ಕಾಫಿಟೇಬಲ್ ಬುಕ್​ನಲ್ಲಿ ವನ್ಯಧಾಮ: ಎರಡು ವನ್ಯಧಾಮಗಳ ವೈವಿಧ್ಯತೆ ಸಾರುವ ಜೇನ್ ಹೀರ್ಕ ಬಿಡುಗಡೆಗೆ ಸಿದ್ದ

ಜೇನ್ ಹಿರ್ಕ ಎಂದರೆ ತರಕರಡಿ.  ರಾಜ್ಯದಲ್ಲಿ ಕಾವೇರಿ ವನ್ಯಧಾಮ  ಮಲೆಮಹದೇಶ್ವರ ವನ್ಯಜೀವಿ ವಿಭಾಗ ಹಾಗು ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಮಾತ್ರ ಈ ಅಪರೂಪದ ತರಕರಡಿಗಳು ಕಂಡು ಬರುತ್ತವೆ.  

ಜೇನ್​ ಹಿರ್ಕ ಪುಸ್ತಕ

ಜೇನ್​ ಹಿರ್ಕ ಪುಸ್ತಕ

  • Share this:
ಚಾಮರಾಜನಗರ (ನ. 18) ಕನ್ನಡದಲ್ಲಿ ಕಾಫಿ ಟೇಬಲ್ ಪುಸ್ತಕಗಳ ಸಂಖ್ಯೆ ಬಲು ಕಡಿಮೆಯೇ. ಇದೀಗ ವನ್ಯಧಾಮಗಳ ಕುರಿತು ಕನ್ನಡದಲ್ಲಿ ಮೊದಲ ಬಾರಿಗೆ ಕಾಫಿ ಟೇಬಲ್ ಪುಸ್ತಕವೊಂದು ಬಿಡುಗಡೆಗೆ ಸಿದ್ದಗೊಂಡಿದೆ. ಜೇನ್ ಹೀರ್ಕದ ನಾಡಿನಲ್ಲಿ ಎಂಬ ಹೆಸರಿನ ಪುಸ್ತಕವನ್ನು ವನ್ಯಜೀವಿ ಸಂರಕ್ಷಕ ಮತ್ತು ವಿಜ್ಞಾನಿ ಡಾ.ಸಂಜಯ್ ಗುಬ್ಬಿ ಮತ್ತು ಎಚ್.ಸಿ.ಪೂರ್ಣೇಶ್  ರಚಿಸಿದ್ದು ನಗರದಲ್ಲಿ  ನವೆಂಬರ್ 20 ರಂದು ಬಿಡುಗಡೆಯಾಗುತ್ತಿದೆ.  ಜೇನ್ ಹಿರ್ಕ ಎಂದರೆ ತರಕರಡಿ.  ರಾಜ್ಯದಲ್ಲಿ ಕಾವೇರಿ ವನ್ಯಧಾಮ  ಮಲೆಮಹದೇಶ್ವರ ವನ್ಯಜೀವಿ ವಿಭಾಗ ಹಾಗು ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಮಾತ್ರ ಈ ಅಪರೂಪದ ತರಕರಡಿಗಳು ಕಂಡು ಬರುತ್ತವೆ.  ಇದೀಗ  ಕಾವೇರಿ ವನ್ಯಧಾಮ ಹಾಗು ಮಲೆಮಹದೇಶ್ವರ ವನ್ಯಧಾಮಗಳ  ವೈವಿಧ್ಯತೆ  ಕುರಿತಂತೆ ಡಾ.ಸಂಜಯ್ ಗುಬ್ಬಿ ಹಾಗು ಎಚ್.ಸಿ. ಪೂರ್ಣೇಶ್ ಅವರು ಕಾಫಿಟೇಬಲ್ ಪುಸ್ತಕವೊಂದನ್ನು ಕನ್ನಡ ಹಾಗು ಆಂಗ್ಲ ಭಾಷೆಯಲ್ಲಿ  ಹೊರತರುತ್ತಿದ್ದು ಈ ಪುಸ್ತಕಕ್ಕೆ  ಜೇನ್ ಹೀರ್ಕಾದ ನಾಡಿನಲ್ಲಿ  ಎಂದು ಹೆಸರಿಟ್ಟಿದ್ದಾರೆ.

ಕಾವೇರಿ ವನ್ಯಧಾಮ ಮತ್ತು ಮಲೆಮಹದೇಶ್ವರ ವನ್ಯಜೀವಿ ಧಾಮಗಳಲ್ಲಿರುವ ವನ್ಯಜೀವಿಗಳು, ಗಿಡಮರಗಳು ಮತ್ತು ಸಮುದಾಯದವರನ್ನು ಕುರಿತು ಆಂಗ್ಲ ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಕಾಫೀ ಟೇಬಲ್ ಪುಸ್ತಕದ ರಚಿಸಲಾಗಿದೆ    ಕಾವೇರಿ ಹಾಗು ಮಲೆ ಮಹದೇಶ್ವರ ವನ್ಯಧಾಮಗಳ ಹೊರಜಗತ್ತಿಗೆ ಅಷ್ಟಾಗಿ ಪರಿಚಯವಿಲ್ಲದೆ  ಜೀವ ವೈವಿಧ್ಯತೆ ಬಗ್ಗೆ ಗಮನ ಸೆಳೆಯುವ ಒಂದು ಪ್ರಯತ್ನ ಇದಾಗಿದೆ. ಜಿಲ್ಲೆಯಲ್ಲಿ ಬಹುತೇಕ ವ್ಯಾಪಿಸಿಕೊಂಡಿರುವ ಈ ಎರಡು ವನ್ಯಧಾಮಗಳು ಸುಂದರ ಹುಲ್ಲುಗಾವಲು ಮಿಶ್ರಿತ ಮತ್ತು ನದಿತೀರದ ಕಾಡುಗಳಗಳನ್ನೊಳಗೊಂಡಿವೆ. ಕಾವೇರಿ ಮತ್ತು ಪಾಲಾರ್ ನದಿಗಳು ಇಲ್ಲಿ ಹರಿಯುತ್ತವೆ.  15ಕ್ಕೂ ಹೆಚ್ಚು ಹುಲಿಗಳೂ, 150ಕ್ಕೂ ಹೆಚ್ಚು  ಜೇನ್‌ಹೀರ್ಕ, ಅಸಂಖ್ಯಾತ ಬೆಟ್ಟಳಿಲು, ಕೊಳ್ಳೇಗಾಲದ ನೆಲಹಲ್ಲಿ, ನೀರುನಾಯಿ, ಆನೆ, ಕೆನ್ನಾಯಿಗಳ ತಾಣವಾಗಿವೆ.

ಆವಾಸಸ್ಥಾನಗಳು, 43 ಸಸ್ತನಿಗಳು, ಪಕ್ಷಿಗಳು, ಸರಿಸೃಪಗಳು, ಚಿಟ್ಟೆ ಮತ್ತು ಮೀನುಗಳ ಬಗ್ಗೆ ಸುಂದರ ಚಿತ್ರಗಳೊಂದಿಗೆ ವಿವರಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಈ ಪುಸ್ತಕ ಒಟ್ಟು 62 ಸುಂದರ ವರ್ಣಮಯ ಚಿತ್ರಗಳನ್ನೊಳಗೊಂಡಿದೆ.  ಈ ವನ್ಯಧಾಮಗಳ ವ್ಯಾಪ್ತಿಯಲ್ಲಿ  ಬೇಡ ಗಂಪಣ, ಸೋಲಿಗ, ಮತ್ತು ಉಪ್ಪಾರ ಸಮುದಾಯವದವರು ಹೆಚ್ಚಾಗಿ ವಾಸಿಸುತ್ತಾರೆ.. ಹಾಗೆಯೇ ಮಲೈ ಮಹದೇಶ್ವರ ದೇವಸ್ಥಾನ ಈ ಪ್ರದೇಶದ ಬಹು ಮುಖ್ಯ ಧಾರ್ಮಿಕ ಸ್ಥಳ. ಈ ಎಲ್ಲಾ ಅಂಶಗಳನ್ನು ಸೆರೆಹಿಡಿಯುವ ಪ್ರಯತ್ನವೇ ಈ ಪುಸ್ತಕದ ಇನ್ನೊಂದು ಉದ್ದೇಶ.

ನಿರ್ದಿಷ್ಟ ವನ್ಯಜೀವಿಧಾಮಗಳ ಬಗ್ಗೆ ಸ್ಥಳೀಯ ಭಾಷೆಯಲ್ಲಿ ಕಾಫಿ ಟೇಬಲ್ ಪುಸ್ತಕ ಹೊರತರುತ್ತಿರುವುದು ಬಹುಶಃ ದೇಶದಲ್ಲೇ ಪ್ರಥಮ ಪ್ರಯತ್ನ. ಸ್ಥಳೀಯ ಜನರಿಗೆ ಅಂತಾರಾಷ್ಟ್ರೀಯ ಗುಣ ಮಟ್ಟದ ಪುಸ್ತಕವನ್ನು ತಲುಪಿಸುವ ಸಣ್ಣ ಪ್ರಯತ್ನ ಇದಾಗಿದೆ ಎನ್ನುತ್ತಾರೆ ಡಾ.ಸಂಜಯ್ ಗುಬ್ಬಿ.

ಇದನ್ನು ಓದಿ: ಕಿಡಿ ಹೊತ್ತಿಸಿದ ಐಪಿಎಸ್​ ಅಧಿಕಾರಿ ಡಿ ರೂಪಾ ಪಟಾಕಿ ಟ್ವೀಟ್​; ಕಂಗನಾ ಸೇರಿ ನೆಟ್ಟಿಗರಿಂದ ಆಕ್ರೋಶ

ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಗಳ ಕಾಡಂಚಿನ ಹಳ್ಳಿಗಳ ಎಲ್ಲಾ ಸರ್ಕಾರಿ ಶಾಲೆಗಳಿಗೆ ಈ ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು. ಹಾಗೆಯೇ ಚಾಮರಾಜನಗರ ಜಿಲ್ಲೆಯ ಎಲ್ಲಾ 131 ಗ್ರಾಮ ಪಂಚಾಯತಿ ವಾಚನಾಲಯಗಳಿಗೆ ಪುಸ್ತಕವನ್ನು ಉಚಿತವಾಗಿ ವಿತರಿಸಲಾಗುವುದು. ಪುಸ್ತಕದ ಕೆಲ ಪ್ರತಿಗಳು ಮಾರಾಟಕಿದ್ದು ಅದರ ಸಂಪೂರ್ಣ ಆದಾಯವನ್ನು ಕಾವೇರಿ-ಮಲೆ ಮಹದೇಶ್ವರ ವನ್ಯಜೀವಿಧಾಮಗಳ ಪ್ರದೇಶದಲ್ಲಿ ವನ್ಯಜೀವಿ ಶಿಕ್ಷಣ ಚಟುವಟಿಕೆಗಳಿಗೆ ಉಪಯೋಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ

ಕಾಫಿಟೇಬಲ್ ಪುಸ್ತಕ ಎಂದರೆ ಇದರ ಪುಟಗಳು ಉತ್ತಮಗುಣಮಟ್ಟದಿಂದ ಕೂಡಿದ್ದು, ಮುಖ್ಯವಾಗಿ  ವರ್ಣಮಯ ಛಾಯಾಚಿತ್ರಗಳು ಹಾಗು ಅದರ ಸಂಕ್ಷಿಪ್ತ ವಿವರಗಳನ್ನೊಳಗೊಂಡಿರುತ್ತದೆ. ಓದುಗರಿಗೆ ಕಡಿಮೆ ಪರಿಭಾಷೆಯಲ್ಲಿ ಚಿತ್ರಾತ್ಮಕವಾಗಿ ಹೆಚ್ಚು ವಿಷಯ ಮುಟ್ಟಿಸುವುದು ಕಾಫಿಟೇಬಲ್ ಪುಸ್ತಕದ ಉದ್ದೇಶವಾಗಿದೆ.

(ವರದಿ: ಎಸ್.ಎಂ.ನಂದೀಶ್)
Published by:Seema R
First published: