• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Araga Jnanendra: ಅಗ್ನಿಪಥ್ ವಿರೋಧಿ ಹೋರಾಟದ ಹಿಂದೆ ಕಾಂಗ್ರೆಸ್ ಕೈವಾಡ! ಗೃಹಸಚಿವ ಆರಗ ಜ್ಞಾನೇಂದ್ರ ಆರೋಪ

Araga Jnanendra: ಅಗ್ನಿಪಥ್ ವಿರೋಧಿ ಹೋರಾಟದ ಹಿಂದೆ ಕಾಂಗ್ರೆಸ್ ಕೈವಾಡ! ಗೃಹಸಚಿವ ಆರಗ ಜ್ಞಾನೇಂದ್ರ ಆರೋಪ

ಗೃಹಸಚಿವ ಆರಗ ಜ್ಞಾನೇಂದ್ರ

ಗೃಹಸಚಿವ ಆರಗ ಜ್ಞಾನೇಂದ್ರ

ಇಡೀ ದೇಶದಾದ್ಯಂತ ಕಾಂಗ್ರೆಸ್‌ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು, ಕಾನೂನು, ಕಾಯ್ದೆ ಇವರು ಗೌರವಿಸದಿದ್ದರೆ, ಇನ್ಯಾರು ಗೌರವಿಸುತ್ತಾರೆ, ಇಡಿ ವಿಚಾರಣೆ ವೇಳೆ ತಪ್ಪು ಮಾಡದಿದ್ದರೆ ಹೊರಗೆ ಬರ್ತಾರೆ, ಇಲ್ಲ ಶಿಕ್ಷೆ ಅನುಭವಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ಮುಂದೆ ಓದಿ ...
  • Share this:

ಹಾಸನ: ಅಗ್ನಿಪಥ್ ಯೋಜನೆ (Agnipath Scheme) ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ (Protest) ಹಿಂದೆ ಕಾಂಗ್ರೆಸ್ (Congress) ಇಲ್ಲ, ಎದುರುಗಡೆಯೆ ಕಾಂಗ್ರೆಸ್ ಇದೆ. ಅವರಿಗೆ ಮೋದಿ ಸರ್ಕಾರ (Modi Government) ಮಾಡಿದ್ದನ್ನೆಲ್ಲಾ ವಿರೋಧಿಸುವ ಚಟ, ಅಷ್ಟು ಬಿಟ್ಟರೆ ಬೇರೇನು ಇಲ್ಲ ಎಂದು ಗೃಹಸಚಿವ (Home Minister) ಆರಗ ಜ್ಞಾನೇಂದ್ರ (Aaraga Jnanendra) ಕಿಡಿ ಕಾರಿದ್ದಾರೆ. ‌ಹಾಸನ (Hassan) ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೊಲೀಸ್ ಸ್ಟೇಷನ್ (Traffic Police Station) ಕಾಮಗಾರಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಬಹಳ ಒಳ್ಳೆಯ ಯೋಜನೆ.‌ ಮಿಲಿಟರಿಯಲ್ಲಿ (Military) ನಿವೃತ್ತಿ ವಯಸ್ಸು 32 ಇದೆ, ಅದನ್ನು 25ಕ್ಕೆ ಇಳಿಸಬೇಕು. ಮಿಲಿಟರಿಯಲ್ಲಿ ಯಂಗ್ ಬ್ಲಡ್ (Young Blood) ಬಂದಷ್ಟು ಬಹಳ ಒಳ್ಳೆಯದು, ಐದು ಲಕ್ಷ ಕೋಟಿ ಮಿಲಿಟರಿ ಬಜೆಟ್ (Budget) ಇದ್ದು, ಒಂದು ಕಾಲು ಲಕ್ಷ ಕೋಟಿಯನ್ನು ನಾವು ಪೆನ್ಷನ್‌ಗೆ ವ್ಯಯ ಮಾಡುತ್ತಿದ್ದೇವೆ, ಅದಲ್ಲದೇ ಸಂಬಳ ನೀಡಲಾಗುತ್ತಿದೆ. ಬಜೆಟ್‌ನ ಕಾಲು ಭಾಗ ಮಾತ್ರ ಅಭಿವೃದ್ಧಿಗೆ, ಶಸ್ತ್ರಾಸ್ತ್ರ ಖರೀದಿಗೆ ಸಿಗುತ್ತಿದೆ.‌ ಈಗ ಪೆನ್ಷನ್ ಹಣವನ್ನು ಉಳಿಸುವುದ್ದಕ್ಕೋಸ್ಕರ ಹೊಸ ಪ್ರಾಜೆಕ್ಟ್‌ ತಂದಿದೆ ಎಂದು ಯೋಜನೆಯನ್ನು ಸಮರ್ಥಿಸಿಕೊಂಡರು.


ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ಮೀಸಲಾತಿ


ಹದಿನೇಳುವರೆ ವರ್ಷದಿಂದ ಇಪ್ಪತ್ಮೂರು ವರ್ಷದ ಒಳಗಿನ ಯುವಕರನ್ನು ಮಿಲಿಟರಿಗೆ ಸೇರಿಸಬೇಕು, ನಾಲ್ಕು ವರ್ಷ ಅವರಿಗೆ ಮಿಲಿಟರಿಯಲ್ಲಿ ಕೆಲಸ ನೀಡಿದರೆ, 48 ತಿಂಗಳುಗಳ ಕಾಲ‌ 30 ರಿಂದ 45 ಸಾವಿರ ಸಂಬಳ ಸಿಗುತ್ತದೆ.‌ ಇದರ ಜೊತೆ, ಒಂದು ಕೋಟಿ ಇನ್ಸೂರೆನ್ಸ್ ಪಾಲಿಸಿ, ನಾಲ್ಕು ವರ್ಷ ಮುಗಿಸಿ ಕೆಲಸ ಬಿಡುವಾಗ ಶೇ.25 ಜನರಿಗೆ ಮಿಲಿಟರಿಯಲ್ಲಿ ಪರ್ಮ್ನೆಂಟ್ ಕೆಲಸ ಆಯ್ಕೆಯಾಗುತ್ತಾರೆ, ಉಳಿದ ಮುಕ್ಕಾಲು ಭಾಗ ಜನ ಹೊರಗೆ ಬರ್ತಾರೆ ಎಂದರು.‌ ನಿವೃತ್ತಿಯಾಗುವಾಗ 12 ಲಕ್ಷ ಹಣ ಕೊಟ್ಟು ಕಳುಹಿಸುತ್ತಾರೆ.  ಎಲ್ಲಕ್ಕಿಂತ ಹೆಚ್ಚಾಗಿ 40 ರಿಂದ 45 ಸಾವಿರ ಜನ ದೇಶವನ್ನು ಪ್ರೀತಿಸುವ ಯುವಕರು ಸೇರ್ತಾರೆ ಎಂದು ಹೇಳಿದರು.


ಟೀಕೆ ಮಾಡುವುದೇ ಕಾಂಗ್ರೆಸ್ ಕೆಲಸ


ಇಸ್ರೇಲ್‌ನಂತಹ ದೇಶದಲ್ಲಿ ಗಂಡು ಹೆಣ್ಣು ಖಡ್ಡಾಯ ಮಿಲಿಟರಿ ಟ್ರೈನಿಂಗ್ ಪಡೆಯಬೇಕು ಎನ್ನುವ ವ್ಯವಸ್ಥೆ ಇದೆ, ಇಲ್ಲಿ ಆ ವ್ಯವಸ್ಥೆ ಇಲ್ಲ, ಮೋದಿ ಸರ್ಕಾರದಲ್ಲಿ ಈ ಯೋಜನೆ ಜಾರಿಗೆ ತರುವ ಮೂಲಕ ಯುವಕರನ್ನು ಅಟ್ರ್ಯಾಕ್ಟ್ ಮಾಡುತ್ತಿದೆ. ಕಾಂಗ್ರೆಸ್‌ನವರು ಟೀಕೆ ಮಾಡುತ್ತಾರೆ, ಅವರ ಕಾಲದಲ್ಲಿ ಆಗದೆ ಇರುವುದು ನಮ್ಮ ಕಾಲದಲ್ಲಿ ಆಗುತ್ತಿದೆ ಅಂತ ಅವರಿಗೆ ಉರಿ ಬಿದ್ದಿದೆ ಎಂದು ಕುಟುಕಿದರು.


ಇದನ್ನೂ ಓದಿ: Heavy Rain: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ; ನೆರೆಯ ಆತಂಕ


ಗಾಂಧಿ ಕುಟುಂಬಕ್ಕೆ ಒಂದು, ಜನರಿಗೊಂದು ಕಾನೂನಿಲ್ಲ


ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರನ್ನು ಇಡಿ ವಿಚಾರಣೆ ಮಾಡುತ್ತಿರುವುದರ ಹಿಂದೆ ಯಾರ ಕೈವಾಡವು ಇಲ್ಲ. ಯಾರು ತಪ್ಪು ಮಾಡಿದ್ದಾರೆ, ಯಾರೂ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಅವರನ್ನು ಇಡಿ ವಿಚಾರಣೆಗೆ ಕರಿತಾರೆ, ಕರಿಬೇಡಿ ಅಂತ ಹೇಳಲು ಆಗುತ್ತಾ, ಈ ದೇಶದಲ್ಲಿ ಗಾಂಧಿ ಕುಟುಂಬಕ್ಕೆ ಒಂದು ಕಾನೂನು, ಜನಸಾಮಾನ್ಯರಿಗೆ ಒಂದು ಕಾನೂನು ಇದೆಯಾ, ಎಲ್ಲರಿಗೂ ಒಂದೇ ಕಾನೂನು ಇದೆ ಎಂದರು.


ಇದನ್ನೂ ಓದಿ: Bengaluru: ಪೊಲೀಸರಿಗೆ ಮಾಹಿತಿ ನೀಡದೇ ಆತ್ಮಹತ್ಯೆಗೆ ಶರಣಾದ ಪುತ್ರನ ಅಂತ್ಯಕ್ರಿಯೆ ನಡೆಸಿ ಪರಾರಿಯಾದ್ರು!


 ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು


ಇಡೀ ದೇಶದಾದ್ಯಂತ ಕಾಂಗ್ರೆಸ್‌ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು, ಕಾನೂನು, ಕಾಯ್ದೆ ಇವರು ಗೌರವಿಸದಿದ್ದರೆ, ಇನ್ಯಾರು ಗೌರವಿಸುತ್ತಾರೆ, ಇಡಿ ವಿಚಾರಣೆ ವೇಳೆ ತಪ್ಪು ಮಾಡದಿದ್ದರೆ ಹೊರಗೆ ಬರ್ತಾರೆ, ಇಲ್ಲ ಶಿಕ್ಷೆ ಅನುಭವಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

First published: