ಬೆಂಗಳೂರು: ವೋಟರ್ ಐಡಿ ಹಗರಣ (Karnataka voter ID Scam) ಮುಚ್ಚಿ ಹಾಕಲು ಮಂಗಳೂರು (Mangaluru) ಕುಕ್ಕರ್ ಬ್ಲಾಸ್ಟ್ (Cooker Blast) ಹೊರಗೆ ತಂದರು ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಅವರ ಹೇಳಿಕೆಗೆ ತಿರುಗೇಟು ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra), ವೋಟರ್ ಐಡಿ ಹಗರಣಕ್ಕೂ, ಕುಕ್ಕರ್ ಬಾಂಬ್ ಬ್ಲಾಸ್ಟಿಗೂ ಏನು ಸಂಬಂಧವೇನು ಅಂತ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಚುನಾವಣೆ ಹತ್ತಿರ ಬರುತ್ತಿದೆ. ಹೇಗಾದರೂ ಮಾಡಿ ಅಲ್ಪಸಂಖ್ಯಾತ ವೋಟ್ ಪಡೆದುಕೊಳ್ಳಬೇಕು. ಇದಕ್ಕೆ ಓರ್ವ ಶಂಕಿತ ಭಯೋತ್ಪಾದಕನ್ನು ಸಮರ್ಥನೆ ಮಾಡ್ತಿದ್ದಾರೆ. ಓರ್ವ ಮಂತ್ರಿಯಾಗಿ ಸರ್ಕಾರ ಮಾಡಿದವರು. ಇಂತಹ ವಿಚಾರದಲ್ಲಿ ಆದರೂ ಪಕ್ಷಾತೀತವಾಗಿ ಯೋಚನೆ ಮಾಡ್ಬೇಕು. ಇದು ಖಂಡನೀಯ ಹೇಳಿಕೆಯಾಗಿದೆ ಎಂದು ಸಚಿವರು ಟೀಕೆ ಮಾಡಿದರು.
ಕಾಂಗ್ರೆಸ್ನಿಂದ ಓಲೈಕೆ ರಾಜಕಾರಣ
ಡಿಕೆ ಶಿವಕುಮಾರ್ ಹೇಳಿಕೆ ಕುರಿತಂತೆ ನ್ಯೂಸ್18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಗೃಹ ಸಚಿವರು, ಇಡೀ ದೇಶದಲ್ಲೇ ಮತಾಂಧ ಶಕ್ತಿಗಳ, ಸಂಘಟನೆಗಳ ಮುಖವಾಡ ಕಳಚುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಈ ಕಾರಣದಿಂದಲೇ ದೇಶದಲ್ಲಿ ಶಾಂತಿ ನಿರ್ಮಾಣ ಆಗಿದೆ.
ಕಾಶ್ಮೀರದಲ್ಲಿ ಯೋಧರಿಗೆ ಕಲ್ಲು ಹೊಡೆಯುತ್ತಿದ್ದರು
ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಇಡೀ ದೇಶದಲ್ಲಿ ದೀಪಾವಳಿ ಪಟಾಕಿ ತರ ಬಾಂಬ್ ಬ್ಲಾಸ್ಟ್ ಆಗುತ್ತಿತ್ತು. ಮನೆಯಿಂದ ಹೊರಗೆ ಹೋದರೇ ಮತ್ತೆ ವಾಪಸ್ ಬರ್ತಿವಿ ಅನ್ನೋ ಗ್ಯಾರಂಟಿ ಇವರ ಆಡಳಿತದಲ್ಲಿ ಇರಲಿಲ್ಲ. ಯಾವುದೇ ಅವಘಡ ಅಥವಾ ವಿದ್ವಂಸಕ ಕೃತ್ಯ ನಡೆದ ಮೇಲೆ ಎಲ್ಲರನ್ನು ಹಿಡಿದುಕೊಳ್ಳಲು ಆಗುತ್ತಾ? ಕೃತ್ಯ ನಡೆಯುವ ಮೊದಲೇ ಅದನ್ನು ತಡೆಯಬೇಕು ಅಲ್ವಾ?
ಮೋದಿ ಆಡಳಿತದಲ್ಲಿ ಇವೆಲ್ಲಾ ನಿಂತಿದೆ. ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೈನಿಕರ ಮೇಲೆ ಕಲ್ಲು ಹೊಡೆಯುತ್ತಿದ್ದರು. ಈಗ ಏನಾಗಿದೆ ಗೊತ್ತಾ? ಭಯೋತ್ಪಾದನೆಯನ್ನು ನಿಯಂತ್ರಣ ಮಾಡುವ ಕೆಲಸವನ್ನು ಸಮರ್ಥವಾಗಿ ಮಾಡ್ತಿರೋ ಕಾರಣ, ಡಿಕೆ ಶಿವಕುಮಾರ್ ಅವರು ಪ್ರಶಂಸೆ ವ್ಯಕ್ತಪಡಿಸಿಬೇಕು ಎಂದರು.
ವೋಟರ್ ಐಡಿ ಹಗರಣ ಕಾಂಗ್ರೆಸ್ ನಾಯಕರೇ ಮಾಡಿರುವ ಕೆಲಸ. ಈ ಬಗ್ಗೆ ನಮ್ಮ ಸರ್ಕಾರ ತನಿಖೆ ಮಾಡಿ ಕ್ರಮಕೈಗೊಳ್ಳುತ್ತಿದೆ. ವೋಟರ್ ಮಾಹಿತಿಯನ್ನು ಖಾಸಗಿ ಸಂಸ್ಥೆಗೆ ನೀಡಿದ್ದೆ ಇವರ ಸರ್ಕಾರ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೂ, ವೋಟರ್ ಐಡಿ ಪ್ರಕರಣಕ್ಕೂ ಏನು ಸಂಬಂಧ ಇದೆ. ಡಿಕೆ ಶಿವಕುಮಾರ್ ಅವರ ಹೇಳಿಕೆ ಖಂಡನೀಯ ಎಂದರು.
ಇದನ್ನೂ ಓದಿ: DK Shivakumar: ಒಬ್ಬ ಮಂಚಕ್ಕೆ, ಮತ್ತೊಬ್ಬ ಲಂಚಕ್ಕೆ ತಲೆದಂಡ; ಡಿಕೆಶಿ ವಾಗ್ದಾಳಿ
ಡಿಕೆ ಶಿವಕುಮಾರ್ಗೆ ಭಯೋತ್ಪಾದಕರು ಬ್ರದರ್ಸ್ ತರ ಕಾಣ್ತಾರೆ
ಮಂಗಳೂರಿನ ಬಾಂಬ್ ಸ್ಫೋಟದ ಬಗ್ಗೆ ಡಿಕೆ ಶಿವಕುಮಾರ್ ಹಗುರವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ಡಿಕೆ ಶಿವಕುಮಾರ್ಗೆ ಭಯೋತ್ಪಾದಕರು ಬ್ರದರ್ಸ್ ತರ ಕಾಣ್ತಾರೆ. ಬಾಂಬ್ ಬ್ಲಾಸ್ಟ್ ಮಾಡಿದ ಶಾರೀಕ್ ನನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಿಲುವು ದಿನದಿಂದ ದಿನಕ್ಕೆ ಯಾವ ರೀತಿ ಬದಲಾಗ್ತಿದೆ ಎಂದು ಈ ಮಾತಿಂದ ಗೊತ್ತಾಗುತ್ತಿದೆ. ಹಿಂದೆ ಕೆಜೆ ಹಳ್ಳಿ, ಡಿಜೆಹಳ್ಳಿಯ ಭಯೋತ್ಪಾದಕರನ್ನು ಬ್ರದರ್ಸ್ ಅಂತಾ ಸಮರ್ಥನೆ ಮಾಡಿಕೊಂಡಿದ್ದರು. ನಿಜವಾಗಿಯೂ ಈ ನಿಲುವು ಹೇಡಿತನದ್ದು, ಭಯೋತ್ಪಾದನೆಗೆ ಪ್ರಚೋದನೆ ಕೊಡುತ್ತಿರೋದನ್ನು ನಾವು ಎಲ್ಲಾ ಸಂದರ್ಭದಲ್ಲಿ ನೋಡಿದ್ದೇವೆ. ಕಾಂಗ್ರೆಸ್ ದಿವಾಳಿ ಆಗಿರೋದು ಇದರಿಂದಲೇ ಗೊತ್ತಾಗ್ತಿದೆ.
ಮುಸ್ಲಿಂ ತುಷ್ಟೀಕರಣ, ವೋಟ್ ಬ್ಯಾಂಕ್ ಗಾಗಿ ಸಮರ್ಥನೆ ಮಾಡಿಕೊಳ್ಳೋದು ದೇಶಕ್ಕೆ ದೊಡ್ಡ ಅಪಾಯ. ಭಯೋತ್ಪಾದನೆಗೆ ಜಾತಿ ಇಲ್ಲ, ಇದನ್ನು ಯಾರೇ ಆಗಲಿ ಖಂಡಿಸಬೇಕು. ಕಾಂಗ್ರೆಸ್ ನ ತುಷ್ಟೀಕರಣದಿಂದಲೇ ಪಿಎಫ್ಐ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರೋದು. ಕಾಂಗ್ರೆಸ್ ಯಾವತ್ತಿಗೂ ದೇಶ ಮುಖ್ಯ ಅಂತ ಹೇಳಿಲ್ಲ. ಅವರು ಯಾವಾಗಲೂ ಮುಸ್ಲಿಮರು ಮುಖ್ಯ ಅಂತಾ ಹೇಳಿದ್ದಾರೆ. ಡಿಕೆ ಶಿವಕುಮಾರ್ ನಿಲುವು ಮುಂದೆ ದೊಡ್ಡ ಬೆಲೆ ತರಬೇಕಾಗುತ್ತದೆ. ಶಾರೀಕ್ ಬ್ಯಾಂಕ್ ಖಾತೆಗೆ ಎಲ್ಲಿಂದ ದುಡ್ಡು ಬರುತ್ತದೆ. ಅವನ ಹಿನ್ನೆಲೆ ತಿಳಿದೇ ಟೆರರ್ ಅಂತ ಪೊಲೀಸರು ಘೋಷಣೆ ಮಾಡಿದ್ದಾರೆ. ರಾಷ್ಟ್ರ ವಿರೋಧಿ ಚಟುವಟಿಕೆ ನಡೆದಾಗ ಯಾರು ವಿಷಯ ಡೈವರ್ಟ್ ಮಾಡಲ್ಲ. ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಮಾತ್ರ ಡೈವರ್ಟ್ ಮಾಡಿರುವ ಉದಾಹರಣೆ ಗಳು ಇವೆ ಎಂದು ಸಚಿವ ಸುನೀಲ್ ಕುಮಾರ್ ಟೀಕಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ