ಹೋಂಗಾರ್ಡ್​ ಮೇಲೆ ಹೆಡ್​ಕಾನ್​ಸ್ಟೆಬಲ್​ ಅತ್ಯಾಚಾರ; ಕಾಯುವವರೇ ಹೀಗೆ ಮಾಡಿದ್ರೆ ಹೇಗೆ!

ತನಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಹಿರಿಯ ಅಧಿಕಾರಿಗಳ ಬಳಿ ಹೇಳಿದ್ದ ಹೋಂಗಾರ್ಡ್​ ಸಿಬ್ಬಂದಿಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಪೊಲೀಸ್​ ಹೆಡ್​ ಕಾನ್​ಸ್ಟೆಬಲ್​ ಈಗ ತನ್ನದೇ ಇಲಾಖೆಯ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾನೆ.

sushma chakre | news18
Updated:November 19, 2018, 7:56 PM IST
ಹೋಂಗಾರ್ಡ್​ ಮೇಲೆ ಹೆಡ್​ಕಾನ್​ಸ್ಟೆಬಲ್​ ಅತ್ಯಾಚಾರ; ಕಾಯುವವರೇ ಹೀಗೆ ಮಾಡಿದ್ರೆ ಹೇಗೆ!
ತನಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಹಿರಿಯ ಅಧಿಕಾರಿಗಳ ಬಳಿ ಹೇಳಿದ್ದ ಹೋಂಗಾರ್ಡ್​ ಸಿಬ್ಬಂದಿಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಪೊಲೀಸ್​ ಹೆಡ್​ ಕಾನ್​ಸ್ಟೆಬಲ್​ ಈಗ ತನ್ನದೇ ಇಲಾಖೆಯ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾನೆ.
  • Advertorial
  • Last Updated: November 19, 2018, 7:56 PM IST
  • Share this:
ಕಿರಣ್​ ಕೆ.ಎನ್​.

ಬೆಂಗಳೂರು (ನ.19): ಮುಖ್ಯಪೇದೆಯಿಂದ ಗೃಹರಕ್ಷಕ ದಳದ ಸಿಬ್ಬಂದಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ 3 ದಿನಗಳಾದ ಬಳಿಕ ಬೆಳಕಿಗೆ ಬಂದಿದೆ.

14 ದಿನಗಳ ಹಿಂದೆ ಮುಖ್ಯಪೇದೆ ಚಂದ್ರಶೇಖರ್​ಗೆ ಪರಿಚಯವಾಗಿದ್ದ ಗೃಹರಕ್ಷಕದಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯ ಜೊತೆಗೆ ಮೊದಮೊದಲು ಚೆನ್ನಾಗೇ ಇದ್ದ. ಕೆಲಸ ಮುಗಿದ ನಂತರ ಡ್ರಾಪ್​ ನೀಡುವ ನೆಪದಲ್ಲಿ ಮಹಿಳೆಗೆ ಹತ್ತಿರವಾಗಿದ್ದ ಚಂದ್ರಶೇಖರ್​ ಆಕೆಯೊಂದಿಗೆ ಸಲುಗೆಯಿಂದಿದ್ದ. ಆದರೆ, ಆ ಸಲುಗೆಯನ್ನು ದುರ್ಬಳಕೆ ಮಾಡಿಕೊಂಡಿರುವ ಚಂದ್ರಶೇಖರ್​ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಜ್ಞಾನಭಾರತಿ ಯುನಿವರ್ಸಿಟಿಯಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಪೊಲೀಸರಿಗೆ ದೂಡು ಸಲ್ಲಿಸಿದ್ದಾರೆ.  ನಂದಿನಿ ಲೇಔಟ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಚಂದ್ರಶೇಖರ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಪ್ರಿಯಕರನ ಕಂಡು ಹಸೆಮಣೆ ಬಿಟ್ಟ ವಧು; ನೆಲಮಂಗಲದಲ್ಲಿ ಹೈಡ್ರಾಮಾ ಆದ ಒಂದು ಮದುವೆ

ಕೆಲಸ ನಿರ್ವಹಿಸುತ್ತಿರುವಾಗ ಅನೇಕ ಬಾರಿ ಲೈಂಗಿಕ ಕಿರುಕುಳ ನೀಡಿದ್ದ ಪೇದೆ ಚಂದ್ರಶೇಖರ್ ನ. 16ರಂದು ಆಕೆಯನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದ. ಈ ಬಗ್ಗೆ ತಕ್ಷಣ ಉಸ್ತುವಾರಿ ಅಧಿಕಾರಿ ಹರೀಶ್ ಎಂಬುವವರ ಗಮನಕ್ಕೆ ಆ ಮಹಿಳೆ ಈ ಘಟನೆಯನ್ನು ತಂದಿದ್ದರು.

ಇದನ್ನೂ ಓದಿ: ಮೈಸೂರು; ಅಕ್ರಮ ಸಂಬಂಧ ಆರೋಪಕ್ಕೆ ತಾಯಿ ಮಗು ಬಲಿಜ್ಞಾನಭಾರತಿ ಪೊಲೀಸ್ ಠಾಣೆಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿದು ಆರೋಪಿ ಚಂದ್ರಶೇಖರ್​ನನ್ನು ಕರೆಸಿ ಬುದ್ಧಿ ಹೇಳಿದ್ದರು. ಆದರೆ, ಅಷ್ಟಕ್ಕೆ ಸುಮ್ಮನಾಗದ ಚಂದ್ರಶೇಖರ್​ ಅದೇ ದಿನ ರಾತ್ರಿ ಆ ಮಹಿಳೆ ಸ್ನಾನ ಮಾಡುವಾಗ ಬಂದು ಬಾಗಿಲು ಬಡೆದಿದ್ದ. ಗಂಡ ಬಂದಿರಬಹುದು ಎಂದುಕೊಂಡು ಬಾಗಿಲು ತೆರೆದಾಗ ಆಕೆಯ ಮೇಲಿನ ಕೋಪಕ್ಕೆ ಹಲ್ಲೆ ನಡೆಸಿ ಅತ್ಯಾಚಾರ ಮಾಡಿದ್ದ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
First published:November 19, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ