ಯಡಿಯೂರಪ್ಪ ಕಾಂಗ್ರೆಸ್ಸಿಗೆ ಬಂದರೆ ಸಿಎಂ ಆಗಲು ಸಹಾಯ ಮಾಡುತ್ತೇನೆ- ಗೃಹ ಸಚಿವ ಎಂ. ಬಿ. ಪಾಟೀಲ್ ಟಾಂಗ್

ಬಿ. ಎಸ್. ಯಡ್ಯೂರಪ್ಪ ಒಂದು ಪಕ್ಷದಲ್ಲಿ ನಾನೊಂದು ಪಕ್ಷದಲ್ಲಿದ್ದರೆ, ಅವರು ಸಿಎಂ ಆಗಲು ನಾನು ಹೇಗೆ ಸಹಾಯ ಮಾಡಲು ಸಾಧ್ಯ? ಹೀಗಾಗಿ ಯಡಿಯೂರಪ್ಪ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಲು ನಾನು ಖಂಡಿತ ಸಹಾಯ ಮಾಡುತ್ತೇನೆ ಎಂದು ಸಿ.ಟಿ. ರವಿ ಹೇಳಿಕೆಗೆ ಗೃಹ ಸಚಿವ ಎಂ.ಬಿ. ಪಾಟೀಲ್ ಟಾಂಗ್ ನೀಡಿದ್ದಾರೆ. 

MAshok Kumar | news18
Updated:June 6, 2019, 12:21 PM IST
ಯಡಿಯೂರಪ್ಪ ಕಾಂಗ್ರೆಸ್ಸಿಗೆ ಬಂದರೆ ಸಿಎಂ ಆಗಲು ಸಹಾಯ ಮಾಡುತ್ತೇನೆ- ಗೃಹ ಸಚಿವ ಎಂ. ಬಿ. ಪಾಟೀಲ್ ಟಾಂಗ್
ಗೃಹ ಸಚಿವ ಎಂ.ಬಿ. ಪಾಟೀಲ್
  • News18
  • Last Updated: June 6, 2019, 12:21 PM IST
  • Share this:
ವಿಜಯಪುರ, (ಜೂನ್. 06); ಯಡ್ಯೂರಪ್ಪ ಕಾಂಗ್ರೆಸ್ಸಿಗೆ ಬಂದರೆ ಅವರನ್ನು ಸಿಎಂ ಮಾಡಲು ನಾನು ಖಂಡಿತ  ಸಹಾಯ ಮಾಡುತ್ತೇನೆ ಎಂದು ಗೃಹ ಸಚಿವ ಎಂ. ಬಿ. ಪಾಟೀಲ ಬಿಜೆಪಿ ಮುಖಂಡ ಸಿ. ಟಿ. ರವಿ ಅವರಿಗೆ ಟಾಂಗ್ ನೀಡಿದ್ದಾರೆ.

ಸಿಎಂ ಖುರ್ಚಿಗಾಗಿ ಮೈತ್ರಿ ಸರ್ಕಾರದಲ್ಲೇ ದೊಡ್ಡ ಪೈಪೋಟಿ ಲಾಭಿ ನಡೆಯುತ್ತಿದೆ. ಮತ್ತೊಂದು ಕಡೆ ಈ ಸರ್ಕಾರವನ್ನು ಬೀಳಿಸಿ ಅಧಿಕಾರ ಹಿಡಿಯಲು ಬಿಜೆಪಿ ಪಾಳಯವೂ ಸಾಕಷ್ಟು ಕಸರತ್ತು ನಡೆಸುತ್ತಿದೆ. ಈ ನಡುವೆ ನಿನ್ನೆ ಹೇಳಿಯೊಂದನ್ನು ನೀಡಿದ್ದ ಬಿಜೆಪಿ ಮುಖಂಡ ಸಿ.ಟಿ. ರವಿ "ಗೃಹ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಲಿಂಗಾಯಿತರ ಪರ ಕಾಳಜಿ ಇದ್ದರೆ ಬಿ.ಎಸ್.​ ಯಡಿಯೂರಪ್ಪ ಸಿಎಂ ಆಗಲು ಸಹಾಯ ಮಾಡಲಿ" ಎಂದು ಹೇಳಿಕೆ ನೀಡಿದ್ದರು.

ಸಿ.ಟಿ. ರವಿ ಅವರ ಈ ಹೇಳಿಕೆಗೆ ವಿಜಯಪುರದಲ್ಲಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಎಂ.ಬಿ. ಪಾಟೀಲ್ ,  "ಬಿ. ಎಸ್. ಯಡ್ಯೂರಪ್ಪ ಒಂದು ಪಕ್ಷದಲ್ಲಿ ನಾನೊಂದು ಪಕ್ಷದಲ್ಲಿದ್ದರೆ, ಅವರು ಸಿಎಂ ಆಗಲು ನಾನು ಹೇಗೆ ಸಹಾಯ ಮಾಡಲು ಸಾಧ್ಯ? ಹೀಗಾಗಿ ಯಡಿಯೂರಪ್ಪ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಲು ನಾನು ಖಂಡಿತ ಸಹಾಯ ಮಾಡುತ್ತೇನೆ" ಎಂದು ಸಿ.ಟಿ. ರವಿ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ಗೃಹ ಸಚಿವ ಎಂ.ಬಿ. ಪಾಟೀಲ್ ಉತ್ತರ ಕರ್ನಾಟಕ ಭಾಗದ ಪ್ರಬಲ ಲಿಂಗಾಯತ ಸಮಾಜದ ಪ್ರಮುಖ ನಾಯಕರಾಗಿದ್ದು, ಲಿಂಗಾಯತ ಸ್ವತಂತ್ರ್ಯ ಧರ್ಮದ ಹೋರಾಟದಲ್ಲೂ ಭಾಗಿಯಾಗಿದ್ದರು.

ಇದನ್ನೂ ಓದಿ : ಮಳೆಗಾಗಿ ಮೈತ್ರಿ ಸರ್ಕಾರದಿಂದ ಪರ್ಜನ್ಯ ಜಪ, ಹೋಮ; ರಾಜ್ಯದ ಮೇಲೆ ಕರುಣೆ ತೋರ್ತಾನಾ ಋಷ್ಯಶೃಂಗ ದೇವ?

First published:June 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ