Bitcoin Scam: ಶ್ರೀಕಿಗೆ ಕಾಂಗ್ರೆಸ್​ನವರೆ ಏನಾದರು ಮಾಡಿ ಸರ್ಕಾರದ ಮೇಲೆ ಹಾಕುತ್ತಾರಾ ಎಂಬ ಆತಂಕವಿದೆ; ಗೃಹ ಸಚಿವ ಅರಗ ಜ್ಞಾನೇಂದ್ರ

ಶ್ರೀಕಿಗೆ ಪ್ರಾಣ ಬೆದರಿಕೆ ಇದೆ ಅಂತ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಹೇಳ್ತಿದ್ದಾರೆ. ಅವರ ಹೇಳಿಕೆ ನೋಡಿದರೆ ನಮಗೆ ಅವರ ಮೇಲೆ ಅನುಮಾನ ಮೂಡುತ್ತಿದೆ. ಅವರೇ ಏನಾದರೂ ಮಾಡಿ, ಸರ್ಕಾರದ ತಲೆ ಮೇಲೆ ಹಾಕ್ತಾರಾ ಅಂತಾ ನಮಗೆ ಆತಂಕ ಇದೆ ಎಂದು ಹೇಳಿದರು.

ಗೃಹ ಸಚಿವ ಅರಗ ಜ್ಞಾನೇಂದ್ರ

ಗೃಹ ಸಚಿವ ಅರಗ ಜ್ಞಾನೇಂದ್ರ

 • Share this:
  ಬೆಂಗಳೂರು: ಬಹಳಷ್ಟು ರಾಜಕಾರಣಿಗಳು, ಕುಟುಂಬದವರ ಬಿಟ್ ಕಾಯಿನ್ ಅಕೌಂಟ್ ಇದೆ (Bitcoin Account). ಅದರ ಮುಖಾಂತರ ಕೋಟ್ಯಾಂತರ ರೂಪಾಯಿ ಹವಾಲಾ ಹಣ ಪಡೆದಿದ್ದಾರೆ ಅಂತ ಕಾಂಗ್ರೆಸ್ ನಾಯಕರು (Congress Leaders) ಆರೋಪ ಮಾಡಿದ್ದಾರೆ. ಐಎಎಸ್, ಐಪಿಎಸ್ ಅಧಿಕಾರಿಗಳ ಕುಟುಂಬದವರ ಅಕೌಂಟ್ ಇದೆ ಅಂತ ಹೇಳಿದ್ದಾರೆ. ಹಾಗಾಗಿ ನಾನು ಸಿಎಂ ಬೊಮ್ಮಾಯಿ (CM Basavaraja Bommai) ಅವರನ್ನು ಮನವಿ ಮಾಡ್ತಿನಿ. ಬಿಟ್ ಕಾಯಿನ್ ಅಕೌಂಟ್ ಇದೆ,‌ ಅವರ ಅಕೌಂಟ್ ಬಗ್ಗೆ ಸಿಓಡಿ ತನಿಖೆ ನಡೆಸಿ. ಅದರ ಮುಖಾಂತರ ರಾಜ್ಯದ ಜನತೆಗೆ ಗೊತ್ತಾಗಲಿ. ಅವರ ಅಕೌಂಟ್ ಮೂಲಕ ಎಷ್ಟು ದುಡ್ಡು ಹೋಗಿದೆ. ಯಾರ್ಯಾರ ಅಕೌಂಟಿಗೆ ಯಾರು ಹಣ ಹಾಕಿದ್ದಾರೆ. ಹವಾಲಾ, ಬ್ಯಾಂಕ್ ಮೂಲಕ ಹಾಕಿದ್ದಾರೆ. ವೈಟಾ, ಬ್ಲಾಕಾ ಅನ್ನೋದು ಗೊತ್ತಾಗಲಿದೆ. ಆಗ ಪ್ರತಿದಿನ ಗಾಳಿಯಲ್ಲಿ ಗುಂಡು ಹೊಡೆಯೋದು ನಿಲ್ಲಲಿದೆ. ರಾಜ್ಯದ ಪ್ರತೀ ಜನರಿಗೂ ಈ ಬಗ್ಗೆ ಸ್ಪಷ್ಟವಾಗಲಿ ಎಂದು ಸಚಿವ ಆರ್. ಅಶೋಕ್ (Minister R Ashok) ಅವರು ಹೇಳಿದರು.

  ಬಿಟ್ ಕಾಯಿನ್ ಹಗರಣ ಕುರಿತು ಕಾಂಗ್ರೆಸ್ ಆರೋಪ‌ ಹಾಗೂ ಬಿಟ್ ಕಾಯಿನ್ ಹಗರಣದ ಮಾಸ್ಟರ್ ಮೈಂಡ್ ಶ್ರೀಕಿಗೆ ಜೀವ ಬೆದರಿಕೆ ವಿಚಾರವಾಗಿ ಸಚಿವ ಆರ್. ಅಶೋಕ್ ಅವರು ಇಂದು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದರು. ಶ್ರೀಕಿಯನ್ನ 2016-18 ರವರೆಗೂ ಯಾರು ರಕ್ಷಣೆ ಮಾಡಿದ್ದಾರೆ. ಕೇಸಲ್ಲಿದ್ದರೂ ಕೂಡ ಅರೆಸ್ಟ್ ಮಾಡದೆ, ಬೆಲ್ ತೆಗೆದುಕೊಳ್ಳುವವರೆಗೂ ಬಿಡಲಾಗಿದೆ. ಕೊನೆಗೂ ತನಿಖೆಗೆ ಕರೆಯದೆ, ಕಾಲ ಕಾಲಕ್ಕೆ ಬಿರ್ಯಾನಿ ಕೊಟ್ಟು ಸೇಫ್ ಮಾಡಿದ್ದಾರೆ. ಬಿಟ್ ಕಾಯಿನ್ ವಿಚಾರದಲ್ಲಿ ದೇಶ, ರಾಜ್ಯದಲ್ಲಿ ಸುದ್ದಿಯಾಗಿದೆ. ಬೊಮ್ಮಾಯಿ ಅವರ ಆಡಳಿತ ಸಹಿಸಲಾಗದೆ, ಅವರನ್ನು ತುಳಿಯುವ ಕೆಲಸ ಮಾಡಲಾಗ್ತಿದೆ. ಒಳ್ಳೆಯ ಕೆಲಸ ಮಾಡಲು ಹೊರಟ ಬೊಮ್ಮಾಯಿ ಅವರನ್ನು ರಾಜಕೀಯವಾಗಿ ತುಳಿಯಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.

  ಅಮೆರಿಕಗೆ ಸುರ್ಜೆವಾಲಾ ಹೋಗಿದ್ದರಾ?

  ಬಿಟ್ ಕಾಯಿನ್ ನಲ್ಲಿ ಅಕೌಂಟ್ ಯಾರದ್ದು ಇದೆ? ಎಲ್ಲಿದೆ? ಎಂದು ಸಿದ್ದರಾಮಯ್ಯ ತಿಳಿಸಲಿ. ಪ್ರಧಾನಿ ಮೋದಿ ಅಮೆರಿಕಾಗೆ ಹೋದಾಗ ಬಿಟ್ ಕಾಯಿನ್ ಬಗ್ಗೆ ತನಿಖೆ ಮಾಡಲಿ ಎಂದು ಅಮೆರಿಕಾದ ಅಧ್ಯಕ್ಷ ಹೇಳಿದ್ದಾರಂತೆ. ಅಲ್ಲಿ ಸುರ್ಜೇವಾಲ ಎಲ್ಲಿದ್ದರು? ಇವರು ಅಮೆರಿಕಾದ ರಾಯಭಾರಿಯಾಗಿ ಹೋಗಿದ್ದರಾ?  ನೋಡದೆ, ಹೋಗದೆ, ಕೇಳದೆ ಆರೋಪ ಮಾಡುತ್ತಾರೆ. ಅಮೆರಿಕಾದ ಅಧ್ಯಕ್ಷರು ಮೋದಿ ಬಗ್ಗೆ ಮಾತನಾಡುವಾಗ ಇವರು ಎಲ್ಲಿ ಕೂತಿದ್ದರು? ಸುಳ್ಳು ಹೇಳಲು ಮಿತಿ ಇರಬೇಕು ಎಂದು ಕಾಂಗ್ರೆಸ್​​ ರಾಜ್ಯ ಉಸ್ತುವಾರಿ ರಂದೀಪ್​ ಸುರ್ಜೇವಾಲಗೆ ತಿರುಗೇಟು ನೀಡಿದರು. ಬಿಳಿ ಬಟ್ಟೆ ಹಾಕಿದ್ದಾರೆ ಎಂದು ಮಸಿ ಎಸೆದು ಓಡಿ ಹೋಗುವ ಪ್ರಯತ್ನ ಕಾಂಗ್ರೆಸನದ್ದು ಎಂದು ಆರ್. ಅಶೋಕ್ ಅವರು ನೆನ್ನೆ ಕೂಡ ಕಿಡಿಕಾರಿದ್ದರು.

  ಇದನ್ನು ಓದಿ: Bitcoin Scam: ಬಿಟ್ ಕಾಯಿನ್ ಆರೋಪಿ ಜೀವಕ್ಕೆ ಅಪಾಯ ಇದ್ದರೆ ಸರಕಾರ ರಕ್ಷಣೆ ಕೊಡಲಿ; ಎಚ್.ಡಿ.ಕುಮಾರಸ್ವಾಮಿ

  ಕಾಂಗ್ರೆಸ್​ನವರೇ ಶ್ರೀಕಿಗೆ ಏನಾದರೂ ಮಾಡಬಹುದಾ?: ಅರಗ ಜ್ಞಾನೇಂದ್ರ

  ಕಾಂಗ್ರೆಸ್​ನವರು ಯಾರ ಮೇಲೆ ಬೇಕಾದರೂ ಆರೋಪ ಮಾಡ್ತಾರೆ. ಇವರ ಬಳಿ ಏನಿದೆ ಅಂತ ನೋಡಿದ್ರೆ, ನಾವು ಕೊಟ್ಟ ದಾಖಲೆಗಳು ಮಾತ್ರ. ಬೊಮ್ಮಾಯಿ ಸರ್ಕಾರದ ಕಾರ್ಯ ವೈಖರಿಯನ್ನು ಜನ ಮೆಚ್ಚಿದ್ದಾರೆ. ವಿಪಕ್ಷಕ್ಕೆ ಮಾತನಾಡಲು ಬೇರೆ ವಿಷಯಗಳಿಲ್ಲ. ಹಾಗಾಗಿ ಇಲ್ಲದಿರುವ ವಿಚಾರವನ್ನು ದೊಡ್ಡದು ಮಾಡಿ ಪ್ರಚಾರ ಪಡೆಯುತ್ತಿದ್ದಾರೆ. ನಾವು ಎಲ್ಲಿ ಬೇಕಾದರೂ ಹೆದರಿಸಲು ಸಿದ್ದರಿದ್ದೇವೆ. ಶ್ರೀಕಿಗೆ ಪ್ರಾಣ ಬೆದರಿಕೆ ಇದೆ ಅಂತ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಹೇಳ್ತಿದ್ದಾರೆ. ಅವರ ಹೇಳಿಕೆ ನೋಡಿದರೆ ನಮಗೆ ಅವರ ಮೇಲೆ ಅನುಮಾನ ಮೂಡುತ್ತಿದೆ. ಅವರೇ ಏನಾದರೂ ಮಾಡಿ, ಸರ್ಕಾರದ ತಲೆ ಮೇಲೆ ಹಾಕ್ತಾರಾ ಅಂತಾ ನಮಗೆ ಆತಂಕ ಇದೆ. ಈ ಬಗ್ಗೆ ನಾನು ಸಿಎಂ ಬೊಮ್ಮಾಯಿ ಬಳಿ ಮಾತನಾಡ್ತೀನಿ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
  Published by:HR Ramesh
  First published: