ದಲ್ಲಾಳಿ ಕೆಲಸ ಮಾಡಿಕೊಂಡಿದ್ದ ಶಿವಶಂಕರಪ್ಪ ಬಗ್ಗೆ ಬಾಯ್ಬಿಟ್ಟರೆ ಅವರ ಮರ್ಯಾದೆ ಹೋಗುತ್ತೆ; ಎಂಬಿ ಪಾಟೀಲ್​ ತಿರುಗೇಟು

ಶಿವಶಂಕರಪ್ಪ ಮತ್ತೊಬ್ಬರನ್ನ ತುಳಿದು ಬಾಪೂಜಿ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಇವರು ಬೇರೆಯವರ ಸೋಲಿನ ಬಗ್ಗೆ ಮಾತನಾಡುತ್ತಾರೆ. ಅವರ ಮಗ ಈ ಹಿಂದೆ ಸೋತಾಗ ಇವರ ವೀರಶೈವ ಹೋರಾಟ ಎಲ್ಲಿ ಹೋಗಿತ್ತು

Seema.R | news18
Updated:January 13, 2019, 1:23 PM IST
ದಲ್ಲಾಳಿ ಕೆಲಸ ಮಾಡಿಕೊಂಡಿದ್ದ ಶಿವಶಂಕರಪ್ಪ ಬಗ್ಗೆ ಬಾಯ್ಬಿಟ್ಟರೆ ಅವರ ಮರ್ಯಾದೆ ಹೋಗುತ್ತೆ; ಎಂಬಿ ಪಾಟೀಲ್​ ತಿರುಗೇಟು
ಗೃಹ ಸಚಿವ ಎಂ.ಬಿ. ಪಾಟೀಲ್
Seema.R | news18
Updated: January 13, 2019, 1:23 PM IST
ಪರಶುರಾಮ್​ ತಹಶೀಲ್ದಾರ್​

ಹುಬ್ಬಳ್ಳಿ (ಜ.13): ಪ್ರತ್ಯೇಕ ಲಿಂಗಾಯತ ಧರ್ಮ ನಮ್ಮ ಅಸ್ಮಿತೆ. ಈ ಹೋರಾಟದಲ್ಲಿ ಶಾಮನೂರು ಶಿವಶಂಕರಪ್ಪ ಸ್ವಾರ್ಥಿಯಂತೆ ವರ್ತಿಸಿದರು.  ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸ್ಥಾನಮಾನ ಕುರಿತು ನಮ್ಮ ಹೋರಾಟ ಮುಂದುವರೆಯಲಿದೆ  ಎಂದು ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮದ ಪರ ತಮ್ಮ ನಿಲುವನ್ನು ಗೃಹ ಸಚಿವ ಎಂಬಿ ಪಾಟೀಲ್​ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್​ ಸರ್ಕಾರದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ  ಎಂಬಿ ಪಾಟೀಲ್ ಮುಂಚೂಣಿಯಲ್ಲಿದ್ದರು. ಆದರೆ, ಈ ರೀತಿ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಬಾರದು. ಈ ನಿಲುವಿಗೆ ನನ್ನ ವಿರೋಧವಿದೆ ಎಂದು ವೀರಶೈವರ ಪರವಾಗಿ ಶಾಮನೂರು ಶಿವಶಂಕರಪ್ಪ  ಮಾತನಾಡಿದ್ದರು.

ಎಂಬಿ ಪಾಟೀಲ್​ ಅವರಿಗೆ ಸಚಿವ ಸ್ಥಾನ ಸಿಗುತ್ತಿದ್ದಂತೆ ಪ್ರತಿಕ್ರಿಯಿಸಿದ ಶಾಮನೂರು ಶಿವಶಂಕರಪ್ಪ,  ಸಿದ್ದರಾಮಯ್ಯ ಬಾಲಬಡುಕರಿಕಷ್ಟೇ ಸಚಿವ ಸ್ಥಾನ ಲಭ್ಯ.  ಪ್ರತ್ಯೇಕ ಧರ್ಮದ ವಿಚಾರ ಮುಗೀತು ಎಂದುಕೊಂಡಿದ್ದೆ. ಆದರೆ ಎಂಬಿ ಪಾಟೀಲ್​ಗೆ ಸಚಿವ ಸ್ಥಾನ ನೀಡುವ ಮೂಲಕ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ನಾಂದಿ ಹಾಡಿದಂತಾಗಿದೆ. ನಿನ್ನೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಲಂಚದ ಹಣದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ನಡೆಯಿತು ಎಂದಿದ್ದರು.

ಮಾಜಿ ಸಚಿವರ ಅಸಮಾಧಾನದ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಗೃಹ ಸಚಿವರು, ಅವರಿಗೆ ಬರೀ ತಮ್ಮ ಕುಟುಂಬದ ಏಳ್ಗೆ ಬಗ್ಗೆ ಯೋಚನೆ. ಶಿವಶಂಕರಪ್ಪ ಮೊದಲು ಏನಾಗಿದ್ದರು ಎಂಬುದು ಆರ್ಥ ಮಾಡೊಕೊಳ್ಳಬೇಕು. ಕಿರಾಣಿ ಅಂಗಡಿ ಮತ್ತು ದಲ್ಲಾಳಿ ಕೆಲಸ ಮಾಡಿದವರು. ಬೇರೊಬ್ಬರ ಬೀ ಫಾರ್ಮ್ ಹರಿದು ಚುನಾವಣೆ ಗೆದ್ದರು ಎಂದು ತಿರುಗೇಟು ನೀಡಿದರು.

ಶಿವಶಂಕರಪ್ಪ ಮತ್ತೊಬ್ಬರನ್ನ ತುಳಿದು ಬಾಪೂಜಿ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಇವರು ಬೇರೆಯವರ ಸೋಲಿನ ಬಗ್ಗೆ ಮಾತನಾಡುತ್ತಾರೆ. ಅವರ ಮಗ ಈ ಹಿಂದೆ ಸೋತಾಗ ಇವರ ವೀರಶೈವ ಹೋರಾಟ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ.

ಅವರು ಸ್ಪರ್ಧೆ ಮಾಡುವ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿದೆ. ಈ ಬಾರಿ ಮುಸ್ಲಿಂ ಸಮುದಾಯದ ಅತೀ ಹೆಚ್ಚು ಮತ ಕಾಂಗ್ರೆಸ್‌ಗೆ ಬಂದಿವೆ. ಈ ಹಿನ್ನಲೆ ಈಗ ಉಲ್ಟಾ ಹೊಡೆಯುತ್ತಿದ್ದಾರೆ.  ಇವರ ಜನ್ಮ ದಾಖಲೆಗಳನ್ನ ತೆಗೆದು ನೋಡಿದರೆ ಹಿಂದು ಲಿಂಗಾಯತ ಎಂದಿದೆ. ನಾನು  ಮಾತನಾಡಲು ಶುರುಮಾಡಿದರೆ ನಿಮ್ಮ ಮರ್ಯಾದೆ ಹೋಗುತ್ತದೆ ಎಂದು ಎಚ್ಚರಿಕೆ ನೀಡಿದರು.
Loading...

ನನ್ನ ಮೈಯಲ್ಲಿ ಹರಿಯುವುದು ನನ್ನ ತಂದೆಯ ರಕ್ತ. ನಾನು ಯಾರಿಗೂ ಹೆದುರವ ಮಾತಿಲ್ಲ. ನನಗೆ ಯಾರದ್ದು ಅಂಜಿಕೆ ಇಲ್ಲ. ಅವರ ಬಗ್ಗೆ ನನಗೆ ಎಲ್ಲ ಗೊತ್ತಿದೆ. ಅವರು ಈ ವಿವಾದವನ್ನು ಇಲ್ಲಿಗೆ ನಿಲ್ಲಿಸಿದರೆ ಉತ್ತಮ ಎಂದರು.
First published:January 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ