ಮುಕ್ಕಲ್‌ ಗ್ರಾಮ ಪಂಚಾಯತಿ‌ ಕಚೇರಿಯಲ್ಲಿ ನೂತನ ಸದಸ್ಯರಿಂದ ಶಾಂತಿ ಹೋಮ; ಗ್ರಾಮಸ್ಥರಿಂದ ತೀವ್ರ ಖಂಡನೆ

ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಮುಂದೆ ಕೂರಿಸಿ ಹೋಮ ಹವನ ನಡೆಸಿದ್ದಾರೆ.

ಹೋಮ ನಡೆಸುತ್ತಿರುವ ಸದಸ್ಯರು

ಹೋಮ ನಡೆಸುತ್ತಿರುವ ಸದಸ್ಯರು

  • Share this:
ಧಾರವಾಡ (ಫೆ. 9): ಗ್ರಾಮ ಪಂಚಾಯತಿ ನೂತನ ಸದಸ್ಯರು ಶಾಂತಿ ಹೋಮ ಮಾಡಿಸಿರುವ ಘಟನೆ, ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. ಗ್ರಾಮ ಪಂಚಾಯತಿ ಕಚೇರಿಯಲ್ಲಿಯೇ ನೂತನ ಸದಸ್ಯರು ಶಾಂತಿಗಾಗಿ ಪ್ರಾರ್ಥಿಸಿ ವಿಶೇಷ ಹೋಮ ಮಾಡಿಸಿದ್ದಾರೆ‌. ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಮುಂದೆ ಕೂರಿಸಿ ಹೋಮ ಹವನ ನಡೆಸಿದ್ದಾರೆ. ಅಧಿಕಾರ ಸ್ವೀಕರಿಸುವ ಮುನ್ನ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪಂಚಾಯತಿಯಲ್ಲಿ ಶಾಂತಿಗಾಗಿ ದೈವದ ಮೊರೆ ಹೋಗಿ ಸದಸ್ಯರು ಗಮನಸೆಳೆದಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೋಮ ಹವನ ನಡೆಸಿದ್ದು, ಗ್ರಾಮಸ್ಥರನ್ನು ಹುಬ್ಬೇರಿಸುವಂತೆ ಮಾಡಿದೆ. ಕಚೇರಿ ಪ್ರವೇಶಿಸುವವರು ಪೂಜೆ ಮಾಡುವುದು ಸಹಜ. ಆದರೆ ಶಾಂತಿಗಾಗಿ ಈ ರೀತಿ ಹೋಮ ಮಾಡಿಸಿದ್ದು ಗ್ರಾಮಸ್ಥರ ಟೀಕೆಗೆ ಗುರಿಯಾಗಿದೆ. 

ಹುಬ್ಬಳ್ಳಿಯ ಮಿನಿ ವಿಧಾನಸೌಧದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಇಂದು ತಾ.ಪಂ. ಸಾಮಾನ್ಯ ಸಭೆ ಜರುಗಿತು‌. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನೆಡೆಸಲಾಯಿತು. ತಾಲೂಕ‌ ಪಂಚಾಯತಿ ಅಧ್ಯಕ್ಷೆ , ಉಪಾಧ್ಯಕ್ಷೆ ಹಾಗೂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರ ಅನುಪಸ್ಥಿಯಲ್ಲಿ ತಾ.ಪಂ ಹಿರಿಯ ಸದಸ್ಯೆ ಹಾಗೂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಪ್ರೇಮಾ ಸಹದೇವಪ್ಪ ಕಡಪಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದರು. ಕಿರಿಯ ಸದಸ್ಯ ಫರವೇಜ್ ಅಲ್ಲಾಭಕ್ಷಿ ಬ್ಯಾಹಟ್ಟಿ ವೇದಿಕೆ ಮೇಲೆ ಕುಳಿತು ಸಭೆಯನ್ನು ನೆಡಸಿದರು.

ಇದನ್ನು ಓದಿ: ದೇವಾಲಯಕ್ಕೆ ದೇಣಿಗೆ ಸಂಗ್ರಹಕ್ಕಾಗಿ ಕೆರೆ ಬೇಟೆ ಸ್ಪರ್ಧೆ; ಮೀನು ಹಿಡಿದು ಸಂಭ್ರಮ ಪಟ್ಟ ಊರ ಜನರು

ಪಂಚಾಯತ್ ರಾಜ್ ಇಂಜಿನಿಯರಿಂಗ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಭೂಸೇನಾ ನಿಗಮ, ಹೆಸ್ಕಾಂ, ಕೃಷಿ, ತೋಟಗಾರಿಕೆ, ಪಶು, ಆರೋಗ್ಯ, ಅರಣ್ಯ, ಶಿಕ್ಷಣ, ಆಹಾರ, ಸಮಾಜ ಕಲ್ಯಾಣ, ಶಿಶು ಅಭಿವೃದ್ಧಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ತಾ. ಪಂ ಸದಸ್ಯರು ಸ್ವ ವಿವೇಚನೆ ಮೇರೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂದು ತಾ.ಪಂ. ಇಓ ಗಂಗಾಧರ ಕಂದಕೂರ ಅವರಿಗೆ ಕೇಳಿಕೊಂಡರು.
ಸಭೆಯ ಆರಂಭಕ್ಕೂ ಮುನ್ನಾ ಜಿ.ಪಂ. ಸದಸ್ಯ ಸುರೇಶಗೌಡ ಚ. ಪಾಟೀಲ ನಿಧನದ ನಿಮಿತ್ತ ಮೌನಾಚರಣೆ ಆಚರಿಸಲಾಯಿತು. ಸಭೆಯಲ್ಲಿ ಇತರೆ ತಾಲೂಕು ಪಂಚಾಯತಿ ಸದಸ್ಯರು, ತಾಲೂಕ ಮಟ್ಟದ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು‌ ಉಪಸ್ಥಿತರಿದ್ದರು.

ಇದೇ ವೇಳೇ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಕುರಿತು ಜನ ಜಾಗೃತಿ ಮೂಡಿಸುವ ವಾಹನಕ್ಕೆ ಜಿಲ್ಲಾ ಪಂಚಾಯತಿ ಸಿಇ‌ಓ ಡಾ. ಬಿ. ಸುಶೀಲ ಹುಬ್ಬಳ್ಳಿ ಮಿನಿ ವಿಧಾನ ಸೌಧದ ಬಳಿ ಚಾಲನೆ ನೀಡಿದರು.
Published by:Seema R
First published: