ಬೆಂಗಳೂರು: ಕಸ್ತೂರಿ ರಂಗನ್ ವರದಿಯನ್ನು (Kasturi Rangan Report) ಕರ್ನಾಟಕ ರಾಜ್ಯ ಸರ್ಕಾರ (Karnataka Government) ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೇವೆ. ಅಲ್ಲದೇ ಸಿಎಂ ನೇತೃತ್ವದಲ್ಲಿ ಕೇಂದ್ರದ ಸಚಿವರನ್ನು ಭೇಟಿಯಾಗಿ ಇದನ್ನು ರದ್ದು ಮಾಡುವಂತೆ ಈಗಾಗಲೇ ಮನವಿ ಮಾಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ. ಪಶ್ಚಿಮ ಘಟ್ಟದ (Western Ghats) ಶಾಸಕರ ನೇತೃತ್ವದ ನಿಯೋಗ ದೆಹಲಿಗೆ ತೆರಳಲು ನಿರ್ಧಾರ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಇಂತಹ ಅವೈಜ್ಞಾನಿಕ ವರದಿ ಒಪ್ಪೋದಕ್ಕೆ ಸಾಧ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ಘಟ್ಟದ ಕಸ್ತೂರಿ ರಂಗನ್ ವರದಿ ಕುರಿತು ಮಲೆನಾಡು ಶಾಸಕರ ಸಭೆ ಮುಕ್ತಾಯಗೊಂಡಿದ್ದು ಸಭೆ ನಂತರ ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಢಿ ನಡೆಸಿ ಈ ವಿವರ ತಿಳಿಸಿದ್ದಾರೆ. ಈ ಬಗ್ಗೆ ಚಿಂತನೆ ಮಾಡಲು ಸಿಎಂ ನೇತೃತ್ವದಲ್ಲಿ ಸಭೆ ನಡೆಸಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.
ವರದಿ ಕೈಬಿಡುವಂತೆ ಮನವಿ
ಅಲ್ಲದೇ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಪಶ್ಚಿಮ ಘಟ್ಟದ ಶಾಸಕರ ನಿಯೋಗದಿಂದ ಕೇಂದ್ರದ ಪರಿಸರ ಸಚಿವರ ಭೇಟಿ ಮಾಡಿ, ಕಸ್ತೂರಿ ರಂಗನ್ ವರದಿಯನ್ನು ಕೈ ಬಿಡುವಂತೆ ಮನವಿ ಮಾಡುತ್ತೇವೆ ಎಂಬುದಾಗಿಯೂ ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಕಸ್ತೂರಿ ರಂಗನ್ ವರದಿ ಜಾರಿಯಾದರೆ..
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮೈನಿಂಗ್, ಕ್ವಾರಿ ಬ್ಯಾನ್ ಆಗುತ್ತದೆ. ಇಪ್ಪತ್ತು ಸಾವಿರ ಚದರ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೂ ಅವಕಾಶ ಇರಲ್ಲ. ಕಿರು ಜಲ ವಿದ್ಯುತ್ ಯೋಜನೆ, ರೆಡ್ ಕೆಟಗರಿ ಕೈಗಾರಿಕೆಗೆ ಅವಕಾಶ ಇರಲ್ಲ. ಆಸ್ಪತ್ರೆ, ವಿಮಾನ ನಿಲ್ದಾಣ, ರೆಸಾರ್ಟ್ ಕೂಡ ಬ್ಯಾನ್ ಆಗುತ್ತದೆ. ಚಿಕ್ಕ ಉದ್ಯಮಕ್ಕೂ ಅನುಮತಿ ಸಿಗುವುದಿಲ್ಲ. ಚಿಕ್ಕ ಉದ್ಯಮಗಳಿಗೂ ಅನುಮತಿಗಾಗಿ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಹೀಗಾಗಿ ಕಸ್ತೂರಿ ರಂಗನ್ ವರದಿಯನ್ನು ಕರ್ನಾಟಕ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾವು ಈ ವರದಿಗೆ ಒಪ್ಪಿಗೆ ಕೊಡಲ್ಲ
ಅಲ್ಲದೇ ಕಸ್ತೂರಿ ರಂಗನ್ ವರದಿ ಜಾರಿಯಾದರೆ ಕೃಷಿಯಲ್ಲಿ ರಾಸಾಯನಿಕ ಬಳಕೆ ಕೂಡ ಮಾಡುವಂತಿಲ್ಲ. ಹೀಗಾಗಿ ಕರ್ನಾಟಕ ಕಸ್ತೂರಿ ರಂಗನ್ ವರದಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: Bengaluru Mangaluru Alternative Routes: ಬೆಂಗಳೂರು-ಮಂಗಳೂರು ಪ್ರಯಾಣಕ್ಕೆ ಶಿರಾಡಿ ಬದಲು ಪರ್ಯಾಯ ಮಾರ್ಗ ಇಲ್ಲಿದೆ
ಈ ವರದಿ ಅವೈಜ್ಞಾನಿಕ
ಕರ್ನಾಟಕದ 1753 ಗ್ರಾಮಗಳು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಸೇರಿ ಬಫರ್ ಝೋನ್ ಎಂದು ಕರೆಸಿಕೊಳ್ಳುತ್ತವೆ. ಇವತ್ತು ಕಸ್ತೂರಿ ರಂಗನ್ ವರದಿ ಐದನೇ ಅಧಿಸೂಚನೆಯನ್ನು ಇತ್ತೀಚೆಗೆ ಕೇಂದ್ರ ಪರಿಸರ ಸಚಿವಾಲಯ ಪ್ರಕಟ ಮಾಡಿದೆ. ಈ ಬಗ್ಗೆ ಚಿಂತನೆ ಮಾಡಲು ಸಿಎಂ ನೇತೃತ್ವದಲ್ಲಿ ಸಭೆ ನಡೆಸಲಾಯಿತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: HD Deve Gowda: ಇದೇ ಮೊದಲ ಬಾರಿಗೆ ವ್ಹೀಲ್ಚೇರ್ನಲ್ಲಿ ಕಾಣಿಸಿಕೊಂಡ ಮಾಜಿ ಪ್ರಧಾನಿ ದೇವೇಗೌಡ
ಕಸ್ತೂರಿ ರಂಗನ್ ವರದಿ ಒಪ್ಪಿದರೆ ಈ ಭಾಗದ ನಿವಾಸಿಗಳಿಗೆ ಕಿರುಕುಳ ಆಗುತ್ತದೆ ಎಂಬ ವಿಷಯ ಸಭೆಯಲ್ಲಿ ಚರ್ಚೆ ಆಗಿದೆ. ಈಗಾಗಲೇ ಅರಣ್ಯ ರಕ್ಷಣೆ ಮಾಡಲಾಗುತ್ತಿದೆ. ಈ ರೀತಿ ವರದಿ ಅವೈಜ್ಞಾನಿಕವಾಗಿದೆ. ಕಾಡಿನ ಪ್ರಮಾಣ ಸಹ ನಮ್ಮಲ್ಲಿ ಜಾಸ್ತಿ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ