SSLC ಪರೀಕ್ಷಾ ಕೇಂದ್ರದ ಮೇಲೆ ಹೆಜ್ಜೇನು ದಾಳಿ..! ಹಲವರು ಆಸ್ಪತ್ರೆಗೆ ದಾಖಲು

ಎಸ್ ಎಲ್ ಸಿ ಪರೀಕ್ಷಾ ಕೇಂದ್ರದ ಮೇಲೆ ಹೆಜ್ಜೇನುಗಳು ದಾಳಿ ಮಾಡಿದ್ದರಿಂದಾಗಿ ವಿದ್ಯಾರ್ಥಿಗಳು ಸಿಬ್ಬಂದಿ ಪಾಲಕರು ತಬ್ಬಿಬ್ಬಾದ ಘಟನೆ ನಡೆದಿದೆ. ಗಾಯಾಳುಗಳನ್ನು ಕಿಮ್ಸ್ ಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹುಬ್ಬಳ್ಳಿ(ಏ.05): ಹೆಜ್ಜೇನು ದಾಳಿ ನಡೆಸಿ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿ ಸೇರಿ ಹಲವರಿಗೆ ಗಾಯಗಳಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ (Hubballi) ಕೇಶ್ವಾಪುರದ ಸೆಂಟ್ ಮೈಕಲ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿ, ಶಿಕ್ಷಕರು (Teachers) ಮತ್ತು ಪೊಲೀಸರು (Police) ಸೇರಿ ಐವರ ಮೇಲೆ ಹೆಜ್ಜೇನುಗಳ ದಾಳಿಯಾಗಿದೆ. ಕೆಲ ಕಿಡಿಗೆಡಿಗಳು ಮಾಡಿದ ಕೃತ್ಯದಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಕ್ಕೆ ಒಳಗಾಗುವಂತಾಗಿದೆ.

ಗಣಿತ ವಿಷಯ ಪರೀಕ್ಷೆ ಬರೆಯಲು ಬಂದಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಗಾಯವಾಗಿದೆ. ಪರೀಕ್ಷೆ ಆರಂಭಕ್ಕೆ ಇನ್ನೂ ಕೆಲವೇ ಕ್ಷಣ ಬಾಕಿಯಿತ್ತು. ಈ ವೇಳೆ ಶಾಲಾ ಕಾಂಪೌಂಡ್ ಹೊರಗಡೆಯಿದ್ದ ಮರದಲ್ಲಿದ್ದ ಜೇನು ಗೂಡಿನ ಮೇಲೆ ಕಿಡಿಗೇಡಿಗಳು ಕಲ್ಲು ಬೀಸಿದ್ದಾರೆ.

ಶಾಲಾ ಆವರಣಕ್ಕೆ ಹೆಜ್ಜೇನು ದಾಳಿ

ಕಲ್ಲು ಬೀಳುತ್ತಿದ್ದಂತೆಯೇ ಗೂಡ ಬಿಟ್ಟು ಜೇನು ನೊಣಗಳು ಶಾಲಾ ಆವರಣಕ್ಕೆ ಏಕಾಏಕಿ ದಾಳಿ ಮಾಡಿವೆ. ಜೇನು ದಾಳಿಯಿಂದ ವಿದ್ಯಾರ್ಥಿಗಳು, ಶಾಲೆಯ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕ, ಪಾಲಕರು ಮತ್ತು ಪೊಲೀಸರಿಗೂ ಸಹ ಗಾಯಗಾಳಾಗಿವೆ.

ಪರೀಕ್ಷಾ ಹಾಲ್​​ನಲ್ಲಿದ್ದ ವಿದ್ಯಾರ್ಥಿಗಳು ಚೆಲ್ಲಾಪಿಲ್ಲಿ

ವಿದ್ಯಾರ್ಥಿ ಇಮಾಮ್, ಪೋಷಕರಾದ ರಾಜೇಶ್ವರಿ ಕೆ, ಮತ್ತು ಪೊಲೀಸ್ ಸಿಬ್ಬಂದಿ ವಿದ್ಯಾ ದ್ಯಾಮನೂರು ಮತ್ತಿತರರಿಗೆ ಗಾಯಗಳಾಗಿವೆ. ಧಿಡೀರ್  ದಾಳಿಯಿಂದ ಹಾಲ್ ನಲ್ಲಿದ್ದ ವಿದ್ಯಾರ್ಥಿಗಳೆಲ್ಲ ಚೆಲ್ಲಾ ಪಿಲ್ಲಿಯಾಗಿದ್ದು, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಕಿಮ್ಸ್​ನಲ್ಲಿ ಚಿಕಿತ್ಸೆ

ದಾಳಿಗೊಳಗಾದ ವಿದ್ಯಾರ್ಥಿ ಇಮಾಮ್ ಕಿಮ್ಸ್ ನಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಪರೀಕ್ಷೆಗೆ ಹಾಜರಾಗಿದ್ದಾನೆ. ಉಳಿದವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಏಕಾಏಕಿ ದಾಳಿ ಮಾಡಿದ್ದರಿಂದ ಹೀಗಾಗಿದೆ. ಸ್ವಲ್ಪದರಲ್ಲಿಯೇ ಅಪಾಯದಿಂದ ಪಾರಾಗಿದ್ದೇವೆ ಎಂದು ದಾಳಿಗೊಳಗಾದ ಪಾಲಕರು ತಿಳಿಸಿದ್ದಾರೆ.

ಇದನ್ನೂ ಓದಿ: Metro Project: ಮೈಸೂರಿಗೂ ಬರಲಿದೆ ಮೆಟ್ರೋ ರೈಲು; ವರದಿ ತಯಾರಿಗೆ ನಗರಾಭಿವೃದ್ಧಿ ಬಜೆಟ್​ನಲ್ಲಿ1 ಕೋಟಿ ಮೀಸಲು

ಘಟನೆಯಿಂದಾಗಿ ಪರೀಕ್ಷಾ ಕೇಂದ್ರದ ಬಳಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪರೀಕ್ಷಾ ಕೋಣೆಗಳಿಗೆ ಹೋಗೋಕೆ ವಿದ್ಯಾರ್ಥಿಗಳು ಹಿಂದೇಟು ಹಾಕುವಂತಾಯಿತು. ಪರಿಸ್ಥಿತಿ ತಿಳಿಗೊಳಿಸಿದ ಶಾಲಾ ಸಿಬ್ಬಂದಿ ನಿಯಮಿತ ಸಮಯಕ್ಕೆ ಪರೀಕ್ಷೆ ಆರಂಭಿಸಿದರು. ಹೆಜ್ಜೇನು ದಾಳಿಗೊಳಗಾಗಿದ್ದ ವಿದ್ಯಾರ್ಥಿಯೂ ಚಿಕಿತ್ಸೆಯ ನಂತರ ಪರೀಕ್ಷೆ ಬರೆಯೋಕೆ ವಾಪಸ್ಸಾದ ನಂತರ ವಿದ್ಯಾರ್ಥಿಗಳು ನಿಟ್ಟುಸಿರುಬಿಟ್ಟಿದ್ದಾರೆ.

ಆಟೋ ಚಾಲಕರಿಂದ ಡಿಫರೆಂಟ್ ಪ್ರೊಟೆಸ್ಟ್

ಪೆಟ್ರೋಲ್, ಡೀಸೆಲ್, ಎಲ್ ಪಿಜಿ ದರ ಏರಿಕೆ ಖಂಡಿಸಿ ಆಟೋ ಚಾಲಕರು ಹುಬ್ಬಳ್ಳಿಯಲ್ಲಿ ವಿನೂತನ ಪ್ರತಿಭಟನೆ ಮಾಡಿದರು. ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ನೇತೃತ್ವದಲ್ಲಿ ಹುಬ್ಬಳ್ಳಿಯ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿದರು. ಆಟೋ ವನ್ನು ಹಗ್ಗದಿಂದ ಎಳೆದು ತರುವ ಮೂಲಕ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Kodagu: ಆರೋಪಿಗಳು ಬಾಯಿಬಿಟ್ಟ ವರ್ಷದ ಹಿಂದೆ ಹುಲಿ ಕೊಂದ ಕತೆ

ದಿನೇ ದಿನೇ ತೈಲ ದರ ಏರಿಕೆಯಾಗುತ್ತಿರುವುದರಿಂದ ಆಟೋ ಚಾಲಕರಿಗೆ ತೀವ್ರ ಸಂಕಷ್ಟವಾಗಿದೆ. ಕೂಡಲೇ ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ, ತಹಶೀಲ್ದಾರರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು .

ಹೃದಯಾಘಾತದಿಂದ ಸಾವನ್ನಪ್ಪಿದ್ದ ವಿದ್ಯಾರ್ಥಿನಿ

ಮೊದಲ ದಿನ ಪರೀಕ್ಷೆ ನಡುವೆ ಮೈಸೂರಿನ ಟಿ ನರಸೀಪುರದಲ್ಲೊಂದು (Mysore District T Narasipura) ಭೀಕರ ಘಟನೆ ನಡೆದಿದೆ. ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯೊಬ್ಬಳು ಹೃದಯಘಾತದಿಂದ (Heart Attack) ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆಇದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಮುಂದಾಗಿದ್ದಳು. ಈ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದಾಳೆ, ತಕ್ಷಣಕ್ಕೆ ಆಕೆಗೆ ಚಿಕಿತ್ಸೆ ನೀಡಲಾಯಿತಾದರೂ ಅದು ಫಲ ನೀಡದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.

ಸಾವನ್ನಪ್ಪಿದ ವಿದ್ಯಾರ್ಥಿನಿಯನ್ನು ಟಿ ನರಸೀಪುರ ತಾಲೂಕಿನ ಅಕ್ಕೂರು ಗ್ರಾಮದ ಅನುಶ್ರಿ ಎಂದು ಗುರುತಿಸಲಾಗಿದೆ. ಈಕೆ ಮಾದಾಪುರ ಪ್ರೌಢಶಾಲೆಯಲ್ಲಿ ವ್ಯಾಸಂಗಾ ಮಾಡುತ್ತಿದ್ದಳು.
Published by:Divya D
First published: