ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿಯಲ್ಲಿ (Teerthahalli, Shivamogga) ನಿನ್ನೆ ನಡೆದ ರೈತ ಸಮಾವೇಶದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Aaraga Jnanedra) ಭಾಗಿಯಾಗಿದ್ದರು. ಸಮಾವೇಶದಲ್ಲಿ ಕಾಂಗ್ರೆಸ್ (Congress) ಟೀಕಿಸುವ ಭರದಲ್ಲಿ ತುಳುನಾಡ ದೈವಕ್ಕೆ (Tulunada Daiva) ಅಪಮಾನ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಕಿಮ್ಮನೆ ರತ್ನಾಕರ್ (Congress Leaders Kimmane Rathnakar) ಅವರನ್ನು ಟೀಕಿಸುವ ಭರದಲ್ಲಿ ಶಿವಧೂತೆ ಗುಳಿಗೆ (Shivadhoote Gulige) ಹೆಸರನ್ನು ಬಳಕೆ ಮಾಡಿದ್ದಾರೆ. ಸದ್ಯ ಸಚಿವರು ಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ದೈವಕ್ಕೆ ಅಪಮಾನ ಮಾಡಲಾಗಿದೆ ಎಂದು ತುಳು ಜನತೆ ಅಸಮಾಧಾನ ಹೊರ ಹಾಕಿದ್ದಾರೆ. ಗುಳಿಗೆ ಎಂದು ಹೇಳಿ ಜನರಿಗೆ ಜಾಪಾಳ ಮಾತ್ರೆ ಕೊಡುವ ಅಪಾಯವಿದೆ. ಹೊಸ ಹೊಸ ನಾಟಕ (Drama) ಆರಂಭವಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಜನರ ನಂಬಿಕೆಯನ್ನೇ ಕಳೆದುಕೊಂಡಿರುವ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ. ಸಾಲದ್ದಕ್ಕೆ ಗುಳಿಗೆ ಹೆಸರಿನ ನಾಟಕ ಆಭಿನಯಿಸಿದ್ದೆ.ಅಧಿಕಾರಕ್ಕೆ ಬಂದಲ್ಲಿ ಜನರಿಗೆ ಜಾಪಾಳ್ ಮಾತ್ರೆಯನ್ನೇ ನೀಡಬಹುದು ಎಂದು ಕಾಂಗ್ರೆಸ್ ಆಯೋಜನೆಯ ಶಿವದೂತ ಗುಳಿಗೆ ನಾಟಕವನ್ನು ವ್ಯಂಗ್ಯ ಮಾಡಿದ್ದಾರೆ.
ಶಿವದೂತೆ ಗುಳಿಗೆ ಎಂಬ ತುಳುನಾಡಿನ ದೈವ ಆಧಾರಿತ ಪ್ರಸಿದ್ಧ ನಾಟಕವಾಗಿದೆ. ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ನಾಟಕವನ್ನು ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾ ಕರ್ ನೇತೃತ್ವದಲ್ಲಿ ನಡೆಯುತ್ತಿದೆ. ಮಾತಿನಭರದಲ್ಲಿ ನಾಟಕ ಟೀಕಿಸಿ ರಾತ್ರಿ ಕೋಲಕ್ಕೆದಲ್ಲಿ ಭಾಗಿಯಾಗಿ ಗುಳಿಗೆ ದೈವದ ಆಶೀರ್ವಾದವನ್ನು ಆರಗ ಜ್ಞಾನೇಂದ್ರ ಪಡೆದುಕೊಂಡಿದ್ದಾರೆ.
ಪೂರ್ಣವಾಗದ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ
ಕಾಮಗಾರಿ ಪೂರ್ಣವಾಗದ ಕಟ್ಟಡವನ್ನು ಇಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಉದ್ಘಾಟನೆ ಮಾಡಲಿದ್ದಾರೆ. ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಕಚೇರಿ (Tahshildar Office Building) ಕಟ್ಟಡ ಉದ್ಘಾಟನೆಗೆ ಸಚಿವ ಮಾಧುಸ್ವಾಮಿ (Minister JC Madhuswamy) ಮುಂದಾಗಿದ್ದಾರೆ. ಹೊರಗಡೆಯಿಂದ ಕಟ್ಟಡ ಪೂರ್ಣವಾದಂತೆ ಕಾಣುತ್ತದೆ. ಒಳಗಡೆಯಿಂದ ಕಟ್ಟಡ ಕೆಲಸ ಬಾಕಿ ಉಳಿದುಕೊಂಡಿದೆ. ಪೂರ್ಣವಾಗದ ಕಟ್ಟಡವನ್ನು ಅವಸರವಾಗಿ ಉದ್ಘಾಟನೆ ಮಾಡೋದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಕೈ-ಕಮಲ ನಾಯಕರ ಒಗ್ಗಟ್ಟು
ಶಿವಾಜಿ ಪ್ರತಿಮೆ ವಿಚಾರದಲ್ಲಿ ಬೆಳಗಾವಿ ನಾಯಕರು (Belagavi Leaders) ಪರಸ್ಪರ ಕಿತ್ತಾಡ್ಕೊಂಡಿದ್ರು. ಆದರೆ, ವಿಶ್ವಗುರು ಬಸವಣ್ಣ ಪುತ್ಥಳಿ ಶಿಲಾನ್ಯಾಸದ ವೇಳೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರ ಜತೆ ಕಾಂಗ್ರೆಸ್ ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್ (MLA Laxmi Hebbalkar), ಚನ್ನರಾಜ ಹಟ್ಟಿಹೊಳಿ (MLC Channaraja hattiholi) ಭಾಗಿಯಾಗಿದ್ರು. ಪ್ರಭಾಕರ್ ಕೋರೆ (Prabhakar Kore) ಜತೆ ಲಕ್ಷ್ಮಿ ಹೆಬ್ಬಾಳ್ಕರ್ ಉಭಯ ಕುಶಲೋಪರಿ ನಡೆಸಿದ್ರು. ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಶಿಲಾನ್ಯಾಸ ನೆರವೇರಿಸಿದರು.
ಇದನ್ನೂ ಓದಿ: Explained: ಯಾರು ಈ ಉರಿಗೌಡ, ನಂಜೇಗೌಡ? ಇವರು ಟಿಪ್ಪುವನ್ನು ಕೊಂದಿದ್ದು ಸತ್ಯವಾ? ಇತಿಹಾಸ ಏನು ಹೇಳುತ್ತೆ?
ಬೀಳಗಿಯಿಂದ ಎಸ್.ಆರ್. ಪಾಟೀಲ್ ಸ್ಪರ್ಧೆ?
ಬೀಳಗಿ ಕ್ಷೇತ್ರದಿಂದ (Bilagi Constituency) ಎಸ್.ಆರ್ ಪಾಟೀಲ್ (SR Patil) ಸ್ಪರ್ಧಿಸುವ ಸಾಧ್ಯತೆ ಇದೆ. ಬೀಳಗಿಯಿಂದ ಸ್ಪರ್ಧಿಸೋ ಬಗ್ಗೆ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಜೊತೆ ಚರ್ಚೆ ನಡೆಸಿದ್ರು. ಖರ್ಗೆ ಜೊತೆ 20 ನಿಮಿಷ ಮಾತುಕತೆ ನಡೆಸಿ, ಬೀಳಗಿಯಿಂದ ಟಿಕೆಟ್ ಕೇಳಿದ್ದಾರಂತೆ. ನೀವು ಬೀಳಗಿ ಕ್ಷೇತ್ರದಲ್ಲಿ ಕೆಲಸ ಮುಂದುವರೆಸಿ. ಟಿಕೇಟ್ ಬಗ್ಗೆ ಯೋಚನೆ ಬೇಡ ಎಂದು ಖರ್ಗೆ ಭರವಸೆ ನೀಡಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ