಿಯಾಂಕಾ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಅವಳ ಸ್ನೇಹಿತೆಯ ಮೂಲಕ ಫೋನ್ ಮಾಡಿಸುತ್ತಿದ್ದಾರೆ. ಹನಿ ಟ್ರ್ಯಾಪ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದ್ದಾನೆ. ವಾಟ್ಸ್ ಆಪ್ ನಲ್ಲಿ ಮೆಸೇಜ್ ಮಾಡುತ್ತಿದ್ದಾರೆ, ಫೋನ್ ಮಾಡಿ ಯಾರು ನೀವು ಎಂದರೆ, ನಿಮ್ಮನ್ನು ಭೇಟಿಯಾಗಬೇಕು ಎಂದು ಹೇಳುತ್ತಿದ್ದಾರೆ. ಹನಿಟ್ರ್ಯಾಪ್‌ ಮಾಡುವ ಸಲುವಾಗೇ ಇಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಿವಾನಂದ್ ಹೇಳಿದ್ದಾರೆ.

ಫೋನ್ ಮಾಡಿದ್ದ ಯುವತಿ, ಪ್ರಿಯಾಂಕಾ ಜೊತೆ ಇರುವಂತ ಫೋಟೋ ವನ್ನು ಹಾಕಿದ್ದಾರೆ. ಇದರಿಂದ ಇದು ಹನಿ ಟ್ರ್ಯಾಪ್ ಮಾಡಲು ಯತ್ನ ಮಾಡುತ್ತಿದ್ದಾರೆ ಎಂಬುದು ಗೊತ್ತಾಯಿತು ಎಂದು ಶಿವಾನಂದ್ ಹೇಳಿದ್ದಾರೆ. ಜೊತೆಗೆ ಆಗಸ್ಟ್ 27 ರಂದು ಕೋರ್ಟ್ ಗೆ ಬಂದ ಸಮಯದಲ್ಲಿ ಸಹ ಇಬ್ಬರು ಹುಡುಗಿಯರು ಬಂದಿದ್ದರು. ಮೈ ಮೇಲೆ ಬೀಳುವಂತ ಪ್ರಯತ್ನ ಸಹ ಮಾಡಿದ್ದರು ಎಂದು ದೂರಿದ್ದಾರೆ. ಈ ಸಂಬಂದ ಪೊಲೀಸರಿಗೆ ದೂರು ನೀಡಲು ಹೋದರು, ಪೊಲೀಸರು ಸಹಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಪ್ರಿಯಾಂಕಾ ಪ್ರಕರಣವನ್ನು ಖಾಸಗಿಯಾಗಿ‌ ಬಗೆ ಹರಿಸಿಕೊಳ್ಳುವಂತೆ‌  ಬೇದರಿಕೆ ಹಾಕುತ್ತಿದ್ದಾರೆ ಎಂದು ಶಿವಾನಂದ್ ದೂರಿದ್ದಾರೆ.

ಪತಿ ಶಿವಾನಂದ್ ಆರೋಪವನ್ನು ಪತ್ನಿ ಪ್ರಿಯಾಂಕಾ ನಿರಾಕರಿಸಿದ್ದಾರೆ. ವಿಚ್ಛೇದನ ಪಡೆಯುವುದಕ್ಕಾಗಿ ಈ ರೀತಿ ನಾಟಕ ಮಾಡುತ್ತಿದ್ದಾನೆ. ಶಿವಾನಂದ್ ನಿಂದ ನನಗೆ ಮಾನಸಿಕವಾಗಿ, ದೈಹಿಕವಾಗಿ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ. ನನಗೆ ಮತ್ತು ನನ್ನ ಮಗನಿಗೆ ಏನೇ ತೊಂದರೆಯಾದರೂ ಅದಕ್ಕೆ ಶಿವಾನಂದೇ ಕಾರಣ ಎಂದಿದ್ದಾರೆ.  ನನ್ನ ಮಗನ ಡಿಎನ್ ಎ ಟೆಸ್ಟ್ ಮಾಡಲಿ, ಟೆಸ್ಟ್ ಮಾಡಿದ ದಿನವೇ ನಾನು ಅವನಿಗೆ ವಿಚ್ಛೇದನ ನೀಡುತ್ತೇನೆ ಎಂದು ಹೇಳಿದ್ದಾರೆ.

ಶಿವಾನಂದ್ ಹನಿಟ್ರ್ಯಾಪ್  ಗೇಮ್ ಮಾಡುತ್ತಿದ್ದಾನೆ. ಈ ರೀತಿ ಆರೋಪ ಮಾಡಿದರೆ, ನಾನು ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸುತ್ತೇನೆ ಎಂಬುದು ಅವನ ಪ್ಲಾನ್ ಆಗಿದೆ ಎಂದು ತಿಳಿಸಿದ್ದಾರೆ. ವಿಚ್ಛೇದನ ಪಡೆಯುವುದಕ್ಕಾಗಿಯೇ ಈ ರೀತಿ ಪ್ಲಾನ್ ಮಾಡಿದ್ದಾನೆ. ನನ್ನ ಸ್ನೇಹಿತೆಯರಿಗೆ ತೊಂದರೆ ಕೊಟ್ಟರೆ, ಆಗ ನಾನು ವಿಚ್ಛೇದನ ಕೊಡಲು ಒಪ್ಪಿಕೊಳ್ಳುತ್ತೇನೆ ಎಂಬುದು ಅವನ ಉದ್ದೇಶ. ಇದಕ್ಕಾಗಿ ಈ ರೀತಿ ಹನಿಟ್ರ್ಯಾಪ್  ಆರೋಪ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
First published:September 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ