ಬೆಂಗಳೂರು(ಜ.22): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯರಾವ್ ಬೆಂಗಳೂರು ಡಿಜಿ ಕಚೇರಿಗೆ ಬಂದು ಶರಣಾಗಿದ್ದಾನೆ. ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಶ್ಲಾಘಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಮಂಗಳೂರು ಏರ್ಪೋರ್ಟ್ನಲ್ಲಿ ಬಾಂಬ್ ಪತ್ತೆಯಾದ ಬಳಿಕ ಪೊಲೀಸರು ಸಿಸಿಟಿವಿ, ಸ್ಥಳೀಯರ ಮಾಹಿತಿ ಮತ್ತು ಆಟೋ.. ಹೀಗೆ ಎಲ್ಲಾ ಜಾಲಗಳನ್ನು ಹಿಡಿದು ತನಿಖೆ ಮಾಡುತ್ತಿದ್ದರು. 3 ತನಿಖಾ ತಂಡ ರಚನೆ ಮಾಡಿ ಆರೋಪಿಯ ಸೆರೆಗಾಗಿ ಬಲೆ ಬೀಸಿದ್ದರು ಎಂದು ಗೃಹಸಚಿವರು ಪೊಲೀಸರ ಕಾರ್ಯವೈಖರಿಯನ್ನು ಹೊಗಳಿದರು.
ಬೆಂಗಳೂರಲ್ಲಿ ಹುಸಿಬಾಂಬ್ ಕರೆ ಮಾಡಿದ್ದ ವ್ಯಕ್ತಿಯ ಜಾಲ ಹಿಡಿದು ಪೊಲೀಸರು ತನಿಖೆ ಆರಂಭಿಸಿದ್ದರು. ಉಡುಪಿಯಲ್ಲಿದ್ದ ಆತನ ಮನೆ ಸುತ್ತ ತನಿಖೆ ನಡೆಸಿದ್ದರು. ಆಗಲೇ ಆತನೇ ಆರೋಪಿ ಎಂಬುದು ದೃಢಪಟ್ಟಿತ್ತು. ಈ
ಶಂಕಿತ ಉಡುಪಿ ಮತ್ತಿತರ ಕಡೆಗಳಲ್ಲಿ ಹಲವು ಬಾರಿ ಓಡಾಡಿದ್ದ. ಕೊನೆಗೆ ಬೆಂಗಳೂರಿಗೆ ಬಂದು ಶರಣಾಗಿದ್ದಾನೆ ಎಂದರು.
ಮಂಗಳೂರು ಬಾಂಬ್ ಪತ್ತೆ ಪ್ರಕರಣ; ಆರೋಪಿ ಆದಿತ್ಯ ರಾವ್ ಪೊಲೀಸರಿಗೆ ಶರಣು
ಪೊಲೀಸರು ತನಿಖೆ ಮುಂದುವರಿಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇಡೀ ಪ್ರಕರಣದಲ್ಲಿ ಪೊಲೀಸರು ತೀವ್ರಗತಿಯಲ್ಲಿ ಕೆಲಸ ಮಾಡಿದ್ದಾರೆ. ಇದು ನಮ್ಮ ಪೊಲೀಸರ ದಕ್ಷತೆ ಮತ್ತು ಪ್ರಾಮಾಣಿಕತೆ. ಯಾರು ಕೂಡಾ ಪೊಲೀಸರ ಬಗ್ಗೆ ಅನಾವಶ್ಯಕವಾಗಿ ಟೀಕೆ ಮಾಡುವುದು ಸರಿಯಲ್ಲ. ಪೊಲೀಸರ ನೈತಿಕತೆ ಕುಗ್ಗುವ ಕೆಲಸವನ್ನು ಯಾರೂ ಸಹ ಮಾಡಬಾರದು ಎಂದು ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಪೊಲೀಸರ ಈ ತನಿಖೆಯಿಂದಲೇ ಆರೋಪಿ ಬಂದು ಶರಣಾಗಿದ್ದಾನೆ. ಪೊಲೀಸರು, ನಾವು ಯಾವುದೇ ಸಂಘಟನೆಯವರು ಅಂತ ಹೇಳಿರಲಿಲ್ಲ. ಅಪರಾಧಿ ಯಾರೇ ಆದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೆವು. ಅದರಂತೆ ನಮ್ಮ ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ನಮ್ಮ ಮಾಹಿತಿ ಪ್ರಕಾರ ಅವನು ಬಸ್ ಮೂಲಕ ಬೆಂಗಳೂರಿಗೆ ಬಂದಿಲ್ಲ. ಆತ ಬೆಂಗಳೂರಿಗೆ ಬೇರೆ ಬೇರೆ ಮಾರ್ಗದಲ್ಲಿ ಬಂದಿದ್ದಾನೆ ಎಂದು ಹೇಳಿದರು.
2018ರಲ್ಲಿ ಬೆಂಗಳೂರಲ್ಲಿ ಬಂಧಿತನಾಗಿದ್ದ ವ್ಯಕ್ತಿಯೇ ಮಂಗಳೂರಿನಲ್ಲಿ ಬಾಂಬ್ ಇಟ್ಟನಾ? ಚುರುಕುಗೊಂಡ ಪೊಲೀಸ್ ತನಿಖೆ
ಉಗ್ರ ಸಂಘಟನೆ ಜೊತೆ ಸಂಪರ್ಕ ವಿಚಾರವಾಗಿ, ತನಿಖೆ ಬಳಿಕ ಅದೆಲ್ಲಾ ಬಹಿರಂಗ ಆಗುತ್ತೆ. ಕೇಂದ್ರ ತಂಡ ಈಗಾಗಲೇ ಬಂದು ತನಿಖೆ ಮಾಡುತ್ತಿದೆ. ಬಾಂಬ್ ಸಿಕ್ಕ ಬಳಿಕ ಮಾಹಿತಿ ನೀಡಲಾಗಿತ್ತು. ಹೀಗಾಗಿ ಅವರು ತನಿಖೆ ಮಾಡುತ್ತಿದ್ದಾರೆ. ನಮ್ಮ ತನಿಖೆ ಬಳಿಕ ಕೇಂದ್ರ ತಂಡಕ್ಕೆ ಮಾಹಿತಿ ನೀಡುವ ಬಗ್ಗೆ ತೀರ್ಮಾನ ನಾವು ಮಾಡುತ್ತೇವೆ. ಆರೋಪಿ ಪದವೀಧರ ಆಗಿದ್ದ. ನಿರಾಶ್ರಿತನಾಗಿದ್ದ. ಮಂಗಳೂರಿನಲ್ಲಿ ಏರ್ ಪೋರ್ಟ್ ಸೆಕ್ಯುರಿಟಿ ಕೆಲಸಕ್ಕೆ ಸೇರುವ ಪ್ರಯತ್ನ ಮಾಡಿದ್ದ. ಆತನ ಸಂಪೂರ್ಣ ವಿವರ ತನಿಖೆ ಬಳಿಕ ಬಹಿರಂಗ ಆಗಲಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ